ನಾವು ಈ ಲೇಖನದಲ್ಲಿ ಏಪ್ರಿಲ್ ತಿಂಗಳ ಕಟಕ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಈ ಛಲ ಅನ್ನುವುದು ನಿಮ್ಮ ಸಾಹಸಗಳಿಗೆ ಪ್ರೋತ್ಸಾಹ ನೀಡುತ್ತದೆ. ಕಟಕ ರಾಶಿ ಅಂದಾಕ್ಷಣ ಕರ್ಕಾಟಕ ,ಹೇಡಿ ಎಂದು ಹೇಳಲಾಗುತ್ತದೆ. ನಿಮಗೆ ಕಷ್ಟವಾದ ದಿನಗಳು ಮತ್ತು ಅಷ್ಟಮ ಶನಿ ನಡೆಯುತ್ತಿದೆ . ಅಂದರೆ ನಿಮಗೆ ಹೆಚ್ಚಾಗಿ ಧೈರ್ಯ ಇರುತ್ತದೆ . ನಿಮ್ಮ ಧೈರ್ಯ ಕೆಲಸ ಕಾರ್ಯಗಳಲ್ಲಿ ಬಂದು ನಿಮ್ಮ ಗುರಿಯನ್ನು ಮುಟ್ಟಲು ನೆರವಾಗುತ್ತದೆ. ಧನಾತ್ಮಕವಾಗಿ ಮುಂದೆ ಸಾಗಲು ನಿಮಗೆ ನೆರವು ನೀಡುತ್ತದೆ . ಕೆಲವಷ್ಟು ಗ್ರಹಗಳು ನಿಮಗೆ ಬಹಳಷ್ಟು ಲಾಭಗಳನ್ನು ತಂದು ಕೊಡುತ್ತವೆ .
ಏನೇ ನಕಾರಾತ್ಮಕ ಶಕ್ತಿಗಳು ಇದ್ದರೂ ಕೂಡ ಯಾವ ಗ್ರಹಗಳಿಂದ ಒಳ್ಳೆಯದು ಆಗಬೇಕು ಅದು ನಡೆದೇ ನಡೆಯುತ್ತದೆ . ಇದರ ಬಗ್ಗೆ ವಿಶ್ವಾಸವನ್ನು ಇಟ್ಟು ಕೊಳ್ಳಬಹುದು . ನಿಮಗೆ ಧೈರ್ಯ ಇರುತ್ತದೆ. ತೃತೀಯದಲ್ಲಿ ಕೇತು ಗ್ರಹ ಇದೆ. ವಿಕ್ರಮ ಸ್ಥಾನದಲ್ಲಿ ಇದೆ . ಈ ವಿಕ್ರಮ ಅನ್ನುವುದಕ್ಕೆ ಒಂದಷ್ಟು ಪರಿಸರ ವ್ಯವಸ್ಥೆ ನಿರ್ಮಾಣವಾಗುತ್ತದೆ. ಹುಟ್ಟುತ್ತಲೇ ಶ್ರೀಮಂತನಾಗಿ ಹುಟ್ಟಿದರೆ ಸಾಹಸ ಪಡಬೇಕಾದ ತೊಂದರೆ ಇರುವುದಿಲ್ಲ . ಇರೋದನ್ನು ಅನುಭವಿಸಿಕೊಂಡು ಆರಾಮಾಗಿ ಇರುತ್ತಾರೆ .
ಸಂದರ್ಭಗಳು ಎದುರಾದಾಗ ಮಾತ್ರ ನಾವು ಚುರುಕಾಗಲು ಸಾಧ್ಯವಾಗುತ್ತದೆ . ನಮ್ಮ ಜೀವನದ ಬಗ್ಗೆ ಮಹತ್ವದ ಪ್ರಶ್ನೆಗಳು ಬರುವುದಕ್ಕೆ ಶುರುವಾಗುತ್ತದೆ . ಈ ಛಲ ಎನ್ನುವುದು ನಿಮ್ಮ ಸಾಹಸಗಳಿಗೆ ಪ್ರೋತ್ಸಾಹವನ್ನು ಕೊಡುತ್ತದೆ . ಮುಂದಿನ ಮಾರ್ಗವನ್ನು ನಿರ್ಣಯ ಮಾಡುತ್ತದೆ . ಇದಕ್ಕೆ ಶಕ್ತಿ ಇದ್ದೇ ಇರುತ್ತದೆ . ನಿಮ್ಮ ಜೀವನದಲ್ಲಿ ಸವಾಲುಗಳು ಇರುತ್ತವೆ . ಈ ಸವಾಲುಗಳನ್ನು ಎದುರಿಸಲು ನಿಮಗೆ ಹೆಚ್ಚಿನ ಧೈರ್ಯ ಬೇಕಾಗುತ್ತದೆ . ತೃತೀಯದಲ್ಲಿ ಕೇತು ಗ್ರಹ ಇರುವುದರಿಂದ ರ ಧೈರ್ಯ ನಿಮಗೆ ದೊರೆಯುತ್ತದೆ . ಸಪ್ತಮ ಭಾವದಲ್ಲಿ ಕುಜ ಗ್ರಹ ಇರುತ್ತದೆ . ಸಂಶಯಗಳು ,ಪತಿ-ಪತ್ನಿ , ಪಾಲುದಾರಿಕೆ , ವ್ಯವಹಾರ ಉದ್ಯಮಗಳು,
ಕೆಲಸ ಮಾಡುವ ವಿಚಾರದಲ್ಲಿ ಹಲವಾರು ರೀತಿ ಅನುಮಾನಗಳು, ನಮ್ಮ ಬಗ್ಗೆಯೇ ನಮಗೆ ಅನುಮಾನಗಳು , ಹಾಗೆಯೇ ಅಪಾರ್ಥ ಮಾಡಿಕೊಳ್ಳುವುದು , ಈ ರೀತಿಯಾಗಿ ನಡೆಯುತ್ತಿರುತ್ತದೆ . ಹಾಗೆಯೇ ಕಣ್ಣಿನಲ್ಲಿ ತೊಂದರೆಗಳು ಬರುತ್ತವೆ . ಹಾಗೆಯೇ ಕರುಳಿನ ಮತ್ತು ಹೊಟ್ಟೆಯ ತೊಂದರೆಗಳು ಬರಬಹುದು . ಈ ರೀತಿಯಾದ ಬೆಳವಣಿಗೆಗಳು ನಡೆಯುತ್ತವೆ . ಆರೋಗ್ಯದ ಬಗ್ಗೆ ಕೂಡ ಎಚ್ಚರಿಕೆ ವಹಿಸಬೇಕು . ಮನಸ್ಸಿನ ಆರೋಗ್ಯದ ಬಗ್ಗೆ ಕೂಡ ಚಿಂತನೆಗಳು ನಡೆಯುವ ಸಾಧ್ಯತೆ ಇರುತ್ತದೆ .ಆತ್ಮವಿಶ್ವಾಸದಲ್ಲಿ ಹಲವಾರು ಭಾದೆಗಳು ಉಂಟಾಗುತ್ತವೆ .
ಬಹಳ ಎಚ್ಚರಿಕೆಯಿಂದ ಇರಬೇಕು . ಮಾನಸಿಕವಾಗಿ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು . ಅಷ್ಟಮದಲ್ಲಿ ಶನಿ ಗ್ರಹ ಇರುವುದರಿಂದ ದಿಕ್ಕು ತಪ್ಪಿಸುವ ಸಾಧ್ಯತೆ ಇರುತ್ತದೆ . ಅಷ್ಟಮ ಭಾವದಲ್ಲಿ ರವಿ ಮತ್ತು ಶನಿ ಜೊತೆಯಾಗಿ ಇರುತ್ತಾರೆ . ಇದರ ಜೊತೆ ಶುಕ್ರ ಕೂಡ ಜೊತೆಯಾಗಿ ಇರುತ್ತಾನೆ . ಹಾಗೆಯೇ ಬುಧ ಕೂಡ ಬಂದು ಕೂರುತ್ತಾನೆ . ಆದರೆ ನಿಮ್ಮ ಗಮನ ಆರೋಗ್ಯದ ಕಡೆ ಹೆಚ್ಚಾಗಿ ಇರಬೇಕಾಗುತ್ತದೆ . ಕಳತ್ರ ಭಾವದಲ್ಲಿ ಪತಿ ಪತ್ನಿ ,
ಇದರ ಬಗ್ಗೆ ಗಮನ ಹೆಚ್ಚಾಗುತ್ತದೆ . ಯಾವಾಗ ಬಹಳಷ್ಟು ಗ್ರಹಗಳು ಬಂದು ರಾಶಿಗೆ ಕೂರುತ್ತವೆ ಆ ಭಾವದ ತೂಕ ಹೆಚ್ಚಾಗುತ್ತದೆ . ಅದಕ್ಕೆ ಸಂಬಂಧಪಟ್ಟ ಕಷ್ಟಗಳು ಬರುತ್ತವೆ . ಧನಾತ್ಮಕವಾಗಿ ಇದ್ದರೆ ಧನಾತ್ಮಕವಾಗಿ ದೊರೆಯುತ್ತವೆ . ನಕಾರಾತ್ಮಕವಾಗಿ ಇದ್ದರೆ ನಕಾರಾತ್ಮಕವಾಗಿ ದೊರೆಯುತ್ತವೆ . ಆರೋಗ್ಯದಲ್ಲಿ ಏರುಪೇರುಗಳು . ಇಲ್ಲಿ ಮುಖ್ಯವಾಗಿ ಹೇಳುವುದಾದರೆ ರವಿ , ಬುಧ, ಶುಕ್ರ , ಶನಿಯು ಅಷ್ಟಮ ಭಾವದಲ್ಲಿ ಭಾಗವಹಿಸುತ್ತಿರುವುದು ಕಾಣುತ್ತದೆ . ಹಾಗೆಯೇ ಕುಜ ಗ್ರಹ ಕೂಡ ಬರುತ್ತದೆ .
ಆರೋಗ್ಯದಲ್ಲಿ ಬಹಳಷ್ಟು ಏರು ಪೇರುಗಳಾಗಿ ವಾತ, ಪಿತ್ತ, ಕಫ ಈ ಮೂರು ದೋಷಗಳ ಇರುತ್ತವೆ . ಈ ಮೂರು ದೋಷಗಳನ್ನು ಉಂಟುಮಾಡುವ ಗ್ರಹಗಳು ಆ ರಾಶಿಯಲ್ಲಿ ಬಂದು ಕೂರುತ್ತದೆ . ಈ ಗ್ರಹಗಳು ತಿರುಗುತ್ತಿರುತ್ತವೆ . ಅಸಮತೋಲನ ಹೆಚ್ಚಾಗಿರುತ್ತದೆ . ಬುಧ ಗ್ರಹ ನಿಮ್ಮ ಭಾಗ್ಯದ ರಾಶಿಯಲ್ಲಿ ಇರುತ್ತದೆ . ಏಳನೇ ತಾರೀಖಿನಿಂದ 25ನೇ ತಾರೀಖಿನ ವರೆಗೆ . ವಿದ್ಯಾರ್ಥಿಗಳ ಮಟ್ಟಿಗೆ ಈ ತಿಂಗಳಲ್ಲಿ ಬಹುಕಾಲ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ . ಸ್ವಲ್ಪ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ .
ಕಠಿಣವಾದ ಪರಿಶ್ರಮವನ್ನು ಪಡಬೇಕು . ಏಕಾಗ್ರತೆಯನ್ನು ಕೊಡಬೇಕು . ಏಕಾಗ್ರತೆಯನ್ನು ತಪ್ಪಿಸುವುದಕ್ಕೆ ಬಹಳಷ್ಟು ಜನರು ಕೆಲಸ ಮಾಡುತ್ತಿರುತ್ತಾರೆ . ಅಂದರೆ ನಿಮ್ಮ ಏಕಾಗ್ರತೆ ಕೇಂದ್ರೀಕೃತವಾಗಿ ಇರುವುದಿಲ್ಲ . ನಿಮ್ಮ ಒಳ್ಳೆಯ ಅಭ್ಯಾಸಗಳು ಮಾತ್ರ ನಿಮ್ಮನ್ನು ಕಾಪಾಡಲು ಸಾಧ್ಯ . ಭಾಗ್ಯದಲ್ಲಿ ಮೊದಲೇ ರಾಹು ಗ್ರಹ ಇದೆ . ಬುಧ ಗ್ರಹ ಕೂಡ ಏಳನೇ ತಾರೀಖಿನ ನಂತರ ಭಾಗ್ಯಕ್ಕೆ ಹೋಗುತ್ತದೆ . ಇವೆರಡೂ ಗ್ರಹಗಳ ಧೈರ್ಯ ಯೋಗವನ್ನು ತಂದುಕೊಡುತ್ತವೆ . ಆದರೆ ಇದು ಬಂಡ ಧೈರ್ಯ ಆಗಬಾರದು . ಕೇತು ಕೂಡ ತೃತೀಯ ರಾಶಿಯಲ್ಲಿ ಇರುತ್ತದೆ . ಈ ಧೈರ್ಯವನ್ನು ನೀವು ಧನಾತ್ಮಕವಾಗಿ ಉಪಯೋಗಿಸಿಕೊಳ್ಳಬೇಕು .
ಇದು ನಿಮ್ಮ ಜಾತಕದ ಮೇಲೆ ಅಳವಡಿತವಾಗಿ ಇರುತ್ತದೆ . ವ್ಯರ್ಥ ಪ್ರಯತ್ನಗಳಿಗೆ ಭಂಡ ಧೈರ್ಯ ಎಂದು ಹೇಳಲಾಗುತ್ತದೆ . ಅಲ್ಪಾವಧಿಯಲ್ಲಿ ಹಣ ಗಳಿಸುವುದು ಬಹಳ ಕಷ್ಟ ಇದನ್ನು ಭಂಡ ಧೈರ್ಯ ಎಂದು ಹೇಳಲಾಗುತ್ತದೆ . ನಿಮ್ಮ ಇತಿ -ಮಿತಿಗಳನ್ನು ಅರ್ಥ ಮಾಡಿಕೊಂಡು ಮಾಡುವ ಕೆಲಸಗಳು ಯಾವಾಗಲೂ ಲಾಭವನ್ನು ತಂದುಕೊಡುತ್ತದೆ . ಹೂಡಿಕೆಯನ್ನು ಮಾಡುವಾಗ ಸರಿಯಾದವರ ಮಾರ್ಗದರ್ಶನವನ್ನು ತೆಗೆದುಕೊಂಡು ಮಾಡುವುದು ಒಳ್ಳೆಯದು .ಹೀಗೆ ಮಾಡುವುದು ಕೂಡ ಲಾಭವನ್ನು ತಂದು ಕೊಡುತ್ತದೆ . ಇನ್ನು ದಶಮ ಭಾವದಲ್ಲಿ ಗುರು , ಕೆಲಸ ಕಾರ್ಯಗಳಲ್ಲಿ ಒಳ್ಳೆಯ ದಾರಿಯನ್ನು ತಂದು ಕೊಡುತ್ತದೆ .
ಸ್ವಲ್ಪ ಮಾನಸಿಕ ಒತ್ತಡ ಇರುತ್ತದೆ . ಕೆಲಸ ಕಾರ್ಯಗಳಲ್ಲಿ ಕಳವಳ ಇರುತ್ತದೆ . ಕೆಲಸ ಕಾರ್ಯಗಳಿಗೆ ಒಳ್ಳೆಯ ದೆಸೆಯನ್ನು ಕೊಡಲು ಗುರು ಸಹಾಯವನ್ನು ಮಾಡುತ್ತಾನೆ . ಈ ಕ್ಷಣದಲ್ಲಿ ನೀವು ಮಾಡುವ ಕೆಲಸದಲ್ಲಿ ಲಾಭ ಬಂದಿಲ್ಲ ಅಂದರೂ ಕೂಡ , ಆದರೆ ಮುಂದೆ ಗುರು ಏಕಾದಶ ಭಾವಕ್ಕೆ ಹೋದಾಗ ಹೆಚ್ಚಿನ ಲಾಭ ಆಗುತ್ತದೆ . ನಿಮ್ಮ ಸಮಯದ ಹೊಡಿಕೆಗೆ ಮೂರು ಪಟ್ಟು ಲಾಭ ತಂದು ಕೊಡುವ ಸಾಧ್ಯತೆ ಇರುತ್ತದೆ . ಯಶಸ್ಸು ದೊರೆಯುತ್ತದೆ ತಾಳ್ಮೆಯಿಂದ ಇರಬೇಕು . ಗುರು ಗ್ರಹ ದಿಂದ ಕರ್ಕಾಟಕ ರಾಶಿಗೆ ದೊಡ್ಡ ಮಟ್ಟದ ತೊಂದರೆ ಆಗುವುದಿಲ್ಲ . ಈ ರೀತಿಯ ಪ್ರಯತ್ನಗಳು ಒಂದು ಕಡೆ ಶೇಖರಣೆಯಾಗಬೇಕು .
ಒಳ್ಳೆಯ ರೀತಿಯ ಫಲಗಳು ಇಂದಲ್ಲಾ ನಾಳೆ ದೊರೆಯುತ್ತವೆ . ಬುಧ ಗ್ರಹ 25 ನೇ ತಾರೀಖು ಮೀನ ರಾಶಿಯಿಂದ ಮೇಷ ರಾಶಿಗೆ ಹೋಗುತ್ತದೆ . ಹತ್ತನೇ ಭಾವ ಆಗಿರುತ್ತದೆ . ದುಃಖದಿಂದ ಮುಕ್ತಿ, ಖುಷಿ , ಕೆಲಸ ಕಾರ್ಯಗಳಲ್ಲಿ ಯಶಸ್ಸು , ವಿದ್ಯಾರ್ಥಿಗಳಿಗೆ ಯಶಸ್ಸು ಪಡೆದುಕೊಳ್ಳಲು ಸಾಧ್ಯವಾಗುತ್ತದೆ . ನಮ್ಮ ದೇಹ ಮತ್ತು ಪ್ರಕೃತಿಯಲ್ಲಿ ಆಗುವ ಬದಲಾವಣೆಗಳು ವಿದ್ಯಾರ್ಥಿಯ ಜೀವನದಲ್ಲಿ ಉಂಟಾಗುತ್ತದೆ . ಇವೆಲ್ಲವೂ ಬಹಳ ಸರ್ವೇಸಾಮಾನ್ಯ . ಮನಸ್ಸಿಗೆ ಒತ್ತಡವನ್ನು ತಂದು ಕೊಳ್ಳಬೇಡಿ . ಜೀವನದಲ್ಲಿ ನಾನಾ ಪರೀಕ್ಷೆಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಯಶಸ್ಸು ಸಿಗಲಿ ಎಂದು ಹೇಳಲಾಗುತ್ತದೆ .