ದೂರವಾದಾಗ ಮನುಷ್ಯನ ಬೆಲೆ ತಿಳಿಯುತ್ತೆ

0

ನಾವು ಈ ಲೇಖನದಲ್ಲಿ ದೂರವಾದಾಗ ಮಾತ್ರ ಮನುಷ್ಯನ ಬೆಲೆ ತಿಳಿಯುತ್ತದೆ ಎಂಬುದರ ಬಗ್ಗೆ ತಿಳಿಯೋಣ .ತಾಳ್ಮೆಯಿಂದ ಇರು ನೀನು ಪಡುತ್ತಿರುವ ಕಷ್ಟಕ್ಕೆ ಒಳ್ಳೆಯ ದಿನ ಬಂದೇ ಬರುತ್ತದೆ .ದೇಹದ ಮೇಲೆ ಬೀಳುವ ಪೆಟ್ಟಿಗಿಂತ ನಂಬಿಕೆ ಮೇಲೆ ಬೀಳುವ ಪೆಟ್ಟು ಹೆಚ್ಚು ನೋವು ಕೊಡುತ್ತದೆ .

ಚಿಂತೆ ಮಾಡಿ ಯಾಕೆ ಕೊರಗಬೇಕು. ಆ ಚಿಂತೆ ಹುಟ್ಟಿಸಿದವರನ್ನು ಮರೆತು ನಾವು ಮುಂದೆ ನಡೆಯಬೇಕು .ಪ್ರಪಂಚಕ್ಕೆ ಒಳ್ಳೆಯವರು ಆಗದಿದ್ದರೂ ಪರವಾಗಿಲ್ಲ . ಆದರೆ ನೀನೇ ಪ್ರಪಂಚ ಎನ್ನುವವರಿಗೆ ಒಳ್ಳೆಯವರಾಗಿರಿ .ಗತಕಾಲದ ಬಗ್ಗೆ ಕೊರಗುವ ಬದಲು ನಾಳೆಯತ್ತ ಹೆಜ್ಜೆ ಹಾಕುವುದು ಒಳಿತು .

ಏನು ಇಲ್ಲದೆ ಇದ್ದಾಗ ಗಳಿಸಿಕೊಂಡು ಹೋಗು. ಎಲ್ಲವೂ ಇದ್ದಾಗ ಉಳಿಸಿಕೊಂಡು ಹೋಗು .ನೋಡಲು ಕಣ್ಣಿದೆ .ಎಂದೂ ಖುಷಿ ಪಡುವ ಮುನ್ನವೇ ಕಂಬನಿಯ ಪರಿಚಯ ಮಾಡುವ ಭಗವಂತ ಎಷ್ಟು ಜನ ಸಂಬಂಧಿಕರು ಇದ್ದರೇನು ? ಗೆಳೆಯರಿದ್ದರೆ ಏನು ಕಷ್ಟ ಕಾಲದಲ್ಲಿ ತೋರಿಸುವವನು ನಮ್ಮಆಪ್ತರು ಯಾರು ಎ೦ದು .

ನೀನೇನು ಅಂತ ನಿನಗೆ ಗೊತ್ತಿರುವಾಗ ಯಾರ ಅಭಿಪ್ರಾಯಕ್ಕೂ ಕಾಯಬೇಡ . ಯಾಕೆಂದರೆ ಎಲ್ಲರನ್ನು ಮೆಚ್ಚಿಸಲು ಹೋದರೆ ಮುಂದೊಂದು ದಿನ ಹುಚ್ಚ ನಾಗುತ್ತೀಯ .ಇಲ್ಲಿ ಮೆಚ್ಚಿ ಮಾತನಾಡುವವರಿಗಿಂತ ಚುಚ್ಚಿ ಮಾತನಾಡುವವರೇ ಹೆಚ್ಚು .

ಎಲ್ಲರೂ ನಮ್ಮವರೆಂಬ ಭ್ರಮೆ ಬಹಳ ಇತ್ತು . ಹಿಂದೆ ತಿರುಗಿ ನೋಡಿದಾಗ ನಮ್ಮ ನೆರಳು ಮಾತ್ರ ಇತ್ತು .ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಪರಮಾತ್ಮ ಹೇಳಿದರು ಕಾಲು ಎಳೆಯುವುದನ್ನು ಬಿಟ್ಟು ಕೈಹಿಡಿದು ಮೇಲಕ್ಕೆ ಎತ್ತಬೇಕು .

ನಿನ್ನ ಮನಸ್ಸಿನ ಶಕ್ತಿಯನ್ನು ಚಿಂತೆ ಮಾಡಲು ಉಪಯೋಗಿಸಬೇಡ . ಆ ಶಕ್ತಿಯನ್ನು ನಂಬಿಕೆಗೆ ಉಪಯೋಗಿಸು .ಕೆಲವೊಮ್ಮೆ ನಿಮ್ಮ ಗೆಳೆಯರಿಗಿಂತ ಶತ್ರುಗಳೇ ನಿಮ್ಮನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತಾರೆ .ಜಗತ್ತಿನ ಎಲ್ಲಾ ಕೆಲಸವನ್ನು ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಇರಲಿ .ಆದರೆ ಎಲ್ಲವೂ ನನ್ನಿಂದಲೇ ಆಗಿದ್ದು ಎಂಬ ಅಹಂಕಾರ ಬೇಡ ಅಷ್ಟೇ .

ಇಂದಿನ ಕಷ್ಟದ ದಿನಗಳೇ ನಾಳೆಯ ಖುಷಿಗೆ ಕಾರಣ . ನಮ್ಮನ್ನು ಸಮಯ ಎಷ್ಟು ಕಾಯಿಸುತದೆಯೋ ಅಷ್ಟೇ ಉತ್ತಮ ಫಲ ನಮಗೆ ಸಿಗುತ್ತದೆ .ಜೀವನದಲ್ಲಿ ಯಾರೂ ಜೊತೆಗೆ ಇರುತ್ತಾರೆ , ಇಲ್ಲವೋ, ಗೊತ್ತಿಲ್ಲ . ಆದರೆ ನೀವು ಮಾಡಿದ ಪಾಪ ಪುಣ್ಯ ನಮ್ಮನ್ನು ಹಿಂಬಾಲಿಸದೆ ಬಿಡುವುದಿಲ್ಲ .

ಕರ್ಮವು ಯಾವಾಗಲೂ ತನ್ನ ವಿಳಾಸವನ್ನು ಮರೆಯುವುದಿಲ್ಲ . ಸರಿಯಾದ ಸಮಯಕ್ಕೆ ಮತ್ತು ಸೂಕ್ತ ಸ್ಥಳಕ್ಕೆ ಹೋಗಿ ಮುಟ್ಟಿಯೇ ತೀರುತ್ತದೆ .ನಿನ್ನ ಮನಸು ಒಳ್ಳೆಯದಾಗಿದ್ದರೆ ಎಲ್ಲವೂ ನಿನ್ನ ವಿರುದ್ಧವಾಗಿ ಇರುತ್ತದೆ .ಆದರೆ ಸಮಯ ನಿನ್ನ ಪರವಾಗಿಯೇ ಇರುತ್ತದೆ .

ನಿನ್ನ ಅಧಿಕಾರಕ್ಕಾಗಿ ನೀನು ಹೋರಾಡು. ಆದರೆ ಯಾವುದರ ಮೇಲೆ ನಿನ್ನ ಅಧಿಕಾರವಿಲ್ಲವೋ ಅದಕ್ಕಾಗಿ ಆಸೆ ಪಡಬೇಡ .ಯಾವ ವ್ಯಕ್ತಿಯು ಕೆಟ್ಟ ದಿನಗಳನ್ನು ತನ್ನ ಜೀವನದಲ್ಲಿ ನೋಡಿರುತ್ತಾನೋ, ಅವನು ಎಂದಿಗೂ ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ .

ಪಾಪ ಎನ್ನುವುದು ಎಂತಹ ವಾಸ್ತು ಎಂದರೆ, ಅದನ್ನು ಖರೀದಿಸುವುದು ಬಹಳ ಸಸ್ತ . ಆದರೆ ಅದಕ್ಕೆ ಬೆಲೆ ಕಟ್ಟುವಾಗ ಜನ್ಮ ಜನ್ಮಗಳೇ ಕಳೆಯುತ್ತದೆ .ನಾವು ಮಾಡುವ ಕೆಲಸ ಈ ಇಬ್ಬರಿಗೆ ಸರಿ ಎನಿಸಿದರೆ ಸಾಕು . ಒಂದು ಪರಮಾತ್ಮ ಇನ್ನೊಂದು ಅಂತರಾತ್ಮ.

ಮೋಸ ಮಾಡಿದವರು ಈ ಕ್ಷಣಕ್ಕೆ ಸಂತೋಷವಾಗಿ ಇರಬಹುದು . ಆದರೆ ಮೋಸಕ್ಕೆ ಒಳಗಾದ ವ್ಯಕ್ತಿ ಸುರಿಸುವ ಪ್ರತಿ ದಿನದ ಕಣ್ಣೀರ ಧಾರೆ ಮೋಸಗಾರನಿಗೆ ಪಾಪದ ಸಮುದ್ರವಾಗಿ ಮಾರ್ಪಟ್ಟು ಅದರೂ ಳಗೆ ಮೋಸಗಾರರನ್ನು ಮುಳುಗಿಸಿ ಬಿಡುತ್ತದೆ , ಇದು ಕಟ್ಟು ಸತ್ಯ .

ಬಾಡಿಗೆ ಕಟ್ಟುವಾಗ ಸ್ವಂತ ಮನೆಯ ಬೆಲೆ , ಹಸಿವಾದಾಗ ಅನ್ನದ ಬೆಲೆ , ಕೆಲಸ ಇಲ್ಲದಿರುವಾಗ ಹಣದ ಬೆಲೆ , ದೂರವಾದಾಗ ಮನುಷ್ಯನ ಬೆಲೆ ತಿಳಿಯುತ್ತದೆ .ಭಾಗವಂತನನ್ನು ನಾವು ಕೊಂಡಾಡುವುದು ಮುಖ್ಯವಲ್ಲ . ಭಗವಂತ ನಮ್ಮನ್ನು ಕೊಂಡಾಡುವಂತೆ ಮಾಡುವುದು ಮುಖ್ಯ .

ನಿನಗೇನು ಬೇಕು ಅದಕ್ಕಾಗಿ ನೀನು ಹೋರಾಟ ಮಾಡದಿದ್ದರೆ , ಕಳೆದುಕೊಂಡಿದ್ದಕ್ಕಾಗಿ ಎಂದಿಗೂ ಕಣ್ಣೀರು ಸುರಿಸಬಾರದು . ಸಿಹಿ ಕಹಿಗಳೆರಡು ಯೋಗಿಗೆ ಏಕೆ ಪ್ರಕಾರದ ಬಲವನ್ನು ನೀಡುತ್ತದೆ . ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಸಮಾನ ಮನಸ್ಥಿತಿ ಉಳ್ಳವನೆ ನಿಜವಾದ ಯೋಗಿ .

ವ್ಯಕ್ತಿತ್ವ ಸ್ವಲ್ಪ ಕಠೋರವಾಗಿ ಇರಬೇಕು . ಇಲ್ಲದಿದ್ದರೆ ಕೆಲವು ಸಂದರ್ಭದಲ್ಲಿ ನಮ್ಮ ಅತ್ಯಂತ ಸರಳತೆ ಹಾಗೂ ಸವಿ ನುಡಿಗಳನ್ನು ನಮ್ಮ ದೌರ್ಬಲ್ಯ ಮತ್ತು ನಟನೆ ಎಂದು ಪರಿಗಣಿಸಲಾಗುತ್ತದೆ .

ತಪ್ಪು ಹೆಜ್ಜೆ ಇಡುವುದು ಸಹಜ . ಬೇಗ ಎಚ್ಚೆತ್ತುಕೊಳ್ಳುವುದು ಬುದ್ದಿವಂತಿಕೆ . ತಪ್ಪಾದಾಗ ಕೊರಗುವುದಕ್ಕಿಂತ ಮುಂದೆ ತಪ್ಪಾಗದಂತೆ ನಡೆದುಕೊಳ್ಳುವುದು ಉತ್ತಮ .

ನಿಮ್ಮನ್ನು ನೋಯಿಸಿದವರಿಗೆ ನಿಮ್ಮ ಬೆಲೆ ತಿಳಿಯಬೇಕೆಂದರೆ ಮೊದಲು ನೀವು ಅವರನ್ನು ನಿರ್ಲಕ್ಷಿಸುವುದನ್ನು ಕಲಿಯಿರಿ . ಮುಂದೆಂದು ಅವರು ನಿಮ್ಮ ಕಣ್ಣೀರಿಗೆ ಕಾರಣವಾಗದಂತೆ ನೋಡಿಕೊಳ್ಳುತ್ತಾರೆ .

ಮತ್ತು ನೋವು ಕೊಟ್ಟವರಿಗೆ ನಸು ನಕ್ಕು ಇದನ್ನು ಕೇಳಿ ನಿನಗೆ ನಾನೇನು ಮಾಡುವುದಿಲ್ಲ . ಯಾಕೆಂದರೆ ನಾನು ಬಿಟ್ಟರು ನಿನ್ನ ಕರ್ಮಗಳು ನಿನ್ನನ್ನು ಬಿಡುವುದಿಲ್ಲ ಎಂದು ಹೇಳಲಾಗಿದೆ.

Leave A Reply

Your email address will not be published.