ಇಂತಹ ಒಂದು ಮಹಾ ಮಂತ್ರ, ಸ್ವತಃ ಬ್ರಹ್ಮ ವಿಷ್ಣು ಮಹೇಶ್ವರರು ಜಪಿಸುತ್ತಾರೆ

0

ನಾವು ಈ ಲೇಖನದಲ್ಲಿ ಇಂತಹ ಒಂದು ಮಹಾ ಮಂತ್ರವನ್ನು ಸ್ವತಃ ಬ್ರಹ್ಮ , ವಿಷ್ಣು , ಮಹೇಶ್ವರರು ಹೇಗೆ ಜಪಿಸುತ್ತಾರೆ. ಎಂದು ತಿಳಿಯೋಣ . ಇದನ್ನು ಈ ಭೂಮಿಯ ಬ್ರಹ್ಮಾಂಡದ ಜೊತೆ ಎಲ್ಲಾ ನಕ್ಷತ್ರಗಳು ಜಪ ಮಾಡುತ್ತವೆ . ಇದನ್ನು ಕೇವಲ ಜಪ ಮಾಡಿದರೂ ಜಗತ್ತಿನಲ್ಲಿ ಇರುವ ಎಲ್ಲಾ ಸಂಕಟಗಳು ದೂರವಾಗುತ್ತವೆ . ವ್ಯಕ್ತಿಯು ಮೋಕ್ಷವನ್ನು ಪಡೆದುಕೊಂಡು ಶಿವನಲ್ಲಿ ವಿಲೀನ ಈ ಮಾತಿನ ಅರ್ಥ ಪರಮ ಮೋಕ್ಷದಲ್ಲಿ ವಿಲೀನರಾಗುತ್ತಾರೆ . ಈ ಮಹಾ ಮಂತ್ರವನ್ನು ಸ್ವತಃ ಬ್ರಹ್ಮ, ವಿಷ್ಣು , ಮಹೇಶ್ವರರು ಜಪ ಮಾಡುತ್ತಾರೆ .

ಇದರ ಬಗ್ಗೆ ಇಲ್ಲಿ ವಿಸ್ತಾರವಾಗಿ ತಿಳಿಸಲಾಗಿದೆ . ಇದನ್ನು ಬ್ರಹ್ಮ ವಿಷ್ಣು ಮಹೇಶ್ವರರು ಜಪ ಮಾಡುತ್ತಾರೆ . ಒಂದು ವೇಳೆ ಈ ಮಹಾ ಮಂತ್ರವನ್ನು ನೀವು ಜಪ ಮಾಡಿದರೆ ಬ್ರಹ್ಮ ವಿಷ್ಣು ಮಹೇಶ್ವರರ ಆ ಎಲ್ಲಾ ಅದ್ಭುತ ಶಕ್ತಿಗಳು ನಿಮ್ಮೊಳಗೆ ಬರುತ್ತವೆ . ನೀವು ಬಯಸುವುದನ್ನು ನೀವು ಮಾಡಬಹುದು . ನಿಮ್ಮ ಮನಸ್ಸಿನ ಇಚ್ಛೆ ಕೂಡ ಪೂರ್ಣಗೊಳ್ಳುತ್ತದೆ . ಮಹಾ ಮಂತ್ರವನ್ನು ಜಪ ಮಾಡಿದರೆ ಈಶ್ವರನ ಸಾನಿಧ್ಯವನ್ನು ಪಡೆಯಬಹುದು . ಒಂದು ಬಾರಿ ಭಗವಂತನಾದ ಶಿವನು ತಪಸ್ಸಿಗೆ ಕುಳಿತಾಗ , ಆ ನಾಮ ಸ್ಮರಣೆಯನ್ನು ಮಾಡುತ್ತಿದ್ದರು .

ಆ ಸಮಯದಲ್ಲಿ ಪಾರ್ವತಿ ದೇವಿ ಒಂದು ಪ್ರಶ್ನೆಯನ್ನು ಮಾಡುತ್ತಾಳೆ . ಹೇ ಸ್ವಾಮಿ ಹಗಲು ರಾತ್ರಿ ನೀವು ಧ್ಯಾನದಲ್ಲಿ ಕುಳಿತಿರುತ್ತೀರಾ , ಆಗ ನೀವು ಏನನ್ನು ಮಾಡುತ್ತೀರಾ, ಮತ್ತು ಯಾರ ನಾಮ ಸ್ಮರಣೆಯನ್ನು ಮಾಡುತ್ತೀರಾ . ಆಗ ಭಗವಂತನಾದ ಶಿವ ಈ ರೀತಿಯಾಗಿ ಹೇಳುತ್ತಾರೆ . ನನ್ನ ಆರಾಧ್ಯ ದೈವ ರಾಮ ಆಗಿದ್ದಾರೆ . ನಾನು ರಾಮನ ನಾಮ ಸ್ಮರಣೆ ಮಾಡುತ್ತೇನೆ . ಇದನ್ನು ಕೇಳಿದ ಪಾರ್ವತಿ ದೇವಿಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಬರುತ್ತದೆ . ಹಾಗಾದರೆ ಶ್ರೀ ರಾಮನು ಯಾವ ನಾಮ ಸ್ಮರಣೆ ಮಾಡುತ್ತಾರೆ .

ರಾಮರ ಬಳಿ ಹೋಗಿ ಪಾರ್ವತಿ ದೇವಿ ಪ್ರಶ್ನೆ ಮಾಡುತ್ತಾರೆ . ಆಗ ರಾಮನು ಹೇಳುತ್ತಾರೆ . ನಾನು ಶಿವನ ನಾಮ ಸ್ಮರಣೆಯನ್ನು ಮಾಡುತ್ತೇನೆ . ಒಂದು ವೇಳೆ ಶಿವನ ಪೂಜೆಯನ್ನು ಮಾಡದೆ , ಯಾರಾದರೂ ಒಂದು ವೇಳೆ ನನ್ನ ಪೂಜೆಯನ್ನು ಮಾಡಿದರೆ , ಆ ಪೂಜೆಯನ್ನು ನಾನು ಸ್ವೀಕಾರ ಮಾಡುವುದಿಲ್ಲ . ಆಗ ತಾಯಿ ಪಾರ್ವತಿ ದೇವಿ ಈ ರೀತಿ ಹೇಳುತ್ತಾರೆ . ಇಲ್ಲಿ ರಾಮನೂ ಕೂಡ ಶಿವನ ನಾಮ ಸ್ಮರಣೆ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ . ಇವರಿಬ್ಬರ ಮಧ್ಯೆ ಇರುವ ರಹಸ್ಯ ಏನಿದೆ .

ಇಲ್ಲಿ ಶಿವನು ರಾಮ ನಾಮ ಸ್ಮರಣೆ ಮಾಡುತ್ತಾರೆ . ರಾಮನು ಶಿವ ನಾಮ ಸ್ಮರಣೆಯನ್ನು ಮಾಡುತ್ತಾರೆ . ಇಲ್ಲಿರುವ ಗೊಂದಲವನ್ನು ಬಗೆಹರಿಸಿಕೊಳ್ಳಲು ತಾಯಿ ಪಾರ್ವತಿ ದೇವಿ ಭಗವಂತನಾದ ವಿಷ್ಣುವಿನ ಬಳಿ ಹೋಗುತ್ತಾರೆ . ಇಲ್ಲಿ ಭಗವಂತನಾದ ವಿಷ್ಣು ಅವರಿಗೆ ಪ್ರಶ್ನೆಯನ್ನು ಮಾಡುತ್ತಾರೆ . ಸಹೋದರ ನೀನು ಯಾವ ನಾಮ ಸ್ಮರಣೆಯನ್ನು ಮಾಡುತ್ತೀಯಾ , ಆಗ ಭಗವಂತನಾದ ವಿಷ್ಣು ಈ ರೀತಿಯಾಗಿ ಹೇಳುತ್ತಾರೆ . ನಾನು ಬ್ರಹ್ಮದೇವರ ನಾಮ ಸ್ಮರಣೆಯನ್ನು ಮಾಡುತ್ತೇನೆ . ಆಗ ಪಾರ್ವತಿ ದೇವಿ ಬ್ರಹ್ಮದೇವರ ಬಳಿ ಹೋಗಿ ಇದೇ ಪ್ರಶ್ನೆಯನ್ನು ಮಾಡುತ್ತಾರೆ . ಆಗ ಬ್ರಹ್ಮ ದೇವರು ಹೇಳುತ್ತಾರೆ ,ನಾನು ಶಿವನ ನಾವು ಸ್ಮರಣೆಯನ್ನು ಮಾಡುತ್ತೇನೆ .

ಅಂದರೆ ಇಲ್ಲಿ ಎಲ್ಲಾ ದೇವರುಗಳು ಹೇಳುವ ಪ್ರಕಾರ ಅವರು ರಾಮ ನಾಮ ಸ್ಮರಣೆ ಮಾಡುತ್ತಾರೆ, ಶಿವ ನಾಮಸ್ಮರಣೆ ಮಾಡುತ್ತಾರೆ , ಬ್ರಹ್ಮದೇವರ ನಾಮ ಸ್ಮರಣೆ ಮಾಡುತ್ತಾರೆ . ಇಲ್ಲಿ ಪ್ರತಿಯೊಬ್ಬರ ಜಪ ಮಾಡುತ್ತಿರುವ ಮಹಾ ಮಂತ್ರ ಯಾವುದು ಇದೆ ,ಈ ಎಲ್ಲಾ ಪ್ರಶ್ನೆಗಳಿಗೆ ಇರುವ ಉತ್ತರವನ್ನು ತಿಳಿದುಕೊಂಡು ಬಂದು ತಾಯಿ ಪಾರ್ವತಿ ದೇವಿ ಇನ್ನಷ್ಟು ಗೊಂದಲಕ್ಕೆ ಒಳಗಾಗುತ್ತಾರೆ . ಪಾರ್ವತಿ ದೇವಿ ಈ ರೀತಿಯಾಗಿ ಯೋಚನೆ ಮಾಡುತ್ತಾರೆ ಎಲ್ಲರೂ ಒಬ್ಬರನ್ನೊಬ್ಬರು ಜಪ ಮಾಡುತ್ತಿದ್ದಾರೆ .

ಇದರ ಅರ್ಥ ಏನಿದೆ , ತಾಯಿ ಪಾರ್ವತಿ ದೇವಿಯನ್ನು ನೋಡಿ ಭಗವಂತನಾದ ಶಿವನು ಮುಗುಳ್ನಗುತ್ತಿದ್ದರು . ಇಲ್ಲಿ ತಾಯಿ ಪಾರ್ವತಿ ದೇವಿಯ ಮನಸ್ಸಿನಲ್ಲಿ ಇನ್ನಷ್ಟು ಗೊಂದಲಗಳು ಪ್ರಶ್ನೆಗಳು ಮೂಡುತ್ತಿದ್ದವು . ತಾಯಿ ಪಾರ್ವತಿ ದೇವಿಯನ್ನು ಆ ಪ್ರಶ್ನೆಗಳು ಗೊಂದಲಗಳಿಂದ ಆಚೆ ತರಲು ಭಗವಂತನಾದ ಶಿವನು ಕೆಲವು ಉತ್ತರಗಳನ್ನು ಕೊಡುತ್ತಾರೆ . ಹೇ ಪಾರ್ವತಿ ದೇವಿ ನನ್ನ ಮಾತುಗಳನ್ನು ಗಮನವಿಟ್ಟು ಕೇಳು . ಭಗವಂತನಾದ ಶಿವನು ಈ ರೀತಿಯಾಗಿ ಹೇಳುತ್ತಾರೆ . ಹೇ ದೇವಿ ಇಲ್ಲಿ ನಾವು ರಾಮ ಬ್ರಹ್ಮ ಕೃಷ್ಣರನ್ನು ಜಪ ಮಾಡುವುದಿಲ್ಲ . ನಾವೆಲ್ಲರೂ ಒಂದೇ ಮಹಾ ಮಂತ್ರವನ್ನು ಜಪ ಮಾಡುತ್ತೇವೆ .

ಮಹಾ ಮಂತ್ರವು ಎಲ್ಲಾ ಪ್ರಾಣಿಗಳಲ್ಲಿ ಎಲ್ಲಾ ಜೀವ ರಾಶಿಗಳಲ್ಲಿ ಆ ಮಂತ್ರವೂ ಅಡಗಿದೆ . ಈ ಜಗತ್ತಿನಲ್ಲಿ ಎಷ್ಟೆಲ್ಲಾ ಜನರಿದ್ದಾರೋ ಅವರ ಒಳಗಡೆ ಆ ಮಹಾ ಮಂತ್ರವೂ ನಡೆಯುತ್ತಿರುತ್ತದೆ . ಆದರೆ ಅವರಿಗೆಲ್ಲ ಆ ಮಹಾ ಮಂತ್ರದ ಬಗ್ಗೆ ಗೊತ್ತಿಲ್ಲ .ಹಾಗಾಗಿ ಅವರು ಜಪ ಮಾಡುವುದಿಲ್ಲ . ಈ ಮಹಾ ಮಂತ್ರವೂ ಕಣ ಕಣದಲ್ಲಿ ಸಹ ವಾಸವಾಗಿದೆ . ಈ ಮಹಾ ಮಂತ್ರದಿಂದ ಇಡೀ ಸೃಷ್ಟಿಯ ರಚನೆಯು ಆಗಿದೆ . ನಾವೆಲ್ಲರೂ ಅದೇ ಮಹಾ ಮಂತ್ರವನ್ನು ಧ್ಯಾನ ಮಾಡುತ್ತಿರುತ್ತೇವೆ .

ಆ ಮಹಾ ಮಂತ್ರವನ್ನು ಧ್ಯಾನ ಮಾಡಿದಾಗಲೇ ಮನುಷ್ಯರು ತಮ್ಮ ಗುರಿಯನ್ನು ತಲುಪುತ್ತಾರೆ . ಭಗವಂತನಿಗೂ ಅವರು ಹತ್ತಿರ ಆಗಬಹುದು . ಎಲ್ಲಾ ದೇವರುಗಳಲ್ಲಿ ಒಂದಾಗಿ ತಮ್ಮ ಮನಸ್ಸಿನ ಇಚ್ಛೆಯನ್ನು ಪೂರ್ತಿಗೊಳಿಸಬಹುದು . ಯಾವ ವ್ಯಕ್ತಿಗಳು ಈ ಮಹಾ ಮಂತ್ರವನ್ನು ಜಪ ಮಾಡುತ್ತಾರೋ, ಅವರಿಗೆ ಎಲ್ಲಾ ವೇದಗಳ ಶಾಸ್ತ್ರಗಳ ಜ್ಞಾನ ದೊರೆತಂತೆ ಅರ್ಥ .ಪಾರ್ವತಿ ದೇವಿ ಒಂದು ಪ್ರಶ್ನೆಯನ್ನು ಕೇಳುತ್ತಾಳೆ . ನಮ್ಮೆಲ್ಲರಲ್ಲಿ ಆ ಮಹಾ ಮಂತ್ರ ಎಲ್ಲಿದೆ . ಅದು ಯಾವ ರೀತಿಯ ಕ್ರಿಯೆ ಆಗಿದೆ ಎಂದರೆ , ಇದು ಎಲ್ಲಾ ಪ್ರಾಣಿಗಳಲ್ಲಿ ಸಮಾನವಾದ ರೂಪದಲ್ಲಿ ಇದೆ .

ಪ್ರತಿಕ್ಷಣ ಆ ಉಸಿರಾಟ ನಡೆಯುತ್ತಿರುತ್ತದೆ . ಹೇಗೆ ಮನುಷ್ಯ ನು ಹುಟ್ಟುತ್ತಾನೋ ಹುಟ್ಟುತ್ತಿದ್ದಂತೆ ಅವರಲ್ಲಿ ಶ್ವಾಸವು ಶುರುವಾಗುತ್ತದೆ .ಹೇಗೆ ಅವರ ಮೃತ್ಯು ಆಗುತ್ತದೆ. ಹಾಗೆ ಅವರ ಶ್ವಾಸವು ಬಿಡುತ್ತದೆ . ಅದೇ ಶ್ವಾಸ ನಮ್ಮೆಲ್ಲರ ಒಳಗಡೆ ಇದೆ .ಈ ಶ್ವಾಸವೇ ಭಗವಂತನಲ್ಲಿ ಇರುವ ಮಹಾ ಮಂತ್ರವು ಆಗಿದೆ . ಈ ಶ್ವಾಸವನ್ನು ಬೇಕಾದರೆ ನೀವು ಧ್ಯಾನ ಮಾಡಬಹುದು ಅಥವಾ ಜಪ ಮಾಡಬಹುದು . ಆಗ ಈ ಮಹಾ ಮಂತ್ರವು ಪ್ರಕಟಗೊಳ್ಳುತ್ತದೆ . ಪ್ರಕಟವಾದ ನಂತರ ಸ್ವತಃ ಅದರ ಬಗ್ಗೆ ನೀವೇ ತಿಳಿದುಕೊಳ್ಳಬಹುದು . ಇಲ್ಲಿಯ ತನಕ ಈ ಬ್ರಹ್ಮಾಂಡದಲ್ಲಿ ಆ ಮಹಾ ಮಂತ್ರದ ಬಗ್ಗೆ ಯಾರಿಗೂ ಸಹ ಹೇಳಲು ಸಾಧ್ಯವಾಗಿಲ್ಲ .

ಇದನ್ನು ಕರೆಯಲು ನೀವು ಯಾವ ಹೆಸರನ್ನು ಬೇಕಾದರೂ ಇಡಬಹುದು . ಆದರೆ ಕೇವಲ ಇದನ್ನು ಅನುಭವಿಸಬಹುದು . ಯಾಕೆಂದರೆ ಇದು ಮಹಾ ಮಂತ್ರವಾಗಿದೆ . ಇದಕ್ಕೆ ಸಮನಾಗಿ ಇರುವ ಮಂತ್ರ ಇಡೀ ಸೃಷ್ಟಿಯಲ್ಲಿ ಯಾವುದು ಇಲ್ಲ . ಯಾಕಂದ್ರೆ ಯಾವುದಕ್ಕೂ ಹೋಲಿಸಲಾಗದ ಮಂತ್ರವನ್ನು ಮಹಾ ಮಂತ್ರ ಎಂದು ಕರೆಯುತ್ತಾರೆ .ಇಲ್ಲಿ ಕೆಲವರಲ್ಲಿ ಪ್ರಶ್ನೆ ಈ ರೀತಿಯಾಗಿ ಬರುತ್ತದೆ . ಈಗ ಶ್ವಾಸದ ಮೇಲೆ ಹೇಗೆ ಧ್ಯಾನ ಮಾಡುವುದು .ಶ್ವಾಸದ ಮೇಲೆ ಈ ರೀತಿಯಾಗಿ ಧ್ಯಾನವನ್ನು ಮಾಡಬಹುದು .

ನೀವು ಗಮನಿಸಿ ನಿಮ್ಮ ಮೂಗಿನಿಂದ ಶ್ವಾಸವು ಬರುತ್ತಿರುತ್ತದೆ , ಹೋಗುತ್ತಾ ಇರುತ್ತದೆ. ಆದರೆ ಈ ರೀತಿ ಮಾಡುವುದು ಸ್ವಲ್ಪ ಕಷ್ಟ ಆಗಬಹುದು . ಆದರೆ ಇಲ್ಲಿ ಯಾವ ರೀತಿ ಮಾಡುವುದು ಎಂದು ತಿಳಿಸಲಾಗಿದೆ. ಇಲ್ಲಿ ಸ್ವತಃ ನೀವೂ ಕೂಡ ನೋಡಬಹುದು. ನಮ್ಮ ಶ್ವಾಸವು ಕೂಡ ಒಂದು ಮಂತ್ರವನ್ನು ಜಪ ಮಾಡುತ್ತಿರುತ್ತದೆ. ಇದನ್ನು ಸುಹಃ ಎಂದು ಕರೆಯುತ್ತಾರೆ. ಇದು ಪ್ರಾಕೃತಿಕ ರೂಪದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಉಸಿರಿನಲ್ಲಿ ಇರುತ್ತದೆ. ಸುಹಃ ಪದದ ಅರ್ಥ ಶಿವ ಶಕ್ತಿಯ ಜೋಡಿ ಎಂದರ್ಥ .

ಯಾವಾಗ ಶ್ವಾಸವನ್ನು ಒಳಗಡೆ ತೆಗೆದುಕೊಳ್ಳುತ್ತೀರೋ, ಆಗ “ಸು ” ಅನ್ನುವ ಶಬ್ಧ ಬರುತ್ತದೆ. ಶ್ವಾಸವನ್ನು ಬಿಡುವ ಸಂದರ್ಭದಲ್ಲಿ “ಹಃ “ಅನ್ನುವ ಶಬ್ದ ಬರುತ್ತದೆ. ಇದು ಪೂರ್ತಿಯಾಗಿ ಪ್ರಾಕೃತಿಕ ರೂಪದಲ್ಲಿ ಆಗುತ್ತಿರುತ್ತದೆ. ಕೇವಲ ಇದನ್ನು ಮಾತ್ರ ಜಪ ಮಾಡಬೇಕು. ಅಂದರೆ ಶಕ್ತಿಯು ನಿಮ್ಮ ಶ್ವಾಶದಲ್ಲಿಯೇ ಇರುತ್ತದೆ. ಇಲ್ಲಿ ಶಿವಶಕ್ತಿ ಇಬ್ಬರು ಇದ್ದಾರೆ . ಒಂದು ವೇಳೆ ಶಿವಶಕ್ತಿ ಇಬ್ಬರ ಧ್ಯಾನವನ್ನು ಮಾಡಿದರೆ , ಇಡೀ ಜಗತ್ತಿನಲ್ಲಿ ದೊಡ್ಡದಾದ ಮಂತ್ರ ಯಾವುದು ಇರುವುದಿಲ್ಲ .

ಯಾವಾಗ ನೀವು ಶಿವಶಕ್ತಿ ಯ ಧ್ಯಾನ ಮಾಡುತ್ತಿರುತ್ತೀರಾ .ಹಗಲು ರಾತ್ರಿ ಇದು ನಿರಂತರವಾಗಿ ನಡೆಯುತ್ತಿರುತ್ತದೆ . ಆಗ ನಿಮ್ಮೊಳಗಡೆ ಕೂಡ ಶಿವ ಶಕ್ತಿಗೆ ಸಮಾನವಾಗಿ ಇರುವಂತಹ ಶಕ್ತಿಗಳು ಒಳ್ಳೆಯ ಗುಣಗಳು ಬರುತ್ತವೆ . ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗಲು ಶುರುವಾಗುತ್ತವೆ . ಇಲ್ಲಿ ಮಹಾ ಮಂತ್ರದ ಹೆಸರು ಏನಿದೆ , ಇದು ಕಣ ಕಣದಲ್ಲಿ ಇರುವಂತಹ ಮಹಾ ಮಂತ್ರ ಆಗಿದೆ .ಇದನ್ನು ರಾಮ ನಾಮ ಎಂದು ಕೂಡ ಕರೆಯಬಹುದು . ಇದನ್ನು ಸುಹಃ ಎಂದು ಕೂಡ ಕರೆಯಬಹುದು . ಅಂದರೆ ಮಹಾಮಂತ್ರ ಇವುಗಳಲ್ಲಿ ಪ್ರಕಟಗೊಳ್ಳುತ್ತದೆ .ಇಲ್ಲಿ ಭಗವಂತನಾದ ಶಿವನು ಈ ರೀತಿಯಾಗಿ ಹೇಳುತ್ತಾರೆ .

ಮೂರನೇ ಕಣ್ಣು ಏಕಾಗ್ರತೆ ಮಾಡುತ್ತಾ , ಎರಡು ಕಣ್ಣುಗಳ ಮಧ್ಯೆ ಉಬ್ಬುಗಳು ಇರುವ ಸ್ಥಳದಲ್ಲಿ ಧ್ಯಾನವನ್ನು ಕೇಂದ್ರೀಕರಿಸುತ್ತಾ , ನೀವು ಶ್ವಾಸದ ಮಂತ್ರಗಳನ್ನು ಜಪ ಮಾಡಿ .ಇದೇ ಮಂತ್ರವನ್ನು ಬ್ರಹ್ಮ ವಿಷ್ಣು ಮಹೇಶ್ವರ ಮೂರು ಜನರು ಜಪ ಮಾಡುತ್ತಾರೆ . ಯಾವಾಗ ನೀವು ನಿಮ್ಮ ಶ್ವಾಸದ ಜೊತೆಗೆ ರಾಮ ನಾಮವನ್ನು ಜಪ ಮಾಡುತ್ತೀರೋ , ಈ ಜಪವು ಶ್ವಾಸವನ್ನು ಹಿಡಿದಿಟ್ಟುಕೊಳ್ಳಲು ಇರುತ್ತದೆ .ಹಾಗಾಗಿ ಸುಹಃ ಮಂತ್ರದ ಜೊತೆಗೆ ರಾಮನಾಮ ಜಪವನ್ನು ಮಾಡಬೇಕು . ಈ ರೀತಿ ಮಾಡಿದಾಗ ಎಲ್ಲಾ ಶಕ್ತಿಗಳು ಸ್ವತಃ ನಿಮಗೆ ಸಿಗಲು ಶುರುವಾಗುತ್ತದೆ . ಆ ಮಹಾ ಮಂತ್ರದ ಬಗ್ಗೆ ನಿಮಗೆ ತಿಳಿಯುತ್ತದೆ . ಸ್ವತಃ ಈ ಮಹಾ ಮಂತ್ರದ ಬಗ್ಗೆ ಶಾಸ್ತ್ರವೇ ಹೇಳುತ್ತದೆ .

Leave A Reply

Your email address will not be published.