ಕುಂಭ ರಾಶಿಗೆ ಈ ಥರನಾ? 

0

ನಾವು ಈ ಲೇಖನದಲ್ಲಿ ಏಪ್ರಿಲ್ ತಿಂಗಳ ಕುಂಭ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿಯೋಣ . ಯಥೇಚ್ಛವಾಗಿ ಒಳ್ಳೆಯದನ್ನು ಮಾಡುವ ಶಕ್ತಿ ಇರುತ್ತದೆ . ಜನಸಾಮಾನ್ಯರು ಬೇರೆಯವರ ಬಗ್ಗೆ ಹೇಳುವ ಮಾತು , ಜೀವನದಲ್ಲಿ ಬೇಜಾರು ಆಗಿರುವವರ ಬಗ್ಗೆ , ಹತಾಶೆ ಆಗಿರುವವರ ಬಗ್ಗೆ , ಇವುಗಳು ಸಾಮಾನ್ಯವಾಗಿ ಬರುವ ಅಭಿಪ್ರಾಯಗಳು ಆಗಿರುತ್ತವೆ . ಪ್ರಾಮಾಣಿಕರು ಅನ್ನುವಂಥದ್ದು ಹೆಚ್ಚಾಗಿ ಕಂಡುಬರುವುದಿಲ್ಲ . ಜೀವನದಲ್ಲಿ ನಾವು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ.

ಮುಂದೆ ಹೇಗೆ ಹೋಗಬೇಕು ಎಂದು ತಿಳಿಯದ ಸುಳಿಯಲ್ಲಿ ನೀವು ಸಿಕ್ಕಿ ಹಾಕಿಕೊಳ್ಳುತ್ತೇವೆ . ಈ ರೀತಿಯ ಪರಿಸ್ಥಿತಿ ಬಹಳ ಜನರಿಗೆ ಅನುಭವಕ್ಕೆ ಬಂದಿರುತ್ತದೆ . ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ . ಆರೋಗ್ಯದ ಬಗ್ಗೆ ಬರುವ ಆತಂಕಗಳು ಕಂಡು ಬರುತ್ತವೆ. ಮನಸ್ಸಿನಲ್ಲಿ ಅನುಮಾನ ಸಂಶಯಗಳು ಶುರುವಾಗುತ್ತವೆ . ಜೀವನದಲ್ಲಿ ಬರುವ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಅಥವಾ ಹಣಕಾಸಿಗೆ ಸಂಬಂಧಪಟ್ಟಂತೆ , ಆತ್ಮ ಗೌರವ , ಅಭಿಮಾನ ಇದಕ್ಕೆ ಧಕ್ಕೆ ತರುವ ವಿಷಯಗಳು ನಡೆಯುವ ಸಾಧ್ಯತೆ ಇರುತ್ತದೆ .

ಮಾತಿನ ವಿಚಾರದಲ್ಲಿ ಬಹಳಷ್ಟು ಸವಾಲುಗಳು ಬರುವ ಸಾಧ್ಯತೆ ಇದೆ . ಹೇಳಬೇಕಾದ ವಿಷಯಗಳನ್ನು ಹೇಳಲು ಸಾಧ್ಯವಾಗದೆ ಇರಬಹುದು . ಹಣಕ್ಕೆ ಸಂಬಂಧಪಟ್ಟ ಬಹಳಷ್ಟು ಸಮಸ್ಯೆಗಳು ಜೀವನದಲ್ಲಿ ಬರುತ್ತವೆ . ಹೂಡಿಕೆಗೆ ಹಣ ಹೊಂದಿ ಸುವುದಕ್ಕೆ ಸಾಧ್ಯವಾಗದೆ ಪರದಾಡುವ ಸಮಸ್ಯೆ ಬರುತ್ತದೆ . ಕೆಲವೊಂದು ಸಮಯದಲ್ಲಿ ಯಾವುದೇ ರೀತಿಯ ಯೋಜನೆಗಳು ನಮ್ಮನ್ನು ಬಿಟ್ಟು ಬೇರೆ ಯಾವುದೇ ರೀತಿಯ ಚಿಂತೆಗಳು ಬರುವುದಿಲ್ಲ. ನಾನು ಅನ್ನುವ ಭಲೆಯನ್ನು ಎಣೆದುಕೊಂಡು ಅದರಲ್ಲೇ ಸಿಕ್ಕಿ ಹಾಕಿಕೊಳ್ಳುವುದು.

ನಮಗೆ ನಾವೇ ಹಾಕಿಕೊಳ್ಳುವ ಬೇಲಿ . ವಿಶೇಷವಾಗಿ ರವಿ ಗ್ರಹ ಕುಜ ಗ್ರಹ ಮತ್ತು ಶನಿ ಗ್ರಹ ಹಾಗೆಯೇ ಶುಕ್ರ ಗ್ರಹ ಕೂಡ ನಿಮ್ಮ ರಾಶಿಯಲ್ಲೇ ಬರುತ್ತದೆ. ಆದರೆ ಶುಕ್ರ ಗ್ರಹದಿಂದ ಒಳ್ಳೆಯ ಪರಿವರ್ತನೆಯನ್ನು ನಿರೀಕ್ಷೆ ಮಾಡಬಹುದು . ಇದನ್ನು ಬಿಟ್ಟು ಬೇರೆ ಗ್ರಹಗಳು ನಿಮ್ಮ ಬಗ್ಗೆ ನೀವೇ ಸತತವಾಗಿ ಯೋಚನೆ ಮಾಡುವ ರೀತಿ ಮಾಡುತ್ತವೆ . ಮತ್ತು ನಿಮ್ಮ ಮನಸ್ಸನ್ನು ಕೂಡ ಹಾಳು ಮಾಡಬಹುದು . ಆಲೋಚನೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಹೋಗಲು ಸಾಮರ್ಥ್ಯ ಕಡಿಮೆ ಆಗಬಹುದು .

ಆದ್ದರಿಂದ ಚುರುಕಾಗಿ ಇರಲು ಪ್ರಯತ್ನ ಮಾಡಿ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಯತ್ನ ಆಹಾರದಲ್ಲಿ ಇತಿಮಿತಿಗಳನ್ನು ಕಾಪಾಡಿಕೊಳ್ಳುವುದು . ಜಂಕ್ ಫುಡ್ ತಿನ್ನದೆ ಒಳ್ಳೆಯ ಆಹಾರವನ್ನು ಸೇವಿಸುವುದು . ಆದರೆ ಅನಿವಾರ್ಯ ಸಂದರ್ಭಗಳು ಸೃಷ್ಟಿಯಾಗಬಹುದು . ಸ್ನೇಹಿತರ ಜೊತೆ ಹೋಗಿ ಬೇಡದೆ ಇರುವ ಆಹಾರಗಳನ್ನು ತಿನ್ನುವ ಸಂದರ್ಭ ನಿರ್ಮಾಣವಾಗಬಹುದು . ನೀವು ಆ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವ ಸ್ಥಿತಿ ಬರಬಹುದು .

ಆಹಾರದ ವಿಚಾರದಲ್ಲಿ ಒಳ್ಳೆಯ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು . ಯೋಗ ಧ್ಯಾನ ಇಂತಹ ವಿಷಯಗಳಿಗೆ ಸಮಯವನ್ನು ಕಳೆಯಬೇಕು . ನಿಮಗೆ ಸಮಾಧಾನ ತಂದು ಕೊಡುವ ವ್ಯಕ್ತಿಗಳನ್ನು ನೀವು ಭೇಟಿ ಮಾಡಲು 108 ವಿಘ್ನಗಳು ಬರುತ್ತವೆ .ನೀವು ನಿಮ್ಮನ್ನು ಸಕಾರಾತ್ಮಕತೆಯ ಕಡೆ ತೆಗೆದುಕೊಂಡು ಹೋಗಲು ನಿಮ್ಮ ಪ್ರಯತ್ನಕ್ಕೆ ಅಡೆತಡೆಗಳು ಬರಬಹುದು . ಈ ರೀತಿಯಾದ ಸಾಕಷ್ಟು ಗೊಂದಲಗಳು ಉಂಟಾಗುತ್ತವೆ . ಇದಕ್ಕೆಲ್ಲಾ ಪರಿಹಾರ ಮಿತ ಆಹಾರ , ಯೋಗ, ಧ್ಯಾನ ಅಥವಾ ಶಿಸ್ತು ಇಂತಹುದನ್ನು ಜೀವನದಲ್ಲಿ ಪಾಲಿಸಬೇಕು. ಶುಕ್ರ ಗ್ರಹದ ರಕ್ಷಣೆ ನಿಮಗೆ ಈ ತಿಂಗಳಲ್ಲಿ ಇರುತ್ತದೆ .ಯಥೇಚ್ಛವಾಗಿ ಒಳ್ಳೆಯದನ್ನು ಮಾಡುವ ಶಕ್ತಿ ಶುಕ್ರ ಗ್ರಹಕ್ಕೆ ಇರುತ್ತದೆ .

ಯಾವುದೇ ನಕಾರಾತ್ಮಕ ಶಕ್ತಿಗಳು ಬಂದರೆ ಸ್ವಲ್ಪ ದರಲ್ಲಿ ಪಾರಾಗುವ ಸಾಧ್ಯತೆ ಇರುತ್ತದೆ . ಇದನ್ನು ಸಕಾರಾತ್ಮಕ ಅಂಶ ಎಂದು ಹೇಳಬಹುದು . ಎಚ್ಚರಿಕೆಯಿಂದ ಇರಬೇಕು . ಮಾತಿನ ಸಮಸ್ಯೆ ಕೂಡ ಇರುತ್ತದೆ . ಕುಂಭ ರಾಶಿಯವರಿಗೆ ಅದನ್ನು ನಿಯಂತ್ರಿಸುವ ಶಕ್ತಿ ಬರುತ್ತದೆ . ತಿಂಗಳ ಕೊನೆಗೆ ಬುಧ ಗ್ರಹ ದ್ವಿತೀಯ ರಾಶಿಗೆ ಬರುತ್ತದೆ . ಹಣದ ವಿಚಾರದಲ್ಲಿ ಸ್ವಲ್ಪ ಧೈರ್ಯದ ನಿರ್ಧಾರವನ್ನು ಕೈಗೊಳ್ಳುತ್ತೀರಾ . ರಾಹು ಮತ್ತು ಬುಧ ಜೊತೆಯಾಗಿ ಇರುವಾಗ ಈ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತೀರಾ .

ಧನ ಸ್ಥಾನದಲ್ಲಿ ಧೈರ್ಯ ಯೋಗ ಇರುತ್ತದೆ . ಗೊಂದಲಗಳು ದೂರ ಆಗುವ ಸಾಧ್ಯತೆ ಇರುತ್ತದೆ . ಮಾತಿನ ಸಮಸ್ಯೆ ಇದ್ದರೆ , ರಾಹು ಗ್ರಹದಿಂದ ಬಹಳ ಗೊಂದಲಕಾರಿಯಾಗಿ ಮಾತನಾಡುವುದು . ಮಾತಿನಲ್ಲಿ ಸ್ಪಷ್ಟತೆ ಇಲ್ಲದೆ ಇರುವುದು . ಅಡ್ಡಗೋಡೆ ಮೇಲೆ ದೀಪ ಇಟ್ಟು ಮಾತನಾಡುವ ರೀತಿ ಮಾತನಾಡುವುದು . ವಿಚಾರಗಳನ್ನು ಬೇರೆ ಕಡೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ . ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇದರಿಂದ ಮುಕ್ತಿ ದೊರೆಯುತ್ತದೆ .

ಪ್ರಾಯೋಗಿಕ ವಿಧಾನವನ್ನು ಬುಧ ಗ್ರಹ ದ್ವಿತೀಯ ಭಾವದಲ್ಲಿ ಇರುವಾಗ ನೀಡುತ್ತದೆ . ತಿಳುವಳಿಕೆ ದೊರೆಯುತ್ತದೆ, ಕೆಲವೊಂದು ಅನುಭವಗಳು ನಿಮ್ಮನ್ನು ಪಕ್ವವಾಗಿ ಮಾಡುತ್ತವೆ . ಸರಿಯಾದ ಹಾದಿಯಲ್ಲಿ ಹೋಗಲು ಅವಕಾಶ ದೊರೆಯುತ್ತದೆ . ತಿಂಗಳ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಗಳು ದೊರೆಯುತ್ತವೆ . ಅಡ್ಡಿ ಆತಂಕಗಳು ಬಗೆಹರಿಯುವ ಸಾಧ್ಯತೆ ಇದೆ . ಬುಧ ಗ್ರಹ ನಿಮ್ಮ ಮಟ್ಟಿಗೆ ಬಹಳಷ್ಟು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ . ನಿಮಗೆ ಭಂಡತನ ಬೇಕಾಗುತ್ತದೆ . ಬೇರೆ ವ್ಯಕ್ತಿಗಳಿಗೆ ಮೊಂಡುತನ ಅನಿಸಿದರೂ , ಹಠ ಅನಿಸಿದರೂ ಈ ಯೋಚನೆ ಸರಿ ಎಂದು ಅನಿಸುತ್ತದೆ .

ಈ ರೀತಿಯ ಧೈರ್ಯ ತೆಗೆದುಕೊಳ್ಳುವ ವ್ಯಕ್ತಿಗಳಿಗೆ ಗುರುವಿನ ಅನುಗ್ರಹ ಇರುತ್ತದೆ . ಜೀವನದ ಪರೀಕ್ಷೆಗಳಲ್ಲಿ ಪಾಸ್ ಆಗುವ ಒಂದು ಸಾಮರ್ಥ್ಯ ಇರುತ್ತದೆ . ಗುರು ಗ್ರಹ ಧೈರ್ಯ ತಂದು ಕೊಡುವ ಮೂಲಕ ಒಳ್ಳೆಯ ಫಲ ದೊರೆಯುತ್ತದೆ . ಏಳನೇ ತಾರೀಖಿನ ವರೆಗೆ ಶುಕ್ರ ಗ್ರಹ ಲಾಭದಾಯಕವಾಗಿ ಇರುತ್ತದೆ . ಏಳನೇ ತಾರೀಖಿನ ನಂತರ ವ್ಯಯ ಸ್ಥಾನಕ್ಕೆ ಬಂದರು ಒಳ್ಳೆಯದನ್ನೇ ಮಾಡುತ್ತದೆ . ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಪ್ರಗತಿ ಇದೆ . ಒತ್ತಡ ಇದ್ದರೂ ಕೂಡ ಯಾವುದೇ ರೀತಿಯ ತೊಂದರೆ ಇರುವುದಿಲ್ಲ . ತುಂಬಾ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ . ಹಾಗೆಯೇ ಸಾಡೇ ಸಾತಿಯ ಪ್ರಮುಖವಾದ ಘಟ್ಟದಲ್ಲಿ ನೀವು ಇದ್ದೀರಾ .

ಗೊಂದಲಗಳು , ದ್ವಂದ್ವ ನಿಲುವು , ಅಂದರೆ ಎರಡು ರೀತಿಯಾಗಿ ಯೋಚನೆ ಮಾಡುವುದು . ಒಂದು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಕಷ್ಟು ರೀತಿಯ ಸಮಸ್ಯೆಗಳು ಬರಬಹುದು . ಪ್ರಮುಖವಾದ ತೀರ್ಮಾನಗಳನ್ನು ಮಾಡಲು ಬಹಳ ಜಟಿಲವಾಗುವ ಸಾಧ್ಯತೆ ಇರುತ್ತದೆ. ಗೊಂದಲಗಳು ಬಹಳಷ್ಟು ಸೃಷ್ಟಿಯಾಗುತ್ತದೆ . ಎಚ್ಚರಿಕೆಯಿಂದ ಇರಬೇಕು .ಸರಿಯಾಗಿ ತೂಗಿ ಅಳೆದು ನಿರ್ಧಾರಕ್ಕೆ ಬರಬೇಕು . ಆ ನಿರ್ಧಾರ ನಿಮ್ಮ ಬದುಕನ್ನು ಬೆಳಗುವ ದಾರಿಗೆ ಕರೆದುಕೊಂಡು ಹೋಗುತ್ತದೆ .

Leave A Reply

Your email address will not be published.