ನಾವು ಈ ಲೇಖನದಲ್ಲಿ ಜೀವನದಲ್ಲಿ ಬಗೆಹರಿಯದ ಸಮಸ್ಯೆಗಳಿಗೆ ಏನು ಮಾಡಬೇಕು ಎಂದು ತಿಳಿಯೋಣ . ಒಳ್ಳೆಯ ಸಮಯ ಬರುವಾಗ ಕೆಟ್ಟ ದಿನಗಳ ಕಾವು ಹೆಚ್ಚಾಗಿ ಕಾಣುತ್ತದೆ .ವಿಪರೀತ ಪರೀಕ್ಷೆಗಳು ಉದ್ಭವಿಸುತ್ತವೆ .ಕೊನೆಗೆ ನಿರೀಕ್ಷೆಗೂ ಮೀರಿದ ಸುಖವನ್ನು ತಂದುಕೊಡುತ್ತದೆ .
ನಾವು ಧರಿಸುವ ವಸ್ತ್ರದ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇವೆ . ಯಾವ ವಸ್ತ್ರ ಧರಿಸಿದರೆ ಸುಂದರವಾಗಿ ಕಾಣುತ್ತೇವೆ ಎಂದು ಯೋಚನೆ ಮಾಡುತ್ತೇವೆ .ಆದರೆ ನಾವು ಯಾವ ಕಾರ್ಯ ಮಾಡಿದರೆ ಭಗವಂತನ ಪ್ರೀತಿಗೆ ಪಾತ್ರರು ಆಗುತ್ತೇವೆ ಎಂದು ಯಾರೂ ಕೂಡ ಯೋಚಿಸುವುದಿಲ್ಲ .
ಒಬ್ಬರ ಕಷ್ಟಕ್ಕೆ ನೀನು ಆದರೆ, ನಿನ್ನ ಕಷ್ಟಕ್ಕೆ ಆ ದೇವರು ಯಾರನ್ನಾದರೂ ಸೃಷ್ಟಿ ಮಾಡಿರುತ್ತಾನೆ .
ಇಂದು ನೀನು ಏನನ್ನು ಕಳೆದು ಕೊಂಡಿರುವೆಯೋ ,ನಾಳೆ ಅದಕ್ಕಿಂತ ಶ್ರೇಷ್ಠವಾಗಿರುವುದನ್ನು ಪಡೆಯುವೆ , ತಾಳ್ಮೆಯಿಂದ ಇರಬೇಕು .
ಯಾರಿಗಾದರೂ ಏನಾದರೂ ಕೊಡಬೇಕು ಎಂದು ನಿಮಗೆ ಅನಿಸಿದರೆ , ಅವರಿಗೆ ಅದರ ಬೆಲೆ ಗೊತ್ತಿದ್ದರೆ ಮಾತ್ರ ಕೊಡಿ .ಅದನ್ನು ಉಳಿಸಿಕೊಳ್ಳುವ ರೀತಿ ಅವರಿಗೆ ಗೊತ್ತಿರಬೇಕು .ಇಲ್ಲವಾದರೆ ನೀವು ಕೊಟ್ಟ ವಸ್ತುವಿಗೆ ಬೆಲೆ ಇರುವುದಿಲ್ಲ .
ತಿಳಿದು ಬದುಕುವ ಸಹನೆ ನಿನ್ನದು ಆದರೆ , ಸಕಲವೂ ನಿನ್ನ ದೇ , ವಿನಯವು ನಿನ್ನದಾದರೆ ವಿಜಯವು ನಿನ್ನದೆ .
ದೇವರು ನಿನಗೆ ಕಷ್ಟಗಳನ್ನು ಕೊಡುವುದು ನಿನಗೆ ನೋವು ಕೊಡುವುದಕ್ಕೆ ಅಲ್ಲ .ಎಷ್ಟು ಜನ ನಿನ್ನ ಜೊತೆ ನಿಯತ್ತಾಗಿ ಇದ್ದಾರೆ , ಎಷ್ಟು ಜನ ನಟಿಸುತ್ತಾ ಇದ್ದಾರೆ , ಎಂದು ನಿನಗೆ ತಿಳಿಯುವುದಕ್ಕೆ .
ನಾನು ನನ್ನದು ಎಂಬ ಅಭಿಮಾನದಿಂದ ಉಂಟಾದ ಕಾಮ, ದುರಾಸೆ ಮೊದಲಾದ ಕೊಳೆಗಳಿಂದ ಮನಸ್ಸು ಯಾವಾಗ ಹೊರಬಂದು
ಶುದ್ಧವಾಗುತ್ತೋ ಆಗ ಸುಖ ದುಃಖಗಳೆರೆಡು ಸಮವೆನಿಸುತ್ತದೆ .
ಪ್ರಾರ್ಥನೆ ಮತ್ತು ನಂಬಿಕೆ ಎರಡು ಕಣ್ಣಿಗೆ ಕಾಣದೆ ಇರಬಹುದು .ಆದರೆ ಅಸಾಧ್ಯ ಆದುದ್ದನ್ನು ಸಾಧ್ಯವಾಗಿಸುವ ಶಕ್ತಿ ಎರಡಕ್ಕೂ ಇದೆ .
ಕೆಲವೊಮ್ಮೆ ಪರಿಸ್ಥಿತಿಗೆ ತಕ್ಕಂತೆ ನಿಮಗೆ ಮಾತನಾಡಲು ಆಗದಿದ್ದರೆ , ಒಂದು ಕಿರುನಗೆ ಬೀರಿ ಸುಮ್ಮನಾಗಿ ಬಿಡಿ .ಒಂದೊಂದು ಸಲ ನಾವು ಮಾತನಾಡುವ ಮಾತುಗಳು ಗೋಜಲು ಆಗಬಹುದು .ಆದರೆ ನಗು ಎಂಬುದು ಯಾವಾಗಲೂ ಕೆಲಸ ಮಾಡುತ್ತದೆ .
ನಿಜವಾದ ಪ್ರೇಮ, ಪ್ರೀತಿ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು , ಮತ್ತು ನಿಮಗೆ ಕೆಟ್ಟದ್ದನ್ನು ಮಾಡಲು ಸಾಧ್ಯವಿಲ್ಲ .ಏಕೆಂದರೆ ಅವರು ತನ್ನ ಕೋಪ ದಲ್ಲಿಯೂ
ನಿಮ್ಮ ಬಗ್ಗೆ ಚಿಂತಿಸುತ್ತಾರೆ .
ಸಮಯ ಎಂದಿಗೂ ನಿಲ್ಲುವುದಿಲ್ಲ ಎಂದು ವಿಷಯಗಳ ಕೆಟ್ಟದ್ದಾಗಿದ್ದರೆ ನಾಳೆ ಖಂಡಿತವಾಗಿ ಉತ್ತಮ ಗೊಳ್ಳುತ್ತದೆ .ನೀವು ನಿಸ್ವಾರ್ಥವಾಗಿ ಕೆಲಸ ಮಾಡುತ್ತೀರಿ . ಮತ್ತು ಅದು ನಿಮ್ಮ ಕೈಯಲ್ಲಿದೆ :
ಜೀವನದಲ್ಲಿ ಬಗೆಹರಿಯದ ಸಮಸ್ಯೆಗಳಿಗೆ ಭಗವಂತನೇ ಮುಕ್ತಿ ಕೊಡುತ್ತಾರೆ .ತಾಳ್ಮೆಯಿಂದ ಇರು ಪಡುತ್ತಿರುವ ಕಷ್ಟಕ್ಕೆ ಒಳ್ಳೆಯ ದಿನ ಬಂದೇ ಬರುತ್ತದೆ .
ಜೀವನದಲ್ಲಿ ಮೊದಲು ಸೋಲು ಸಹಿಸಿಕೊಳ್ಳುವುದನ್ನು ಕಲಿಯಿರಿ . ಯಾಕೆಂದರೆ ಗುರಿ ಮುಟ್ಟುವ ಪ್ರತಿ ದಾರಿಯಲ್ಲೂ ಗೆಲುವೇ ಇರಬೇಕು , ಅಂತೇನಿಲ್ಲ. ಪರೀಕ್ಷೆಗಳು ಬರಬಹುದು.
ನಮಗೆ ಸೇಡು ತೀರಿಸಿಕೊಳ್ಳುವ ಅಗತ್ಯವಿಲ್ಲ . ಅವನ ಮೇಲೆ ಹಾಗೂ ನಿಮ್ಮ ಕರ್ಮಗಳ ಮೇಲೆ ನಂಬಿಕೆ ಇಡಿ ಸಾಕು. ಭಗವಂತನ ಯೋಜನೆಯಲ್ಲಿ ತಡ ಇರಬಹುದು ಆದರೆ ನಂಬಿದವರಿಗೆ ಕೇಡಿಲ್ಲ.