ಪ್ರತಿದಿನ ಮುಂಜಾನೆ ಬೇಗ ಅಡುಗೆ ಮಾಡುವ ಸ್ತ್ರೀಯರು

0

ನಾವು ಈ ಲೇಖನದಲ್ಲಿ ಪ್ರತಿ ದಿನ ಮುಂಜಾನೆ ಬೇಗ ಅಡುಗೆ ಮಾಡುವ ಸ್ತ್ರೀಯರು ಏನನ್ನು ಪಾಲಿಸಬೇಕು ಎಂಬುದರ ಬಗ್ಗೆ ತಿಳಿಯೋಣ. ನಾವು ಯಾವುದೇ ರೀತಿಯ ಆಹಾರವನ್ನು ಹೇಗೆ ತಿಂದರೂ, ಕೂಡ ಅದರ ಪ್ರಭಾವ ನಮ್ಮ ಶರೀರದ ಮೇಲಂತೂ ಬೀಳುತ್ತದೆ . ಜೊತೆಗೆ ನಮ್ಮ ವ್ಯವಹಾರ ಮತ್ತು ಆಚರಣೆಯ ಮೇಲು ಬೀಳುತ್ತದೆ . ಇಲ್ಲಿ ನಮ್ಮ ವ್ಯವಹಾರ ಆಚರಣೆ ಹೇಗಿರುತ್ತದೆ ಹಾಗೆ ನಮ್ಮ ಮೇಲೆ ಮತ್ತು ನಮ್ಮ ಜೀವನದ ಯಶಸ್ಸು ಸೋಲು ಕೂಡ ನಿರ್ಧಾರವಾಗುತ್ತದೆ .

ಆಹಾರ ಹೇಗಿರಬೇಕು, ಹೇಗೆ ಊಟ ಮಾಡಬೇಕು , ಯಾವ ವಿಷಯಗಳನ್ನು ಹೇಗೆ ಗಮನದಲ್ಲಿಟ್ಟುಕೊಳ್ಳಬೇಕು , ಎಂಬುದನ್ನು ನಮ್ಮ ಶಾಸ್ತ್ರದಲ್ಲಿ ವಿಸ್ತಾರವಾಗಿ ಹೇಳಿದ್ದಾರೆ . ಒಳ್ಳೆಯ ಮತ್ತು ಒಳ್ಳೆಯ ರೀತಿಯಲ್ಲಿ ತಯಾರಿಸಿದ ಅಡುಗೆ ಯಾವತ್ತೂ ನಮಗೆ ಲಾಭವನ್ನು ಕೊಡುತ್ತದೆ. ಇದಷ್ಟೇ ಅಲ್ಲದೆ ನಮ್ಮ ಶಾಸ್ತ್ರದಲ್ಲಿ ಈ ರೀತಿ ಹೇಳಿದ್ದಾರೆ , ಅಡುಗೆಯನ್ನು ತಯಾರಿಸುವವರು ಕೂಡ ಕೆಲವು ನಿಯಮಗಳನ್ನು ಪಾಲಿಸಬೇಕು . ಇದರಿಂದ ನಾವು ತಯಾರಿಸಿದ ಅಡುಗೆಯಿಂದ ಕುಟುಂಬದವರಿಗೆ ಲಾಭಗಳು ಸಿಗುತ್ತದೆ.

ವಿಶೇಷವಾಗಿ ಮನೆಯ ಹೆಣ್ಣು ಮಕ್ಕಳು ಈ ಎಲ್ಲಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು , ಅಡುಗೆಯನ್ನು ತಯಾರಿಸಿದರೆ , ಆ ಮನೆಯಲ್ಲಿ ಸುಖ , ಶಾಂತಿ, ಸಮೃದ್ಧಿ ನೆಲೆಸುತ್ತದೆ . ಮತ್ತು ಮನೆಯಲ್ಲಿ ಎಲ್ಲಾ ಜನರು ಕಷ್ಟ ತೊಂದರೆಗಳಿಂದ ದೂರವಿರುತ್ತಾರೆ . ಆ ಎಲ್ಲಾ ನಿಯಮಗಳಲ್ಲಿ ಎಲ್ಲಕ್ಕಿಂತ ದೊಡ್ಡದಾಗಿರುವ ನಿಯಮವೇನೆಂದರೆ, ಮನೆಗೆ ಹೆಣ್ಣು ಮಕ್ಕಳು ಮುಂಜಾನೆ ಬೇಗ ಎದ್ದು ಅಡುಗೆಯನ್ನು ತಯಾರು ಮಾಡಬೇಕು . ಒಂದು ಕಥೆಯ ಮೂಲಕ ಈ ವಿಷಯವನ್ನು ತಿಳಿದುಕೊಳ್ಳೋಣ.

ತುಂಬಾ ದಿನಗಳ ಹಿಂದೆ ಒಂದು ಊರಿನಲ್ಲಿ ರಮೇಶ ಎಂಬ ವ್ಯಕ್ತಿಯು ಇದ್ದನು . ಆತನು ತುಂಬಾ ಬುದ್ಧಿವಂತ ಹಾಗೂ ಒಳ್ಳೆಯ ಕುಂಬಾರನಾಗಿದ್ದನು . ಈತನು ಮಣ್ಣಿನಿಂದ ತುಂಬಾ ಸುಂದರವಾದ ಪಾತ್ರೆಗಳು ಹಾಗೂ ಗೊಂಬೆಗಳು ಇತ್ಯಾದಿ ವಸ್ತುಗಳನ್ನು ತಯಾರಿಸುತ್ತಿದ್ದನು . ಅದನ್ನು ಕಂಡು ಜನರು ಅಚ್ಚರಿ ಪಡುತ್ತಿದ್ದರು . ಈತನು ತಯಾರಿಸುತ್ತಿದ್ದ ವಸ್ತುಗಳನ್ನು ಖರೀದಿ ಮಾಡಲು ದೂರದ ಊರಿನಿಂದ ಜನರು ಬರುತ್ತಿದ್ದರು . ತನ್ನ ಕಲೆಯ ಮೂಲಕ ಆತನು ಚೆನ್ನಾಗಿ ಹಣವನ್ನು ಗಳಿಸುತ್ತಿದ್ದನು .

ಈತನು ತನಗೋಸ್ಕರ ಒಂದು ದೊಡ್ಡ ಮನೆ ಅನುಕೂಲಕರ ವಸ್ತುಗಳನ್ನು ನಿರ್ಮಿಸಿದ್ದನು .ಆದರೆ ದುರಾದೃಷ್ಟವಶಾತ್ ತನ್ನ ತಂದೆ ತಾಯಿಯ ಸಾವಿನ ನಂತರ ಈ ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದನು . ರಮೇಶನ ಚಿಕ್ಕಮ್ಮನಿಗೆ ಈತನ ಒಂಟಿತನವನ್ನು ನೋಡಲು ಸಾಧ್ಯವಾಗಲಿಲ್ಲ. ಇವರು ತಮ್ಮ ಸಂಬಂಧಿಕರಲ್ಲಿ ಸುಂದರವಾದ ಕನ್ಯೆಯನ್ನು ನೋಡಿ ಮದುವೆ ಮಾಡಿಸಿದರು . ಆಕೆಯ ಹೆಸರು ಶಾಂತಿ ಈಕೆಯು ತುಂಬಾ ಸುಂದರವಾಗಿದ್ದಳು .ಜೊತೆಗೆ ಆಲಸಿಯು ಆಗಿದ್ದಳು . ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಆಕೆಗೆ ಮನಸ್ಸು ಆಗುತ್ತಿರಲಿಲ್ಲ . ಈಕೆಗೆ ನಿದ್ರೆ ಮಾಡುವುದು ಎಂದರೆ ತುಂಬಾ ಇಷ್ಟ .

ಆದರೆ ರಮೇಶನಿಗೆ ಬೆಳಗ್ಗೆ ಬೇಗ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಕೆಲಸ ಮಾಡುವ ಅಭ್ಯಾಸವಿತ್ತು . ಆದರೆ ಶಾಂತಿಯು ಮುಂಜಾನೆ ತುಂಬಾ ತಡವಾಗಿ ಹೇಳುತ್ತಿದ್ದಳು . ಸ್ವಲ್ಪ ಕೆಲಸ ಮಾಡಿದ ನಂತರ ಮತ್ತೆ ಮಲಗುತ್ತಿದ್ದಳು . ಆಲಸಿತನದ ಕಾರಣದಿಂದಾಗಿ ಆಕೆ ಸಾಯಂಕಾಲದ ತನಕ ನಿದ್ರೆಯನ್ನೇ ಮಾಡುತ್ತಿದ್ದಳು . ಆಲಸಿತನದಿಂದ ಅಡುಗೆಯನ್ನು ತಯಾರು ಮಾಡುತ್ತಿದ್ದಳು. ಮನೆಯಲ್ಲಿ ಮೊದಲಿನ ರೀತಿ ಸ್ವಚ್ಛತೆ ಇರಲಿಲ್ಲ. ರಮೇಶನಿಗೆ ಮೊದಲಿನ ರೀತಿ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಸಿಗುತ್ತಿರಲಿಲ್ಲ .

ಮನೆಯಲ್ಲಿ ಹಿರಿಯರು ಅಂತ ಯಾರು ಸಹ ಇರಲಿಲ್ಲ . ಒಂದು ವೇಳೆ ಇದ್ದಿದ್ದರೆ ಶಾಂತಿಗೆ ಬೈದು ಬುದ್ಧಿ ಹೇಳುತ್ತಿದ್ದರು . ಮದುವೆಯಾದ ಕೆಲವು ತಿಂಗಳಿನ ತನಕ ರಮೇಶ ಎಲ್ಲವನ್ನು ಸಹಿಸಿಕೊಂಡ . ಅವನಿಗೆ ಈಗ ಈ ರೀತಿಯಾಗಿ ಅನಿಸಲು ಶುರುವಾಯಿತು .ಕೇವಲ ಕುಂಬಾರನಾಗಿ ಒಂಟಿಯಾಗಿ ಇರುವುದೇ ಶ್ರೇಷ್ಠವೆಂದು , ಯಾಕೆಂದರೆ ಮೊದಲು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗುತ್ತಿದ್ದ . ಮನೆಯನ್ನು ಸ್ವಚ್ಛವಾಗಿ ಇಡುತ್ತಿದ್ದ . ತಾನೇ ಅಡುಗೆ ಮಾಡಿ ತಿನ್ನುತ್ತಿದ್ದ .

ಈಗಂತೂ ಮಧ್ಯಾಹ್ನವಾದರೂ ಅಡುಗೆ ತಯಾರಾಗುತ್ತಿರಲಿಲ್ಲ . ಈಗ ಶಾಂತಿಯ ವ್ಯವಹಾರವನ್ನು ಕಂಡು ಅವನಿಗೆ ಕೋಪ ಬರಲು ಶುರುವಾಯಿತು. ಆದರೆ ಹೇಗಾದರೂ ಸಂಸಾರವನ್ನು ನಡೆಸಲೇಬೇಕಿತ್ತು ಹಾಗಾಗಿ ಅವನು ಸುಮ್ಮನೆ ಜೀವನ ನಡೆಸುತ್ತಿದ್ದ ಶಾಂತಿಗೆ ಮೃದುವಾಗಿ ತಿಳಿ ಹೇಳಲು ಪ್ರಯತ್ನಿಸಿ ವಿಫಲನಾಗಿದ್ದ . ಆದರೆ ಶಾಂತಿಯು ಸುಧಾರಿಸಲು ಮುಂದೆ ಬರಲಿಲ್ಲ . ಆದರೆ ನಿಧಾನವಾಗಿ ರಮೇಶನ ತಾಳ್ಮೆಯು ಕಡಿಮೆ ಆಗುತ್ತಾ ಹೋಯಿತು . ಈತನು ಸಿಟ್ಟಿನಲ್ಲಿ ಇರಲು ಪ್ರಾರಂಭಿಸಿದನು. ಸಮಯಕ್ಕೆ ಸರಿಯಾಗಿ ಊಟ ಸಿಗದ ಕಾರಣ ಆತನು ಕೆಲಸಕ್ಕೆ ಉಪವಾಸದಿಂದ ಹೋಗುತ್ತಿದ್ದನು .

ಹಸಿದ ಹೊಟ್ಟೆಯ ಕಾರಣದಿಂದಾಗಿ ಕಿರಿ ಕಿರಿ ಮಾಡಿಕೊಳ್ಳುತ್ತಿದ್ದನು. ಈ ಎಲ್ಲಾ ಕೆಲಸಗಳ ಕೆಟ್ಟ ಪ್ರಭಾವ ಅವನ ಕೆಲಸ ಕಾರ್ಯಗಳಲ್ಲಿ ಬೀಳುತ್ತಿತ್ತು . ಮೊದಲಿನ ರೀತಿ ಅವನ ಕೆಲಸ ಕಾರ್ಯಗಳು ನಡೆಯುತ್ತಿರಲಿಲ್ಲ . ಆದಾಯ ಕಡಿಮೆ ಆಗುತ್ತಾ ಆಗುತ್ತಾ ಅದು ಎಷ್ಟು ಕಡಿಮೆ ಆಯ್ತು ಎಂದರೆ ಆತ ಕಷ್ಟದಿಂದ ಜೀವನ ನಡೆಸುತ್ತಿದ್ದ . ಹಣದ ಕೊರತೆಯಿಂದಾಗಿ ರಮೇಶ ಮತ್ತು ಶಾಂತಿಯ ನಡುವೆ ಜಗಳ ನಡೆಯುತ್ತಿತ್ತು . ಇದರಿಂದ ಇಬ್ಬರೂ ಚಿಂತೆಗೀಡಾದರು. ಈ ವಿಷಯವನ್ನು ಯಾರೊಬ್ಬರು ರಮೇಶನ ಚಿಕ್ಕಮ್ಮನಿಗೆ ತಿಳಿಸಿದರು .

ಆಗ ಅವರು ಆತನ ಮನೆಗೆ ಬರುತ್ತಾರೆ. ರಮೇಶನ ಮನೆಯ ಸ್ಥಿತಿಯನ್ನು ಕಂಡ ಆತನ ಚಿಕ್ಕಮ್ಮನಿಗೆ ಮನೆಯ ಪರಿಸ್ಥಿತಿಯ ಅರಿವಾಗುತ್ತದೆ. ರಮೇಶನ ಚಿಕ್ಕಮ್ಮನ ಎದುರುಗಡೆ ಅವರಿಬ್ಬರು ತಲೆಕೆಳಗಾಗಿ ನಿಂತರು . ಏಕೆಂದರೆ ಹಣದ ಕೊರತೆಯಿಂದ ಅವರಿಗೆ ಸರಿಯಾಗಿ ಅತಿಥಿ ಸತ್ಕಾರ ಮಾಡಲು ಆಗಲಿಲ್ಲ. ಒಂಟಿಯಾಗಿದ್ದಾಗ ರಮೇಶನ ಚಿಕ್ಕಮ್ಮನಿಗೆ ಶಾಂತಿಯು, ರಮೇಶನ ಬಗ್ಗೆ ದೂರನ್ನು ಕೊಡುತ್ತಾಳೆ . ರಮೇಶನು ತನ್ನ ಬಗ್ಗೆ ಕಾಳಜಿಯನ್ನು ವಹಿಸುವುದಿಲ್ಲ , ಪ್ರೀತಿ ಮಾಡುವುದಿಲ್ಲ , ದಿನವಿಡಿ ಜಗಳ ಮಾಡುತ್ತಾನೆ, ಎಂದು ಹೇಳುತ್ತಾಳೆ .

ಚಿಕ್ಕಮ್ಮನು ಶಾಂತಿಯ ಮಾತನ್ನು ಗಮನವಿಟ್ಟು ಕೇಳುತ್ತಾಳೆ. ಇಲ್ಲಿ ತಪ್ಪು ಯಾರದ್ದು ಎಂದು ಅವರ ಚಿಕ್ಕಮ್ಮನಿಗೆ ಗೊತ್ತಿತ್ತು . ಇವರು ಶಾಂತಿಗೆ ಸರಿಯಾದ ದಾರಿಯನ್ನು ತೋರಿಸಲು ಯೋಚನೆ ಮಾಡುತ್ತಾರೆ . ಮಾರನೆಯ ದಿನ ಆರಾಮಾಗಿ ಮಲಗಿರುವ ಶಾಂತಿಯನ್ನು ಎಬ್ಬಿಸುತ್ತಾರೆ . ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಲು ಹೇಳುತ್ತಾರೆ . ರಮೇಶನ ಚಿಕ್ಕಮ್ಮನ ಭಯದಿಂದ ಶಾಂತಿಯು ಬೇಗನೆ ಎದ್ದು ತನ್ನ ಕೆಲಸ ಕಾರ್ಯಗಳನ್ನು ಮಾಡಲು ಮುಂದಾಗುತ್ತಾಳೆ .

ಈಕೆಗೆ ಅವರು ಸಹ ಸಹಾಯವನ್ನು ಮಾಡಲು ಮುಂದಾಗುತ್ತಾರೆ. ಇದರಿಂದ ಮನೆಯು ತುಂಬಾ ಸ್ವಚ್ಛವಾಗುತ್ತದೆ . ಆಗ ಶಾಂತಿಗೆ ಸ್ನಾನ ಮಾಡಿ ಬೇಗ ತಯಾರಾಗಲು ಹೇಳುತ್ತಾರೆ. ಇವರ ಮಾತನ್ನು ಕೇಳಿದ ಶಾಂತಿಯು ಬೇಗನೆ ಹೋಗಿ ಸ್ನಾನ ಮಾಡಿ ತಯಾರಾಗಿ ಬರುತ್ತಾಳೆ . ಆಗ ರಮೇಶನ ಚಿಕ್ಕಮ್ಮ ನೈವೇದ್ಯವನ್ನು ತಯಾರಿಸಿ ದೇವರಿಗೆ ತೋರಿಸಲು ಹೇಳುತ್ತಾರೆ . ಆಗ ಶಾಂತಿಯು ಅವರು ಹೇಳಿದ ರೀತಿಯಲ್ಲೇ ಮಾಡುತ್ತಾಳೆ. ಹೊಳೆಯುತ್ತಿರುವ ಮನೆಯ ತುಂಬಾ ಧೂಪ ನೈವೇದ್ಯ ದೀಪದ ಸುಗಂಧ ಹರಡುತ್ತದೆ .

ಆಗ ತಾನಾಗಿಯೇ ಮನೆಯ ವಾತಾವರಣ ಸುಂದರವಾಗಿ ಬದಲಾಗುತ್ತದೆ. ಪೂಜೆ ಮಾಡಿದ ನಂತರ ಶಾಂತಿಗೂ ಕೂಡ ಒಳ್ಳೆಯ ಅನುಭವ ಆಗುತ್ತದೆ . ಆಕೆಯ ಆಲಸ್ಯತನ ಕ್ಷಣಮಾತ್ರದಲ್ಲಿ ದೂರವಾಗುತ್ತದೆ . ಆಗ ಆಕೆಯು ಖುಷಿಯಿಂದ ಬೇಗ ಅಡುಗೆ ಮಾಡಲು ಮುಂದಾಗುತ್ತಾಳೆ . ರಮೇಶನು ಎದ್ದೇಳುವ ಮುನ್ನವೇ ಒಳ್ಳೆಯ ಆಹಾರವನ್ನು ತಯಾರು ಮಾಡುತ್ತಾಳೆ. ಪ್ರತಿದಿನ ಹೇಳುವ ಸಮಯಕ್ಕೆ ರಮೇಶ ನು ಎದ್ದು ಮನೆಯನ್ನು ನೋಡಿ ತುಂಬಾನೇ ಖುಷಿ ಪಡುತ್ತಾನೆ . ಆತನು ಕೂಡ ಬೇಗ ಸ್ನಾನ ಮುಗಿಸಿ ಭಗವಂತನಿಗೆ ನಮಸ್ಕರಿಸುತ್ತಾನೆ. ಅಡುಗೆ ಮನೆಯಿಂದ ಬರುತ್ತಿರುವ ಪರಿಮಳದಿಂದ ಆತನ ಹಸಿವು ಹೆಚ್ಚಾಗುತ್ತದೆ .

ಯಾವಾಗ ಶಾಂತಿಯು ಮುಗುಳ್ನಗುತ್ತಾ ಆತನ ಮುಂದೆ ಊಟದ ತಟ್ಟೆಯನ್ನು ತರುವುದನ್ನು ಕಂಡು ರಮೇಶನು ಅಚ್ಚರಿಗೆ ಒಳಗಾಗುತ್ತಾನೆ . ಆತ ತನ್ನ ಚಿಕ್ಕಮ್ಮನತ್ತ ನೋಡಿದ ಆಗ ಚಿಕ್ಕಮ್ಮನು ನಗುತ್ತಿದ್ದರು . ಆಗ ರಮೇಶನಿಗೆ ಎಲ್ಲವೂ ಅರ್ಥವಾಯಿತು . ಆಗ ರಮೇಶನು ತುಂಬಾ ಖುಷಿಯಿಂದ ಸಮಾಧಾನದಿಂದ ಊಟವನ್ನು ಮಾಡಿದ ನಂತರ ಶಾಂತಿಯನ್ನು ತುಂಬಾ ಪ್ರೀತಿಯಿಂದ ನೋಡುತ್ತಾನೆ . ರಮೇಶನ ಕಣ್ಣುಗಳಲ್ಲಿ ತನ್ನ ಮೇಲೆ ಇದ್ದ ಪ್ರೀತಿಯನ್ನು ಕಂಡ ಶಾಂತಿಗೆ ಎಲ್ಲವೂ ಅರ್ಥವಾಗುತ್ತದೆ .

ಮದುವೆಯಾದಾಗಿಂದ ಮೊದಲ ಬಾರಿಗೆ ರಮೇಶನು ಹೊಟ್ಟೆ ತುಂಬಾ ಊಟ ಮಾಡಿ ಆಚೆ ಹೋಗಿದ್ದ . ಒಳ್ಳೆಯ ಆಹಾರ ಸೇವನೆ ಮಾಡಿದ್ದ ಕಾರಣದಿಂದಾಗಿ ದಿನವಿಡೀ ಆತ ಕುತೂಹಲದಿಂದ ತನ್ನ ಕೆಲಸ ಕಾರ್ಯಗಳನ್ನು ಮಾಡಿದ . ಇದರಿಂದ ಆತನಿಗೆ ಆ ದಿನ ಒಳ್ಳೆಯ ಆದಾಯ ಕೂಡ ಆಗುತ್ತದೆ. ಸಾಯಂಕಾಲ ಆತ ಖುಷಿಯಿಂದ ಮರಳಿ ಮನೆಗೆ ಬರುತ್ತಾನೆ . ಆಗ ಶಾಂತಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ಚಿಕ್ಕ ಅತ್ತೆ ಹೇಳಿದಂತೆ ಪ್ರತಿದಿನ ಮಾಡಲು ಶುರು ಮಾಡಿದಳು .

ಮುಂಜಾನೆ ಬೇಗ ಎದ್ದು ಆಹಾರವನ್ನು ತಯಾರಿಸುವುದರಿಂದ ರಮೇಶನು ಯಾವತ್ತು ಹಸಿದ ಹೊಟ್ಟೆಯಿಂದ ಕೆಲಸಕ್ಕೆ ಹೋಗಲಿಲ್ಲ .ಸಮಯಕ್ಕೆ ಸರಿಯಾಗಿ ಊಟ ಮಾಡುವುದರಿಂದ ಆತನ ಹಸಿವು ದೂರವಾಯಿತು. ಆತ ಮೊದಲಿನ ರೀತಿ ಕೆಲಸ ಕಾರ್ಯಗಳಲ್ಲಿ ಗಮನ ಹರಿಸಿದ . ಆತನ ಮನೆಗೆ ಮರಳಿ ಸುಖ ಸಮೃದ್ಧಿ ಬರುತ್ತದೆ . ಬೇಗನೆ ಅಡುಗೆಯನ್ನು ತಯಾರು ಮಾಡುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತದೆ ಎನ್ನುವುದನ್ನು ತಿಳಿದುಕೊಂಡಿದ್ದೇವೆ. ಈ ಒಂದು ಕಾರಣದಿಂದಾಗಿ ಅಡುಗೆ ಮನೆಯಲ್ಲಿ ಕುಟುಂಬದವರ ಅದೃಷ್ಟ ಇರುತ್ತದೆ , ಅಂತ ಹೇಳುತ್ತಾರೆ . ಇಲ್ಲಿ ಒಬ್ಬ ಸ್ತ್ರೀ ಮನೆಯನ್ನು ಹೇಗೆ ನೋಡಿಕೊಳ್ಳುತ್ತಾಳೆ,

ಇದರ ಮೇಲೆಯೇ ಇಡೀ ಕುಟುಂಬದ ಅದೃಷ್ಟವಿರುತ್ತದೆ . ಒಂದು ವೇಳೆ ಸ್ತ್ರೀ ಏನಾದರೂ ತಡವಾಗಿ ಎದ್ದು ತಡವಾಗಿ ಆಹಾರವನ್ನು ತಯಾರಿಸಿದರೆ , ಇದರ ನಕಾರಾತ್ಮಕ ಪ್ರಭಾವ ಆ ಮನೆಯಲ್ಲಿರುವ ಜನರ ಮೇಲೆ ಬೀಳುತ್ತದೆ . ಮನೆಯನ್ನು ಎಷ್ಟು ಸ್ವಚ್ಛ ಮತ್ತು ಸುಂದರವಾಗಿ ಇಡುತ್ತೇವೆಯೋ, ಅಷ್ಟೇ ಮನೆಯಲ್ಲಿ ಸುಖ ಸಂತೋಷಗಳು ಹೆಚ್ಚುತ್ತದೆ . ಹಾಗಾಗಿ ಮಹಿಳೆಯರು ಯಾವತ್ತಿಗೂ ತಮ್ಮ ಮನೆಯನ್ನು ಸ್ವಚ್ಚವಾಗಿ ಇಡಬೇಕು . ಅಡುಗೆಯನ್ನು ಮುಂಜಾನೆ ಬೇಗನೆ ಮಾಡಬೇಕು .

ತಡವಾಗಿ ತಯಾರಿಸಿದ ಆಹಾರದ ಮೇಲೆ ಅಶುಭ ಶಕ್ತಿಗಳು ಆವರಿಸುತ್ತವೆ . ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ತಡವಾಗಿ ತಯಾರಿಸಿದ ಆಹಾರದ ಮೇಲೆ ಅನಿಷ್ಟ ಶಕ್ತಿಗಳು ಆವರಿಸಿಕೊಳ್ಳುತ್ತದೆ . ಇಂತಹ ಆಹಾರ ಸೇವನೆ ಮಾಡಿದರೆ ಆ ವ್ಯಕ್ತಿಗೆ ಅದೋ ಗತಿಯಾಗುತ್ತದೆ . ಮನೆಯಲ್ಲಿ ದರಿದ್ರತೆ ಆವರಿಸುತ್ತದೆ . ಜಗಳಗಳಾಗುತ್ತವೆ . ಹಾಗಾಗಿ ಈ ರೀತಿ ಹೇಳಲಾಗುತ್ತದೆ ಎಷ್ಟು ಬೇಗನೆ ಮನೆಯಲ್ಲಿ ಅಡುಗೆಯನ್ನು ತಯಾರಿಸಲಾಗುತ್ತದೆ ಅಷ್ಟೇ ಬೇಗನೆ ಮನೆಯು ಏಳಿಗೆಯಾಗುತ್ತದೆ .

ರಾತ್ರಿ ಯಾವತ್ತಿಗೂ ಅಡಿಗೆ ಮನೆಯನ್ನು ಸ್ವಚ್ಛವಾಗಿ ಇಡಬೇಕು . ಅಡುಗೆ ಮನೆಯಲ್ಲಿ ರಾತ್ರಿ ಯಾವತ್ತಿಗೂ ಸಹ ಎಂಜಲು ಪಾತ್ರೆಗಳನ್ನು ಇಡಬಾರದು . ಒಂದು ವೇಳೆ ರಾತ್ರಿ ಎಂಜಲು ಪಾತ್ರೆಗಳಿದ್ದರೆ ಅಲ್ಲಿ ನಕಾರಾತ್ಮಕ ಶಕ್ತಿಗಳು ಆವರಿಸಿಕೊಳ್ಳುತ್ತವೆ . ಮನೆಯ ಪುರುಷರ ಭಾಗ್ಯವು ಮನೆಯ ಸ್ತ್ರೀಯರ ಮೇಲೆ ಅವಲಂಬಿತವಾಗುತ್ತದೆ . ಹಾಗಾಗಿ ಮನೆಯಲ್ಲಿರುವ ಸ್ತ್ರೀಯರಿಗೆ ಯಾವಾಗಲೂ ಗೌರವ ಕೊಡಿ. ಯಾರ ಮನೆಯಲ್ಲಿ ಮಹಿಳೆಯರಿಗೆ ಅವಮಾನ ಮಾಡಲಾಗುತ್ತದೆಯೋ ಆ ಮನೆಯಲ್ಲಿ ಯಾವತ್ತಿಗೂ ತಾಯಿ ಲಕ್ಷ್ಮಿ ದೇವಿಯು ಪ್ರವೇಶ ಮಾಡುವುದಿಲ್ಲ . ಜೊತೆಗೆ ಸ್ತ್ರೀಯರು ಕೂಡ ತಮ್ಮ ಮಾನ ಮರ್ಯಾದೆ ಬಗ್ಗೆ ಕಾಳಜಿ ವಹಿಸಬೇಕು

Leave A Reply

Your email address will not be published.