ಪ್ರಾದೇಶಿಕ ಅಭಿವೃದ್ದಿಯ ಅನುದಾನ ಸಂಪೂರ್ಣ ವಿನಿಯೋಗ: ಪಿ.ಸಿ.ಮೋಹನ್

0

ಸಂಸದ ಪ್ರಾದೇಶಿಕ ಅನುದಾನ ಅಭಿವೃದ್ಧಿಗಾಗಿ ಬಳಕೆ ಕಳೆದ 15 ವರ್ಷಗಳಲ್ಲಿ ನನ್ನ ಸಂಸದರ ಪ್ರಾದೇಶಿಕ ಅನುದಾನ ನನ್ನ ಕ್ಷೇತ್ರ ಬೆಂಗಳೂರು ಸೆಂಟ್ರಲ್​ನ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಂಡಿದ್ದೇನೆ ಎಂಬುದಾಗಿ ಸಂಸದ ಪಿ.ಸಿ. ಮೋಹನ್ ಅವರು ವಿಶ್ವಾಸದಿಂದ ನುಡಿದಿದ್ದಾರೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಅತ್ಯುತ್ತಮ ಸ್ಕೈವಾಕ್​ ನಿರ್ಮಾಣ, ಫ್ಲೈಓವರ್​ಗಳ ಯೋಜನೆಯನ್ನು ಕೈಗೊಳ್ಳುವ

ಮೂಲಕ ಬೆಂಗಳೂರಿಗೆ ತಟ್ಟಿರುವ ಟ್ರಾಫಿಕ್ ದಟ್ಟಣೆಯ ಸಮಸ್ಯೆಯನ್ನು ನಿವಾರಣೆ ಮಾಡಿದ್ದಾರೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಎಲ್ಲ ಅನುದಾನಗಳು ಬಳಕೆಯಾಗಿವೆ. ಬಡಾವಣೆಗಳ ಅಭಿವೃದ್ಧಿ,

ಅತ್ಯುತ್ತಮ ರಸ್ತೆಗಳ ನಿರ್ಮಾಣವನ್ನು ಮಾಡಲು ವಿನಿಯೋಗಿಸಿದ್ದೇನೆ.ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜನರ ಅನುಕೂಲಕ್ಕಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನನ್ನ ಸಂಸದರ ನಿಧಿಯನ್ನು ಬಳಸಿ ಮಾಡಿದ್ದೇನೆ ಎಂಬುದಾಗಿ ಪಿ.ಸಿ. ಮೋಹನ್ ಅವರು ಹೇಳಿದ್ದಾರೆ.

ಸುಸಜ್ಜಿತ ರೈಲು ನಿಲ್ದಾಣಗಳನ್ನು ನಿರ್ಮಿಸುವ ಮೂಲಕ ದೂರ ಪ್ರಯಾಣ ಮಾಡುವ ಬೆಂಗಳೂರು ನಿವಾಸಿಗಳಿಗೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಸಬ್​ಅರ್ಬನ್​ ರೈಲು ಯೋಜನೆಗಳನ್ನು ಮಾಡುವ ಮೂಲಕ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿದ್ದೇನೆ ಎಂಬುದಾಗಿ ಪಿ.ಸಿ ಮೋಹನ್ ಅವರು ಹೇಳಿದ್ದಾರೆ.

15 ವರ್ಷಗಳಲ್ಲಿ ನನ್ನ ಸಂಸದರ ನಿಧಿಯು ಸಂಪೂರ್ಣವಾಗಿ ವಿನಿಯೋಗವಾಗಿದೆ. ಕಾಲಕಾಲಕ್ಕೆ ಅಗತ್ಯವಾಗಿ ಅನುದಾನಗಳನ್ನು ಬಿಡುಗಡೆ ಮಾಡಿಸಿ ಅದು ಜನರಿಗೆ ಸೇರುವಂತೆ ಮಾಡಿದ್ದೇನೆ ಎಂಬುದಾಗಿ ಪಿ.ಸಿ ಮೋಹನ ಅವರು ಹೇಳಿದ್ದಾರೆ.

Leave A Reply

Your email address will not be published.