ನಾವು ಈ ಲೇಖನದಲ್ಲಿ ಕೇವಲ ನೀನು ಒಬ್ಬನೇ ಇಲ್ಲಿ , ಯಾರು ಯಾರಿಗೂ ಆಗುವುದಿಲ್ಲ ಎಂಬುದರ ಬಗ್ಗೆ ತಿಳಿಯೋಣ . ಮನೆ ಅಂದ ಮೇಲೆ ಕಸ ಬರುತ್ತದೆ . ಬದುಕು ಅಂದ ಮೇಲೆ ಕಷ್ಟ ಇರುತ್ತದೆ. ಕಸವಾದರೆ ಗುಡಿಸಬೇಕು , ಕಷ್ಟವಾದರೆ ಜಯಿಸಬೇಕು.
ನಂಬಿಕೆ ಇರಲಿ, ಎಲ್ಲಿ ಯಾರದರೂ ನಾವು ಯಾರಿಗಾದರೂ ಒಳ್ಳೆಯದನ್ನೇ ಮಾಡುತ್ತಿದ್ದರೆ , ನಮಗೂ ಕೂಡ ಎಲ್ಲೋ ಯಾರಿಂದಲೋ ಒಳ್ಳೆಯದಾಗುತ್ತದೆ ಎಂದು ಹೇಳಲಾಗಿದೆ. ಈಗಿನ ಕಾಲದಲ್ಲಿ ಹಣ ಬಲ ಇಲ್ಲವೆಂದರೆ ಜನಬಲ ಕೂಡ ಸ್ವಲ್ಪ ಕಷ್ಟವೇ , ಆದರೆ ವ್ಯಕ್ತಿ ಒಳ್ಳೆಯವನಾಗಿದ್ದರೆ ಭಗವಂತನ ಬಲ ಮಾತ್ರ ಇದ್ದೇ ಇರುತ್ತದೆ .
ಜೀವನದಲ್ಲಿ ಸೋಲನ್ನು ಒಪ್ಪಿಕೊಂಡವನು ಒಂದಲ್ಲ ಒಂದು ದಿನ ವಿಜಯಕ್ಕೆ ಹತ್ತಿರವಾಗುತ್ತಾನೆ. ನನ್ನವರು ನಮ್ಮವರು ಎನ್ನುವುದೆಲ್ಲ ಭ್ರಮೆ. ಇಲ್ಲಿ ಕೇವಲ ನೀನು ಒಬ್ಬನೇ ಇಲ್ಲಿ ಯಾರು ಯಾರಿಗೂ ಆಗೋದಿಲ್ಲ. ತಾಳ್ಮೆ ಇರಲಿ ಮುಂದೆ ಒಳ್ಳೆಯ ದಿನಗಳು ಬಂದೇ ಬರುತ್ತದೆ . ಒಳ್ಳೆಯತನ ಗೆದ್ದೇ ಗೆಲ್ಲುತ್ತದೆ .
ಜೀವನಕ್ಕಿಂತ ದೊಡ್ಡ ವಿದ್ಯಾಲಯ, ಕಷ್ಟಕ್ಕಿಂತ ದೊಡ್ಡ ಪರೀಕ್ಷೆ , ಸಮಯಕ್ಕಿಂತ ದೊಡ್ಡ ಶಿಕ್ಷಕ ಯಾವುದು ಇಲ್ಲ .ನೀವು ಮನಸು ಹೃದಯ ಮತ್ತು ಮಾತಿನಲ್ಲಿ ಶುದ್ಧರಾಗಿದ್ದಾಗ ಮಾತ್ರ ಬ್ರಹ್ಮಾಂಡದ ಎಲ್ಲಾ ಅರ್ಥಪೂರ್ಣ ಶಕ್ತಿಗಳು ನಿಮ್ಮೊಂದಿಗೆ ಇರುತ್ತದೆ .
ಒಬ್ಬರ ಬಾಳಲ್ಲಿ ಬೆಳಕಾಗದಿದ್ದರೂ , ಪರವಾಗಿಲ್ಲ . ಆದರೆ ಮತ್ತೊಬ್ಬರ ಬಾಳಲ್ಲಿ ಕತ್ತಲೆಯನ್ನು ಮಾತ್ರ ಮಾಡಬೇಡಿ .ಪ್ರಯತ್ನ ಯಾವತ್ತಿಗೂ ವ್ಯರ್ಥವಾಗುವುದಿಲ್ಲ. ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿ ಪ್ರತಿಫಲ ಕಣ್ಣಗೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ .
ತಲೆ ತಗ್ಗಿಸಿ ನಿನ್ನ ಕೆಲಸವನ್ನು ನೀನು ಮಾಡಿದರೆ, ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ .ಭಗವಂತ ನಿನ್ನ ಪ್ರಾರ್ಥನೆಗೆ ತಕ್ಷಣ ಪ್ರತಿಫಲ ಕೊಟ್ಟರೆ , ನಿನ್ನ ವಿಶ್ವಾಸವನ್ನು ಇನ್ನೂ ಗಟ್ಟಿ ಮಾಡಿದ್ದಾರೆ ಎಂದರ್ಥ. ನಿನ್ನ ಪ್ರಾರ್ಥನೆಗೆ ತಕ್ಷಣ ಪ್ರತಿಫಲ ಸಿಗದಿದ್ದರೆ , ನಿನ್ನನ್ನು ಪರೀಕ್ಷಿಸುತ್ತಿದ್ದಾನೆ ಎಂದರ್ಥ . ನಿನ್ನ ಪ್ರಾರ್ಥನೆಗೆ ಯಾವತ್ತೂ ಪ್ರತಿಫಲ ಸಿಗದೇ ಇದ್ದರೆ , ನಿನಗೆ ಅತ್ಯುತ್ತಮವಾಗದದ್ದನ್ನೇ ಕಾಯ್ದಿರಿಸಿದ್ದಾನೆ ಎಂದರ್ಥ .
ಇಡೀ ಪ್ರಪಂಚವೇ ನಿಮ್ಮ ವಿರುದ್ಧವಾಗಿ ನಿಂತರು ಒಬ್ಬಂಟಿಯಾಗಿ ನಿಲ್ಲುವ ಸಾಹಸ ಮಾಡಿ . ಆದರೆ ಸತ್ಯ ಧರ್ಮದ ಪರವಾಗಿರಿ . ನಿಮ್ಮ ಜೊತೆ ಪರಮಾತ್ಮನೇ ನಿಲ್ಲುತ್ತಾನೆ .ಕೆಟ್ಟ ಅಭ್ಯಾಸಗಳನ್ನು ಇರುವವರು ಬದಲಾಗಬಹುದು. ಆದರೆ ಕೆಟ್ಟ ಆಲೋಚನೆಗಳು ಇರುವವರು ಜೀವನದಲ್ಲಿ ಎಂದಿಗೂ ಬದಲಾಗುವುದಿಲ್ಲ .
ಇಲ್ಲಿ ತನಕ ಆಗಿದೆ ಎಲ್ಲವೂ ಒಳ್ಳೆಯದೇ .ಸದ್ಯಕ್ಕೆ ಆಗುತ್ತಿರುವುದೆಲ್ಲವೂ ಒಳ್ಳೆಯದೇ ಮುಂದೆ ಆಗುವುದಿಲ್ಲ ಒಳ್ಳೆಯದೇ .ಬೆಲೆ ಇಲ್ಲದ ಕಡೆ ಕಾಲಿಡಬೇಡ . ಯಾವುದಕ್ಕೂ ಜಾಸ್ತಿ ಚಿಂತಿಸಬೇಡ . ಜಾಸ್ತಿ ಕೊರಗಬೇಡ , ನಿನ್ನ ಕೆಲಸಗಳನ್ನು ಸರಿಯಾಗಿ ಮಾಡು ಎಲ್ಲವೂ ಒಳ್ಳೆಯದೇ ಆಗುತ್ತದೆ.
ನೀನು ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ . ಕೇವಲ ಒಂದು ಹೆಜ್ಜೆ ಎತ್ತಿಟ್ಟು ಕಾದು ನೋಡು . ನಿನ್ನನ್ನು ನೋವಿನಿಂದ ನರಳುವಂತೆ ಮಾಡುವವರು ಕ್ರಮೇಣ ತಮ್ಮನ್ನು ತಾವೇ ನೋವಿನಿಂದ ನರಳಿಸಿ ಕೊಳ್ಳುವುದನ್ನು ನೀನು ನೋಡಬಹುದು.
ಸತ್ತಾಗ ದೇಹಕ್ಕೆ ಬೆಂಕಿ ಹಚ್ಚುವವರಿಗಿಂತ ಬದುಕಿನಲ್ಲಿ ಮನಸ್ಸಿಗೆ ಬೆಂಕಿ ಹಚ್ಚುವವರೇ ಹೆಚ್ಚಾಗಿದ್ದಾರೆ .ಬದಲಾಯಿಸಬಹುದುದ್ದನ್ನು ಬದಲಾಯಿಸು, ಬದಲಾಯಿಸಲಾಗದ್ದನ್ನು ಸ್ವೀಕರಿಸಿ , ಸ್ವೀಕರಿಸಲಾಗದನ್ನು ಬಿಟ್ಟುಬಿಡಿ . ಯಾವಗಲು ನಿಮ್ಮನ್ನು ಸಂತೋಷವಾಗಿ ಸಿಕೊಳ್ಳಿ .
ಪ್ರಯತ್ನ ಯಾವತ್ತಿಗೂ ವ್ಯರ್ಥವಾಗುವುದಿಲ್ಲ. ನಿಮ್ಮ ಕೆಲಸವನ್ನು ನೀವೇ ಪ್ರಾಮಾಣಿಕವಾಗಿ ಮಾಡಿ ಪ್ರತಿಫಲ ತಾನಾಗಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ .ಪ್ರತಿಯೊಂದು ನೋವು ಒಂದು ಪಾಠವನ್ನು ಕಲಿಸುತ್ತದೆ . ಪ್ರತಿಯೊಂದು ಪಾಠ ವ್ಯಕ್ತಿಯನ್ನು ಬದಲಾಯಿಸುತ್ತದೆ .
ಅವಮಾನಿಸಿದವರೊಡನೆ ಜಗಳವಾಡುವ ಬದಲು, ಅವರೆದುರು ಬೆಳೆದು ಬದುಕುವುದೇ ನಾವು ನೀಡುವ ಉತ್ತಮ ಉತ್ತರವಾಗಿರಬೆಕು .ಕೆಟ್ಟವರ ಕೆಟ್ಟತನದ ಮಾತುಗಳಿಂದ ಅಲ್ಪಸ್ವಲ್ಪವಾಗಬಹುದು ಒಳ್ಳೆಯವರ ಮೌನದ ಹಿಂದೆ ಮಹಾ ವಿನಾಶವೆ ಕಾದಿರುತ್ತದೆ ನೆನಪಿರಲಿ .
ಗೌರವ ಕೊಟ್ಟು ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಅವರನ್ನು ಹೇಡಿಗಳು ಎಂದು ತಿಳಿದುಕೊಳ್ಳುವುದು ಮೂರ್ಖತನದ ಲಕ್ಷಣ .ಸತ್ಯದ ಹೋರಾಟ ನಡೆದಾಗಲೆಲ್ಲವೂ ಸತ್ಯ ಸತ್ಯವೂ ಒಂಟಿಯಾಗಿಯೇ ನಿಲ್ಲುತ್ತದೆ . ಯಾಕೆಂದರೆ ಅಸತ್ಯದ ಜೊತೆ ಮೂರ್ಖರ ಗುಂಪು ಇರುತ್ತದೆ . ಹೀಗಿದ್ದರು ಸತ್ಯವು ಯಾವಾಗಲೂ ಅಸತ್ಯದ ವಿರುದ್ಧ ಜಯ ಸಾಧಿಸುತ್ತದೆ.ಮುಳುಗಿದ ಸೂರ್ಯ ಮತ್ತೆ ಹುಟ್ಟುವುದು ಎಷ್ಟು ಸತ್ಯವೋ ಮೋಸಕ್ಕೆ ಸೋತವರು ಮತ್ತೆ ಗೆಲ್ಲುವುದು ಅಷ್ಟೇ ಸತ್ಯ .