ನಾವು ಈ ಲೇಖನದಲ್ಲಿ ಬದುಕಿನಲ್ಲಿ ಯಾವುದು ಮುಖ್ಯ ? ಎಂಬ ವಿಷಯದ ಬಗ್ಗೆ ತಿಳಿಯೋಣ . ಪ್ರತಿನಿತ್ಯ ಕೆಲಸ ಎಂದು ಹೆಂಡತಿ ಮಕ್ಕಳಿಗೆ ಸಮಯವನ್ನೇ ಕೊಡದೆ, ದುಡಿದ ವ್ಯಕ್ತಿ ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಇಟ್ಟು,ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಗಳನ್ನು ಕಟ್ಟಿಸಿದ . ಮೂರು ಪೀಳಿಗೆ ಯಾದರೂ ಕೂತು ತಿನ್ನುವಷ್ಟು ಸಂಪತ್ತನ್ನು ಕೂಡ ಗಳಿಸಿದ .
ವಯಸ್ಸು ಕೂಡ 60 ದಾಟುತ್ತಾ ಬಂತು.ಕೊನೆಗೊಂದು ದಿನ ಯೋಚಿಸಿದ; ಸಾಕು ದುಡಿದ್ದಿದ್ದು,ಕೂಡಿಟ್ಟಿದ್ದು, ಇನ್ನೂ ದುಡಿಯಬಾರದು.ಹೆಂಡತಿ ಮಕ್ಕಳಿಗೆ ಸಮಯ ಕೊಡಬೇಕು.ಅವರೊಂದಿಗೆ ಖುಷಿಯಾಗಿ ಕಾಲ ಕಳೆಯಬೇಕು. ಎಂದುಕೊಂಡು ಹಾಸಿಗೆಯಲ್ಲಿ ಮಲಗಿದೆ.
ಮಲಗಿದಾಗ ಯಾರೋ ಬಂದು ಬಾಗಿಲು ತಟ್ಟಿದಂತಾಯಿತು. ಎದ್ದು ಬಾಗಿಲು ತೆರೆಯುತ್ತಿದ್ದಂತೆ ಒಳಗೆ ನುಗ್ಗಿ ಬಂದ ದಡೂತಿ ವ್ಯಕ್ತಿಯನ್ನು ಯಾರು ನೀನು? ಎಂದು ಪ್ರಶ್ನಿಸಿದೆ .ನಾನು ಯಮರಾಜ,ನಿನ್ನ ಆಯಸ್ಸು ಮುಗಿದಿದೆ ನಿನ್ನನ್ನು ಕರೆದೊಯ್ಯಲು ಬಂದಿದ್ದೇನೆ’.
‘ಅರೇ! ನಾನು ಈಗಷ್ಟೇ ದುಡಿಯುವುದನ್ನು ನಿಲ್ಲಿಸಿದ್ದೇನೆ. ಇನ್ನು ಮುಂದೆ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆಯಬೇಕು, ಅವರನ್ನು ಸಂತೋಷವಾಗಿಡಬೇಕು ಎಂದು ತೀರ್ಮಾನಿಸಿದ್ದೇನೆ.
ಇಲ್ಲ ನಾನು ಈಗಲೇ ಬರುವುದಿಲ್ಲ. ಯಮರಾಜ – ಹಾಗಲ್ಲ ಬರುವುದಿಲ್ಲ ಎಂದು ಹೇಳಿದರೆ ಆಗುವುದಿಲ್ಲ. ಬರಲೇಬೇಕು . ಹಠಕ್ಕೆ ಬಿದ್ದ ಆ ವ್ಯಕ್ತಿ ನನ್ನ ದುಡಿಮೆಯ ಸಂಪತ್ತಿನಲ್ಲಿ ಅರ್ಧವನ್ನು ಬೇಕಾದರೆ ತೆಗೆದುಕೋ.
ನನ್ನನ್ನು ಇನ್ನಷ್ಟು ವರ್ಷಗಳ ಕಾಲ ಇಲ್ಲಿಯೇ ಇರಲು ಬಿಟ್ಟು ಬಿಡು. ನಾನು ನನ್ನ ಕುಟುಂಬದವರಿಗೆ ಎಂದು ಆಸ್ತಿ ಮಾಡಿಟ್ಟಿದ್ದೇನೆಯೇ ಹೊರತು ಅವರಿಗೆ ಸಂತೋಷವನ್ನು ಕೊಟ್ಟಿಲ್ಲ, ಅವರಿಗಾಗಿ ನಾನು ಸಮಯವನ್ನು ಸಹ ಕೊಟ್ಟಿಲ್ಲ ಎಂದು ಗೋಗರೆದ .
ಯವರಾಜ – ಅರ್ಧ ಅಲ್ಲ , ಪೂರ್ತಿ ಕೊಡುತ್ತೇನೆ ಅಂದರೂ ಬಿಡುವುದಿಲ್ಲ . ನೀನು ಬರಲೇಬೇಕು . ನಾನು ಕರೆದುಕೊಂಡು ಹೋಗಲೇಬೇಕು. ಹತಾಶನಾದ ಆ ವ್ಯಕ್ತಿ ಕೊನೆಗೂ ಮೂರು ದಿನಗಳಾದರೂ ನನಗೆ ಕೊಡು. ನಾನು ಪರಿವಾರವನ್ನು ಒಂದು ಕೊನೆಯ ಸಾರಿ ಖುಷಿಯಿಂದ ನೋಡುವ ಆಸೆ ಮತ್ತೊಮ್ಮೆ ಬೇಡಿಕೊಂಡ.
ಯಮರಾಜ – ಇಲ್ಲ ಸಾಧ್ಯವೇ ಇಲ್ಲ. ಎನ್ನುವಷ್ಟರಲ್ಲಿ ಹೋಗಲಿ , ಒಂದು ನಿಮಿಷವಾದರೂ ಕೊಡು ಎಂದು ಯಮನ ಉತ್ತರಕ್ಕೂ ಕಾಯದೆ ತುಂಬಾ ಆತುರದಲ್ಲಿ ಮೇಜಿನ ಮೇಲಿದ್ದ ನೋಟ್ ಬುಕ್ ಒಂದನ್ನು ತೆರೆದು ,
ಮುಂದಿನ ಕ್ಷಣ ನಮ್ಮದಲ್ಲ ,ಈಗ ನಿಮಗೆ ಸಿಕ್ಕಿರುವ ಸಮಯವೇ ನಿಮ್ಮದು ಅದನ್ನು ಅದ್ಭುತವಾಗಿ ಕಳೆಯಿರಿ. ಪ್ರತಿ ಕ್ಷಣವನ್ನು ಜೀವಿಸಿ, ನಮ್ಮ ಪರಿವಾರ ಸೇರಿದಂತೆ ಸುತ್ತ ಮುತ್ತಲಿನವರನ್ನು ಸಂತೋಷವಾಗಿಟ್ಟು ನೀವೂ ಸಂತೋಷದಿಂದ ಜೀವಿಸಿ,
ಸಂಪತ್ತು ಮುಂದೆ ಸಂತೋಷವಲ್ಲ, ಈ ಬದುಕಿನಲ್ಲಿ ಪ್ರೀತಿ ಒಂದೇ ಜೀವಂತ . ಮತ್ತು ಮುಖ್ಯವಾದದ್ದು . ಎಂದು ಒಂದೇ ಕುಕ್ಕಿಗೆ ಬರೆದು ಕಾಲಿನ ಕೆಳಗೆ ಶರಣಾದ. ಇರುವಷ್ಟು ದಿನ ಜೀವನ : – ಈ ದೇಹ ಎಷ್ಟು ಕ್ಷಣಿಕ. ಜಿಮ್,ವ್ಯಾಯಾಮ,ವಾಕಿಂಗ್ ಮಾಡಿದರೂ ಉಳಿಯಲ್ಲ. ಪೌಷ್ಟಿಕಾಂಶ ಇರುವ ಶುದ್ಧ ರುಚಿ ಆಹಾರ ತಿಂದರೂ ಬದುಕಲ್ಲ .
ಹೆಸರು ಕೀರ್ತಿಯಲ್ಲಿ ರಾರಾಜಾಜಿಸುತ್ತಿದ್ದರು ಬಿಡಲ್ಲ. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಇದ್ದರೂ ಕರುಣೆಯಿಲ್ಲ. ಹಣ ಸಿರಿವಂತಿಕೆ ಕಾವಲಾಗಿ ನಿಂತರು ಪ್ರಯೋಜನವಿಲ್ಲ.ಅಪಾರ ಬಂಧು, ಬಳಗ, ಸ್ನೇಹಿತರ ಹಾರೈಕೆ ಇದ್ದರೂ ಸಮಯದ ವಿಧಿ ಬೆನ್ನತ್ತಿದಾಗ ಎಲ್ಲವೂ ವ್ಯರ್ಥ . ಪಡೆದುದಷ್ಟೇ ಆಯುಷ್ಯ .ನಡೆದಷ್ಟೇ ಜೀವನ.ಜೀವ ಜೀವದ ಮಧ್ಯೆ, ಅಜೀವತೆಯನ್ನೂ ಎದುರಿಸಲು ಸಿದ್ದರಾಗಬೇಕು!!