ಗಂಡ ಹೆಂಡತಿ ಜಗಳದ ನಂತರ ಪರಸ್ಪರ ಒಬ್ಬರಿಗೊಬ್ಬರು ಮಾತು ಬಿಡುತ್ತಾರೆ. ಆದರೆ ಅದು ತಪ್ಪು. ಇಬ್ಬರ ನಡುವೆ ಯಾರು ತಪ್ಪು ಮಾಡಿದರೂ ಪರಸ್ಪರ ಕ್ಷಮೆ ಯಾಚಿಸಿ ಮುಂದೆ ಹೋಗುವುದು ಒಳ್ಳೆಯದು. ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಬಂದಾಗ ಮೊಬೈಲ್ ನಲ್ಲಿ ಸ್ಟೇಟಸ್ ಹಾಕಲು ಹೋಗಬೇಡಿ. ಯಾಕೆಂದರೆ ಗಂಡ ಹೆಂಡತಿ ನಡುವೆ ಮೂರನೇ ಅವರು ಪ್ರವೇಶ ಮಾಡಬಾರದು. ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ ಹೊರತು ಪರಿಹಾರವಾಗುವುದಿಲ್ಲ.
ಪತಿ-ಪತ್ನಿಯರಲ್ಲಿ ಮುಖ್ಯವಾಗಿ ನಂಬಿಕೆ ಇರಬೇಕು ಯಾವ ಸಂಬಂಧದಲ್ಲಿ ನಂಬಿಕೆ ಅನ್ನೋದು ಇರದೇ ಅನುಮಾನ ಬರುತ್ತದೆ ಅಂತ ಸಂಬಂಧ ಎಷ್ಟೇ ಸರಿಪಡಿಸಿದರು ಹೊಂದಿಕೊಂಡು ಹೋಗುವುದು ಕಷ್ಟವಾಗುತ್ತದೆ. ಸತಿ ಆಗಿರಲಿ ಅಥವಾ ಪತಿಯೇ ಆಗಿರಲಿ ಅವರನ್ನು ಇನ್ನೊಬ್ಬರಿಗೆ ಹೋಲಿಸಿ ಮಾತನಾಡಬಾರದು. ಇದರಿಂದ ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಪತಿ-ಪತ್ನಿಯರು ತಮ್ಮ ರಹಸ್ಯವನ್ನು ತಾವು ತಮ್ಮಲ್ಲೇ ಇಟ್ಟುಕೊಳ್ಳದೇ ಮೂರನೇಯವರಿಗೆ ಹೇಳಿದರೆ ಮುಂದೆ ಅವಮಾನವನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಇದು ದಾಂಪತ್ಯದಲ್ಲಿ ಬಿರುಕನ್ನು ಮೂಡಿಸಬಹುದು. ಗಂಡನ ಕಷ್ಟದಲ್ಲಿ ಹೆಂಡತಿ, ಹೆಂಡತಿಯ ಕಷ್ಟದಲ್ಲಿ ಗಂಡ ಯಾವತ್ತು ಬಿಟ್ಟುಕೊಡದೇ ಪರಸ್ಪರ ಜೊತೆಗೆ ನಿಂತೆ ಮುಂದೆ ಕಷ್ಟ ಇದ್ದರೂ ಸುಖವಿದ್ದರೂ ಅಂತಹ ಸಂಬಂಧ ಯಾವುದೇ ಕಾರಣಕ್ಕೂ ಹಾಳಾಗುವುದಿಲ್ಲ.
ಪತಿ-ಪತ್ನಿಯರಿಬ್ಬರೂ ತಮ್ಮ ಆದಾಯವನ್ನು ನೋಡಿಕೊಂಡು ಖರ್ಚು ಮಾಡುವುದು ಮುಖ್ಯವಾಗಿರುತ್ತದೆ. ಇಬ್ಬರು ಯಾವಾಗಲೂ ಇನ್ನೊಬ್ಬರ ಜೀವನವನ್ನು ನೋಡಿ ತಾವು ಬದುಕಲು ಹೋಗಬಾರದು. ಗಂಡ ಆಗಿರಲಿ ಹೆಂಡತಿ ಆಗಿರಲಿ ಹೆಚ್ಚಾಗಿ ಅವರನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಹೋಗಬಾರದು. ಎಷ್ಟೊತ್ತಿಗೆ ಏಳಬೇಕು, ಇವರ ಬಳಿ ಮಾತ್ರ ಮಾತನಾಡಬೇಕು, ಏನು ಕೆಲಸ ಮಾಡಬೇಕು, ಕುಟುಂಬದಲ್ಲಿ ಯಾರೊಂದಿಗೆ ಹೇಗಿರಬೇಕು ಎಂದು ಹೆಚ್ಚಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹೋಗಬಾರದು.
ವೈವಾಹಿಕ ಜೀವನದಲ್ಲಿ ಒಬ್ಬರಿಗೊಬ್ಬರು ಸುಳ್ಳು ಹೇಳುವುದು, ಮೋಸ ಮಾಡುವುದು ಅಥವಾ ಯಾವುದೋ ಒಂದು ದೊಡ್ಡ ಸತ್ಯವನ್ನು ಮುಚ್ಚಿಡುವುದು ಹೀಗೆ ಮಾಡಲು ಹೋಗಬೇಡಿ ಇದರಿಂದ ಸಂಸಾರವೇ ಹಾಳಾಗಬಹುದು ಎಚ್ಚರವಿರಲಿ. ಗಂಡ ಹೆಂಡತಿ ಕೋಪದಿಂದ ದೂರವಿದ್ದರೇ ಒಳ್ಳೆಯದು. ಒಂದು ವೇಳೆ ಸಣ್ಣ ಪುಟ್ಟ ಕೋಪಗಳಿದ್ದರೆ ಮೌನವಾಗಿರುವುದು ಉತ್ತಮ. ಇದು ಸಂಬಂಧವನ್ನು ಕಾಪಾಡುತ್ತದೆ.
ಗಂಡ ಹೆಂಡತಿ ಆದವರಲ್ಲಿ ಏನೇ ಸಮಸ್ಯೆ ಇದ್ದರೂ ಗಂಡನಾಗಲೀ, ಹೆಂಡತಿಯಾಗಲಿ ಇನ್ನೊಬ್ಬರ ಮುಂದೆ ಅವರನ್ನು ಅವಮಾನ ಮಾಡಿ ಮಾತನಾಡಬಾರದು. ಇಬ್ಬರು ಕುಳಿತುಕೊಂಡು ಬಗೆಹರಿಸಿಕೊಳ್ಳುವುದು ಉತ್ತಮ.