ಆಮೆ ಉಂಗುರವನ್ನು ಈ ರಾಶಿ ಜನರು ಧರಿಸಲೇಬಾರದು

0

ಈ ನಾಲ್ಕು ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಲೇಬಾರದು. ಆಮೆಯ ಉಂಗುರವನ್ನು ಏಕೆ ಧರಿಸುತ್ತಾರೆ ಮತ್ತು ಅದರ ವಿಶೇಷತೆ ಏನು? ಮುಖ್ಯವಾಗಿ ಯಾವ ನಾಲ್ಕು ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಬಾರದು? ಏಕೆ ಧರಿಸಬಾರದು? ಇವರು ಧರಿಸುವುದರಿಂದ ಎಂತಹ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ? ಎಂಬಂತಹ ವಿಷಯಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಆಮೆ ನೀರಿನಲ್ಲಿ ವಾಸಿಸುವಂತಹ ಜೀವಿ.

ಆಮೆಯನ್ನು ಶುಭಪ್ರದವೆಂದು ಭಾವಿಸುತ್ತಾರೆ. ಇದು ಅದೃಷ್ಟ, ಆರೋಗ್ಯ, ಸಂಪತ್ತನ್ನು ಹೆಚ್ಚಿಸುತ್ತದೆಂದು ನಂಬುತ್ತಾರೆ. ಆಮೆಯ ಉಂಗುರವನ್ನು ಧರಿಸುವಂತಹ ವ್ಯಕ್ತಿ ಯಾವಾಗಲೂ ಸಂತೋಷವಾಗಿ ಮತ್ತು ಸಕಲ ಅನುಕೂಲಗಳಿಂದ ಇರುತ್ತಾನೆಂದು ನಮ್ಮ ಪುರಾಣಗಳಲ್ಲಿ ಪ್ರಸ್ಥಾಪಿಸಲಾಗಿದೆ. ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಹತ್ತು ಅವತಾರಗಳಲ್ಲಿ ಕೂರ್ಮಾವತಾರಗಳಲ್ಲಿ ಒಂದಾಗಿದೆ. ಲಕ್ಷ್ಮಿ ದೇವಿಯು ಕೂಡ ನೀರಿನಿಂದ ಜನಿಸಿರುವುದರಿಂದ ಆಕೆಯನ್ನು ಭಕ್ತಿಯಿಂದ ಪೂಜಿಸಿದರೇ ಐಶ್ವರ್ಯ ಲಭಿಸುತ್ತದೆಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.

ಅದೇ ರೀತಿ ಆಮೆಯ ಉಂಗುರವನ್ನು ಧರಿಸಿದವರು ಕೂಡ ಜೀವನದಲ್ಲಿ ವಿಜಯವನ್ನು ಸಾಧಿಸುತ್ತಾರೆ. ಆದರೆ ನಾವು ಈ ಆಮೆಯ ಉಂಗುರವನ್ನು ಇಷ್ಟಬಂದ ಹಾಗೇ ಧರಿಸಬಾರದು. ಅದನ್ನು ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಪಂಡಿತರು ಹೇಳುತ್ತಾರೆ. ಆಮೆಯ ಉಂಗುರಗಳನ್ನು ಧರಿಸುವಾಗ ಕೆಲವು ತಪ್ಪುಗಳನ್ನು ಮಾಡಲೇಬಾರದು. ಈ ಉಂಗುರವನ್ನು ಧರಿಸುವುದರಿಂದ ಆ ವ್ಯಕ್ತಿಯ ಜೀವನವು ಸುಧಾರಿಸುತ್ತದೆಂದು ಪುರಾತನ ಕಾಲದಿಂದಲೂ ನಂಬುತ್ತಿದ್ದಾರೆ. ಈ ಉಂಗುರವನ್ನು ಕೊಂಡುಕೊಳ್ಳುವಾಗ ಮತ್ತು ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು.

ಈ ಉಂಗುರವನ್ನು ಧರಿಸುವಾಗ ಮಧ್ಯದ ಬೆರಳು ಮತ್ತು ತೋರು ಬೆರಳಿಗೆ ಧರಿಸಬೇಕು. ಇದನ್ನು ಬಲಗೈಗೆ ಮಾತ್ರವೇ ಧರಿಸಬೇಕು. ಶುಕ್ರವಾರ ಮತ್ತು ಗುರುವಾರದ ದಿನ ಮಾತ್ರವೇ ಆಮೆಯ ಉಂಗುರವನ್ನು ಕೊಂಡುಕೊಂಡು ಅಥವಾ ತಯಾರು ಮಾಡಿಕೊಂಡು ನೀವು ಧರಿಸುವುದರಿಂದ ಉತ್ತಮ ಫಲಗಳು ಲಭಿಸುತ್ತವೆ. ಆಮೆಯ ಉಂಗುರವನ್ನು ಧರಿಸುವಾಗ ಅದರ ಮುಖ ನಮಗೆ ಎದುರಾಗಿರಬೇಕು. ವಿರುದ್ಧ ದಿಕ್ಕಿನಲ್ಲಿರಬಾರದು ಹಾಗೇನಾದರೂ ವಿರುದ್ದ ದಿಕ್ಕಿನಲ್ಲಿದ್ದರೇ ಅದು ನಮಗೆ ಅಶುಭ ಫಲಗಳನ್ನು ಕೊಡುತ್ತದೆ.

ಆಮೆಯ ಉಂಗುರವನ್ನು ಧರಿಸಿ ನೀವು ಉತ್ತಮ ಪ್ರಯೋಜನಗಳನ್ನು ಕೊಡಬೇಕಾದರೇ ಪಂಚದಾತು ಅಥವಾ ಅಷ್ಟದಾತು ಬೆಳ್ಳಿಯ ಆಮೆಯ ಉಂಗುರಗಳು ಒಳ್ಳೆಯದು. ಆಮೆಯ ಉಂಗುರವನ್ನು ಧರಿಸುವ ಮೊದಲು ಆ ಉಂಗುರವನ್ನು ಶುದ್ಧವಾದ ಹಾಲಿನಲ್ಲಿ ಅಥವಾ ಗಂಗಾಜಲದಲ್ಲಿ ನೆನೆಸಿ ಅದನ್ನು ಲಕ್ಷ್ಮಿದೇವಿಯ ಚಿತ್ರಪಟ ಅಥವಾ ವಿಗ್ರಹದ ಮುಂದೆ ಪೂಜಿಸಿ ಧರಿಸಬೇಕು. ಹಾಗೇ ಮಾಡುವುದರಿಂದ ಆ ಉಂಗುರಕ್ಕೆ ದೈವಿಕ ಶಕ್ತಿ ಬರುತ್ತದೆಂದು ಶಾಸ್ತ್ರಗಳು ಹೇಳುತ್ತದೆ.

ಪದೇ ಪದೇ ಈ ಉಂಗುರವನ್ನು ತೆಗೆಯಬಾರದು, ಅದು ಒಳ್ಳೆಯದಲ್ಲ. ಈ ಎಲ್ಲಾ ನಿಯಮಗಳನ್ನು ಅನುಸರಿಸಿ ಆಮೆಯ ಉಂಗುರವನ್ನು ಧರಿಸುತ್ತಾರೋ ಅವರಿಗೆ ಸಂಪತ್ತು ಮತ್ತು ಸಮೃದ್ಧಿ ನೆಲೆಸುತ್ತದೆ. ನೀವು ವ್ಯಾಪಾರದಲ್ಲಿ ಬಹಳಷ್ಟು ನಷ್ಟ ಹೊಂದಿದ್ದರೇ ಈ ಉಂಗುರವನ್ನು ಧರಿಸುವುದರಿಂದ ಲಾಭವನ್ನು ಪಡೆಯುತ್ತೀರಿ. ಅಷ್ಟೇ ಅಲ್ಲದೇ ಹಿಂದೆಂದು ಕಂಡರಿಯದ ಸಂಪತ್ತು ನಿಮ್ಮದಾಗುತ್ತದೆ. ವಿಷ್ಣು ಭಗವಾನ್ ಮತ್ತು ಲಕ್ಷ್ಮಿ ಕೃಪೆಯು ನಿಮ್ಮ ಮೇಲೆ ಇರುತ್ತದೆ. ಕೆಲವು ರಾಶಿಗಳ ಜನರು ಈ ಉಂಗುರವನ್ನು ಧರಿಸುವುದರಿಂದ ಆರ್ಥಿಕ ಸಮಸ್ಯೆ ಪರಿಹಾರವಾಗುತ್ತದೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಈ ಉಂಗುರ ಸಹನೆ ಮತ್ತು ಶಾಂತಿಯ ಚಿಹ್ನೆಯಾಗಿದ್ದು, ಇದು ಮನಃಶಾಂತಿಯಲ್ಲಿ ಕಲ್ಪಿಸುತ್ತದೆ. ಈ ಉಂಗುರವು ಅನಾರೋಗ್ಯವನ್ನು ದೂರಮಾಡುತ್ತದೆ. ಈ ಉಂಗುರವನ್ನು ಮಕರ ರಾಶಿಯವರಿಗೆ ಶುಭಪ್ರದವೆಂದು ಹೇಳಲಾಗುತ್ತದೆ. ಆಮೆಯ ಉಂಗುರವನ್ನು ಧರಿಸುವುದಲ್ಲದೇ ಆಮೆಯ ಪ್ರತಿಮೆಯನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಎಲ್ಲಾ ರೀತಿಯ ವಾಸ್ತುದೋಷಗಳು ದೂರವಾಗಿ ಸುಖಕರ ಜೀವನ ನಡೆಸುತ್ತಾರೆಂದು ವಾಸ್ತುಶಾಸ್ತ್ರ ತಜ್ಞರು ಹೇಳುತ್ತಾರೆ.

ಈ ನಾಲ್ಕು ರಾಶಿಯವರು ಯಾವುದೇ ಕಾರಣಕ್ಕೂ ಆಮೆಯ ಉಂಗುರವನ್ನು ಧರಿಸಲೇಬಾರದು ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ. ಒಂದು ವೇಳೆ ಧರಿಸಿದರೇ ಅವರಿಗೆ ಶುಭಫಲದ ಬದಲಾಗಿ ಅಶುಭ ಫಲಗಳು ಎದುರಾಗುತ್ತವೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕವಾಗಿ ನಷ್ಟವನ್ನು ಹೊಂದುತ್ತಾರೆ. ಹಾಗಾದರೇ ಯಾವ ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಬಾರದೆಂದರೆ ಮೊದಲನೇಯದಾಗಿ ಮೇಷರಾಶಿಯ ಜನರು. ಇದಕ್ಕೆ ಕಾರಣವೇನೆಂದರೆ ಮೇಷರಾಶಿಯ ಅಧಿಪತಿ ಅಂಗಾರಕ ಈ ರಾಶಿಯ ಪ್ರಭಾವದಿಂದ ಈ ರಾಶಿಯ ಜನರು ಧರಿಸುವುದು ಶುಭವಲ್ಲ.

ಇವರು ಧರಿಸಿದರೇ ಅನೇಕ ಸಮಸ್ಯೆಗಲೂ ಉಂಟಾಗುತ್ತದೆ. ಇವರು ಕೈಗೊಂಡ ಕೆಲಸಗಳು ಯಶಸ್ವಿಯಾಗುವುದಿಲ್ಲ. ಅಂದುಕೊಂಡ ಸಮಯಕ್ಕೆ ಯಾವ ಕೆಲಸಗಳು ಪೂರ್ತಿಯಾಗುವುದಿಲ್ಲ. ಲಕ್ಷ್ಮಿ ಕಟಾಕ್ಷವೂ ಕೂಡ ಲಭಿಸುವುದಿಲ್ಲ. ಎರಡನೇ ರಾಶಿ ಕನ್ಯಾರಾಶಿ. ಕನ್ಯಾರಾಶಿಯ ಜನರು ಆಮೆಯ ಉಂಗುರವನ್ನು ಧರಿಸಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾರಾಶಿಗೆ ಅಧಿಪತಿ ಬುಧಗ್ರಹ. ಆದ್ದರಿಂದ ಈ ಉಂಗುರವನ್ನು ಧರಿಸುವುದರಿಂದ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ವ್ಯಕ್ತಿಗತ ಮತ್ತು ವೃತ್ತಿಪರವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೀವನದ ಸುಖ ಶಾಂತಿ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಆದ್ದರಿಂದ ಆಮೆಯ ಉಂಗುರವನ್ನು ಈ ರಾಶಿಯ ಜನರು ಧರಿಸಲೇಬಾರದು. ಮೂರನೇ ರಾಶಿ ವೃಶ್ಚಿಕ ರಾಶಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಅಧಿಪತಿ ಅಂಗಾರಕ. ಆದ್ದರಿಂದ ಇವರು ಕೂಡ ಈ ಉಂಗುರವನ್ನು ಧರಿಸಲೇಬಾರದು. ಧರಿಸಿದರೇ ಕುಜದೋಷ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ವ್ಯಕ್ತಿಗತ, ವೃತ್ತಿಜೀವನ ಮತ್ತು ವ್ಯಾಪಾರಗಳಲ್ಲಿ ಪ್ರತಿಕೂಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವಕಾಶಗಳು ಬಂದಹಾಗೇ ಬಂದು ಅವರಿಗೆ ದೂರವಾಗುತ್ತದೆ.

ಇಷ್ಟೇ ಅಲ್ಲದೇ ನಿಮಗೆ ಇಷ್ಟವಾದವರ ಜೊತೆ ನಿಮ್ಮ ಸಂಬಂಧಗಳು ಮುರಿದು ಬೀಳುತ್ತದೆ. ಆದ್ದರಿಂದ ವೃಶ್ಚಿಕ ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಲೇಬಾರದು. ನಾಲ್ಕನೇ ರಾಶಿ ಮೀನರಾಶಿ. ಮೀನರಾಶಿಗೆ ಅಧಿಪತಿ ಬೃಹಸ್ಪತಿ. ಈ ಕಾರಣದಿಂದ ಈ ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಿದರೇ ಬೃಹಸ್ಪತಿಯ ಸ್ಥಾನವು ಬಲಹೀನವಾಗುತ್ತದೆ. ಧರಿಸಿದರೇ ಧನನಷ್ಟವಾಗುವುದಲ್ಲದೇ ಅನೇಕ ರೀತಿಯ ಇತರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ರಾಶಿಯ ವ್ಯಕ್ತಿಗಳು ಆಮೆಯ ಉಂಗುರವನ್ನು ಧರಿಸಬಾರದು.

Leave A Reply

Your email address will not be published.