ವೃಷಭ ರಾಶಿಗಿದ್ಯಾ ಇಂಥ ಭಾಗ್ಯ?

ನಾವು ಈ ಲೇಖನದಲ್ಲಿ ವೃಷಭ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಯುಗಾದಿ ಕಳೆದ ನಂತರ ಹೊಸ ವಾತಾವರಣ ಹೊಸ ಸನ್ನಿವೇಶಗಳು ಎದುರಾಗಬಹುದು. ಕೆಲಸ ಕಾರ್ಯಗಳು ಚುರುಕುತನ ಪಡೆದುಕೊಳ್ಳಬಹುದು ಎಂದು ನಾವು ಭಾವಿಸುತ್ತೇವೆ. ಗುರು ಗ್ರಹವು ಮೇಷ ರಾಶಿಯಿಂದ ವೃಷಭ ರಾಶಿಗೆ ಬರಲಿದ್ದಾನೆ. ಅಂದರೆ ನಿಮ್ಮ ರಾಶಿಗೆ ಬರಲಿದ್ದಾನೆ. ಆದರೆ ಕ್ರಾಂತಿಕಾರಿ ಬದಲಾವಣೆಯನ್ನೂ ತಂದು ಕೊಡುವುದಿಲ್ಲ.

ಆರಕ್ಕೇರದ ಮೂರಕ್ಕೆ ಇಳಿಯದೇ ಇರುವಂತಹ ವ್ಯಕ್ತಿಗಳ ಜೀವನದಲ್ಲಿ ಒಂದು ಸಣ್ಣ ಸಂಚಲನೆಯನ್ನು ಮೂಡಿಸುತ್ತದೆ. ಈ ಸಂಚಲನ ಯಾವುದು? ಯಾವ ರೀತಿಯ ವಿಚಾರಗಳಲ್ಲಿ ನಿಮಗೆ ಏಳಿಗೆ ಸಿಗುತ್ತದೆ . ಯಾವ ರೀತಿಯ ವ್ಯಕ್ತಿಗಳಿಗೆ ಅಷ್ಟೊಂದು ಯಶಸ್ಸು ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳೋಣ. ವೃಷಭ ರಾಶಿಯವರಿಗೆ ರವಿ ಗ್ರಹವು ವ್ಯಯಸ್ಥಾನದಲ್ಲಿ ಇರುತ್ತಾನೆ. ಇದು ಅಂತ ಒಳ್ಳೆಯ ಬದಲಾವಣೆಯನ್ನು ತಂದು ಕೊಡುವುದಿಲ್ಲ. ಸರ್ಕಾರಿ ಕೆಲಸಗಳಲ್ಲಿ ತುಂಬಾ ನಿಧಾನ ಗತಿ ಇರುತ್ತದೆ. ಆದರೆ ಬೇರೆ ಕೆಲಸ ಕಾರ್ಯಗಳಲ್ಲಿ ತುಂಬಾ ಯಶಸ್ಸು ಕೊಡುತ್ತದೆ .

ವೃಷಭ ರಾಶಿ ವ್ಯಾಪಾರಸ್ಥರಿಗೆ ಶುಕ್ರನ ಅನುಗ್ರಹವಿರುವುದರಿಂದ ಲಾಭದ ರಾಶಿಯಲ್ಲಿ ಶುಕ್ರನು ಇರುವುದರಿಂದ ಆ ಲಾಭ ಗ್ರಹಕ್ಕೆ ಬುಧ ಮತ್ತು ರಾಹುಗ್ರಹವು ಅಂದರೆ ಇಬ್ಬರು ಮಿತ್ರರು ಸೇರಿಕೊಂಡಿರುವುದರಿಂದ ಇದು ಅದ್ಭುತವಾದಂತಹ ಜೋಡಿಯಾಗಿರುತ್ತದೆ. ಶನಿ ಗ್ರಹ ಮತ್ತು ಕುಜ ಗ್ರಹಗಳು ದಶಮಭಾಗದಲ್ಲಿ ಇರುವುದರಿಂದ ಕೆಲಸ ಕಾರ್ಯಗಳಲ್ಲಿ ಅಡಚಣೆ ಆಲಸ್ಯ ಕಾಣಿಸಿಕೊಳ್ಳುತ್ತದೆ. ಮುಖ್ಯವಾದಂತಹ ವಿಚಾರಗಳು ಮರೆತು ಹೋಗಬಹುದು ಇದರಿಂದ ನೀವು ಎಚ್ಚರಿಕೆಯನ್ನು ಪಾಲಿಸಬೇಕಾಗುತ್ತದೆ. ಕಷ್ಟಪಟ್ಟು ಮಾಡಿದಂತಹ ಕೆಲಸಗಳು ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ಕೆಲಸ ಮಾಡುವಾಗ ಸಣ್ಣಪುಟ್ಟ ಅಡೆತಡೆಗಳಾಗಬಹುದು ಎಚ್ಚರ ವಹಿಸಬೇಕು . ರಾಶಾಧಿಪತಿ ಶುಕ್ರನ ಅನುಗ್ರಹವಿರುವುದರಿಂದ ವ್ಯಾಪಾರಸ್ಥರಿಗೆ ಒಳ್ಳೆಯ ಲಾಭ ಉಂಟಾಗುತ್ತದೆ. ಸ್ವಂತ ಉದ್ಯೋಗ ಮಾಡುವವರೆಗೂ ಸಹ ಮತ್ತು ಬೇರೆಯವರ ಸೂಪರ್ದಿಯಲ್ಲಿ ಕೆಲಸ ಮಾಡಿರುವವರಿಗೂ ಮೇ ತಿಂಗಳು ನಿಮಗೆ ಒಳ್ಳೆಯ ಫಲವನ್ನು ಕೊಡುತ್ತದೆ. ದೊಡ್ಡದಾದಂತಹ ಎರಡು ಗ್ರಹಗಳ ವ್ಯಯಬಾಗದಲ್ಲಿ ಇರುವುದರಿಂದ ಅನಾವಶ್ಯಕವಾಗಿ ಆತಂಕ ಪಡುವ ಅಗತ್ಯವಿಲ್ಲ. ಗುರು ಗ್ರಹವು ವ್ಯಯ ಭಾವದಿಂದ ಬದಲಾಗಿ ನಿಮ್ಮ ರಾಶಿಗೆ ಬರುತ್ತಿದ್ದಾನೆ.

ಲಾಭದ ವಿಚಾರದಲ್ಲಿ ಬಹಳಷ್ಟು ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತದೆ. ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ . ಬುಧ ಮತ್ತು ಶುಕ್ರ ಗ್ರಹಗಳು ಸ್ವಂತ ಉದ್ಯೋಗ ಮಾಡುವವರಿಗೆ ಬಹಳ ಸ್ಪೂರ್ತಿಯನ್ನು ಕೊಡುತ್ತಾರೆ. ವಿಶೇಷವಾಗಿ ಗ್ರಾಹಕರಿಗೆ ಬಹಳ ಅನುಕೂಲಕರವಾದಂತಹ ವಾತಾವರಣ ವೃದ್ಧಿಯಾಗುತ್ತದೆ. ವ್ಯಾಪಾರಸ್ಥರಿಗೆ ವ್ಯಾಪಾರ ಅಭಿವೃದ್ಧಿಯಾಗುತ್ತದೆ. ಮುಂದಿನ ವ್ಯಾಪಾರ ಮತ್ತು ವ್ಯವಹಾರಗಳಿಗೆ ಅನುಕೂಲವನ್ನು ಉಂಟು ಮಾಡಿಕೊಡುತ್ತದೆ. ರಾಹು ಗ್ರಹವು ದಿಢೀರ್ ಎಂದು ಹಣ ತಂದು ಕೊಡುವಂತಹ ಬೆಳವಣಿಗೆಯನ್ನು ಉಂಟುಮಾಡುತ್ತದೆ.

ವೃಷಭ ರಾಶಿಯ ವ್ಯಕ್ತಿಗಳಿಗೆ ವಿಶೇಷವಾಗಿ ಆಮದು ಮತ್ತು ರಫ್ತಿನ ವಹಿವಾಟುಗಳು ಮತ್ತು ವಿದೇಶಿ ವಹಿವಾಟುಗಳು ಹೆಚ್ಚಿಗೆ ಲಾಭವನ್ನು ತಂದುಕೊಡುತ್ತದೆ. ವ್ಯಾಪಾರಸ್ಥರಿಗೆ ಬಹಳ ಶುಭಕರವಾದ ಅಂತಹ ಅಂಶಗಳು ಉಂಟಾಗುತ್ತದೆ. ಕೆಲಸಗಾರರಿಗೆ ಯಶಸ್ಸು ನೆಮ್ಮದಿ ಖುಷಿಯನ್ನು ತಂದು ಕೊಡುತ್ತದೆ. ಬುಧ ಮತ್ತು ಶುಕ್ರರು ಒಂದಾದಾಗ ನೆಮ್ಮದಿ ಸಂತೋಷಕ್ಕೆ ಅನುಕೂಲಕರವಾದಂತಹ ವಾತಾವರಣವು ಮೂಡುತ್ತದೆ. ವಿಹಾರ ,ಪ್ರವಾಸ , ಧಾರ್ಮಿಕ ಕ್ಷೇತ್ರಗಳ ಭೇಟಿ, ಈ ರೀತಿಯಾದಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಗುರು ಗ್ರಹವು ರಾಶಿಗೆ ಬಂದಾಗ ಇನ್ನಷ್ಟು ಅದ್ಭುತವಾದಂತಹ ಪ್ರಭಾವಗಳನ್ನು ಎದುರು ನೋಡಬಹುದು.

Leave a Comment