ನಾವು ಈ ಲೇಖನದಲ್ಲಿ ಇವುಗಳನ್ನು ಮಂಚದ ಕೆಳಗೆ ಇಟ್ಟರೆ ಸಾಕು ಎಂಥಾ ಸಮಸ್ಯೆಯಾದರು ಸಹ ಮಾಯವಾಗುತ್ತದೆ ಎಂದು ನೋಡೋಣ . ಮನುಷ್ಯರಿಗೆ ಗ್ರಹ ದೋಷಗಳು ಕಾಡಿದರೆ ಮನೆಗಳಿಗೆ ವಾಸ್ತು ದೋಷಗಳು ಕಾಡುತ್ತವೆ. ಇವುಗಳ ಪರಿಣಾಮ ಏನಾಗುತ್ತದೆ ಅಂದರೆ ಕಷ್ಟಗಳು ನಷ್ಟಗಳು ಸಮಸ್ಯೆಗಳು ಇನ್ನು ಇವುಗಳಿಗೆ ಪರಿಹಾರವಾಗಿ ದೋಷ ಪರಿಹಾರ ಮಾಡಿಕೊಳ್ಳುವುದು ಉತ್ತಮ . ಹಾಗಾಗಿ ಪೂಜೆ ಪುನಸ್ಕಾರ ಜಪ ತಪ
ಯಜ್ಞ ವಾಸ್ತು ಶಾಂತಿ ಇತ್ಯಾದಿ ಪ್ರಯತ್ನಗಳು ಮಾಡುತ್ತಲೇ ಇರುತ್ತೇವೆ . ಮನುಷ್ಯರಾದ ನಾವು ಹೀಗೆ ಮಾಡುವುದರಿಂದ ಕಾಡುತ್ತಿರುವ
ದೋಷಗಳು ಸ್ವಲ್ಪ ಮಟ್ಟಿಗಾದರೂ ಮಾಯವಾಗುತ್ತದೆ ಎನ್ನುವ ಆಶಾಭಾವನೆ ಪ್ರತಿಯೊಬ್ಬರಲ್ಲಿ ಒಂದು ವೇಳೆ ಒಳ್ಳೆಯದು ಜರುಗದೆ ಇದ್ದರು. ಪರವಾಗಿಲ್ಲ ಕೆಟ್ಟದು ಮಾತ್ರ ಸಂಭವಿಸಬಾರದು . ಎಂಬ ಉದ್ದೇಶದಿಂದಲೇ ಈ ಎಲ್ಲಾ ಕಾರ್ಯಗಳನ್ನು ನಾವು ಕೈಗೊಳುತ್ತಾ ಇರುತ್ತೇವೆ. ವಾಸ್ತುಶಾಸ್ತ್ರದಲ್ಲಿ ಇನ್ನು ಕೆಲವು ಉಪಾಯಗಳಿಂದ ಸಂಭವಿಸಬೇಕಾದ ಕೆಡುಕುಗಳನ್ನು ತಡೆಗಟ್ಟುವುದು ಸುಲಭ ಎಂದು ಸ್ಪಷ್ಟಪಡಿಸುತ್ತಿದ್ದಾರೆ . ವಾಸ್ತು ಶಾಸ್ತ್ರಜ್ಞರು ಹಾಗಾದರೆ ಅವು ಯಾವುವು ಅದನ್ನು ಯಾವ ರೀತಿ ಆಚರಿಸಬೇಕು ಎ೦ದು ತಿಳಿಯೋಣ .
ಬೆಳಗ್ಗೆ ಎದ್ದ ತಕ್ಷಣ ತಾಮ್ರದ ತಂಬಿಗೆಯಲ್ಲಿ ಅಥವಾ ತಾಮ್ರದ ಕೊಡದಲ್ಲಿ ನೀರು ಕುಡಿಯುವುದರಿಂದ ಆರೋಗ್ಯವನ್ನು ನಾವು ಸಾಕಷ್ಟು ಕಾಪಾಡಿಕೊಳ್ಳಬಹುದು. ಎಲ್ಲರಿಗು ತಿಳಿದಿರಲಿ ಅಷ್ಟೇ ಅಲ್ಲ ತಾಮ್ರದ ಮತ್ತೊಂದು ಲಾಭ ಕೂಡ ಇದೆ. ಅದೇ ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಅದನ್ನು ಮಂಚದ ಕೆಳಗೆ ಇಟ್ಟು ಮಲಗುವುದರಿಂದ ಪ್ರತ್ಯಕ್ಷ ದೈವವಾದ ಸೂರ್ಯ ನಾರಾಯಣನ ಸಂಪೂರ್ಣ ಅನುಗ್ರಹ ಆಶೀರ್ವಾದ ಪ್ರಾಪ್ತಿಯಾಗುತ್ತದೆ , ಎಂದಿದ್ದಾರೆ .
ವಾಸ್ತು ದೋಷ ಅಷ್ಟೇ ಅಲ್ಲ ಕೆಟ್ಟ ಪ್ರಭಾವಗಳು ತೊಲಗಿ ಹೋಗಿ ಒಳಿತು ಜರುಗುತ್ತದೆ , ಎಂದು ಸಹ ಹೇಳುತ್ತಿದ್ದಾರೆ . ಇನ್ನು ವ್ಯಾಪಾರಸ್ತರು ತಮ್ಮ ವ್ಯಾಪರ ಚೆನ್ನಾಗಿ ನಡೆಯಲು ಲಾಭಗಳನ್ನು ಪಡೆದುಕೊಳ್ಳಲು ಅನೇಕ ಬಗೆಯ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ . ಗಾಜಿನ ಗ್ಲಾಸ್ ನಲ್ಲಿ ನೀರು ತುಂಬಿ ನಿಂಬೆ ಹಣ್ಣನ್ನು ಹಾಕಿಟ್ಟರೆ ವ್ಯಾಪಾರದಲ್ಲಿ ಶುಭ ಲಾಭಗಳು ಜರುಗುತ್ತವೆ ಎಂದು ಭಾವಿಸುವುದು ಉಂಟು. ಹಾಗೆಯೇ ಅಶ್ವತ್ಥ ಎಲೆಗಳನ್ನು ವ್ಯಾಪಾರಸ್ಥರು ತಮ್ಮ ಗಲ್ಲ ಪೆಟ್ಟಿಗೆ ಅಂದರೆ ಧನ ಇಡುವ ಪೆಟ್ಟಿಗೆಯಲ್ಲಿ ಹಾಕಿ ಇಡುವುದರಿಂದ, ವ್ಯಾಪಾರದಲ್ಲಿ ಇರುವಂತಹ ಸಮಸ್ಯೆಗಳು ತೊಲಗಿ ಹೋಗಿ ಧನದ ಲಾಭ ಆಗಿ ಧನ ಪೆಟ್ಟಿಗೆ ತುಂಬುತ್ತದೆ ಎನ್ನುತ್ತಿದ್ದರೆ ವಾಸ್ತು ತಜ್ಞರು .
ಇನ್ನು ಅರಿಶಿಣ : – ಅರಿಶಿಣದ ಬಗ್ಗೆ ನಾವು ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಅರಿಶಿಣ ಎಂದ ತಕ್ಷಣ ಹಲವಾರು ಪ್ರಯೋಜನಗಳು ಇರುವುದು ಎಲ್ಲರಿಗೂ ತಿಳಿದಿರುತ್ತದೆ . ಇದು ಆರೋಗ್ಯಕ್ಕೆ ಅಲ್ಲದೆ ಶುಭ ಮಂಗಳ ಕಾರ್ಯಗಳಿಗೂ ಅಗತ್ಯವಾಗಿ ಇರುವಂಥಹ ವಸ್ತು . ಇದು ಒಂದು ಔಷಧೀಯ ಗುಣಗಳನ್ನು ಹೊಂದಿರುವ ವಸ್ತು ಕೂಡ ಆಗಿದೆ. ಆದರೆ ಅರಿಶಿಣವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ನೀವು ಮಲಗಿರುವ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಎಂತಹ ಕೆಡಕುಗಳನ್ನಾದರೂ ಇದು ನಿಯಂತ್ರಿಸುತ್ತದೆ. ಸಂಭವಿಸದಂತೆ ಕಾಪಾಡುತ್ತದೆ, ಅಷ್ಟೇ ಅಲ್ಲ ಆರೋಗ್ಯ ಸುಧಾರಣೆ ಕೂಡ ಇದು ಮಾಡುತ್ತದೆ .
ಹಾಗೆಯೇ ನಮ್ಮಲ್ಲಿ ಬಹಳಷ್ಟು ಜನ ನರ ದೃಷ್ಟಿಯಿಂದ ಕೆಟ್ಟ ದೃಷ್ಟಿಯಿಂದ ಬಳಲುತ್ತಾ ಇರುತ್ತಾರೆ. ಅದರ ಫಲವಾಗಿ ಆನಂದ ದೂರವಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುತ್ತಾರೆ. ಅಂತಹ ಸಮಯದಲ್ಲಿ ಬೆಳ್ಳಿಯಿಂದ ತಯಾರಿಸಿದ ಮೀನಿನ ಬಿಂಬವನ್ನು ದಿಂಬಿನ ಕೆಳಗಡೆ ಇಟ್ಟು ಮಲಗುವುದರಿಂದ ಅಂಥವರು ಬಹು ಬೇಗ ಕಳೆದು ಹೋದ ಆನಂದವನ್ನು ಸಂತೋಷವನ್ನು ಮತ್ತೆ ಹೊಂದಬಹುದು ಎಂದು ಹೇಳಲಾಗುತ್ತಿದೆ . ಇನ್ನು ಹಣ ಎಷ್ಟೆ ಸಂಪಾದಿಸಿದರು ಶನಿಯ ಪ್ರಭಾವದಿಂದ ನಷ್ಟ ಕಷ್ಟಗಳು ತಪ್ಪುತ್ತಿಲ್ಲ ನೆಮ್ಮದಿಯ ಜೀವನವೇ ದೂರವಾಗಿದೆ ಎನ್ನುವವರು.
ಒಂದು ಕಬ್ಬಿಣದ ಪಾತ್ರೆಯಲ್ಲಿ ನೀರನ್ನು ತುಂಬಿ ಅದನ್ನು ಮಂಚದ ಕೆಳಗೆ ಇಟ್ಟರೆ ಶನಿ ದೋಷ ತೊಲಗಿ ಹೋಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಅಷ್ಟೇ ಅಲ್ಲ ಆಯಾತಾಕಾರದಲ್ಲಿ ನೀಲಿ ಬಣ್ಣದ ಕಲ್ಲುಗಳನ್ನು ಇಡುವುದು ಕೂಡ ಉತ್ತಮ ಎಂದು ಹೇಳುತ್ತೇವೆ. ಇನ್ನು ಬಹಳಷ್ಟು ಜನ ಸಕಾಲದಲ್ಲಿ ಮದುವೆ ಆಗದೆ ಮನೋವ್ಯತೆ ಅನುಭವಿಸುತ್ತಿರುವವರು ತಾವು ಮಲಗುವ ಮಂಚದ ಕೆಳಗೆ ಕಬ್ಬಿಣದ ವಸ್ತುಗಳನ್ನು ಇಡಬಾರದು . ಹಾಗೇನಾದರೂ
ಕಬ್ಬಿಣದ ವಸ್ತುಗಳನ್ನು ಇಟ್ಟರೆ ಬಹುಬೇಗ ಅವುಗಳನ್ನು ತೆಗೆದು ಕಬ್ಬಿಣದ ವಸ್ತುಗಳು ಮಂಚದ ಕೆಳಗೆ ಇಡದಂತೆ ಎಚ್ಚರ ವಹಿಸಬೇಕು . ಹಾಗೆ ಮಾಡಿದರೆ ಬೇಗನೆ ಮದುವೆ ಆಗಿ ತುಂಬು ಸಂಸಾರದ ಸುಖ ಜೀವನ ನಿಮ್ಮದಾಗುತ್ತದೆ . ನಾವು ವಿಶ್ರಮಿಸುವ ಮಂಚ ಎಷ್ಟು ಶುಭ್ರವಾಗಿ ಇದ್ದರೆ, ಅಷ್ಟು ಚೆನ್ನಾಗಿ ನಿದ್ರೆ ಬಂದು ದೇಹಕ್ಕೆ ಸುಖ ಸಿಗುತ್ತದೆ . ಹಾಗೆಯೇ ಆಯಾ ಸಂದರ್ಭದಲ್ಲಿ ಆಯಾ ಸಮಯಕ್ಕೆ ತಕ್ಕಂತೆ ಮಂಚದ ಕೆಳಗೆ ವಸ್ತುಗಳನ್ನು ಇಡುವುದರಿಂದ ನಿಮ್ಮ ಜೀವನದಲ್ಲಿ ಶುಭ ಫಲಗಳು ಉಂಟಾಗುತ್ತದೆ . ಹಾಗದರೆ ಈ ಪ್ರಯತ್ನವನ್ನು ತಪ್ಪದೆ ಮಾಡಿ ಎಂದು ಹೇಳಲಾಗಿದೆ.