ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುವ ಸಂಕೇತ ಏನು ಎಂದು ತಿಳಿದುಕೊಳ್ಳಿ

0

ನಾವು ಈ ಲೇಖನದಲ್ಲಿ ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಂಡರೆ ಅದರ ಸಂಕೇತ ಏನು ಎಂಬುದನ್ನು ತಿಳಿದುಕೊಳ್ಳೋಣ. ಹಲ್ಲಿಗಳು ಮನೆಯಲ್ಲಿ ಇದ್ದರೆ ಅದು ಸಾಮಾನ್ಯದ ವಿಷಯ ಎಂದು ನಾವು ಅಂದು ಕೊಳ್ಳುತ್ತೇವೆ. ಆದರೆ ಹಲ್ಲಿಯನ್ನು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಹಲ್ಲಿಯೂ ಇದ್ದರೆ ಲಕ್ಷ್ಮಿಯು ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ದೀಪಾವಳಿ ಹಬ್ಬದ ದಿನ ಹಲ್ಲಿಯೂ ಕಾಣಿಸಿಕೊಂಡರೆ ತುಂಬಾ ಪವಿತ್ರವಾದದ್ದು ಎಂದು ಹೇಳಲಾಗುತ್ತದೆ.

ಇದೇ ರೀತಿಯ ಸಾಕಷ್ಟು ನಂಬಿಕೆಗಳಿವೆ. ದೀಪಾವಳಿ ಹಬ್ಬದ ದಿನ ನಮ್ಮ ಮೈಯ ಮೇಲೆ ಹಲ್ಲಿ ಬಿದ್ದರೆ ಅದು ಒಳ್ಳೆಯ ಸಂಕೇತವೆಂದು ಭಾವಿಸಲಾಗುತ್ತದೆ. ಇದರಲ್ಲಿ ಕೆಲವೊಂದು ಘಟನೆ ಸತ್ಯವಾಗಿದ್ದರು ಇನ್ನು ಕೆಲವು ಸುಳ್ಳಾಗಿರುತ್ತದೆ. ಸಂಬಂಧಪಟ್ಟಂತೆ ಯಾವ ರೀತಿಯ ಒಳ್ಳೆ ಫಲಗಳನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ನೀವು ನಿಮ್ಮ ಮನೆಯಲ್ಲಿ ಹಲ್ಲಿಗಳನ್ನು ನೋಡಿದ ತಕ್ಷಣ ದೇವರ ಮನೆಯಲ್ಲಿ ಹೋಗಿ ಅಕ್ಷತೆ ಮತ್ತು ಕುಂಕುಮವನ್ನು ತೆಗೆದುಕೊಂಡು ಹಲ್ಲಿಯ ಮೇಲೆ ಹಾಕಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ದೂರವಾಗುತ್ತದೆ .

ಮತ್ತು ಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ ಎಂದು ಹೇಳಲಾಗುತ್ತದೆ. ಈ ರೀತಿ ಒಂದು ಚಿಕ್ಕ ಉಪಾಯವನ್ನು ಮಾಡಿಕೊಳ್ಳಿ. ಇನ್ನೂ ಒಂದು ಉಪಾಯವೇನೆಂದರೆ ಹಲ್ಲಿಯ ಮೇಲೆ ಅಕ್ಷತೆಯನ್ನು ಹಾಕುವಾಗ ನಿಮ್ಮ ಬಯಕೆಗಳನ್ನು ಹೇಳಿಕೊಳ್ಳುತ್ತಾ ಇರಬೇಕು ಈ ರೀತಿ ಮಾಡುವುದರಿಂದ ಆ ಬಯಕೆಗಳು ಈಡೇರುತ್ತದೆ . ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ಕಷ್ಟಗಳು ಕಡಿಮೆಯಾಗುತ್ತಾ ಹೋಗುತ್ತದೆ. ಈ ರೀತಿಯ ಉಪಾಯವನ್ನು

ನೀವು ಸಂಜೆ ಅಂದರೆ ನಾಲ್ಕು ಗಂಟೆಯ ಮೇಲೆ ನೀವು ಪೂಜೆ ಮಾಡುವ ಸಮಯದಲ್ಲಿ ಹಲ್ಲಿಗಳು ಕಾಣಿಸಿಕೊಂಡರೆ ಈ ರೀತಿ ಉಪಾಯವನ್ನು ಮಾಡಿದರೆ ಅದರ ಸಂಪೂರ್ಣ ಫಲ ನಿಮಗೆ ದೊರಕುತ್ತದೆ. ನೀವು ಕಸವನ್ನು ಗುಡಿಸಬೇಕಾದರೆ ಆಕಸ್ಮಿಕವಾಗಿ ಹಲ್ಲಿಯೂ ಸತ್ತು ಹೋದರೆ ಅದನ್ನು ತೆಗೆದುಕೊಂಡು ಮಣ್ಣಿನ ಒಳಗಡೆ ಹಾಕಿ ಮಣ್ಣನ್ನು ಮುಚ್ಚುವುದರಿಂದ ಯಾವುದೇ ರೀತಿಯ ಪಾಪಗಳು ನಿಮ್ಮನ್ನು ಕಾಡುವುದಿಲ್ಲ . ಹೊರಗಡೆ ಎತ್ತಿ ಹಾಕುವುದು ಕಸದ ಪುಟ್ಟಿಗೆ ಬಿಸಾಡುವುದರಿಂದ ನಿಮಗೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ವಿಶೇಷವಾಗಿ ಲಕ್ಷ್ಮಿಯನ್ನು ಹೊರಗೆ ಹಾಕುತ್ತಿದ್ದೀರಾ ಎಂಬ ಅರ್ಥ ಇದಕ್ಕೆ ಬರುತ್ತದೆ .

ನೀವು ಮಣ್ಣನ್ನು ಹಾಕಿ ಮುಚ್ಚುವುದರಿಂದ ನಿಮಗೆ ಯಾವುದೇ ರೀತಿಯ ಪಾಪಗಳು ಬರುವುದಿಲ್ಲ. ಅದೇ ರೀತಿಯ ಕೆಟ್ಟ ಪ್ರಭಾವಗಳು ನಿಮ್ಮ ಮೇಲೆ ತಾಕುವುದಿಲ್ಲ. ಮನೆಯಲ್ಲಿ ಒಂದು ಅಥವಾ ಎರಡು ಹಲ್ಲಿಗಳು ಇದ್ದರೆ ನಿಮಗೆ ಯಾವುದೇ ರೀತಿಯ ಕೆಟ್ಟ ಪರಿಣಾಮವು ಬೀರುವುದಿಲ್ಲ. ಅದರಿಂದ ಒಳ್ಳೆಯ ಪ್ರಭಾವವೇ ನಿಮ್ಮ ಮೇಲೆ ಉಂಟಾಗುತ್ತದೆ. ಊಟ ಮಾಡುವಾಗ ಹಲ್ಲಿಗಳು ಶಬ್ದ ಮಾಡಿದರೆ ಇದು ನಿಮಗೆ ಸಾಕಷ್ಟು ಅದೃಷ್ಟವನ್ನು ತಂದುಕೊಡುತ್ತದೆ. ನಿಮ್ಮ ಕನಸಿನಲ್ಲಿ ಸತ್ತ ಹಲ್ಲಿಗಳು ಬಂದರೆ ಇದಕ್ಕೆ ನಿಮಗೆ ಅಶುಭವನ್ನು ತರುತ್ತದೆ.

ಮತ್ತು ನಿಮ್ಮ ಹಣೆ ಮತ್ತು ತಲೆಯ ಮೇಲೆ ಹಲ್ಲಿಯೂ ‌ಬಿದ್ದರೆ ಇದು ವಿಶೇಷವಾದಂತಹ ಸ್ಥಾನವನ್ನು ತಂದುಕೊಡುತ್ತದೆ. ಆರ್ಥಿಕವಾಗಿ ನಿಮಗೆ ಒಳ್ಳೆಯ ಲಾಭವನ್ನು ತಂದು ಕೊಡುತ್ತದೆ. ಈ ರೀತಿಯ ಸಂಕೇತವು ಸಿಕ್ಕಿದರೆ ನಿಮಗೆ ಶೀಘ್ರದಲ್ಲೇ ದನಪ್ರಾಪ್ತಿಯಾಗುತ್ತದೆ. ನೀವು ಯಾವುದಾದರೂ ವಿಶೇಷವಾದ ಕೆಲಸವನ್ನು ಮಾಡಲು ಹೊರಟಾಗ ನಿಮ್ಮ ಕಣ್ಣಿಗೆ ಎರಡು ಹಲ್ಲಿಗಳು ಜಗಳವಾಡುವ ಸನ್ನಿವೇಶ ಕಂಡು ಬಂದರೆ ಆ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತದೆ .

ಆ ಕೆಲಸದಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ತುಂಬಾ ಕಷ್ಟ ಪಡಬೇಕಾಗುತ್ತದೆ ಎಂದು ಹೇಳುವ ಸಂಕೇತವಾಗಿರುತ್ತದೆ. ಇದು ಸ್ವಲ್ಪ ಕೆಟ್ಟ ಸಂಕೇತ ಎಂದು ಹೇಳಬಹುದು . ನೀವೊಂದು ಕೊಂಡಂತಹ ಕೆಲಸಗಳು ಆಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ವಿಶೇಷವಾಗಿ ಮಹಿಳೆಯರಿಗೆ ಉದ್ದನೆಯ ಕೂದಲಿನಲ್ಲಿ ಮಧ್ಯ ಹೋಗಿ ಹಲ್ಲಿ ಸಿಕ್ಕಿಹಾಕಿಕೊಂಡರೆ ಈ ರೀತಿಯ ಘಟನೆ ನಡೆದರೆ ಇದು ನಿಮಗೆ ಕೆಟ್ಟ ಸಂಕೇತವಾಗಿರುತ್ತದೆ. ಈ ರೀತಿಯ ಘಟನೆ ನಡೆದರೆ ನೀವು ತುಂಬಾ ಜಾಗೃತೆ ವಹಿಸಬೇಕು.

ದೇವರ ಕೋಣೆಯಲ್ಲಿ ನೀವು ಪೂಜೆ ಮಾಡಬೇಕಾದರೆ ಹಲ್ಲಿಯೂ ಕಾಣಿಸಿಕೊಂಡರೆ ನಿಮ್ಮ ಮನೆಯಲ್ಲಿ ಗಂಗಾಜಲವಿದ್ದರೆ ಆ ಗಂಗಾಜಲವನ್ನು ಹಲ್ಲಿಯ ಮೇಲೆ ಚುಮುಕಿಸಬೇಕಾಗುತ್ತದೆ. ನಂತರದಲ್ಲಿ ನೀವು ದೇವರಿಗೆ ದೀಪವನ್ನು ಹಚ್ಚಿ ದೇವರ ಹತ್ತಿರ ಪ್ರಾರ್ಥನೆ ಮಾಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ಬಹಳ ಒಳ್ಳೆಯ ಫಲಗಳು ಸಿಗುತ್ತದೆ.

Leave A Reply

Your email address will not be published.