ನಾವು ಈ ಲೇಖನದಲ್ಲಿ ಅಂಗೈನಲ್ಲಿ ಬುಧ ಪರ್ವತದ ಮೇಲೆ ಸಮಾನವಾದ ರೇಖೆ ಇದ್ದರೆ, ಅದರ ಹಿಂದಿರುವ ರಹಸ್ಯ ಏನೆಂಬುದನ್ನು ತಿಳಿದುಕೊಳ್ಳೋಣ.ಕೆಲವರ ಅಂಗೈನಲ್ಲಿ ಒಂದು ರೇಖೆ ಉದ್ದವಾಗಿರುತ್ತದೆ . ಒಂದು ರೇಖೆ ಚಿಕ್ಕದಾಗಿರುತ್ತದೆ. ಅಥವಾ ಅದರ ವಿರುದ್ಧವಾಗಿಯೂ ಇರಬಹುದು.ಈ ರೇಖೆಗಳಿಂದ ನಷ್ಟವಾಗುತ್ತದೆಯೋ ಅಥವಾ ಲಾಭವಾಗುತ್ತದೆಯೋ? ಇದರಲ್ಲಿ ಎರಡು ಲಾಭಗಳಿವೆ . ಹಾಗೆಯೇ ಎರಡು ನಷ್ಟಗಳಿವೆ.
ಮೊದಲನೆಯದಾಗಿ ನಷ್ಟಗಳ ಬಗ್ಗೆ ತಿಳಿದುಕೊಳ್ಳೋಣ. ಯಾವಾಗ ನೀವು ಯಾವುದಾದರೂ ಒಂದು ಕಾರ್ಯವನ್ನು ಮಾಡಲು ಮುಂದೆ ಹೋದಾಗ ಅದು ನಿಮ್ಮ ಕೆಲಸಕ್ಕೆ ಸಂಬಂಧಿಸಿರಬಹುದು ಅಥವಾ ವೈಯಕ್ತಿಕ ಜೀವನದ ಬಗ್ಗೆ ಮುಂದೆ ಸಾಗುತ್ತಾ ಇರುತ್ತೀರಾ . ಈ ಕೆಲಸಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿರುವುದಿಲ್ಲ . ಇದು ಒಂದು ಭಾರಿ ಅಲ್ಲ ಪ್ರತಿ ಭಾರಿ ಈ ರೀತಿ ಆಗುತ್ತಿರುತ್ತದೆ .
ನೀವು ಯಾವುದಾದರೂ ಕಾರ್ಯಕ್ಕೆ ಎಂದು ಹೋಗಿರುತ್ತೀರಾ ಆಮೇಲೆ ಬನ್ನಿ ಎಂದು ಅವರು ಹೇಳುತ್ತಾರೆ. ಅಥವಾ ಇಲ್ಲಿ ಪರೀಕ್ಷೆಗಳನ್ನು ಕೊಟ್ಟಿರುತ್ತೀರಾ, ಫಲಿತಾಂಶಗಳು ತಡವಾಗಿರುತ್ತದೆ . ಅಥವಾ ಎಲ್ಲಿ ನೀವು ಬಂಡವಾಳ ಮಾಡಿರುತ್ತೀರಾ ಅಲ್ಲಿ ಆ ಕಾರ್ಯ ಪೂರ್ಣಗೊಂಡಿರುವುದಿಲ್ಲ. ಈ ಮಾತಿನ ಅರ್ಥವೇನು ಎಂದರೆ , ಕೆಲಸವೂ ಪದೇ ಪದೇ ಮುಂದೂಡಿಕೆ ಆಗುತ್ತಿರುತ್ತದೆ. ಯಾವ ಸಮಯದಲ್ಲಿ ಆಗಬೇಕಾಗಿ ಇರುತ್ತದೆಯೋ , ಯಾವ ನಿರ್ಧಾರದ ಸಮಯದಲ್ಲಿ ನಡೆಯಬೇಕಾಗಿರುತ್ತದೆಯೊ ಅದು ಸಮಯಕ್ಕೆ ಸರಿಯಾಗಿ ಆಗುವುದೇ ಇಲ್ಲ.
ಇಲ್ಲಿ ನಿಮ್ಮ ಯಶಸ್ಸಿನ ಅವಕಾಶ ತಡವಾಗಿ ನೋಡಲು ಸಿಗುತ್ತಿರುತ್ತದೆ. ಈ ಮಾತಿನ ಅರ್ಥ ಸಮಸ್ಯೆಗಳು ಬರುತ್ತಲೇ ಇರುತ್ತವೆ . ಅಷ್ಟೇ ಅಲ್ಲದೆ ಹಲವಾರು ಬಾರಿ ನೀವು ಸಹ ಸೂಚನೆ ಮಾಡಿರಬಹುದು. ನೀವು ಪೂರ್ತಿ ಹಣವನ್ನು ಯಾವುದೋ ಒಂದು ಕಾರ್ಯಕ್ಕಾಗಿ ಮೊದಲೇ ಕೊಟ್ಟಿರುತ್ತೀರಾ . ಆದರೂ ಸಹ ನಿಮ್ಮ ಆ ಕೆಲಸ ನಡೆಯುವುದಿಲ್ಲ. ಅಥವಾ ಇರುವಂತಹ ವ್ಯಕ್ತಿ ಆ ಕೆಲಸವನ್ನು ಮುಂದೂಡುತ್ತಾ ಹೋಗುತ್ತಿರುತ್ತಾರೆ.
ಎರಡನೆಯ ನಷ್ಟವನ್ನು ನೋಡುವುದಾದರೆ ನಿಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾ ಹೊಂದಿಕೊಂಡಿದೆ .ಇಲ್ಲಿ ಮದುವೆಗೂ ಮುನ್ನ ಯಾವುದೋ ವ್ಯಕ್ತಿಯೊಂದಿಗೆ ನಿಮ್ಮ ಸಂಬಂಧ ಇರಬಹುದು , ನೀವು ಅವರನ್ನು ತುಂಬಾ ಪ್ರೀತಿ ಮಾಡುತ್ತಿರಬಹುದು , ಇದು ದೂರದ ಸಂಬಂಧವೂ ಆಗಿರಬಹುದು, ಮುಂದೆ ಹೋಗಿ ನಿಮ್ಮೊಡನೆ ಮದುವೆ ಯೋಗ ಆಗಬಹುದು , ಎಂದು ಅನ್ನಿಸುತ್ತಿರುತ್ತದೆ ಅದರಲ್ಲಿ ನೀವು ಯಾರನ್ನಾದರೂ ಪ್ರೀತಿ ಮಾಡುತ್ತಿರುತ್ತಿರಾ , ಅವರನ್ನೇ ಮದುವೆಯಾಗುವ ಯೋಗ ಬರುವ ಸಾಧ್ಯತೆ ಇರುತ್ತದೆ,
ಆದರೆ ಎಲ್ಲಾ ನಂಬಿಕೆಗಳು ಕೂಡ ಒಡೆದು ಕೂಡ ಹೋಗಬಹುದು ಸಂಬಂಧಗಳು ಹಾಳಾಗುವ ಸಾಧ್ಯತೆ ಕೂಡ ಇರುತ್ತದೆ. ಈ ಮಾತಿನ ಅರ್ಥ ಸಂಬಂಧಗಳಲ್ಲಿ ತೊಂದರೆಗಳು ಅಡಚಣೆಗಳು ಬರಬಹುದು , ನಂತರ ಬೇರೆಯವರೊಂದಿಗೆ ನೀವು ಮದುವೆಯಾಗುವ ಸಾಧ್ಯತೆಗಳು ಕೂಡ ಬರುತ್ತವೆ. ಅಂದರೆ ಮದುವೆಗೂ ಮುನ್ನ ಒಬ್ಬರು ಪಾರ್ಟನರ್ ಇರುತ್ತಾರೆ , ಮದುವೆ ಆದ ನಂತರ ಬೇರೆ ಪಾರ್ಟನರ್ ಬರಬಹುದು. ಈ ಪ್ರಕಾರದ ಸಮಸ್ಯೆಗಳು ನೋಡಲು ಸಿಗುತ್ತವೆ.
ಎರಡು ರೇಖೆಗಳಿಂದ ಆಗುವ ಲಾಭಗಳನ್ನು ತಿಳಿದುಕೊಳ್ಳೋಣ ಮೊದಲನೆಯ ಲಾಭದ ಬಗ್ಗೆ ತಿಳಿದುಕೊಳ್ಳೋಣ. ಎರಡು ಸಮಾನವಾದ ರೇಖೆಗಳು ಕಂಡುಬಂದಿದ್ದರೆ ಇದು ಮುಖ್ಯವೇತಕೆ ಎಂದರೆ , ಒಂದು ವೇಳೆ ನಿಮ್ಮ ಬುಧ ಪರ್ವತದ ಮೇಲೆ ಚಿಕ್ಕ ರೇಖೆ ಮೊದಲಿಗಿದ್ದು ಉದ್ದವಾದ ರೇಖೆ ಅನಂತರದ ಮೇಲೆ ಭಾಗದಲ್ಲಿ ಇದ್ದರೆ, ಈ ಸಂದರ್ಭದಲ್ಲಿ ತುಂಬಾ ತಡವಾಗಿ ನಿಮ್ಮ ಮದುವೆ ಆಗುತ್ತದೆ. ಒಂದು ವೇಳೆ ಉದ್ದದ ರೇಖೆಗೂ ಮುನ್ನ ಚಿಕ್ಕವಾದ ರೇಖೆಗಳು ತುಂಬಾ ಇದ್ದರೆ , ಇವು ನಿಮ್ಮ ಮದುವೆಯ ವಿಷಯದಲ್ಲಿ ಅಡಚಣೆಗಳನ್ನು ಉಂಟು ಮಾಡುತ್ತವೆ . ಅಂದರೆ ಮದುವೆಗಾಗಿ ಮಾತುಕತೆಗಳು ಬರುತ್ತವೆ, ಆದರೆ ಮದುವೆ ನಿಶ್ಚಯವಾಗುವುದಿಲ್ಲ. ಪದೇ ಪದೇ ಮದುವೆ ಪ್ರಯತ್ನ ಮಾಡಿದರು ಮದುವೆಗಳು ಮುರಿದು ಹೋಗುತ್ತಿರುತ್ತದೆ. ಹಾಗಾಗಿ ಈ ಪ್ರಕಾರದ ತೊಂದರೆಗಳು ಬರುತ್ತಿರುತ್ತವೆ.
ಒಂದು ವೇಳೆ ಉದ್ದವಾದ ರೇಖೆಯು ಮೊದಲಿಗೆ ಇದ್ದು ಚಿಕ್ಕದಾದ ರೇಖೆಯು ನಂತರ ಇದ್ದರೆ , ಈ ಸಂದರ್ಭದಲ್ಲಿ ಮದುವೆಯು ಮೊದಲಿಗೆ ಆಗುತ್ತದೆ . ತುಂಬಾ ವೇಗವಾಗಿಯು ಆಗುತ್ತದೆ . ಸರಿಯಾದ ವಯಸ್ಸಿನಲ್ಲಿಯೂ ಆಗುತ್ತದೆ. ಚಿಕ್ಕದಾದ ರೇಖೆಯು ಉದ್ದವಾದ ರೇಖೆಯಾದ ನಂತರ ಬಂದಿದ್ದರೆ ಸಮಸ್ಯೆಗಳು ಮದುವೆಯಾದ ನಂತರ ಬರಬಹುದು. ಅಂದರೆ ಚಿಕ್ಕಚಿಕ್ಕ ಮಾತುಗಳಿಗೆ ಜಗಳಾವಾಗುತ್ತಿರುತ್ತದೆ. ಸರಿಯಾಗಿ ರೇಖೆಗಳಿರುವುದು ತುಂಬ ಮುಖ್ಯವಾಗುತ್ತದೆ. ಒಂದು ವೇಳೆ ಸಮಾನವಾದ ರೇಖೆಗಳು ಇದ್ದರೆ , ಇದರ ಲಾಭಗಳು ಏನೆಂದರೆ ಆ ರೇಖೆಗಳು ನಿಮ್ಮ ಕರಿಯರ್ ನೊಂದಿಗೆ ಹೊಂದಿಕೊಂಡಿರುತ್ತದೆ .
ಯಾವಾಗ ನೀವು ನಿಮ್ಮ ಕರಿಯರನ್ನು ಶುರು ಮಾಡುತ್ತಿರೋ, ಈ ಮಾತಿನ ಅರ್ಥ ಯಾವ ವಯಸ್ಸಿನಲ್ಲಿ ನೀವು ಗಳಿಸಲು ಶುರು ಮಾಡಿರುತ್ತೀರಾ, ಅದಾದ ನಂತರ ಸ್ಥಿರದಿಂದಿರುತ್ತದೆ . ಕರಿಯರ್ ಶುರು ಮಾಡುವ ಮುನ್ನ ಏರುಪೇರುಗಳಿರಬಹುದು , ಆದರೆ ಕೆಲವರಿಗೆ ಅವಕಾಶಗಳು ತುಂಬಾ ಕಷ್ಟಪಟ್ಟ ನಂತರ ಸಿಗುತ್ತಿರುತ್ತದೆ. ಅದರಲ್ಲಿ ಯಾವಾಗ ನಿಮಗೆ ಒಳ್ಳೆಯ ಸಮಯ ಸಿಗುತ್ತದೆಯೋ ಆಗ ಆ ಎರಡು ರೇಖೆಗಳು ಯಾವ ರೀತಿಯ ಸ್ಥಿರತೆಯನ್ನು ಸೃಷ್ಟಿಸುತ್ತವೆ ಎಂದರೆ ,
ಕೇವಲ ಮೂರು ವರ್ಷದಿಂದ ಐದು ವರ್ಷದ ಒಳಗೆ ನಿಮ್ಮ ಮನಸಿನ ಇಚ್ಛೆಯನ್ನು ಪೂರ್ತಿ ಮಾಡಬಹುದು. ಗಾಡಿಯನ್ನು ಖರೀದಿ ಮಾಡುವುದಿರಲಿ , ಜಾಗವನ್ನು ತೆಗೆದುಕೊಳ್ಳುವುದಿರಲಿ , ಮನೆ ಕಟ್ಟುವುದಿರಲಿ , ಅಥವಾ ಬೇರೆ ಯಾವುದಾದರೂ ಇಚ್ಚೆ ಇರಲಿ ಅವುಗಳನ್ನು ಪೂರ್ತಿ ಮಾಡುವಂತಹ ಅವಕಾಶಗಳು ಹೆಚ್ಚಾಗಿ ಕಂಡುಬರುತ್ತದೆ. ಈ ರೀತಿಯಾದ ಎರಡು ರೇಖೆಗಳುನಿಮ್ಮ ಜೀವನದಲ್ಲಿ ಸ್ಥಿರತೆಯನ್ನು ಉಂಟುಮಾಡುತ್ತವೆ .
ನಂತರ ಎರಡನೆಯ ಲಾಭದ ಬಗ್ಗೆ ಹೇಳುವುದಾದರೆ , ಮದುವೆಯಾದ ನಂತರ ನಿಮ್ಮ ಜೀವನದಲ್ಲಿ ಈ ಸಮಾನವಾದ ಎರಡು ರೇಖೆಗಳು ಒಳ್ಳೆಯ ಯೋಗವನ್ನು ತರುತ್ತದೆ . ಈ ಮಾತಿನ ಅರ್ಥ ಮದುವೆಗೂ ಮುನ್ನ ನಿಮಗೆ ಯಶಸ್ಸು ಸಿಗದೇ ಇರಬಹುದು. ಮದುವೆಯಾದ ನಂತರ ಯಶಸ್ಸಿನ ಯೋಗ ನೋಡಲು ಸಿಗುತ್ತದೆ . ಹಲವಾರು ಜನರ ಮನಸ್ಸಿನಲ್ಲಿ ಈ ರೀತಿಯ ಪ್ರಶ್ನೆಗಳು ಇರುತ್ತವೆ . ಅವರಿಗೆ ಯಶಸ್ಸು ಸಿಗುತ್ತಿರುವುದಿಲ್ಲ , ಎನ್ನುವುದು ಇರುತ್ತದೆ .
ಕೆಲವರ ಸ್ಥಿತಿ ಹೇಗಿರುತ್ತದೆಂದರೆ , ಮದುವೆಯಾದ ನಂತರ ಯಾವಾಗ ಜೀವನ ಸಂಗಾತಿ ನಿಮ್ಮ ಜೀವನದಲ್ಲಿ ಬರುತ್ತಾರೋ , ಆಗ ಅವರು ಒಂದು ಕಡೆಯಿಂದ ಅದೃಷ್ಟವನ್ನು ತೆಗೆದುಕೊಂಡು ಬಂದಿರುತ್ತಾರೆ . ನಿಮ್ಮ ಜೀವನದಲ್ಲಿ ಸುಧಾರಿಸುವ ದಾರಿಗಳು ತೆರೆದುಕೊಳ್ಳುತ್ತವೆ ಮುಂದೆ ಸಾಗಿದಂತೆ
ಹಣ ಗಳಿಸುವಂತ ನಿಮ್ಮ ಯೋಗ ಹೆಚ್ಚಾಗಬಹುದು . ಇವುಗಳ ಜೊತೆಗೆ ನೀವು ಯಶಸ್ಸನ್ನು ಪಡೆದುಕೊಳ್ಳುತ್ತೀರಾ ಅಷ್ಟೇ ಅಲ್ಲದೆ ಮದುವೆಯಾದ ನಂತರ ನಿಮ್ಮ ಪಾಲುದಾರರು ಯಾವುದಾದರೂ ನೌಕರಿ ಮಾಡಬಹುದು , ಒಳ್ಳೆಯ ವ್ಯಾಪಾರ ಮಾಡಬಹುದು , ಅಥವಾ ನಿಮ್ಮ ಕಾರ್ಯದಲ್ಲಿ ನಿಮಗೆ ಸಹಾಯವನ್ನು ಮಾಡುತ್ತಾರೆ. ಈ ಮಾತಿನ ಅರ್ಥ ನಿಮಗೆ ಸಹಾಯ ಮಾಡುವಂತ ಪಾಲುದಾರ ಸಿಗುತ್ತಾರೆ ಎಂದು ಹೇಳಬಹುದು .