ನಾವು ಈ ಲೇಖನದಲ್ಲಿ ಕಾರ್ಯಸಿದ್ಧಿ ಚಕ್ರದಿಂದ ನೀವು ಅಂದುಕೊಂಡ ಕೆಲಸ ಹೇಗೆ ಆಗುತ್ತದೆ ಎಂದು ತಿಳಿಯೋಣ ಈ ಒಂದು ಕಾರ್ಯಸಿದ್ಧಿ ಚಕ್ರದ ಮೂಲಕ ನೀವು ಅಂದು ಕೊಂಡಂತಹ ಕೆಲಸಗಳು ಆಗುತ್ತದೆಯೇ , ಇಲ್ಲವಾದರೆ ಯಾವುದಾದರೂ ಅಡೆತಡೆಗಳು ಬರುತ್ತದೆಯೋ , ಅಥವಾ ಯಾವುದೇ ಗೊಂದಲ ಇದ್ದರೂ ಸಹ ಆ ಕೆಲಸದ ಬಗ್ಗೆ ಸ್ಪಷ್ಟತೆಯನ್ನು ನೀಡುವಂತಹ ಶಕ್ತಿ ಈ ಚಕ್ರಕ್ಕೆ ಇದೆ. ಈ ಚಕ್ರದ ಶಕ್ತಿ ಏನು , ಯಾವ ರೀತಿಯಾಗಿ ಈ ಒಂದು ಚಕ್ರವನ್ನು ಬರೆದು , ಪ್ರಯೋಗವನ್ನು ಮಾಡಬೇಕು. ಯಾವ ದಿನ ಮಾಡಬೇಕು ,
ಯಾವ ದೇವರ ಸಂಕಲ್ಪ ಮಾಡಬೇಕು. ನಮ್ಮ ಪ್ರತಿ ಕೆಲಸ ಕಾರ್ಯದಲ್ಲೂ ಕೂಡ ಈ ಚಕ್ರ ಹೇಗೆ ಶಕ್ತಿಯನ್ನು ನೀಡುತ್ತದೆ . ಹಾಗೂ ಸಹಕರಿಸುತ್ತದೆ ಎಂದು ಇಲ್ಲಿ ನಾವು ಸಂಪೂರ್ಣವಾಗಿ ತಿಳಿದುಕೊಳ್ಳೋಣ . ಪ್ರತಿಯೊಬ್ಬರಿಗೂ ಕೂಡ ನಿತ್ಯ ಜೀವನದಲ್ಲಿ ನಾನಾ ಗೊಂದಲಗಳು , ಯಾವುದೇ ಕೆಲಸ ಆರಂಭಿಸಬೇಕಾದರೂ ಕೂಡ , ಭಯ ಭೀತಿ ಇರುತ್ತದೆ. ಈ ಕೆಲಸ ಆಗುತ್ತದೆಯೋ ಇಲ್ಲವೋ, ಇದರಿಂದ ಜೀವನ ಚೆನ್ನಾಗಿರುತ್ತದೆಯೋ ಇಲ್ಲವೋ ಎಂಬ ಆತಂಕ ಇದ್ದೇ ಇರುತ್ತವೆ .
ಆ ಕೆಲಸಗಳು ಯಾವುದೇ ವ್ಯಕ್ತಿಯಿಂದ ಆಗಿರಬಹುದು , ಹಣಕಾಸಿನಿಂದ ಆಗಿರಬಹುದು , ಅಥವಾ ಸಂಬಂಧಗಳಲ್ಲಿ ಆಗಿರಬಹುದು , ಉದ್ಯೋಗ , ಆರೋಗ್ಯ ಹೇಗೆ ನಾನಾ ವಿಚಾರಗಳಲ್ಲಿ ಆಗಿರಬಹುದು , ನಾನಾ ವಿಚಾರಗಳಲ್ಲಿ ಗೊಂದಲ ಅಥವಾ ಚಂಚಲತೆ ಇದ್ದೇ ಇರುತ್ತದೆ . ಈ ಕಾರ್ಯಸಿದ್ಧಿ ಚಕ್ರದ ಬಗ್ಗೆ ಸಹದೇವ ಪ್ರಶ್ನಾ ಶಾಸ್ತ್ರದಲ್ಲಿ ಬಹಳ ವಿಶೇಷವಾಗಿ ತಿಳಿಸಿದ್ದಾರೆ .ಈ ಕಾರ್ಯಸಿದ್ಧಿ ಚಕ್ರದ ಪ್ರಯೋಗವನ್ನು ನೀವು ಯಾವ ದಿನವಾದರೂ ಕೂಡ ನೀವು ಮಾಡಬಹುದು . ಇಷ್ಟ ದೇವರ ಪ್ರಾರ್ಥನೆಯನ್ನು ಮಾಡಿ ಒಂದು ಪುಸ್ತಕ ಅಥವಾ ಶುದ್ಧವಾದ ಕಾಗದದ ಮೇಲೆ , ಚಕ್ರವನ್ನು ಈ ವಿಧವಾಗಿ ಬರೆದುಕೊಳ್ಳಬೇಕು .
ಲೇಖನಿಯ ಸಹಾಯದಿಂದ ಒಂದು ಚೌಕಾಕಾರವನ್ನು ಬರೆದುಕೊಳ್ಳಬೇಕು . ಆ ಚೌಕಾಕಾರದ ಒಳಗೆ ಮೂರು ಅಡ್ಡ ಗೆರೆಯನ್ನು , ಎರಡು ಉದ್ದ ಗೆರೆಗಳನ್ನು ಬರೆದುಕೊಳ್ಳಬೇಕು. ಅಂದರೆ ಒಟ್ಟು 12 ಮನೆಗಳು ಬರುವಂತೆ , ವಿಶೇಷವಾಗಿ ಒಂದು ಚೌಕಾಕಾರವನ್ನು ಬರೆದುಕೊಳ್ಳಬೇಕು . ನಂತರ ಒಂದೊಂದು ಮನೆಯಲ್ಲೂ ಸಹ ಈ ವಿಧವಾದ ವಿಶೇಷ ಸಂಖ್ಯೆಗಳನ್ನು ಬರೆದು ತುಂಬಿಸಬೇಕಾಗುತ್ತದೆ . ಮೊದಲನೆಯದಾಗಿ 5 , 11 , 6 ಸಂಖ್ಯೆಗಳನ್ನು ಬರೆದುಕೊಳ್ಳಬೇಕು .ನಂತರ 10 , 3 , 2 ,
ಈ ಸಂಖ್ಯೆಗಳನ್ನು ಬರೆಯಬೇಕು . ನಂತರ 4 , 7 – 8 ನಂತರ 1 , 9 , 12 .ಈ ಸಂಖ್ಯೆಗಳನ್ನು ಎಲ್ಲಾ ಮನೆಯಲ್ಲೂ ಬರೆದ ನಂತರ , ನಿಮ್ಮ ಮನಸ್ಸಿನಲ್ಲಿ ಇರುವ ಯಾವುದೇ ಕೋರಿಕೆ ಅಥವಾ , ಕೆಲಸ ಆಗುತ್ತದೆಯೋ ಇಲ್ಲವೋ ಎಂಬ ಗೊಂದಲವನ್ನು ಕೇಳಿಕೊಂಡು ನಿಮ್ಮ ಕಣ್ಣುಗಳನ್ನು ಮುಚ್ಚಿ ಯಾವುದಾದರು ಸಂಖ್ಯೆಯ ಮೇಲೆ ನಿಮ್ಮ ಕೈ ಬೆರಳನ್ನು ಇರಿಸಿ , ಮನೆಯಲ್ಲಿ ಯಾರಾದರೂ ಚಿಕ್ಕ ಮಕ್ಕಳು ಇದ್ದರೆ , ಅವರ ಕೈಯಲ್ಲಿ ಸಹ ಈ ಚಕ್ರದ ಪ್ರಯೋಗವನ್ನು ಮಾಡಿಸಬಹುದು .
ಕೆಲಸದಲ್ಲಿ ತುಂಬಾ ಗೊಂದಲಗಳು ಇದ್ದರೆ ಆ ಕೆಲಸದಿಂದ , ಈ ಚಿತ್ರದ ಮೇಲೆ ಕಣ್ಣನ್ನು ಮುಂಚೆ ಬೆರಳನ್ನು ಸ್ಪರ್ಶ ಮಾಡಿದಾಗ , ಸಂಖ್ಯೆಗಳು 10 , 08, 4 ಈ ಮೂರು ಸಂಖ್ಯೆಯಲ್ಲಿ ಯಾವುದಾದರೂ ಒಂದು ಸಂಖ್ಯೆ ಬಂದರೆ , ನೀವು ಅಂದುಕೊಂಡಿರುವ ಕೆಲಸ ಆಗುವುದಿಲ್ಲ .ಆ ಕೆಲಸ ಬಹಳ ಕಠಿಣ . ಬಹಳ ಕಷ್ಟ ಎಂಬ ಸೂಚನೆಯನ್ನು ಈ ಮೂರರಲ್ಲಿ ಯಾವುದಾದರೂ ಒಂದು ಸಂಖ್ಯೆ ನೀಡುತ್ತದೆ . ಆ ಕೆಲಸದಿಂದ ಪ್ರಯೋಜನ ಕೂಡ ಇರುವುದಿಲ್ಲ . ಅದರ ಜೊತೆಗೆ ಸಂಕಷ್ಟಗಳು ಕೂಡ ಹೆಚ್ಚಾಗುತ್ತದೆ . ಕೆಲಸದಿಂದ ಲಾಭ ಕೂಡ ಆಗುವುದಿಲ್ಲ ಎಂಬ ಸೂಚನೆಯನ್ನು ಮೂರು ಸಂಖ್ಯೆಗಳು ನೀಡುತ್ತವೆ .
ಎರಡನೆಯದಾಗಿ ಒಂದು, ಐದು ಒಂಬತ್ತು . ಈ ಸಂಖ್ಯೆಗಳನ್ನು ನೀವು ಕಣ್ಣನ್ನು ಮುಚ್ಚಿ ನಿಮ್ಮ ಬೆರಳನ್ನು ಆ ಚಕ್ರದ ಮೇಲೆ ಸ್ಪರ್ಶ ಮಾಡಿದರೆ, ನೀವು ವಿಶೇಷವಾಗಿ ಅಂದುಕೊಂಡ ಕೆಲಸಗಳು ಮಂದಗತಿಯಲ್ಲಿ ಆಗುತ್ತದೆ. ಎಂಬ ಸೂಚನೆಯನ್ನು ಕೊಡುತ್ತದೆ. ನಿಧಾನವಾಗಿ ಆ ಕೆಲಸಗಳು ಆಗುತ್ತದೆ . ಆದರೆ ಕೆಲಸವನ್ನು ಬಹಳ ತಾಳ್ಮೆಯಿಂದ ಮಾಡಿ ಮುಗಿಸಬೇಕು ಅಂತ ಈ ಸಂಖ್ಯೆಗಳು ಕಾರ್ಯ ಸಿದ್ಧಿ ಚಕ್ರದ ಮೂಲಕ ನಿಮಗೆ ತಿಳಿ ಹೇಳುತ್ತದೆ.
ಇನ್ನು 6 , 12 , 3 ಈ ಸಂಖ್ಯೆಗಳು ಬಂದರೆ , ನಿಮ್ಮ ಕೆಲಸ ಆದಂತೆ ಎಂದು ನೀವು ಭಾವಿಸಬೇಕು . 6 , 12 , 3 ಈ ಸಂಖ್ಯೆಗಳು ಬಂದರೆ ಉತ್ತಮ ಫಲ ಯಾವುದೇ ಚಿಂತೆ ಇಲ್ಲದೆ ಆ ಕೆಲಸಗಳು ಪರಿಪೂರ್ಣ ಫಲ ಕೊಡುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು . ಆ ಕೆಲಸದಿಂದ ಲಾಭ ಇದೆ . ಯಾವುದೇ
ಅಡೆತಡೆಗಳು ಬಾರದೆ ಆ ಕೆಲಸ ವಿಶೇಷ ಫಲವನ್ನು ಕೊಡುತ್ತದೆ ಎಂದು ಅರ್ಥ ಕಾರ್ಯಸಿದ್ಧಿ ಚಕ್ರ ನೀಡುತ್ತದೆ .
ಇನ್ನೂ 2 , 11 , 7 ಈ ಸಂಖ್ಯೆಗಳ ಮೇಲೆ ಕಣ್ಣನ್ನು ಉಜ್ಜಿ ಬೆರಳನ್ನು ಇಟ್ಟರೆ , ನಿಮ್ಮ ಪ್ರಯತ್ನವೇ ಇಲ್ಲದೆ ಆ ಕೆಲಸದಲ್ಲಿ ಅದೃಷ್ಟವನ್ನು ತಂದುಕೊಡುತ್ತದೆ . ಅಂದರೆ ನಿಮ್ಮ ಕೆಲಸ ಯಾವುದೇ ಶ್ರಮವಿಲ್ಲದೆ ಜಯವನ್ನು ನೀಡುತ್ತದೆ . ಈ ವಿಚಾರವನ್ನು ಕಾರ್ಯಸಿದ್ಧಿ ಚಕ್ರ ತಿಳಿಸುತ್ತದೆ . 2 , 11, 7 ಸಂಖ್ಯೆಗಳು ಬಂದಾಗ ಅದೃಷ್ಟ ಹಾಗೂ ಕಾರ್ಯದಿಂದ ಜಯವನ್ನು ಪಡೆಯಬಹುದು ಎಂದು ತಿಳಿದುಕೊಳ್ಳಬಹುದು . ಈ ರೀತಿ ಚಕ್ರದಲ್ಲಿ ಇರುವಂತಹ ಸಂಖ್ಯೆಗಳು ನಿಮ್ಮ ಜೀವನದಲ್ಲಿ ಆಗುವಂತಹ ಕೆಲಸಗಳ ಬಗ್ಗೆ , ಸ್ಪಷ್ಟತೆಯನ್ನು ನೀಡುತ್ತದೆ . ಆದರೆ ಈ ಚಕ್ರವನ್ನು ಬರೆಯಬೇಕಾದರೆ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು .
ಮಾಂಸಹಾರವನ್ನು ಸೇವಿಸಿ ಈ ಚಕ್ರವನ್ನು ಯಾವುದೇ ಕಾರಣಕ್ಕೂ ಬರೆಯಬಾರದು . ಮಾಂಸಹಾರ ಸೇವನೆ ಮಾಡಿದ ದಿನಗಳಲ್ಲಿ ಈ ಚಕ್ರದ ಪ್ರಯೋಗವನ್ನು ಅಪ್ಪಿ ತಪ್ಪಿಯೂ ಕೂಡ ಮಾಡಬಾರದು . ಎರಡನೆಯದಾಗಿ ಸ್ನಾನ ಮಾಡಿ, ಮಡಿ ಮಾಡಿ ಪೂಜೆ ಆದ ನಂತರವೇ ಈ ಒಂದು ಚಿತ್ರದ ಪ್ರಯೋಗವನ್ನು ಮಾಡಬೇಕು . ಸ್ನಾನ ಮಾಡದೆ ಈ ಒಂದು ಚಕ್ರವನ್ನು ಬರೆಯಬಾರದು . ಮೂರನೆಯದಾಗಿ ಪ್ರತಿನಿತ್ಯ ಈ ಚಕ್ರದ ಪ್ರಯೋಗವನ್ನು ಮನಬಂದಂತೆ ಇಷ್ಟ ಬಂದಂತೆ ಯಾವುದೇ ಕಾರಣಕ್ಕೂ ಮಾಡಬಾರದು . ಫಲ ಸಿಗುವುದಿಲ್ಲ . ಯಾವುದಾದರೂ ವಿಶೇಷ ಸಂಕಲ್ಪಗಳು ಇದ್ದಾಗ , ಕೆಲಸ ಕಾರ್ಯಗಳು ಆಗಬೇಕು ಎಂಬ ಕೋರಿಕೆ ಇದ್ದಾಗ ಮಾತ್ರ , ಈ ಒಂದು ಚಕ್ರದ ಪ್ರಯೋಗವನ್ನು ಮಾಡಬೇಕು . ಆಗ ಮಾತ್ರ ಈ ಚಕ್ರದ ಫಲ ಎನ್ನುವುದು ಸ್ಪಷ್ಟತೆಯನ್ನು ನಿಖರವಾಗಿ ನೀಡುತ್ತದೆ .