ಈ ವಸ್ತುಗಳನ್ನು ಪರ್ಸ್ ನಲ್ಲಿಟ್ಟುಕೊಂಡರೆ ಹಣದ ಮಹಾ ಮಳೆ ಆಗುತ್ತೆ

0

ನಾವು ಈ ಲೇಖನದಲ್ಲಿ ಈ ವಸ್ತುಗಳನ್ನು ಜೇಬಿನಲ್ಲಿ ಇಟ್ಟುಕೊಂಡರೆ ಹಣದ ಮಹಾ ಮಳೆ ಹೇಗೆ ಆಗುತ್ತದೆ…..! ಎಂದು ತಿಳಿಯೋಣ .1 . ಕಮಲದ ಬೇರುಗಳು : – ಕಮಲದ ಬೇರುಗಳು ಲಕ್ಷ್ಮಿ ದೇವಿಯೊಂದಿಗೆ ಅಗಾಧವಾದ ಸಂಬಂಧವನ್ನು ಹೊಂದಿದೆ , ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ಲಕ್ಷ್ಮಿ ದೇವಿ ಯಾವಾಗಲೂ ಕಮಲದ ಹೂವಿನ ಮೇಲೆ ಆಸೀನಳಾಗಿ ಇರುತ್ತಾಳೆ. ಹಾಗೂ ಲಕ್ಷ್ಮಿ ದೇವಿಗೆ ಸಂಬಂಧಿಸಿದ ಪ್ರತಿಯೊಂದು ಪೂಜೆಯಲ್ಲೂ ಕಮಲದ ಹೂವನ್ನು ಲಕ್ಷ್ಮಿಗೆ ಅರ್ಪಿಸಲಾಗುತ್ತದೆ. ಅಂತಹ ಪವಿತ್ರವಾದ ಹೂವಿನ ಬೇರನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ದೇವಿಯ ಆಶೀವಾ೯ದದಿಂದ ಅದೃಷ್ಟ ಬರುತ್ತದೆ.

2 . ಗೋಮತಿ ಚಕ್ರ : – ಗೋಮತಿ ಚಕ್ರದ ಕುರಿತು ಕೂಡ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಗೋಮತಿ ಚಕ್ರವನ್ನು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಮನೆಯಲ್ಲಿ ಇಡಲಾಗುತ್ತದೆ. ಗೋಮತಿ ಚಕ್ರವನ್ನು ನೀವು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಕುಟುಂಬದ ಸಮೃದ್ಧಿಯನ್ನು, ಉತ್ತಮ ಆರೋಗ್ಯವನ್ನು ಮತ್ತು ಸಂತೋಷವನ್ನು ಪಡೆದುಕೊಳ್ಳುತ್ತದೆ ಎನ್ನುವ ನಂಬಿಕೆಯಿದೆ.

3 . ಶ್ರೀ ಯಂತ್ರ :- ಶ್ರೀಯಂತ್ರ ಇರುವ ಮನೆಗಳಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿಯೇ ನೆಲೆಸಿರುತ್ತಾಳೆ ಎಂದು ಹೇಳಲಾಗಿದೆ. ಶ್ರೀಯಂತ್ರವನ್ನು ನಾವು ಸಾಮಾನ್ಯವಾಗಿ ದೇವರ ಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಲಾಗುತ್ತದೆ. ಅದೇ ರೀತಿ ಶ್ರೀಯಂತ್ರವನ್ನು ನೀವು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ , ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದು ನಿಮ್ಮ ಕುಟುಂಬದ ಯಶಸ್ಸು, ಸಂತೋಷ ಮತ್ತು ಯೋಗಕ್ಷೇಮವನ್ನು ಬೆಂಬಲಿಸುತ್ತದೆ.

4 . ಲಕ್ಷ್ಮಿದೇವಿ :- ತನ್ನ ಎರಡುಆನೆಗಳೊಂದಿಗೆ ಕುಳಿತಿರುವ ಲಕ್ಷ್ಮಿ ದೇವಿಯ ಸುಂದರವಾದ ಚಿತ್ರವನ್ನು ಅಂದರೆ ಫೋಟೋವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡಿರಿ. ಇದು ನಿಮಗೆ ಉತ್ತಮ ಆರೋಗ್ಯ ಮತ್ತು ಸಂಪತ್ತನ್ನು ತರುತ್ತದೆ ಎಂದು ಹೇಳಲಾಗುತ್ತದೆ.

5 . ಬೆಳ್ಳಿ ನಾಣ್ಯ :- ನಿಮ್ಮ ಜೇಬಿನಲ್ಲಿ ಬೆಳ್ಳಿಯ ನಾಣ್ಯವನ್ನು ಇಟ್ಟು ಕೊಳ್ಳುವುದು, ಸಹ ಲಕ್ಷ್ಮಿಯನ್ನು ಆಕರ್ಷಿಸಲು ಸೂಕ್ತವಾದ ಮಾರ್ಗವಾಗಿದೆ. ಇದನ್ನು ನೀವು ನಿಮ್ಮ ಜೇಬಿನಲ್ಲಿ ಇಟ್ಟು ಕೊಳ್ಳುವುದರಿಂದ ,ಕುಟುಂಬಕ್ಕೆ ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರುವ ಸಾಮಥ್ಯ೯ವನ್ನು ಹೊಂದಿದೆ ಎಂದು ಹೇಳಲಾಗಿದೆ.

6 . ಅಕ್ಷತೆ :- ಒಂದಿಷ್ಟು ಅಕ್ಷತೆಯನ್ನು ಅಥವಾ ಅಕ್ಕಿಯನ್ನು ನೀವು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಪ್ರಯೋಜನಕಾರಿಯಾಗಿದೆ. ಅಕ್ಷತೆಯನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಯಾವಾಗಲೂ ಸಾಕಷ್ಟು ಆಹಾರವನ್ನು ಮತ್ತು ಸಮೃದ್ಧಿಯನ್ನು ನೀಡುತ್ತದೆ , ಎ೦ದು ಇದು ಖಾತರಿಪಡಿಸುತ್ತದೆ.

Leave A Reply

Your email address will not be published.