ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ವೃಶ್ಚಿಕ ರಾಶಿಯ ಲಾಂಛನ ಚೇಳು ಆಗಿರುತ್ತದೆ. ವೃಶ್ಚಿಕ ರಾಶಿಯ ರಾಶ್ಯಾಧಿಪತಿ ಕುಜ . ಈ ರಾಶಿಯ ದಿಕ್ಕು ಉತ್ತರವಾಗಿರುತ್ತದೆ. ಸ್ತ್ರೀ ತತ್ವದ ರಾಶಿ ಆಗಿರುತ್ತದೆ. ಅದೃಷ್ಟದ ಬಣ್ಣ ಕೆಂಪು ಮತ್ತು ಕಿತ್ತಳೆ ಆಗಿರುತ್ತದೆ. ಸೌಮ್ಯ ಸ್ವಭಾವದ ರಾಶಿ ಆಗಿರುತ್ತದೆ.
ರಾಶಿಯ ರತ್ನ ಹವಳವಾಗಿರುತ್ತದೆ. ಮಂಗಳವಾರ ಮತ್ತು ಗುರುವಾರ ಅದೃಷ್ಟದ ದಿನಗಳಾಗಿರುತ್ತದೆ. ಶಿವ ಮತ್ತು ಆಂಜನೇಯ ಸ್ವಾಮಿ ಅದೃಷ್ಟದ ದೇವತೆಗಳಾಗಿರುತ್ತಾರೆ. ಅದೃಷ್ಟದ ಸಂಖ್ಯೆ 3 ,7 9 ಅದೃಷ್ಟದ ದಿನಾಂಕ 9. 8 27 ಆಗಿರುತ್ತದೆ. ಮಿತ್ರ ರಾಶಿಯು ಕಟಕ ಮತ್ತು ಮೀನಾ ಆಗಿರುತ್ತದೆ. ಶತ್ರು ರಾಶಿಯು ಮೇಷ, ಸಿಂಹ ,ಧನಸ್ಸು , ರಾಶಿ ಆಗಿರುತ್ತದೆ. ನಕ್ಷತ್ರಗಳು ವಿಶಾಖ ನಕ್ಷತ್ರದ ಕೊನೆಯ ನಾಲ್ಕನೇ ಚರಣ ಅನುರಾಧ ನಕ್ಷತ್ರದ ನಾಲ್ಕು ಚರಣಗಳು ಜೇಷ್ಠ ನಕ್ಷತ್ರದ ನಾಲ್ಕು ಚರಣಗಳು ವೃಶ್ಚಿಕ ರಾಶಿಗೆ ಸೇರಿರುತ್ತದೆ.
ಜೂನ್ ತಿಂಗಳಲ್ಲಿ ಸಾಕಷ್ಟು ಒಳ್ಳೆಯ ಫಲಗಳು ಸಿಗಲಿದೆ. ಆದರೆ ಅದರ ಜೊತೆಗೆ ನಿಮಗೆ ಸಾಕಷ್ಟು ಸವಾಲುಗಳು ಸಹ ಬರಬಹುದು. ಮನೆಯನ್ನು ಖರೀದಿಸಬೇಕಾದರೆ ಅಥವಾ ಯಾವುದೇ ಕೆಲಸವನ್ನು ಮಾಡಬೇಕಾದರೂ ಸಹ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹಿಂದೆ ಮುಂದೆ ಆಗಬಹುದು ಬರುವ ಹಣವಾಗಿ ನಿಮಗೆ ಸಿಗಬಹುದು . ಹಣಕಾಸು ನಿಮ್ಮ ಹತ್ತಿರ ಇದ್ದರೂ ಸಹ ನಿಮ್ಮ ಸಮಯಕ್ಕೆ ಅದು ಸರಿಯಾಗಿ ಸದುಪಯೋಗವಾಗುವುದಿಲ್ಲ ಎಂಬ ಬೇಸರ ನಿಮಗೆ ಕಾಡುತ್ತದೆ. ಹಿರಿಯರ ಆರೋಗ್ಯದ ವಿಚಾರದಲ್ಲಿ ಮತ್ತು ನಿಮ್ಮ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ವ್ಯಾಪಾರ ಮತ್ತು ಉದ್ಯೋಗದಲ್ಲಿ ಒಳ್ಳೆಯ ಪ್ರಯೋಜನಗಳು ಲಾಭಗಳು ನಿಮಗೆ ದೊರೆಯುತ್ತದೆ. ಯಾವುದೇ ವ್ಯಾಪಾರ ವ್ಯವಹಾರದಲ್ಲಿಯೂ ಸಹ ಗೊಂದಲಗಳು ಕಂಡು ಬರುತ್ತದೆ . ಆದರೆ ಅದರ ಫಲಿತಾಂಶವೂ ಕೊನೆಯಲ್ಲಿ ಒಳ್ಳೆಯ ರೀತಿಯಲ್ಲಿ ಇರುತ್ತದೆ. ಒಳ್ಳೆಯ ರೀತಿಯಲ್ಲಿ ಯೋಜನೆಗಳನ್ನು ಹಾಕಿಕೊಂಡು ಕೆಲಸಕ್ಕೆ ಕೈ ಹಾಕಿದರೆ ಅದನ್ನು ಮುಗಿಸದೆ ಬಿಡುವಂತಹ ವ್ಯಕ್ತಿತ್ವದವರು ನೀವಲ್ಲ. ಆದ್ದರಿಂದ ಪ್ರಯತ್ನ ನಿರಂತರವಾಗಿರಲಿ. ದೊಡ್ಡ ಮಟ್ಟದಲ್ಲಿ ಉದ್ಯೋಗ ಮತ್ತು ವ್ಯಾಪಾರ ಮಾಡಲು ಬಂಡವಾಳ ಹೂಡುತ್ತಿದ್ದರೆ ನಿಮ್ಮ ಸ್ಥಿತಿಗತಿಗಳನ್ನು ನೋಡಿಕೊಂಡು ನೀವು ಮುಂದುವರಿಯಬೇಕಾಗುತ್ತದೆ.
ನೀವು ಮಾಡುವ ಖರ್ಚನ್ನು ಹಿಡಿತದಲ್ಲಿಟ್ಟುಕೊಳ್ಳಿ. ಬೆಲೆಬಾಳುವ ವಸ್ತುಗಳನ್ನು ತರಬೇಕಾದರೆ ಬೇರೆಯವರನ್ನು ನಂಬಿ ಕೆಲಸವನ್ನು ಮಾಡಲು ಹೋಗಬೇಡಿ. ಮೋಸವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾಹನ ಚಾಲನೆ ಮಾಡಬೇಕಾದರೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮಾನಸಿಕ ಗೊಂದಲಗಳಿಗೆ ಒಳಗಾಗುತ್ತೀರಾ. ಅಂದುಕೊಂಡಂತಹ ಕೆಲಸಗಳು ಸರಿಯಾದ ಸಮಯಕ್ಕೆ ಆಗುತ್ತಿಲ್ಲ ಎಂಬ ಗೊಂದಲವಿರುತ್ತದೆ. ಚಿಂತೆ ಮಾಡಲು ಹೋಗಬೇಡಿ ಸಮಸ್ಯೆಗಳಿಗೆ ಬೇಗ ಪರಿಹಾರ ಸಿಗುತ್ತದೆ .
“ಧೈರ್ಯಂ ಸರ್ವರ್ತ ಸಾಧನಂ ” ಎಂಬ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ವ್ಯಾಪಾರಿಗಳಿಗೆ ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ಸ್ಪರ್ಧೆಗೆ ತಕ್ಕಂತಹ ಯೋಜನೆಗಳನ್ನು ಹಾಕಿಕೊಂಡು ನೀವು ವ್ಯಾಪಾರವನ್ನು ಮಾಡಬೇಕಾಗುತ್ತದೆ. ನಿರಂತರ ಪ್ರಯತ್ನವಿದ್ದರೆ ನಿಮಗೆ ಯಶಸ್ಸು ಲಭಿಸುತ್ತದೆ. ಪ್ರೇಮಿಗಳಲ್ಲಿ ವಾಗ್ವಾದಗಳು ಬೆಳೆಯುತ್ತದೆ. ದಾಂಪತ್ಯ ವಿಚಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಸಮಸ್ಯೆಗಳು ಶುರುವಾದಾಗಲೇ ಅದನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ದಾರಿ ಇರಲಿ. ಅದನ್ನು ದೀರ್ಘಾವಧಿಯ ಸಮಯಕ್ಕೆ ತೆಗೆದುಕೊಂಡು ಹೋಗಬೇಡಿ.
ಇಂದಿನ ವೈರಾಗ್ಯಗಳು ,ಹಳೆಯ ನೆನಪುಗಳು ಹಳೆಯ ಯೋಜನೆಗಳು ಜಗಳಗಳು ಅದನ್ನು ಇವತ್ತಿಗೆ ತೆಗೆದುಕೊಂಡು ಜಗಳ ಮಾಡಿಕೊಳ್ಳಲು ಹೋದರೆ ಅದು ತುಂಬಾ ತಪ್ಪಾಗುತ್ತದೆ . ಈ ರೀತಿಯ ಕೆಲಸವನ್ನು ಮಾಡಬೇಡಿ. ಹಳೆಯ ಕಹಿ ನೆನಪನ್ನು ತೊಳೆದು ಹಾಕಿ ಹೊಸ ಜೀವನಕ್ಕೆ ಅನುವು ಮಾಡಿಕೊಳ್ಳಿ. ಹೆಚ್ಚು ಒಲವು ಉಂಟಾಗುತ್ತದೆ. ದಾನ ಧರ್ಮಗಳನ್ನು ಮಾಡುವುದು. ಸಾರ್ವಜನಿಕ ವಲಯದಲ್ಲಿ ತೊಡಗಿಕೊಳ್ಳುವುದು. ವೃಶ್ಚಿಕ ರಾಶಿಯವರು ಬೇರೆಯವರು ಕಷ್ಟ ಎಂದರೆ
ತಮಗೆ ಇಲ್ಲದಿದ್ದರೂ ಸಹ ಬೇರೆಯವರಿಗೆ ಸಹಾಯ ಮಾಡುವ ಮನಸ್ಸನ್ನು ಉಳ್ಳವರಾಗಿರುತ್ತಾರೆ. ದೇವರ ನಾಮ ಸ್ಮರಣೆ ಹೆಚ್ಚಿಗೆ ಆಗುವುದು ವೇದ ಉಪನಿಷತ್ತುಗಳನ್ನು ಓದುವುದು ಈ ರೀತಿಯ ಬೆಳವಣಿಗೆಗಳು ಕಂಡುಬರುತ್ತದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿರುವವರಿಗೆ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲಸದ ಒತ್ತಡ ಬರಬಹುದು. ಒಳ್ಳೆಯ ಸ್ಥಾನಮಾನಗಳು ಸಿಗುವ ಸನ್ನಿವೇಶವಿದೆ . ಆಸ್ತಿಯ ವಿಚಾರಕ್ಕಾಗಿ ಸಹೋದರರೊಂದಿಗೆ ಕೆಲವು ಸಣ್ಣ ಪುಟ್ಟ ವ್ಯಾಜ್ಯಗಳು ಕೋರ್ಟ್ ,
ಕಾನೂನು ತೊಡಕುಗಳು ಕೆಲವೊಂದು ಜನರಿಗೆ ಕಂಡು ಬರುತ್ತದೆ. ಮತ್ತು ಹಣವನ್ನು ಖರ್ಚು ಮಾಡುವಂತಹ ವಿಚಾರದಲ್ಲಿ ಸ್ವಲ್ಪ ಅಂಕುಶವನ್ನು ಹಾಕಿಕೊಳ್ಳಿ. ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಹಿತ ಶತ್ರುಗಳಿಂದ ಮೋಸವಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಒಳಗಿನ ಗುಟ್ಟನ್ನು ಯಾರ ಜೊತೆಯೂ ಹಂಚಿಕೊಳ್ಳಬೇಡಿ. ಆದರೆ ವೃಶ್ಚಿಕ ರಾಶಿಯವರು ಸ್ವಭಾವತ ಮನಸ್ಸಿನಲ್ಲಿರುವುದನ್ನು ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ. ಅನಾವಶ್ಯಕವಾದಂತಹ ವಸ್ತುಗಳನ್ನು ಖರೀದಿ ಮಾಡಿ ದುಡ್ಡನ್ನು ಖರ್ಚು ಮಾಡಬೇಡಿ. ರಾಜಕೀಯ ವ್ಯಕ್ತಿಗಳಿಗೆ ಒಳ್ಳೆಯ ಅವಕಾಶವಿರುತ್ತದೆ.
ಆದರೆ ಸ್ಪರ್ಧೆಯು ತುಂಬಾ ಹೆಚ್ಚಿಗೆ ಇರುತ್ತದೆ. ಒಟ್ಟಾರೆಯಾಗಿ ವೃಶ್ಚಿಕ ರಾಶಿಯವರಿಗೆ ಜೂನ್ ತಿಂಗಳಲ್ಲಿ ಒಳ್ಳೆಯ ಫಲವಿರುತ್ತದೆ. ಆದರೆ ಎಚ್ಚರಿಕೆಯನ್ನು ಪಾಲಿಸಿದರೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಫಲಗಳನ್ನು ನೀವು ಪಡೆಯುತ್ತೀರಾ. ಜೂನ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರು ಅನ್ನದಾನ ಮತ್ತು ವಸ್ತ್ರದಾನವನ್ನು ಬ್ರಾಹ್ಮಣರಿಗೆ ಮಾಡಬೇಕಾಗುತ್ತದೆ. ಪಶು ಪಕ್ಷಿಗಳಿಗೆ ಆಹಾರವನ್ನು ನೀಡುವುದು. ಮತ್ತು ಶ್ರೀ ಗುರು ರಾಯರು ರಾಘವೇಂದ್ರ ಸ್ವಾಮಿಯನ್ನು ಆರಾಧನೆಯನ್ನು ಮಾಡಿಕೊಳ್ಳಿ. ಇದರಿಂದ ಬಹಳಷ್ಟು ಒಳ್ಳೆಯ ಫಲಿತಾಂಶಗಳು ನಿಮಗೆ ಸಿಗುತ್ತದೆ.