ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಯಲ್ಲಿ ನಡೆಯುವಂತಹ ಚಿಕ್ಕ ಚಿಕ್ಕ ಸನ್ನಿವೇಶಗಳಲ್ಲೂ ಕೂಡ ಕೆಲವೊಂದು ಸಂಕೇತಗಳು ಅಡಗಿಕೊಂಡಿರುತ್ತದೆ ಒಂದು ವೇಳೆ ಈ ಸಂಕೇತವನ್ನು ನೀವು ತಿಳಿದುಕೊಂಡರೆ ಭವಿಷ್ಯದಲ್ಲಿ ಬರುವಂತಹ ಸಮಯ ಯಾವ ರೀತಿಯಾಗಿ ಇರುತ್ತದೆ ಎಂಬುದನ್ನು ಸರಿಯಾಗಿ ತಿಳಿಯಬಹುದು ಮುಂದೆ ಆಗುವ ತೊಂದರೆಗಳನ್ನು ತಡೆಯಬಹುದು ಯಾವಾಗ ದರಿದ್ರತೆ ಅನ್ನೋದು ಹತ್ತಿರವಾಗುತ್ತದೆಯೋ ಮನೆಯಲ್ಲಿ ಚಿಕ್ಕ ಚಿಕ್ಕ ಸೂಚನೆಗಳು ಸಿಗುತ್ತವೆ. ಬಡತನವು ಹೆಚ್ಚಾಗಲು ಯಾವೆಲ್ಲ ಕಾರಣಗಳು ಎನ್ನುವುದನ್ನು ಈ ಒಂದು ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ,
ಒಂದು ವೇಳೆ ಮನೆಯಲ್ಲಿ ಯಾವುದಾದರೂ ಕಷ್ಟ ಮುಂಬರುವ ಕೆಟ್ಟ ಸಮಯ ಬರಲಿದೆ ಅಂದರೆ ಆ ಕೆಟ್ಟದರ ಪ್ರಭಾವ ಮನೆಯಲ್ಲಿರುವ ತುಳಸಿ ಗಿಡದ ಮೇಲೆ ಬೀರುತ್ತದೆ ತುಳಸಿ ಗಿಡವೂ ಪೂರ್ತಿಯಾಗಿ ಒಣಗಿ ಹೋಗುತ್ತದೆ ಇದು ಮನೆಗೆ ದರಿದ್ರತೆ ಮತ್ತು ಕಷ್ಟಗಳು ಬರುವಂತಹ ಸೂಚನೆ ಎಂದು ತಿಳಿಯಲಾಗುತ್ತದೆ. ತಿನ್ನುವಂತಹ ಆಹಾರ ಪದಾರ್ಥಗಳಲ್ಲಿ ಕಪ್ಪು ಇರುವೆಗಳು ಏನಾದರೂ ಹೆಚ್ಚಾದರೆ ಇವು ನಿಮ್ಮ ಮುಂಬರುವಂತಹ ಕೆಟ್ಟ ಸಮಯದ ಬಗ್ಗೆ ಸೂಚನೆಯನ್ನು ಕೊಡುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹಚ್ಚಿರುವಂತಹ ಮರ ಗಿಡಗಳ ಎಲೆಗಳು ಉದುರಿ ಹೋಗಲು ಶುರುವಾದರೆ ಅವುಗಳನ್ನು ತಕ್ಷಣವೇ ತೆಗೆದು ಹಾಕಬೇಕು.
ಮನೆಯಲ್ಲಿ ನೆಟ್ಟಿರುವಂತಹ ಸಸಿಗಳು ಯಾವತ್ತೂ ಕೂಡ ಹಚ್ಚಹಸಿರಿನಿಂದ ಕೂಡಿರಬೇಕು ಒಂದು ವೇಳೆ ಅವು ಒಣಗಲು ಪ್ರಾರಂಭವಾದರೆ ಇದರಿಂದ ನಿಮ್ಮ ಮನೆಯಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗುತ್ತವೆ, ಮರಗಿಡಗಳಿಗೆ ಪ್ರತಿದಿನವೂ ನೀರನ್ನು ಹಾಕಬೇಕು ಮನೆಯಲ್ಲಿರುವಂತಹ ಪೊರಕೆ ತಾಯಿ ಲಕ್ಷ್ಮೀದೇವಿಯ ಸೂಚಕವಾಗಿದೆ ಏಕೆಂದರೆ ಇದು ಮನೆಯಲ್ಲಿರುವ ದರಿದ್ರತೆಯನ್ನು ಹೊರ ಹಾಕುತ್ತದೆ, ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ಧನ ಸಂಪತ್ತು ವೃದ್ಧಿಯಾಗುತ್ತದೆ ಕೊರತೆಯ ಮೇಲೆ ಯಾವತ್ತೂ ಕೂಡ ಕಾಲನ್ನು ಇಡಬಾರದು ಹೀಗೆ ಮಾಡಿದರೆ ಲಕ್ಷ್ಮಿ ದೇವಿಗೆ ಅವಮಾನವನ್ನು ಮಾಡಿದಂತಾಗುತ್ತದೆ
ಮನೆಯಲ್ಲಿ ಆಚಾನಕ್ಕಾಗಿ ಚಿಕ್ಕ ಮಕ್ಕಳು ಕಸಗುಡಿಸಲು ಮುಂದಾದರೆ ಮನೆಗೆ ಯಾರಾದರೂ ಸಂಬಂಧಿಕರು ಬರುತ್ತಾರೆ ಎನ್ನುವ ಸೂಚನೆ. ಸೂರ್ಯಾಸ್ತದ ನಂತರ ಮನೆಯಲ್ಲಿ ಪರಕೆಯಿಂದ ಕಸವನ್ನು ಗುಡಿಸಬಾರದು ದರಿದ್ರವನ್ನು ಆಮಂತ್ರಿಸಿದಂತೆ ಮತ್ತು ತಿಂಡಿ ತಿನ್ನುವ ಮೊದಲು ಕಸ ಗುಡಿಸುವುದು ಶುಭ ಆಗಿರುತ್ತದೆ. ಪೊರಕೆಯನ್ನು ಉಲ್ಟಾ ನಿಲ್ಲಿಸುವುದು ಅಪಶಕುನ ಆಗಿರುತ್ತದೆ ಹಾಗಾಗಿ ನೀವು ಯಾವತ್ತಿಗೂ ಮಲಗಿಸಿ ಇಡಬೇಕು. ಪೊರಕೆಯನ್ನು ನಿಲ್ಲಿಸಿ ಇಟ್ಟರೆ ಮನೆಯಲ್ಲಿ ಮನೆಯಲ್ಲಿ ದರಿದ್ರತೆ ಬಡತನ ವಾಸವಾಗುತ್ತದೆ. ಸಾಯಂಕಾಲ ಆದ ನಂತರ ನೀವು ಕಸವನ್ನು ಗುಡಿಸಬಾರದು ಇದರಿಂದ ತಾಯಿ ಲಕ್ಷ್ಮಿ ದೇವಿ ಸಿಟ್ಟಾಗುತ್ತಾಳೆ,
ಮನೆಗೆ ಬಂದ ಅತಿಥಿಗಳು ಏನಾದರೂ ಆಚೆ ಹೋದಾಗ ಹೋದ ತಕ್ಷಣವೇ ಕಸವನ್ನು ಗುಡಿಸಬಾರದು ಸ್ವಲ್ಪ ಸಮಯದ ನಂತರ ನೀವು ಕಸವನ್ನು ಉಳಿಸಬಹುದು ಪೊರಕೆಯನ್ನು ಯಾವತ್ತಿಗೂ ನೀವು ಮುಚ್ಚಿಡಬೇಕು ಬೇರೆಯವರ ದೃಷ್ಟಿ ಇದರ ಮೇಲೆ ಬೀಳಬಾರದು. ಹಣವನ್ನು ಯಾವ ರೀತಿಯಾಗಿ ಮುಚ್ಚಿ ಇಡುತ್ತಾರೋ ಅದೇ ರೀತಿಯಾಗಿ ಪೊರಕೆಯನ್ನು ಮುಚ್ಚಿ ಇಡಬೇಕು. ವಾಸ್ತು ವಿಜ್ಞಾನದ ಅನುಸಾರವಾಗಿ ಯಾರು ತಮ್ಮ ಪೊರಕೆಯನ್ನು ಎಲ್ಲಿ ಬೇಕು ಅಲ್ಲಿ ಇಡುತ್ತಾರೋ ಅವರ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಇದರಿಂದ ಸಾಲದ ಸಮಸ್ಯೆಗಳು ಹೆಚ್ಚಾಗುತ್ತವೆ.
ಸ್ನೇಹಿತರೆ ಹಸು ಅಥವಾ ಇನ್ಯಾವುದೇ ಪ್ರಾಣಿಯಾಗಲಿ ಇವುಗಳನ್ನು ಪೊರಕೆಯಿಂದ ಹೊಡೆಯಬಾರದು ಇದರಿಂದ ತಾಯಿ ಲಕ್ಷ್ಮಿ ದೇವಿ ನಿಮ್ಮ ಮೇಲೆ ಸಿಟ್ಟಾಗಿ ಮನೆ ಬಿಟ್ಟು ಹೋಗುತ್ತಾಳೆ. ಯಾರ ಮನೆಯಲ್ಲಿ ಹಾಲು ಉಕ್ಕಿ ಕೆಳಗೆ ಬೀಳುತ್ತದೆಯೋ ಅಲ್ಲಿ ಅಚಾನಕ್ಕಾಗಿ ಹಣವು ಖರ್ಚಾಗಲು ಪ್ರಾರಂಭವಾಗುತ್ತದೆ ಮನೆಯ ಜನ ಅನಾರೋಗ್ಯದಿಂದ ಬಳಲುತ್ತಾರೆ, ಹಾಗಾಗಿ ನಿಮ್ಮ ಮನೆಯಲ್ಲಿ ಹಾಲು ಉಕ್ಕಿ ಹೋದಂತೆ ನೋಡಿಕೊಳ್ಳಬೇಕು. ಹಲವಾರು ಜನರ ನಂಬಿಕೆಯ ಪ್ರಕಾರ ಹಾಲು ಉಕ್ಕಿ ಬೀಳುವುದು ಶುಭ ಎಂದು ತಿಳಿದಿದ್ದಾರೆ ಆದರೆ ಪ್ರತಿದಿನ ಅದು ಉಕ್ಕಿದರೆ ಅಶುಭ ಎಂದು ಪರಿಗಣಿಸಲಾಗುತ್ತದೆ.
ನೀವು ಯಾವುದಾದರೂ ಕೆಲಸ ನಿಮಿತ್ತ ಮನೆಯಿಂದ ಆಚೆಗೆ ಹೋದಾಗ ಮರಳಿ ಮನೆಗೆ ಬಂದಾಗ ಮನೆಯ ದ್ವಾರದ ಬಳಿ ಹಲ್ಲಿಯನ್ನು ನೋಡಿದಾಗ ಅಂದರೆ ನಿಮ್ಮ ದೌರ್ಭಾಗ್ಯದ ಸಮಯ ಪ್ರಾರಂಭವಾಗುತ್ತದೆ ಇಂತಹ ಸ್ಥಿತಿಯಲ್ಲಿ ಮೊದಲೇ ಎಚ್ಚೆತ್ತುಕೊಳ್ಳಬೇಕು. ಕೆಟ್ಟ ಸಮಯದಲ್ಲಿ ಧೈರ್ಯದಿಂದ ಮುನ್ನುಗ್ಗುವುದನ್ನು ಕಲಿಯಬೇಕು. ಕಾಲ ಯಾವತ್ತೂ ಒಂದೇ ರೀತಿಯಾಗಿ ಇರುವುದಿಲ್ಲ ಕೆಟ್ಟ ಸಮಯವೂ ಕೂಡ ಬದಲಾಗಬಹುದು ಆದರೆ ನೀವು ಧೈರ್ಯದಿಂದ ಕೆಲಸ ಕಾರ್ಯಗಳನ್ನು ಮಾಡಬೇಕು, ಸ್ನೇಹಿತರೆ ಮನೆಯಲ್ಲಿ ಹಲ್ಲಿ ಕಾಣುವುದು ಶುಭ ಸಂಕೇತ ಆಗಿರುತ್ತದೆ ಒಂದು ವೇಳೆ
ನೀವು ಹೊಸ ಮನೆಯನ್ನು ಖರೀದಿ ಮಾಡಿದರೆ ಅದರ ಒಳಗಡೆ ಹಲ್ಲಿ ಸತ್ತಿರುವುದೇನಾದರೂ ಕಂಡು ಬಂದರೆ ಮನೆ ಒಳಗಡೆ ಪ್ರವೇಶ ಮಾಡುವ ಮುನ್ನ ಪೂಜೆ ಹವನಗಳನ್ನು ಮಾಡಲೇಬೇಕು ಒಂದು ವೇಳೆ ನೀವು ಈ ರೀತಿ ಮಾಡಲೇ ಇಲ್ಲ ಅಂದರೆ ಆ ಮನೆಯಲ್ಲಿರುವ ವ್ಯಕ್ತಿಯ ಉನ್ನತಿ ಆಗುವುದಿಲ್ಲ. ಕೆಟ್ಟ ಸಮಯವೂ ಆ ವ್ಯಕ್ತಿಯನ್ನು ಯಾವಾಗಲೂ ಆವರಿಸುತ್ತದೆ, ಒಂದು ವೇಳೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಶರೀರದ ಯಾವ ಅಂಗದ ಮೇಲಾದರೂ ಹಲ್ಲಿ ಬಿದ್ದಲ್ಲಿ ಇದು ಕೂಡ ಮುಂಬರುವ ಸಮಯದ ಬಗ್ಗೆ ಸೂಚನೆಯನ್ನು ಕೊಡುತ್ತದೆ
ಒಂದು ವೇಳೆ ಹಲ್ಲಿಯೂ ನಿಮ್ಮ ಹಣೆಯ ಮೇಲೆ ಬಿದ್ದರೆ ಇದು ಸಂತೋಷದ ಸುದ್ದಿಯನ್ನು ನಿಮಗೆ ತರುತ್ತದೆ ಇದರಿಂದ ಧನ ಲಾಭ ಕೂಡ ನಿಮಗೆ ಆಗಬಹುದು ಅದೇ ಹಲ್ಲಿ ನಿಮ್ಮ ತಲೆಯ ಮೇಲೆ ಅಥವಾ ತಲೆ ಕೂದಲಿನ ಮೇಲೆ ಬಿದ್ದರೆ ನೀವು ಎಚ್ಚರ ವಹಿಸಬೇಕು . ಈ ಮಾತಿನ ಅರ್ಥ ಜೀವನದಲ್ಲಿ ಸಂಕಟಗಳು ಬರಬಹುದು ಇದೇ ರೀತಿ ಕಣ್ಣ ರೆಪ್ಪೆಗಳು ಹೊಡೆದುಕೊಳ್ಳುವುದು ಅದು ಕೂಡ ಮುಂಬರುವ ಸಮಯದ ಸೂಚಕಗಳನ್ನು ಕೊಡುತ್ತದೆ ಮಹಿಳೆಯರಲ್ಲಿ ಎಡಕಣ್ಣು ಹೊಡೆದರೆ ಒಳ್ಳೆಯ ಸಮಯ ಬಂದಿದೆ ಎಂದು ಅರ್ಥ ಮಹಿಳೆಯರ ಬಲಗಣ್ಣು ಹೊಡೆದುಕೊಂಡರೆ ಅಶುಭ ಎಂದರ್ಥ. ಒಂದು ವೇಳೆ ಪುರುಷರ ಎಡಗಣ್ಣು ಹೊಡೆದುಕೊಂಡರೆ ಕಷ್ಟದ ಸಮಯ ಹತ್ತಿರದಲ್ಲಿದೆ ಎಂದು ಅರ್ಥ ಒಂದು ವೇಳೆ ಪುರುಷರಲ್ಲಿ ಬಲಗಣ್ಣು ಹೊಡೆದುಕೊಂಡರೆ ಶುಭ ಸುದ್ದಿಯನ್ನು ಇವರು ಕೇಳುತ್ತಾರೆ.
ಇದೇ ರೀತಿಯಾಗಿ ಕಾಗೆಯ ಮೂಲಕವೂ ಕೂಡ ಮುಂಬರುವ ಸಮಯದ ಸೂಚನೆ ನಿಮಗೆ ತಿಳಿಯುತ್ತದೆ ಒಂದು ವೇಳೆ ಕಾಗೆ ಏನಾದರೂ ನಿಮ್ಮ ತಲೆ ಮೇಲೆ ಬಂದು ಕುಳಿತರೆ ಯಾವುದಾದರೂ ಕಷ್ಟ ಬರಲಿದೆ ಎಂದು ಅರ್ಥ, ಒಂದು ವೇಳೆ ಮನೆಯ ಮೇಲೆ ಕಾಗೆ ಬಂದು ಕೂಗಲು ಪ್ರಾರಂಭ ಮಾಡಿದರೆ ಇದು ಆ ಮನೆಯ ಮಾಲೀಕನ ಮೇಲೆ ಬರುವಂತಹ ಒಂದು ದೊಡ್ಡ ಸಂಕಟದ ಸೂಚಕವಾಗಿದೆ, ಸ್ನೇಹಿತರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಗಾಜಿನ ಕನ್ನಡಿ ಏನಾದರೂ ಬಿದ್ದು ಒಡೆದು ಹೋದಲ್ಲಿ ಅವು ಅಶುಭವನ್ನು ಸೂಚಿಸುತ್ತವೆ. ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು