ನಿಮ್ಮ ಹಸ್ತ ರೇಖೆಯ ಮೂಲಕ ನಿಮ್ಮ ಇಷ್ಟ ದೇವರು ಯಾರು ಅಂತ ತಿಳಿದುಕೊಳ್ಳಿ

0

ಹಸ್ತರೇಖೆಯ ಮೂಲಕ ನಿಮ್ಮ ಇಷ್ಟದೇವರು ಯಾರು ಎಂದು ತಿಳಿಯಿರಿ. ಇವರ ಪೂಜೆಯಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗುತ್ತದೆ. ವ್ಯಕ್ತಿಗಳು ತಮ್ಮ ಒಳಗೆ ಇರುವ ದೇವತೆಯನ್ನ ಮೊದಲು ಕಂಡು ಹಿಡಿಯಬೇಕು. ಸಾಮಾನ್ಯವಾಗಿ ನೀವು ನೋಡಿರಬಹುದು ಕೆಲವರು ಶಿವನ ಭಕ್ತನಾಗಿರುತ್ತಾನೆ ಆತನಿಗ ಲಾಭವು ಸಿಗುತ್ತಿರುತ್ತದೆ ಮತ್ತು ಕೆಲವರು ರಾಮನ ಭಕ್ತನಾಗಿರುತ್ತಾರೆ ಆಂಜನೇಯಸ್ವಾಮಿಯ ಅಪಾರ ಕೃಪೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ಒಬ್ಬೊಬ್ಬರು ಒಂದೊಂದು ದೇವರ ಕೃಪೆಯನ್ನು ಪಡೆದುಕೊಂಡಿರುತ್ತಾರೆ. ಕೆಲವರು ಅಲೆದಾಡುತ್ತಿರುತ್ತಾರೆ.

ಯೋಗ್ಯರಾದ ಹಸ್ತಶಾಸ್ತ್ರಜ್ಞರ ಬಳಿ ಹೋದರೇ ಅವರಿಗೆ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಅಂಗೈಯಲ್ಲಿರುವ ರೇಖೆಗಳು ಯಾವ ದೇವರನ್ನು ಪೂಜೆ ಮಾಡಿದರೆ ಏನು ಲಾಭ ಸಿಗುತ್ತದೆಂದು ತೋರಿಸಿಕೊಡುತ್ತದೆ. ಹಸ್ತರೇಖೆಯ ಮೂಲಕ ಯಾವ ರೀತಿ ನಿಮ್ಮ ಇಷ್ಟದೇವರನ್ನು ತಿಳಿದುಕೊಳ್ಳಬಹುದೆಂದು ತಿಳಿಸಿಕೊಡುತ್ತೇವೆ.
ಮುಖ್ಯವಾದ ವಿಷಯ ಹೆಣ್ಣು ಮಕ್ಕಳಾಗಿದ್ದರೇ ಎಡಗೈಯನ್ನು ನೋಡಿಕೊಳ್ಳಿ ಗಂಡು ಮಕ್ಕಳಾಗಿದ್ದರೇ ಬಲಗೈಯನ್ನು ನೋಡಿಕೊಳ್ಳಿ. ಶನಿ ಬೆರಳು ಎಂದು ಕರೆಯುವ ಮಧ್ಯದ ಬೆರಳು ನೇರವಾಗಿದ್ದರೇ ಇಂತಹ ಜನರು ಶನಿದೇವರ ಸ್ತುತಿಯನ್ನು ಮಾಡಬೇಕು.

ಪ್ರತಿದಿನ ಶನಿದೇವರ ಮಂತ್ರವನ್ನು 108 ಬಾರಿ ಜಪವನ್ನು ಮಾಡಿದರೇ ಮನುಷ್ಯರಿಗೆ ಜೀವನದಲ್ಲಿ ಸುಖ ಶಾಂತಿ ಸಂಮೃದ್ಧಿ ಸಿಗುತ್ತದೆ. ಹೃದಯ ರೇಖೆ ಮುರಿದು ಹೋಗಿದ್ದರೇ ಅಥವಾ ಹೃದಯ ರೇಖೆಗೆ ಬೇರೆ ರೇಖೆಗಳು ಸ್ಪರ್ಶ ಮಾಡುತ್ತಿದ್ದರೆ ಜೊತೆಗೆ ಮೆದುಳಿನ ರೇಖೆಯ ಮೇಲೆ ಇವು ಹಾದುಹೋಗುತ್ತಿದ್ದರೇ ಇಂತಹ ಜನರು ತಾಯಿ ದುರ್ಗಾಮಾತೆಯ ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಏರುಪೇರುಗಳು ಮತ್ತು ಚಿಂತೆಗಳೆಲ್ಲಾ ದೂರವಾಗುತ್ತವೆ.

ನಿಮ್ಮ ಅಂಗೈಯಲ್ಲಿರುವ ಹೃದಯ ರೇಖೆ ತ್ರಿಶೂಲದ ಆಕಾರದಲ್ಲಿ ಕಾಣುತ್ತಿದ್ದರೇ ಮಹಾದೇವನ ಪೂಜೆಯನ್ನು ಮಾಡಬೇಕು. ಇದು ವಿಶೇಷವಾದ ಫಲಗಳು ಸಿಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಬರುವ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಪ್ರತಿದಿನ ಓಂ ನಮಃ ಶಿವಾಯ ಎಂದು ಜಪ ಮಾಡಿರಿ. ಹೃದಯ ರೇಖೆಯ ಅಂತ್ಯದಲ್ಲಿ ತೋರುಬೆರಳಿನತ್ತ ಒಂದು ರೇಖೆ ಹೋಗುತ್ತಿದ್ದರೇ ಆಂಜನೇಯಸ್ವಾಮಿಯ ಪೂಜೆಯನ್ನು ಮಾಡಬೇಕು. ಇದರಿಂದ ಜೀವನದಲ್ಲಿ ಬರುವ ಸಂಕಟಗಳು ದೂರವಾಗುತ್ತವೆ.

ಆಂಜನೇಯಸ್ವಾಮಿಯ ಹನುಮಾನ್ ಚಾಲೀಸಾವನ್ನು ಓದಿರಿ. ಇದರಿಂದ ಸುಖ ಶಾಂತಿ ಸಿಗುತ್ತದೆ. ನಿಮ್ಮ ಅಂಗೈಯಲ್ಲಿರುವ ಭಾಗ್ಯರೇಖೆ ಮುರಿದು ಹೋಗಿದ್ದರೇ ಅಥವಾ ಯಾವುದಾದರೂ ದೋಷಗಳು ಕಂಡುಬರುತ್ತಿದ್ದರೇ ಲಕ್ಷ್ಮಿದೇವಿಯ ಪೂಜೆಯನ್ನು ಮಾಡಬೇಕು. ಭಾಗ್ಯ ರೇಖೆ ಮುರಿದು ಹೋಗಿದ್ದರೇ ಆರ್ಥಿಕ ಸಮಸ್ಯೆಗಳನ್ನು ಎದ್ದು ತೋರಿಸಿಕೊಡುತ್ತವೆ. ಶ್ರೀ ಮಂತ್ರವನ್ನು ಜಪ ಮಾಡಿದರೇ ಒಳಿತಾಗುತ್ತದೆ. ಮನೆಯಲ್ಲಿ ಧನಸಂಪತ್ತಿನ ವಾಸವಾಗುತ್ತದೆ. ಯಾವ ವ್ಯಕ್ತಿಯ ಕೈಯಲ್ಲಿ ಭಾಗ್ಯ ರೇಖೆ ಉದ್ದವಾಗಿ ನೇರವಾಗಿದ್ದು ಭಾಗ್ಯ ರೇಖೆ ವೃತ್ತಾಕಾರದಲ್ಲಿದ್ದರೇ

ಇದರ ಜೊತೆಗೆ ಹೃದಯ ರೇಖೆ ನೋಡಲು ಸುಂದರವಾಗಿದ್ದರೇ ಇಂತಹ ವ್ಯಕ್ತಿಗಳು ಶ್ರೀರಾಮನ ಆರಾಧನೆಯನ್ನು ಮಾಡಬೇಕು. ರಾಮನಾಮ ಸ್ಮರಣೆಯಿಂದ ಜೀವನದಲ್ಲಿನ ದೋಷಗಳು ದೂರವಾಗುತ್ತದೆ. ನಿಮ್ಮ ಅಂಗೈಯಲ್ಲಿರುವ ಸೂರ್ಯ ರೇಖೆ ದುರ್ಬಲವಾಗಿದ್ದರೇ ಮುರಿದು ಹೋಗಿದ್ದರೇ ಒಂದು ವೇಳೆ ವ್ಯಕ್ತಿಗಳು ಶಿಕ್ಷಣದಲ್ಲಿ ಕೊರತೆಯನ್ನು ಕಾಣುತ್ತಿದ್ದರೇ ಇಂತಹ ಜನರಿಗೆ ಪೂರ್ಣವಾದ ಯಶಸ್ಸು ಸಿಗಬೇಕೆಂದರೆ ಜೊತೆಗೆ ಮೈಂಡ್ ಲೈನ್ ಮುರಿದು ಹೋಗಿದ್ದರೇ ಇಂತಹ ಜನರು ಭಗವಂತನಾದ ಸೂರ್ಯ ದೇವರಿಗೆ ಜಲವನ್ನು ಅರ್ಪಿಸಬೇಕು. ಜೊತೆಗೆ ಸರಸ್ವತಿ ದೇವಿಯ ಪೂಜೆಯನ್ನು ಮಾಡಬೇಕು.

ಓಂ ಸೂರ್ಯಾದೇವಾಯ ನಮಃ ಎಂದು 108 ಬಾರಿ ಜಪವನ್ನು ಮಾಡಬೇಕು. ಜೀವನದ ರೇಖೆಯ ಮೇಲೆ ಯಾವುದಾದರೂ ದೊಡ್ಡ ರೇಖೆ ಹಾದು ಹೋಗುತ್ತಿದ್ದರೇ ಅಂತಹ ವ್ಯಕ್ತಿಯ ಜೀವನದಲ್ಲಿ ಭಿನ್ನ ಭಿನ್ನವಾದ ಸಮಸ್ಯೆಗಳು ಇರುತ್ತವೆ. ಕುಂಡಲಿಯಲ್ಲಿ ಎಲ್ಲ ಗ್ರಹಗಳು ಸಾಮಾನ್ಯವಾದ ಸ್ಥಿತಿಯಲ್ಲಿದ್ದರೇ, ಅಂಗೈಯಲ್ಲಿರುವ ರೇಖೆಗಳು ಒಡೆದು ಹೋಗಿದ್ದರೇ ಇಂತಹ ಜನರು ಜೀವನದಲ್ಲಿ ಅಪಘಾತಗಳನ್ನು ಎದುರಿಸುತ್ತಾರೆ. ಇಂತಹ ಜನರು ಪ್ರತಿದಿನ ಮಹಾಮೃತ್ಯುಂಜಯ ಮಹಾಮಂತ್ರವನ್ನು ಜಪಮಾಡಬೇಕು.

Leave A Reply

Your email address will not be published.