ನಾವು ಈ ಲೇಖನದಲ್ಲಿ ಐದು ಅರಿಶಿಣದ ಕೊಂಬು ಮತ್ತು ಎರಡು ಏಲಕ್ಕಿಯಿಂದ ಯಾರಿಗೂ ಕಾಣದಂತೆ ಹೀಗೆ ಮಾಡಿದರೆ ಹೇಗೆ ಧನಾಕರ್ಷಣೆ ಆಗುತ್ತದೆ. ಎಂದು ತಿಳಿಯೋಣ . ಸ್ತ್ರೀಯರು ಯಾವಾಗಲೂ ಸುಮಂಗಲಿಯಾಗಿ ಇರಬೇಕೆಂದು ಆಸೆ ಪಡುತ್ತಾರೆ .ಪುರುಷರಿಗೆ ಭೋಗ ಭಾಗ್ಯ ಪ್ರಾಪ್ತಿಯಾಗಬೇಕು ಎಂದು ಕೋರಿ ಕೊಳ್ಳುತ್ತಾ ಇರುತ್ತಾರೆ . ಅವರು ಮಾಡುವ ಉದ್ಯೋಗದಲ್ಲಿ ವ್ಯಾಪಾರದಲ್ಲಿ ಹೆಚ್ಚಿನ ಅಭಿವೃದ್ಧಿ ಲಾಭ ಸಿಗಬೇಕೆಂದು ಪೂಜೆ ಮಾಡುತ್ತಾ ಇರುತ್ತಾರೆ . ಒಬ್ಬೊಬ್ಬರ ಆಸೆಗಳು ವಿಭಿನ್ನವಾಗಿರುತ್ತದೆ
ಆದರೆ ಪ್ರತಿಯೊಬ್ಬರಿಗೂ ಯಾವುದೇ ಒಂದು ಆಸೆ ಮಾತ್ರ ಇದ್ದೇ ಇರುತ್ತದೆ .ಈ ಎಲ್ಲಾ ಪ್ರಾಪ್ತಿ ಸಿಗಬೇಕೆಂದರೆ , ಮೊದಲಿಗೆ ಲಕ್ಷ್ಮಿ ದೇವರ ಅನುಗ್ರಹ ತಪ್ಪದೇ ಬೇಕಾಗುತ್ತದೆ . ಹಾಗೆಯೇ ಮೊದಲಿಗೆ ಯಾವ ಪೂಜೆ ಮಾಡಿದರು ಗಣಪತಿಯ ಅನುಗ್ರಹ ಬೇಕಾಗುತ್ತದೆ .
ಯಾವ ಮನೆಯಲ್ಲಿ ಲಕ್ಷ್ಮಿ ಗಣಪತಿಯ ಪೂಜೆ ಮಾಡುತ್ತಾರೋ , ಆ ಮನೆಯಲ್ಲಿ ಧನಕ್ಕೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ . ಆರ್ಥಿಕ ಸಮಸ್ಯೆ, ಕುಟುಂಬದ ಸಮಸ್ಯೆ ಇರುವವರು ಲಕ್ಷ್ಮಿ ಗಣಪತಿ ಪೂಜೆ ಈ ರೀತಿ ಮಾಡಿದರೆ ಸಮಸ್ಯೆಗಳೆಲ್ಲ ದೂರವಾಗುತ್ತದೆ ಎಂದು ಪಂಡಿತರು ಹೇಳಿದ್ದಾರೆ .
ಮಂಗಳವಾರದ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು , ಸ್ನಾನವನ್ನು ಆಚರಿಸಿ ಮನೆಯನ್ನು ಸ್ವಚ್ಛಗೊಳಿಸಿ ಕೊಳ್ಳಬೇಕು . ಮೊದಲಿಗೆ ಗಣೇಶ, ಲಕ್ಷ್ಮೀ ದೇವಿಯನ್ನು ಪೂಜಿಸಿದ ನಂತರ , 5 ಅರಿಶಿಣದ ಕೊಂಬು, ಐದು ಕರ್ಪೂರದ ಬಿಲ್ಲೆ , ಎರಡು ಏಲಕ್ಕಿ , ಎರಡು ಲವಂಗ , ಒಂದು ರೂಪಾಯಿ ನಾಣ್ಯ, ಎರಡು ಗೋಮತಿ ಚಕ್ರ , ಒಂದು ಕವಡೆಯನ್ನು ತೆಗೆದುಕೊಳ್ಳಬೇಕು .
ಅರಿಶಿನದ ಕೊಂಬಿಗೆ ಕುಂಕುಮವನ್ನು ಇಟ್ಟು ಈ ಎಲ್ಲ ವಸ್ತುಗಳನ್ನು ಲಕ್ಷ್ಮಿ ಗಣಪತಿಯ ಮುಂದಿಟ್ಟು ದೀಪ, ಧೂಪ , ನೈವೇದ್ಯವನ್ನು ಸಮರ್ಪಿಸಬೇಕು .
ನಂತರ ಒಂದು ತಾಮ್ರದ ಬಟ್ಟಲಿನಲ್ಲಿ ಒಂದು ರೂಪಾಯಿ ನಾಣ್ಯ, ಕರ್ಪೂರ, ಅರಿಶಿಣದ ಕೊಂಬು , ಏಲಕ್ಕಿ , ಲವಂಗ, ಗೋಮತಿ ಚಕ್ರ , ಕವಡೆಯನ್ನು ಹಾಕಿ ಮನಸ್ಸಿನ ಕೋರಿಕೆಗಳನ್ನು ಹೇಳಿಕೊಂಡು ನಂತರ ಕೆಂಪು ಬಣ್ಣದ ಬಟ್ಟೆಯಿಂದ ಕಟ್ಟಬೇಕು. ನಂತರ ಇದನ್ನು ಯಾರಿಗೂ ಕಾಣದ ಹಾಗೆ ಇಡಬೇಕು . ಅಥವಾ ನಗದು ಇಡುವ ಜಾಗದಲ್ಲಿ ಇಡಬಹುದು .
ಇದನ್ನು ಒಂದು ವರ್ಷ ಹಾಗೆಯೇ ಇಡಬೇಕು . ನಂತರ ಇದನ್ನು ಹರಿಯುವ ನೀರಿನಲ್ಲಿ ಬಿಡಬೇಕು . ಮತ್ತು ಇದೇ ಪ್ರಕ್ರಿಯೆಯನ್ನು ಕ್ರಮ ತಪ್ಪದೇ ಮಾಡುತ್ತಾ ಬರುವುದರಿಂದ, ಕ್ರಮವಾಗಿ ಧನ ವೃದ್ದಿ ಆಗುತ್ತಾ ಬರುತ್ತದೆ .
ಹಾಗೆಯೇ ಪ್ರತಿ ದಿನ ಪೂಜೆ ಮಾಡುವಾಗ ನೈವೇದ್ಯಕ್ಕಾಗಿ ಬೆಲ್ಲದ ತುಂಡನ್ನು ಸಮರ್ಪಿಸಬೇಕು . ಹೀಗೆ ಸಮರ್ಪಿಸುವುದರಿಂದ ಅಂದುಕೊಂಡ ಕೆಲಸಗಳು ದಿಗ್ವಿಜಯವಾಗಿ ಪೂರ್ತಿ ಆಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಪಂಡಿತರು ಹೇಳುತ್ತಾರೆ .