ನಾವು ಈ ಲೇಖನದಲ್ಲಿ ಬದುಕಲು 10 ನಿಯಮಗಳು ಯಾವುವು ಎಂದು ತಿಳಿಯೋಣ .ಬದುಕಲು ಇರಲಿ ಹತ್ತು ನಿತ್ಯ ನಿಯಮಗಳು . ಸಮಯ ಎಲ್ಲವನ್ನು ಸರಿಪಡಿಸುತ್ತದೆ. ಸಮಾಧಾನದಿಂದ ಇರಿ .
ನಿಮ್ಮ ಬಗ್ಗೆ ಬೇರೆಯವರು ಏನು ಯೋಚಿಸುತ್ತಾರೆ ಎನ್ನುವುದು ನಿಮ್ಮ ಕಾಯಕವಾಗದಿರಲಿ. ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳದಿರಿ . ಏಕೆಂದರೆ ಅವರು ನಡೆದು ಬಂದ ದಾರಿ ಬಗ್ಗೆ ನಿಮಗೆಷ್ಟು ಗೊತ್ತಿರಲು ಸಾಧ್ಯ….?
ಸಮಸ್ಯೆಗಳ ಬಗ್ಗೆ ಎಂದೂ ಯೋಚಿಸದಿರಿ . ಏಕೆಂದರೆ ಅದರ ಪರಿಹಾರಕ್ಕೆ ಯೋಚಿಸಲು ಇರುವ ಸಮಯವನ್ನು ಅದು ತಿಂದು ಹಾಕುತ್ತದೆ. ನಿಮ್ಮ ಸಂತೋಷವನ್ನು ನೀವೇ ಹುಡುಕಿಕೊಳ್ಳಬೇಕು. ಬೇರೆಯವರಿಂದ ಎಂದೂ ಅಪೇಕ್ಷಿಸಬಾರದು.
ಹಣದಿಂದ ಸಂತೋಷವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ದುಃಖವಾದಾಗ ಬೆಂಚ್ ಕಾರಲ್ಲಿ ಕೂತು ಆಳಬಹುದಷ್ಟೇ . ಸಹಾಯದ ಅವಶ್ಯಕತೆ ಇರುವವರಿಗೆ ಸಹಕರಿಸಿ , ಸಮಯ ಬಂದಾಗ ಸಹಾಯ ಮಾಡುತ್ತಾರೆ.
ಸೋಲಿನಲ್ಲೇ ಸಾಧನೆಯು ಆರಂಭವಾಗುವದು, ಸೋಲದಿರುವುದು ಹೇಗೆಂದು ಸೋಲಿನಿಂದಲೇ ಕಲಿಯಬೇಕು. ನೀವು ಮಾಡುವ ಕೆಲಸವನ್ನು ಆಟದಂತೆ ಆನಂದಿಸಿ, ಆದರೆ ಕೆಲಸದೊಂದಿಗೆ ಎಂದು ಆಟವಾಡದಿರಿ . ಮಾತು ಮಾವಿನ ಹಣ್ಣಿನಂತಿರಲಿ . ಮರದಿಂದ ಬೀಳುವ ಮೊದಲೇ ಎಚ್ಚರ ವಹಿಸಿ,
ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯ ಬಹುದು ಆದರೆ … ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ. ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು … !
ತುಳಿಯುವವರ ಮಧ್ಯೆ ಬೆಳೆದು ನಿಲ್ಲಬೇಕು. ಆವಾಗಲೇ ವ್ಯಕ್ತಿತ್ವಕ್ಕೆ ಬೆಲೆ ಸಿಗುವುದು . ಪ್ರಯತ್ನ ಎಂಬುದು ಒಂದು ಬೀಜದ ಹಾಗೆ, ಬಿತ್ತುತ್ತಲೇ ಇರಿ . ಒಂದಲ್ಲ ದಿನ ಮರವಾಗಿ ಫಲ ಕೊಟ್ಟೇ ಕೊಡುತ್ತದೆ.
ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ . ಏಕೆಂದರೆ , ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ. ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು . ಕತ್ತಲೆ ಇಲ್ಲದೆ ದೀಪದ ಮಹತ್ವ ತಿಳಿಯಲಾರದು . ದುಃಖದ ಅನುಭವ ಇಲ್ಲದೆ ಸುಖದ ಮಹತ್ವ ತಿಳಿಯಲಾಗದು .