ನಾವು ಈ ಲೇಖನದಲ್ಲಿ 2024ರಲ್ಲಿ ಅತ್ಯಂತ ಶುಭ ಫಲ ಪಡೆಯುವ ಐದು ಟಾಪ್ ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ವರ್ಷ ಭವಿಷ್ಯ ಎಂದು ತೆಗೆದುಕೊಂಡಾಗ ,ಮುಖ್ಯವಾಗಿ ದೀರ್ಘಾವಧಿಯವರೆಗೆ ಅಂದರೆ ಹೆಚ್ಚು ಕಾಲ ಒಂದೇ ರಾಶಿಯಲ್ಲಿ ಇರುವಂತಹ ಕೆಲವೇ ಕೆಲವು ಗ್ರಹಗಳ ಆಧಾರದ ಮೇಲೆ ಇಡೀ ವರ್ಷದ 12 ರಾಶಿಗಳ ಗೋಚರ ಫಲಗಳನ್ನು ಹೇಳಲಾಗುತ್ತದೆ .
ಈ ರೀತಿಯಾಗಿ ದೀರ್ಘಕಾಲದ ವರೆಗೆ ಒಂದೇ ರಾಶಿಯಲ್ಲಿ ಇರುವ ಗ್ರಹಗಳು ಯಾವ ಯಾವ ಗ್ರಹಗಳು ಅಂದರೆ , ಮೊದಲನೆಯದಾಗಿ ಶನಿ. ಒಂದು ರಾಶಿಯಲ್ಲಿ ಎರಡುವರೆ ವರ್ಷಗಳ ಕಾಲ ಸಂಚಾರವನ್ನು ಮಾಡುತ್ತದೆ. ರಾಹು ಮತ್ತು ಕೇತು ಒಂದು ರಾಶಿಯಲ್ಲಿ 18 ತಿಂಗಳುಗಳ ಕಾಲ ಅಂದರೆ ಒಂದುವರೆ ವರ್ಷ ಸಂಚಾರವನ್ನು ಮಾಡುತ್ತಾರೆ. ಹಾಗೆಯೇ ಗುರು ಒಂದೇ ರಾಶಿಯಲ್ಲಿ ಒಂದು ವರ್ಷ ಸಂಚಾರ ಆಗುತ್ತದೆ.
ಈ ನಿಟ್ಟಿನಲ್ಲಿ 2024ರಲ್ಲಿ ಯಾವ ಯಾವ ಗ್ರಹಗಳು ಯಾವ ಯಾವ ಮನೆಯಲ್ಲಿ ಇರುತ್ತಾರೆ , ಅನ್ನೋದನ್ನ ನಾವು ಮೊದಲು ತಿಳಿಯಬೇಕು . ನಂತರ ಯಾವ ಯಾವ ಗ್ರಹಗಳು ಯಾವ ಯಾವ ರಾಶಿಗೆ ಯಾವ ರೀತಿಯ ಫಲವನ್ನು ಕೊಡುತ್ತವೆ ಎಂದು ನೋಡೋಣ. ಜನವರಿ ತಿಂಗಳು ಎಂದರೆ ಕ್ಯಾಲೆಂಡರ್ ಬದಲಾಯಿಸುವ ಸಮಯ ಬಂದಿದೆ ಎಂದು ಹೇಳಲಾಗುತ್ತದೆ.
ಕ್ಯಾಲೆಂಡರ್ ಬದಲಾದ ಹಾಗೆ ನಮ್ಮ ಜೀವನದಲ್ಲಿ ಕೂಡ ಬದಲಾವಣೆಯಾಗುತ್ತದೆ ಎಂಬುದನ್ನು ನಾವು ಎದುರು ನೋಡುತ್ತೇವೆ. ಖಂಡಿತವಾಗಿಯೂ ಒಂದು ವರ್ಷದಲ್ಲಿ ಗ್ರಹಗಳು ಬೇರೆ ಮನೆಗೆ ಹೋಗುವುದರ ಮೂಲಕ ಒಂದೇ ಮನೆಯಲ್ಲಿ ಹೆಚ್ಚು ಕಾಲ ಇರುವುದರ ಮೂಲಕ ಒಂದೊಂದು ಪ್ರಭಾವವನ್ನು ಉಂಟು ಮಾಡುವುದರ ಮೂಲಕ ಅವರ ಬದುಕಿನಲ್ಲಿ ಅನೇಕ ಬದಲಾವಣೆಗಳು ಆಗುತ್ತದೆ.
ಈ ವರ್ಷದಲ್ಲಿ ಅಂದರೆ 2024 ರಲ್ಲಿ ಶನಿ ಕುಂಭ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ.ಜನವರಿಯಿಂದ ಡಿಸೆಂಬರ್ ವರೆಗೂ ಯಾವುದೇ ಬದಲಾವಣೆ ಆಗದೆ ಕುಂಭ ರಾಶಿಯಲ್ಲಿ ಇರುತ್ತಾನೆ. ಕುಂಭ ರಾಶಿಯಲ್ಲಿ ಕುಳಿತು ಅವನು ನೋಡುವ ರಾಶಿಗಳ ಮೇಲೆ ಅವನ ಪ್ರಭಾವ ಇರುತ್ತದೆ. ಹಾಗೆಯೇ ರಾಹು ಈ ವರ್ಷ ಪೂರ್ತಿ ಮೀನ ರಾಶಿಯಲ್ಲಿ ಇರುತ್ತಾನೆ. ಕೇತು ವರ್ಷಪೂರ್ತಿ ಕನ್ಯಾ ರಾಶಿಯಲ್ಲಿ ಇರುತ್ತಾನೆ.
ಇನ್ನು ಗುರು 2024 ಜನವರಿಯಿಂದ ಏಪ್ರಿಲ್ ವರೆಗೆ ಮೇಷ ರಾಶಿಯಲ್ಲಿ ಇದ್ದು ಮೇ 1ನೇ ತಾರೀಖು ವೃಷಭ ರಾಶಿಗೆ ಸಂಚಾರ ಮಾಡುತ್ತಾನೆ. ಮೇ ಒಂದನೇ ತಾರೀಖಿನಿಂದ ಡಿಸೆಂಬರ್ ವರೆಗೂ ವೃಷಭ ರಾಶಿಯಲ್ಲಿ ಗುರು ಸ್ಥಿತನಾಗಿರುತ್ತಾನೆ. ಹಾಗಾಗಿ ಗುರು ಈ ವರ್ಷದಲ್ಲಿ ಬದಲಾವಣೆಯಾಗುವ ಗ್ರಹ ಆಗಿರುತ್ತದೆ ಗುರು. ಯಾವ್ಯಾವ ಗ್ರಹಗಳು ಪ್ರಮುಖ ಫಲವನ್ನು 12 ರಾಶಿಗಳಿಗೆ ಕೊಡುತ್ತಾರೆ ಎಂಬುದನ್ನು ನಾವು ಈ ಲೇಖನದಲ್ಲಿ ನೋಡೋಣ. 2024ರಲ್ಲಿ ಗುರು ,
ರಾಹು, ಶನಿ ಮತ್ತು ಕೇತು ಯಾವ ರಾಶಿಯಲ್ಲಿ ಇರುತ್ತಾರೋ ಅದರ ಆಧಾರದ ಮೇಲೆ 12 ರಾಶಿಗಳ ಮೇಲೆ ತಮ್ಮ ಪ್ರಭಾವವನ್ನು ಉಂಟು ಮಾಡುತ್ತಾರೆ. ಅದರಲ್ಲಿ ತುಂಬಾ ಶುಭ ಫಲವನ್ನು ಪಡೆಯುವಂತಹ ಕೆಲವು ರಾಶಿಗಳು ಇದೆ. ಆ ರಾಶಿಗಳು ಯಾವುದು . ಆ ಐದು ರಾಶಿಗಳು 2024ರಲ್ಲಿ ಸಾಕಷ್ಟು ಶುಭ ಫಲವನ್ನು ಪಡೆಯುವಂತಹ ರಾಶಿಗಳು. ಮೊದಲನೆಯ ರಾಶಿ ಯಾವುದೆಂದರೆ ಮೇಷ ರಾಶಿ . ಮೇಷ ರಾಶಿ ಅವರಿಗೆ 2023ರಲ್ಲಿ ನಿಮ್ಮ ರಾಶಿಯಲ್ಲಿ ರಾಹು ಸ್ಥಿತನಾಗಿದ್ದ .
ಹಾಗೆ ಗುರು ಕೂಡ ಅರ್ಧ ವರ್ಷಗಳವರೆಗೆ ಸ್ಥಿತನಾಗಿದ್ದ. ಈ ಗುರು ಚಾಂಡಾಳ ಯೋಗದ ಜೊತೆಗೆ ಸಪ್ತಮದಲ್ಲಿ ಕೇತು ಸಹ ಇದ್ದಿದ್ದರಿಂದ ಮೇಷ ರಾಶಿಯವರಿಗೆ ಸಾಂಸಾರಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು 2023ರಲ್ಲಿ ಆಯಿತು . ಕೆಲವರಿಗೆ ಹಣಕಾಸಿನ ವಿಚಾರದಲ್ಲಿ ತೊಂದರೆಯಾಗಿರುತ್ತದೆ. ಗುರು ಅಂದರೆ ಧನ .ಯಾವಾಗ ಗುರುವಿಗೆ ಇತರ ಪಾಪಗ್ರಹಗಳ ಯುತಿ ಬರುತ್ತದೋ ಆಗ ಗುರು ತನ್ನ ಫಲವನ್ನು ಕಡಿಮೆ ಮಾಡುತ್ತಾನೆ. ಧನ ಅಭಿವೃದ್ಧಿಯನ್ನು ಕೊಡುತ್ತಾನೆ .
ಮತ್ತು ಅದೃಷ್ಟವನ್ನು ಕೊಡುತ್ತಾನೆ ಯಾಕೆಂದರೆ ಮೇಷ ರಾಶಿಯವರಿಗೆ ಗುರು ಭಾಗ್ಯ ಅಧಿಪತಿ. ಅದೃಷ್ಟವನ್ನು ಕೊಡುವ ಗುರುವಿನ ಜೊತೆ ರಾಹು ಕೂತುಕೊಂಡಾಗ ಅದೃಷ್ಟವನ್ನು ರಾಹು ಕಿತ್ತುಕೊಳ್ಳುತ್ತಾನೆ. ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದಿಲ್ಲ .ಹಣಕಾಸಿನ ವಿಚಾರದಲ್ಲಿ ತೊಂದರೆಯಾಗುತ್ತದೆ. ಕುಟುಂಬದಲ್ಲೂ ಸಹ ಸಾಕಷ್ಟು ಸಮಸ್ಯೆಗಳಾಗುತ್ತದೆ. ಹೀಗೆ ಅನೇಕ ಸಮಸ್ಯೆಗಳನ್ನು ಮೇಷ ರಾಶಿಯವರು 2023ರಲ್ಲಿ ಅನುಭವಿಸಿದ್ದರು. ಅಂದರೆ 2024ಕ್ಕೆ ರಾಹು ನಿಮ್ಮ ರಾಶಿಯಿಂದ 12 ನೇ ಮನೆಗೆ ಹೋಗುತ್ತಾನೆ.
ರಾಹು ವಿಂದ ಬಿಡುಗಡೆ ಸಿಗುತ್ತದೆ. ಒಂದು ಗ್ರಹ ಇರುವುದರ ಮೇಲೆ ಅವರ ಫಲ ನಿರ್ಧಾರ ಆಗುವುದಿಲ್ಲ .ನಮ್ಮ ರಾಶಿಯನ್ನು ಇತರ ಯಾವ ಯಾವ ಗ್ರಹಗಳು ನೋಡುತ್ತಾರೆ ಅನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಇನ್ನು ಮುಂದೆ 2024ರಲ್ಲಿ ಕೇತು ಕನ್ಯಾ ರಾಶಿಯಲ್ಲಿ ಇರುತ್ತಾನೆ. ಹಾಗಾಗಿ ಕೇತುವಿನ ದೃಷ್ಟಿ ಮೇಷ ರಾಶಿ ಮೇಲೆ ಇರುವುದಿಲ್ಲ. ಕೇತು ಅಂದರೆ ಬೇರೆ ಮಾಡುವುದು ಅಂದರೆ ಎಲ್ಲಾ ಸಂಬಂಧವನ್ನು ಕಡಿದು ಹಾಕುತ್ತಾನೆ.ಕೇತು ಸಪ್ತಮಕ್ಕೆ ಬಂದಾಗ ವೈವಾಹಿಕ ಜೀವನದಲ್ಲಿ ತೊಂದರೆಯನ್ನು ಉಂಟು ಮಾಡುತ್ತಾನೆ.
ಮೇಷ ರಾಶಿಯವರಿಗೆ ಇವೆಲ್ಲ ನಿವಾರಣೆ ಆಗುತ್ತದೆ. ಗುರು ಎಂದರೆ ನ್ಯಾಯಾಧೀಶ . ಗುರು ಎಂದರೆ ತಿಳುವಳಿಕೆ ಜ್ಞಾನ ಎಂದು ಹೇಳಬಹುದು. ಇರುವ ಸಂಶಯಗಳನ್ನು ರಾಹು ದೂರ ಮಾಡುತ್ತಾನೆ. ಮೇಷ ರಾಶಿಯಲ್ಲಿ ಗುರು ಇರುವುದರಿಂದ ಸಮಸ್ಯೆಗಳು ಬಗೆಹರಿಯುತ್ತದೆ . ನಂತರ ಗುರು ಮೇ 1ನೇ ತಾರೀಖಿನಂದು ವೃಷಭ ರಾಶಿಗೆ ಬರುತ್ತಾನೆ. ಎರಡನೇ ಮನೆಗೆ ಗುರು ಬರುವುದರಿಂದ ಹಣಕಾಸಿನ ಸ್ಥಿತಿ ತುಂಬಾ ಉತ್ತಮವಾಗುತ್ತದೆ. ಕುಟುಂಬದಲ್ಲಿ ಹೆಚ್ಚಿನ ನೆಮ್ಮದಿಯನ್ನು ಕಾಣುತ್ತೀರಿ.
ಮಾತಿನ ಮೂಲಕ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುತ್ತೀರಿ . ಜೊತೆಗೆ ವಿದ್ಯಾರ್ಥಿಗಳಿಗೂ ಸಹ ಶುಭ ಫಲವನ್ನು ಗುರು ನೀಡುತ್ತಾನೆ. ಪಂಚಮ ಮತ್ತು ಭಾಗ್ಯಸ್ಥಾನವನ್ನು ನೋಡುತ್ತಿರುವುದರಿಂದ ಮೇಷ ರಾಶಿಯವರಿಗೆ ಉನ್ನತ ಸ್ಥಾನಮಾನಗಳು ಸಿಗುತ್ತವೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶಗಳು ಸಹ ದೊರೆಯುತ್ತದೆ . ಯಾಕೆಂದರೆ 12ನೇ ಮನೆಯಲ್ಲಿ ರಾಹು ಇರುತ್ತಾನೆ. 12ನೇ ಮನೆಯನ್ನು ವಿದೇಶ ಸ್ಥಾನ ಎಂದು ಹೇಳುತ್ತೇವೆ.
ಯಾವಾಗ 12ನೇ ಮನೆಗೆ ರಾಹು ಹೋಗುತ್ತಾನೆ ಆ ಸಮಯದಲ್ಲಿ ದೇಶ ವಿದೇಶಗಳಿಗೆ ಸಂಚಾರ ಮಾಡುವಂತೆ ಆಗುತ್ತದೆ. ನಂತರ ಮೇ ತಿಂಗಳಲ್ಲಿ ವೃಷಭಕ್ಕೆ ಬಂದ ಗುರು ಅವನ ದೃಷ್ಟಿ ನಿಮ್ಮ ಅಸ್ತಮ ಸ್ಥಾನಕ್ಕೂ ಇರುತ್ತದೆ .ಮತ್ತೆ ದಶಮ ಸ್ಥಾನಕ್ಕೂ ಇರುತ್ತದೆ. ಗುರುವಿನ ದೃಷ್ಟಿ ಇದ್ದಾಗ ಆ ಭಾವ ತುಂಬಾ ಚೆನ್ನಾಗಿರುತ್ತೆ , ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. ಇನ್ನು ಗುರು ಎರಡನೆ ಮನೆಯಲ್ಲಿ ಇದ್ದಾಗ ಸಹಜವಾಗಿ ವ್ಯವಹಾರದಲ್ಲಿ ಹೆಚ್ಚು ಶುಭ ಫಲವನ್ನು ಕೊಡುತ್ತಾನೆ.
ಇನ್ನು ಶನಿ ಈ ವರ್ಷ ಪೂರ್ತಿ ಲಾಭ ಸ್ಥಾನದಲ್ಲಿ ಕೂತಿರುತ್ತಾನೆ . ಶನಿ ನಿಮಗೆ ಲಾಭಾಧಿಪತಿ ಮತ್ತು ದಶಮಾಧಿಪತಿ. ದಶಮ ಅಂದರೆ ಕರ್ಮ. ಕರ್ಮಾಧಿಪತಿ ಯಾವಾಗ ಲಾಭಕ್ಕೆ ಬರುತ್ತಾನೋ ಕರ್ಮದಿಂದ ಲಾಭ . ಅದೃಷ್ಟ ಕೊಡಲು ಗುರು ಯಾವಾಗಲೂ ಇರುತ್ತಾನೆ .ಆದರೆ ರಾಹು ಅದನ್ನು ಕಿತ್ತುಕೊಳ್ಳುತ್ತಾನೆ. ಗುರು ಮತ್ತು ರಾಹು ಇವೆರಡನ್ನು ತೆಗೆದುಕೊಂಡಾಗ ರಾಹುವಿಗೆ ಹೆಚ್ಚು ಬಲ ಇರುತ್ತದೆ. ರಾಹು ಸ್ವತಂತ್ರ ಗ್ರಹ. ರಾಹು ತನ್ನ ಕೆಲಸವನ್ನು ಶುರು ಮಾಡಿದಾಗ ಗುರು ಸುಮ್ಮನಾಗುತ್ತಾನೆ .
ನಾಕಾರಾತ್ಮಕ ಶಕ್ತಿಯಿಂದ ಬಿಡುಗಡೆಯಾದರೆ , ಸಕಾರಾತ್ಮಕ ಶಕ್ತಿ ಸಿಗುತ್ತದೆ.ಶನಿ ಲಾಭ ಸ್ಥಾನದಲ್ಲಿ ಇರುವುದರಿಂದ ನಿಮಗೆ ಎಲ್ಲ ಶುಭ ಫಲ ದೊರೆಯುತ್ತದೆ. ಮೇ ತಿಂಗಳಲ್ಲಿ ಗುರು ವೃಷಭ ರಾಶಿಗೆ ಹೋಗುತ್ತಾನೆ . ವೃಷಭ ರಾಶಿಯಲ್ಲಿ ಕುಳಿತುಕೊಂಡಿರುವ ಗುರುವಿಗೆ ವಿಶೇಷವಾಗಿ ಪಂಚಮ ದೃಷ್ಟಿ ಇರುತ್ತದೆ. ಅಂದರೆ ಕನ್ಯಾ ರಾಶಿಯ ದೃಷ್ಟಿ ಇರುತ್ತದೆ. ಈ ಕನ್ಯಾ ರಾಶಿ ನಿಮಗೆ ಆರನೇ ಮನೆ . ಆರನೇ ಮನೆ ಎಂದರೆ ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಭಾವ .ಸೇವಾ ಸ್ಥಾನ .ಇಂತಹ ಸಮಸ್ಯೆಗಳು ಇರುವವರಿಗೆ ಮೇ ತಿಂಗಳಿನಿಂದ ಸಮಸ್ಯೆ ಬಗೆಹರಿಯುತ್ತದೆ.
ಇದರ ಜೊತೆಗೆ ದಶ ಬುಕ್ತಿ ಕೂಡ ಚೆನ್ನಾಗಿದ್ದರೆ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದು ಆಗುತ್ತದೆ . ಹೀಗೆ ಮೇಷ ರಾಶಿಯವರಿಗೆ ಎಲ್ಲಾ ರೀತಿಯ ಶುಭ ಫಲಗಳು ದೊರೆಯುತ್ತದೆ. ಎರಡನೇ ರಾಶಿ ವೃಷಭ ರಾಶಿ .ಈ ರಾಶಿಯವರಿಗೆ 2024ರಲ್ಲಿ ಯಾವ ಯಾವ ಫಲಗಳು ದೊರೆಯುತ್ತದೆ ಎಂಬುದನ್ನು ಈಗ ನೋಡೋಣ. 2023ರಲ್ಲಿ ವೃಷಭ ರಾಶಿಯವರಿಗೆ ರಾಹು 12ನೇ ಮನೆಯಲ್ಲಿ ಇದ್ದ .ಕೇತು ಆರನೇ ಮನೆಯಲ್ಲಿ ಸ್ಥಿತನಾಗಿದ್ದ.ಇನ್ನು ದಶಮ ಸ್ಥಾನದಲ್ಲಿ ಶನಿ ಕೂತುಕೊಂಡಿದ್ದಾರೆ.
2024ರಲ್ಲಿ ಏನು ಬದಲಾವಣೆ ಆಗುತ್ತದೆ ಎಂದರೆ, ರಾಹು ಈ ವರ್ಷ ಪೂರ್ತಿ ಮೀನ ರಾಶಿಯಲ್ಲಿ ಇರುತ್ತಾನೆ. ಹಾಗೆಯೇ ಕೇತು ಈ ವರ್ಷ ಪೂರ್ತಿ ಕನ್ಯಾ ರಾಶಿಯಲ್ಲಿ ಇರುತ್ತಾನೆ. ಗುರು ಮೇಷ ರಾಶಿಯಲ್ಲಿ ಏಪ್ರಿಲ್ ತಿಂಗಳ ವರೆಗೂ ಇರುತ್ತಾರೆ.ಮೇ ತಿಂಗಳಿಗೆ ಗುರು ವೃಷಭ ರಾಶಿಗೆ ಬರುತ್ತಾನೆ. ಈ ವರ್ಷದಲ್ಲಿ ರಾಹು ತುಂಬಾ ಶುಭ ಫಲವನ್ನು ಕೊಡುತ್ತಾನೆ. ಯಾಕೆಂದರೆ ಲಾಭ ಸ್ಥಾನಕ್ಕೆ ರಾಹು ಬಂದರೆ ಅತ್ಯಂತ ಶುಭ ಫಲ. 11ನೇ ಮನೆಯಲ್ಲಿ ಯಾವುದೇ ಗ್ರಹಗಳು ಇದ್ದರೂ ಅದು ಶುಭವೇ.
ಶುಕ್ರ ಆಗಿರಬಹುದು. ರವಿ ಆಗಿರಬಹುದು , ಶನಿ ಆಗಿರಬಹುದು ಆದರೆ ರಾಹು ವಿಶೇಷವಾಗಿ ಅದೃಷ್ಟವನ್ನು ಕೊಡುತ್ತಾನೆ .ವೃಷಭ ರಾಶಿಯವರಿಗೆ ರಾಹು ಈ ವರ್ಷದಲ್ಲಿ ಹೆಚ್ಚಿನ ಶುಭ ಫಲವನ್ನು ಕೊಡುತ್ತಾನೆ. ಒಳ್ಳೆಯ ಬದಲಾವಣೆಯನ್ನು ರಾಹು ತಂದು ಕೊಡುತ್ತಾನೆ. ಇನ್ನು ಕೇತು 6ನೇ ಮನೆಯಲ್ಲಿ ಇರುವುದರಿಂದ ಅದೃಷ್ಟವನ್ನು ಕಡಿಮೆ ಮಾಡಿದ್ದಾನೆ.ನಮ್ಮನ್ನು ಪಾತಾಳಕ್ಕೆ ತಳ್ಳುವ ಕೆಲಸ ಕೇತು ಮಾಡುತ್ತಾನೆ . ಕೇತು ಅಂದರೆ ಬೇರು, ರಾಹು ಅಂದರೆ ಮರ .ಮರ ಯಾವಾಗಲೂ ಮೇಲೆ ಬೆಳೆಯುತ್ತಾ ಹೋಗುತ್ತದೆ.
ಆದರೆ ಬೇರು ಯಾವಾಗಲೂ ಪಾತಾಳಕ್ಕೆ ಹೋಗುತ್ತದೆ .ಅದೇ ತರ ಕೇತುವಿನ ಒಂದು ಫಲ.ಈ ಕೇತು ಈ ವರ್ಷ ಪೂರ್ತಿ ಪಂಚಮದಲ್ಲಿ ಇರುತ್ತಾನೆ. ಅದೇ ಗ್ರಹದಿಂದ ಶುಭ ಕೂಡ ಆಗುತ್ತದೆ , ಅಶುಭ ಕೂಡ ಆಗುತ್ತದೆ.ಜ್ಞಾನ ಎಂದು ತೆಗೆದುಕೊಂಡಾಗ ಅದನ್ನು ನಾವು ಆಳವಾಗಿ ತಿಳಿಯಬೇಕು ಎಂದು ಹೇಳಲಾಗುತ್ತದೆ. ಆ ಜ್ಞಾನವನ್ನು ತಿಳಿಯಲು ಕೇತು ತುಂಬಾ ಬೆಂಬಲ ಕೊಡುತ್ತಾನೆ.
ವೃಷಭ ರಾಶಿಯವರಿಗೆ ಈ ವರ್ಷ ಪೂರ್ತಿ ಕೇತು ಕನ್ಯಾ ರಾಶಿಯಲ್ಲಿ ಇರುತ್ತಾನೆ. ಪಂಚಮ ಸ್ಥಾನವನ್ನು ಜ್ಞಾನ ಎಂದು ಹೇಳಲಾಗುತ್ತದೆ. ಕೇತು ಕೊಡುವ ಜ್ಞಾನ ಬಹಳ ಪ್ರಮುಖವಾಗಿರುತ್ತದೆ. ಜ್ಞಾನಕ್ಕೆ ಕಾರಕ ಗುರು ಎಂದು ಹೇಳುತ್ತೇವೆ.ಬುದ್ಧಿಗೆ ಕಾರಕ ಬುಧ ಅಂತ ಹೇಳುತ್ತೇವೆ. ಬುಧ ಸಮಾಜದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಸಿಕೊಡುತ್ತಾರೆ. ಆದರೆ ಗುರು ಪುರಾಣಾ , ಪುಣ್ಯ ಕಥೆಗಳು , ಸಂಪ್ರದಾಯ, ಆಚಾರ ವಿಚಾರಗಳು ,ಇತ್ಯಾದಿಗಳ ಬಗ್ಗೆ ತಿಳಿಸುತ್ತಾನೆ. ಆದರೆ ಕೇತು ಆತ್ಮಜ್ಞಾನವನ್ನು ತಿಳಿಸಿ ಕೊಡುತ್ತಾನೆ.
ವೃಷಭ ರಾಶಿಯವರು ಈ ವರ್ಷದಲ್ಲಿ ಆಧ್ಯಾತ್ಮಿಕವಾಗಿ ಹೆಚ್ಚಿನ ಜ್ಞಾನವನ್ನು ಪಡೆಯುತ್ತಾರೆ. ಶನಿ ಕರ್ಮ ಸ್ಥಾನದಲ್ಲಿ ಇರುತ್ತಾನೆ.ಕುಂಭ ಸ್ಥಾನದಲ್ಲಿ ಶನಿ ಕೂತಿರುವುದರಿಂದ ಎಲ್ಲಾ ಕೆಲಸಗಳು ನಡೆಯುತ್ತದೆ. ಕುಟುಂಬದಲ್ಲಿರುವ ಭಿನ್ನಾಭಿಪ್ರಾಯಗಳು ದೂರವಾಗುವುದಕ್ಕೆ ಗುರು ಕಾರಣನಾಗುತ್ತಾನೆ. ಈ ವೃಷಭ ರಾಶಿಯವರಿಗೆ ಈ ನಾಲ್ಕು ಗ್ರಹಗಳು ತುಂಬಾ ಶುಭ ಫಲವನ್ನು ನೀಡುತ್ತದೆ.
ಮೂರನೇ ರಾಶಿ ಯಾವುದೆಂದರೆ ಸಿಂಹ ರಾಶಿ. 2024ರಲ್ಲಿ ಗುರು ಏಪ್ರಿಲ್ ವರೆಗೆಗೂ ಮೇಷ ರಾಶಿಯಲ್ಲಿ ಇರುತ್ತಾನೆ. ಮೇ ತಿಂಗಳಿನಿಂದ ವೃಷಭ ರಾಶಿಗೆ ಬರುತ್ತಾನೆ. ಇನ್ನು ಅಷ್ಟಮದಲ್ಲಿರುವ ರಾಹುವಿನ ಫಲ ಅಂದರೆ 9ನೇ ಮನೆಯಿಂದ ರಾಹು ಬಿಡುಗಡೆಯನ್ನು ಕೊಟ್ಟಾಗ ಧರ್ಮ ಕಾರ್ಯಗಳು , ಪೂಜೆ ಪುನಸ್ಕಾರಗಳು ಎಲ್ಲವೂ ನಡೆಯುತ್ತದೆ. ಎಲ್ಲಾ ವಿಘ್ನಗಳು ಈ ವರ್ಷದಲ್ಲಿ ನಿವಾರಣೆ ಆಗುತ್ತದೆ. ಗುರುವಿನ ದೃಷ್ಟಿ ಸಂಪೂರ್ಣವಾಗಿ ನಿಮ್ಮ ರಾಶಿಯ ಮೇಲೆ ಇರುತ್ತದೆ.
ಗುರು ಭಾಗ್ಯದಲ್ಲಿ ಇರುವುದರಿಂದ ದೈವ ಫಲವೂ ಕೂಡ ನಮಗೆ ದೊರೆಯುತ್ತದೆ.ಹೀಗೆ ದೈವ ಬಲ ಇದ್ದಾಗ ಬೇರೆಯವರ ದೃಷ್ಟಿ ನಮಗೆ ತಟ್ಟುವುದಿಲ್ಲ. ಇನ್ನು ರಾಹು ಅಷ್ಟಮದಲ್ಲಿ ಇರುವುದರಿಂದ ಸ್ವಲ್ಪ ಹಣಕಾಸಿನ ವಿಚಾರದಲ್ಲಿ ಖರ್ಚು ಹೆಚ್ಚಾಗಿರುತ್ತದೆ .ಶನಿ 7ನೇ ಮನೆಯಲ್ಲಿ ಹಿಡೀ ವರ್ಷ ಇರುತ್ತಾನೆ. ಸಿಂಹ ರಾಶಿಯವರಿಗೆ ವ್ಯಾಪಾರದಲ್ಲಿ ತುಂಬಾ ಅಭಿವೃದ್ಧಿಯಾಗುತ್ತದೆ .ಯಾಕೆಂದರೆ ಶನಿ ತುಂಬಾ ದಿಗ್ಬಲನಾಗಿರುತ್ತಾನೆ. ಗುರುವಿನ ದೃಷ್ಟಿ ನಿಮ್ಮ ರಾಶಿಯ ಮೇಲೆ ಬೀಳುವುದರಿಂದ ಎಲ್ಲಾ ವಿಚಾರಗಳಲ್ಲಿ ನೆಮ್ಮದಿಯನ್ನು ಪಡೆಯುತ್ತೀರಿ.
ಮೇ 1ನೇ ತಾರೀಖಿನಂದು ವೃಷಭ ರಾಶಿಗೆ ಬರುತ್ತಾನೆ .ಗುರು ಕರ್ಮ ಸ್ಥಾನಕ್ಕೆ ಬಂದಾಗ ಎಲ್ಲಾ ಶುಭ ಫಲಗಳು ದೊರೆಯುತ್ತದೆ . ಗುರುವಿನ ದೃಷ್ಟಿ ಎರಡನೇ ಮನೆಗೂ ಬರುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಸುಧಾರಿಸುತ್ತದೆ. ನಾಲ್ಕನೇ ರಾಶಿ ಯಾವುದೆಂದರೆ ಕನ್ಯಾ ರಾಶಿ. ಕನ್ಯಾ ರಾಶಿಯವರಿಗೆ ಎರಡನೇ ಮನೆಯಲ್ಲಿ ಕೇತು ಇದ್ದ. ಕೇತು ನಿಮ್ಮ ರಾಶಿಗೆ ಬರುವುದರಿಂದ ನಿಮ್ಮಲ್ಲಿ ತಾಳ್ಳೆ ಹೆಚ್ಚಾಗುತ್ತದೆ. ಏಳನೇ ಮನೆಗೆ ಕೇತು ಬರುವುದರಿಂದ ನಿಮ್ಮ ಸಂಚಾರ ಹೆಚ್ಚಾಗುತ್ತಿದೆ. ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ.
ಗುರು ಏಪ್ರಿಲ್ ವರೆಗೂ ಅಷ್ಟಮದಲ್ಲಿ ಇರುತ್ತಾನೆ.ಗುರುವಿನ ಸಂಪೂರ್ಣ ದೃಷ್ಟಿ ನಿಮ್ಮ ಕುಟುಂಬದ ಮೇಲೆ ಇರುತ್ತದೆ.ಕುಟುಂಬದಲ್ಲಿ ನೆಮ್ಮದಿ ಆರ್ಥಿಕ ವಿಚಾರದಲ್ಲಿ ಸುಧಾರಿಸುತ್ತದೆ .ಮೇ 1ನೇ ತಾರೀಕು ವೃಷಭ ರಾಶಿಗೆ ಗುರು ಹೋಗುತ್ತಾನೆ ಅಂದಿನಿಂದ ನಿನಗೆ ಒಳ್ಳೆಯ ಸಮಯ ಬರುತ್ತದೆ.ವೃಷಭಕ್ಕೆ ಬಂದವರು 9ನೇ ಮನೆಯಲ್ಲಿ ಸ್ಥಿತನಾಗಿರುತ್ತಾನೆ .
9ನೇ ಮನೆ ಅಂದರೆ ಅದೃಷ್ಟ ಸ್ಥಾನ ಮತ್ತು ಭಾಗ್ಯ ಸ್ಥಾನ. ಭಾಗ್ಯ ಸ್ಥಾನಕ್ಕೆ ಬಂದ ಗುರುವಿನ ದೃಷ್ಟಿ ನಿಮ್ಮ ರಾಶಿಯ ಮೇಲೆ ಇರುತ್ತದೆ. ನಂತರ ನಿಮ್ಮ ರಾಶಿಯಿಂದ ಪಂಚಮಕ್ಕೆ ಬರುತ್ತದೆ. ನಿಮ್ಮ ರಾಶಿಗೆ ಕೇತು ಬರುವುದರಿಂದ ನಿಮ್ಮಲ್ಲಿ ಜ್ಞಾನ ಮತ್ತು ಅರಿವು ಮೂಡಿಸುತ್ತಾನೆ. 5ನೇ ರಾಶಿ ಯಾವುದೆಂದರೆ ವೃಶ್ಚಿಕ ರಾಶಿ . ವೃಶ್ಚಿಕ ರಾಶಿಗಳಿಗೆ ಯಾವ ರೀತಿಯ ಶುಭ ಫಲ ಉಂಟಾಗುತ್ತದೆ ಎಂಬುದನ್ನು ನೋಡೋಣ.
2024ರಲ್ಲಿ ರಾಹು ನಿಮಗೆ ಆರನೇ ಮನೆಯನ್ನು ಬಿಟ್ಟು 5ನೇ ಮನೆಗೆ ಬರುತ್ತಾನೆ. ಪಂಚಮಕ್ಕೆ ರಾಹು ಬರುವುದು ಶುಭವಲ್ಲ.ಆದರೆ ಉದ್ಯೋಗದಲ್ಲಿರುವ ಸಮಸ್ಯೆ ನಿವಾರಣೆ ಆಗುತ್ತದೆ.ನಾಲ್ಕನೇ ಮನೆಯಲ್ಲಿ ಶನಿ ಇರುತ್ತಾನೆ . ಆದರೆ ವಿದ್ಯಾರ್ಥಿಗೆ ಓದಿನ ವಿಷಯದಲ್ಲಿ ಸಮಸ್ಯೆ ಆಗುತ್ತದೆ. ಆದರೆ ಗುರು ಇದನ್ನು ನಿವಾರಣೆ ಮಾಡುತ್ತಾನೆ. ಹೀಗೆ ಈ 5 ರಾಶಿಗಳು 2024ರಲ್ಲಿ ನಿಮಗೆ ಶುಭ ಲಾಭಗಳನ್ನು ತಂದುಕೊಡುತ್ತವೆ ಎಂದು ಈ ಲೇಖನದಲ್ಲಿ ಹೇಳಲಾಗಿದೆ.