ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನ ಹೇಗಿರುತ್ತೆ

0

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನ ಹೇಗಿರುತ್ತೆ ಎಂದು. ನಿಮ್ಮ ನಕ್ಷತ್ರಗಳು ಹೇಳುವ ಜೀವನದ ಭವಿಷ್ಯವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ರೋಹಿಣಿ ನಕ್ಷತ್ರ- ರೋಹಿಣಿ ನಕ್ಷತ್ರದ ಗುಟ್ಟು ಏನೆಂದರೆ ಸುಖ ಸಂಸಾರ. ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಸಂಸಾರದಲ್ಲಿ ಶಾಂತಿ, ನೆಮ್ಮದಿಯನ್ನು ಹೊಂದಿರುತ್ತಾರೆ. ಹಸ್ತ ನಕ್ಷತ್ರ- ಈ ನಕ್ಷತ್ರದ ಗುಟ್ಟು ಅಖಂಡ ಅದೃಷ್ಟ ಎಂಬುದಾಗಿದೆ. ಹಸ್ತ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಅದೃಷ್ಟಶಾಲಿಗಳಾಗಿರುತ್ತಾರೆ.

ಅಶ್ವಿನಿ ನಕ್ಷತ್ರ- ಈ ನಕ್ಷತ್ರದ ಗುಟ್ಟು ಏನೆಂದರೆ ನಾಯಕತ್ವದ ಗುಣ. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಭರಣಿ ನಕ್ಷತ್ರ- ಸುಖವಂತರು. ತಮ್ಮ ಜೀವನದ ಉದ್ದಕ್ಕೂ ಸುಖವನ್ನು ಕಾಣುತ್ತಾರೆ ಎಂಬುದು ಇದರ ಅರ್ಥವಾಗಿರುತ್ತದೆ. ಕೃತಿಕಾ ನಕ್ಷತ್ರ- ಕೃತಿಕಾ ನಕ್ಷತ್ರದ ಗುಟ್ಟು ತೇಜವಂತರು ಎಂಬುದಾಗಿದೆ. ಪ್ರತಿಯೊಂದು ಕಾರ್ಯವನ್ನು ಉತ್ಸಾಹದಿಂದ ಮಾಡುವಂತಹ ಗುಣವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ.
ಮೃಗಶಿರ ನಕ್ಷತ್ರ- ಅನ್ಯೋನ್ಯವಾದ ಸುಖ ಸಂಸಾರ.

ಈ ನಕ್ಷತ್ರದಲ್ಲಿ ಜನಿಸಿದವರ ಸಂಸಾರದಲ್ಲಿ, ಸಂಬಂಧಗಳಲ್ಲಿ ಅನ್ಯೋನ್ಯತೆ, ಹೊಂದಾಣಿಕೆ ಇರುತ್ತದೆ.
ಆರಿದ್ರ ನಕ್ಷತ್ರ- ಪುತ್ರ ಸಂತಾನ ಭಾಗ್ಯ ಎಂಬುದು ಈ ನಕ್ಷತ್ರದವರ ಗುಟ್ಟಾಗಿರುತ್ತದೆ. ಆರಿದ್ರ ನಕ್ಷತ್ರದಲ್ಲಿ ಜನಿಸಿದವರಿಗೆ ಪುತ್ರ ಸಂತಾನ ಭಾಗ್ಯ ದೊರೆಯಲಿದೆ. ಪುಷ್ಯಾ ನಕ್ಷತ್ರ- ಈ ನಕ್ಷತ್ರದ ಗುಟ್ಟು ಕುಟುಂಬಕ್ಕೆ ವರದಾನ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.

ಆಶ್ಲೇಷ ನಕ್ಷತ್ರ- ಆಶ್ಲೇಷ ನಕ್ಷತ್ರದಲ್ಲಿ ಜನಿಸಿದವರಿಗೆ ಜೀವನದ ಎಲ್ಲಾ ಸುಖಗಳನ್ನು ಪಡೆಯುವ ಭಾಗ್ಯ ಇದೆ ಎಂಬುದಾಗಿದೆ. ಪುನರ್ವಸು ನಕ್ಷತ್ರ- ದುಃಖದ ಜೀವನ ಎಂಬುದು ಈ ನಕ್ಷತ್ರದ ಗುಟ್ಟಾಗಿದ್ದು, ಪುನರ್ವಸು ನಕ್ಷತ್ರದಲ್ಲಿ ಜನಿಸಿದವರ ಜೀವನ ದುಃಖದಿಂದ ಕೂಡಿರುತ್ತದೆ. ಮುಖ ನಕ್ಷತ್ರ- ಈ ನಕ್ಷತ್ರದಲ್ಲಿ ಜನಿಸಿದ ಗಂಡ ಹೆಂಡತಿ ದಾಂಪತ್ಯ ಜೀವನದಲ್ಲಿ ದೂರಾಗುವ ಸಂಭವ ಬರಬಹುದು. ಬುದ್ಧ ನಕ್ಷತ್ರ- ಗಂಡು ಮಗುವಿನ ಸಂತಾನವಾಗುವುದರಿಂದ ವಂಶವೃದ್ದಿ ಉಂಟಾಗುತ್ತದೆ.

ಪಾಲ್ಗುಣಿ ನಕ್ಷತ್ರ- ಪಲ್ಗುಣಿ ನಕ್ಷತ್ರದಲ್ಲಿ ಜನಿಸಿದವರಿಗೆ ಚೆನ್ನಾಗಿ ನೋಡಿಕೊಳ್ಳುವ ಮತ್ತು ಕಾಳಜಿ ವಹಿಸುವ ಮಗ ದೊರೆಯುತ್ತಾನೆ. ಚಿತ್ತ ನಕ್ಷತ್ರ- ಚಿತ್ತಾ ನಕ್ಷತ್ರದ ಗುಟ್ಟು ಚಿಕ್ಕ ಸಂಸಾರ. ಸಂಸಾರದಲ್ಲಿ ನೆಮ್ಮದಿ, ಖುಷಿ, ಶಾಂತಿ ಎಲ್ಲವೂ ನೆಲೆಸಿರುತ್ತದೆ ಎಂದು ಹೇಳಬಹುದು. ಸ್ವಾತಿ ನಕ್ಷತ್ರ- ಸ್ವಾತಿ ನಕ್ಷತ್ರದ ಗಂಡ ಹೆಂಡತಿಯರು ಹೆಚ್ಚು ಅನ್ಯೋನ್ಯವಾಗಿ ಇರುತ್ತಾರೆ. ವಿಶಾಖ ನಕ್ಷತ್ರ- ವಿಶಾಖ ನಕ್ಷತ್ರದವರ ದಾಂಪತ್ಯ ಜೀವನವನ್ನು ನೋಡಿ ಕೆಲವರು ಅಸೂಯೆ ಪಡುತ್ತಾರೆ.

ಅನುರಾಧ ನಕ್ಷತ್ರ- ಅನುರಾಧ ನಕ್ಷತ್ರದವರು ಯಾವುದೇ ರೋಗದಿಂದ ತುಂಬಿರುವುದಿಲ್ಲ. ಜೇಷ್ಠ ನಕ್ಷತ್ರ- ಜೇಷ್ಠ ನಕ್ಷತ್ರದವರು ಹಣದ ನಷ್ಟ ಹಾಗೂ ಕೆಟ್ಟ ಆಲೋಚನೆಗಳಿಂದ ತುಂಬಿರುತ್ತಾರೆ. ಮೂಲ ನಕ್ಷತ್ರ – ಮೂಲ ನಕ್ಷತ್ರದವರು ಐಶ್ವರ್ಯವಂತರಾಗಿರುತ್ತಾರೆ. ಪೂರ್ವಾಷಾಢ ನಕ್ಷತ್ರ- ಈ ನಕ್ಷತ್ರದವರಿಂದ ಕುಟುಂಬಕ್ಕೆ ದುಃಖ ಉಂಟಾಗಬಹುದು. ಉತ್ತರಾಷಾಢ ನಕ್ಷತ್ರ- ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಂತೋಷದ ಜೀವನ ಇರುತ್ತದೆ.

ರೇವತಿ ನಕ್ಷತ್ರ – ರೇವತಿ ನಕ್ಷತ್ರದಲ್ಲಿ ಹುಟ್ಟಿದ ಮನೆಗೆ ಸಮೃದ್ಧಿ ಮತ್ತು ಬೆಳವಣಿಗೆ. ಶ್ರಾವಣ ನಕ್ಷತ್ರ – ಶಿಕ್ಷಣ, ಕಲೆ ಮತ್ತು ಸಂಗೀತದಲ್ಲಿ ಆಸಕ್ತಿವಂತರಾಗಿರುತ್ತಾರೆ. ಶತಭಿಷಾ ನಕ್ಷತ್ರ – ಇವರು ಸಿಟ್ಟಿನ ಸ್ವಭಾವದವರು ಆಗಿರುತ್ತಾರೆ.
ಧನಿಷ್ಠ ನಕ್ಷತ್ರ – ಸುಂದರ ಹಾಗೂ ತೀಕ್ಷ್ಣ ಬುದ್ಧಿವಂತರಾಗಿರುತ್ತಾರೆ. ಉತ್ತರ ಭಾದ್ರಪದ ನಕ್ಷತ್ರ- ಧಾರ್ಮಿಕವಾಗಿದ್ದು, ಸಹನೆ ಹಾಗೂ ಪ್ರೀತಿ ವಿಶ್ವಾಸವನ್ನು ಹೊಂದಿರುತ್ತಾರೆ. ಪೂರ್ವ ಭಾದ್ರಪದ ನಕ್ಷತ್ರ- ಇವರು ಜೀವನದಲ್ಲಿ ಸಂಪತ್ತು, ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ.

Leave A Reply

Your email address will not be published.