100 ವರ್ಷ ಹಲ್ಲುಗಳು ಗಟ್ಟಿ /ಹಲ್ಲು ನೋವಿಗೆ ಪರಿಹಾರ / ಹುಳುಕು ಹಲ್ಲು

0

ಹಲ್ಲು ನೋವಿಗೆ ಪರಿಹಾರ. ಹಲ್ಲು ನೋವಿನ ಸಮಸ್ಯೆಗೆ ಪರಿಹಾರವನ್ನು ಹೇಳುತ್ತೇವೆ. ಮೊದಲನೇದಾಗಿ ಹಲ್ಲು ನೋವು ಏಕೆ ಬರುತ್ತದೆ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಹಲ್ಲು ನೋವು ಬರುವುದಕ್ಕೆ ಪ್ರಧಾನ ಕಾರಣವೇನೆಂದರೆ ಈಗ ಸಣ್ಣ ಮಕ್ಕಳಲ್ಲಿ ಹಲ್ಲು ನೋವಿನ ಸಮಸ್ಯೆ ಬರುವುದಕ್ಕೆ ದೊಡ್ಡವರಾದ ಮೇಲೆ ಹಲ್ಲು ನೋವು ಬರುವುದಕ್ಕೆ ಕಾರಣವನ್ನು ನೋಡೋಣ.

ಸಣ್ಣ ಮಕ್ಕಳು ಹೆಚ್ಚು ಚಾಕ್ಲೇಟು, ಬಿಸ್ಕೇಟು, ಐಸ್ ಕ್ರೀಮ್ ಇಂತಹ ಹಾಳು ಪದಾರ್ಥಗಳನ್ನು ತಿನ್ನುವುದರಿಂದ ಹಲ್ಲಿನ ಆರೋಗ್ಯ ಹಾಳಾಗ್ತದೆ. ಇವುಗಳಿಗೆ ನಾನು ಹಾಳು ಪದಾರ್ಥ ಯಾಕ್ ಹೇಳ್ದೆ ಅಂದ್ರೆ ಇದು ಕೇವಲ ಮಕ್ಕಳ ಹಲ್ಲನ್ನು ಒಂದೇ ಹಾಳು ಮಾಡುವುದಿಲ್ಲ ಜೀವನವನ್ನೇ ಹಾಳು ಮಾಡುತ್ತದೆ. ಅದು ಹಲ್ಲಿಗೆ ತಾಕಿದಾಗ ಹಲ್ಲು ಹುಳುಕಾಗುತ್ತದೆ, ವಸಡು ಸವಿತದೆ,

ಹಲ್ಲಿನಲ್ಲಿ ಹುಳ ಆಗ್ತವೆ, ಕ್ಯಾಲ್ಸಿಯಂನಿಂದ ಕೂಡಿದ ಗಟ್ಟಿಯಾದ ಹಲ್ಲೆ ಸವಿಯುತ್ತದೆ ಅಂದ್ರೆ ಅದು ಹೊಟ್ಟೆ ಒಳಗೆ ಹೋಗಿ ಅಲ್ಲಿ ಎಂತಹ ತೊಂದರೆಯನ್ನುಂಟು ಮಾಡಬಹುದು ಊಹಿಸಿ. ಬಾಯಲ್ಲಿ ಕೇವಲ ಒಂದು ನಿಮಿಷ ಅಥವಾ ಎರಡು ನಿಮಿಷ ಇರುತ್ತದೆ. ಆದರೆ ಆದರೆ ಹೊಟ್ಟೆಯಲ್ಲಿ ತಾಸುಗಟ್ಟಲೆ ಇರುತ್ತದೆ. ಅದು ಎಷ್ಟು ಅಪಾಯವನ್ನು ತಮ್ಮ ಹೊಟ್ಟೆಗೆ ತರಬಹುದು.

ಹೊಟ್ಟೆ ನಮ್ಮ ಜೀವಶಕ್ತಿಯ ಮೂಲ ಕೇಂದ್ರ. ಹೊಟ್ಟೆ ನಮ್ಮ ತಾಯಿ, ನಮಗೆ ದೇವರು, ಹೊಟ್ಟೆನೇ ನಮಗೆ ಸರ್ವಸ್ವ. ಈ ಯಾಕಂದ್ರೆ ಹೊಟ್ಟೆ ಇಂದನೇ ನಾವು ಬದುಕಿರೋದು. ನಮ್ಮ ಜೀವಕ್ಕೆ ಪೋಷಣೆಯನ್ನು ಕೊಡತಕ್ಕದ್ದು ಹೊಟ್ಟೆ. ಎಲ್ಲರೂ ಕೆಲಸ ಮಾಡುವುದು ಯಾವ್ದಕ್ಕೆ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಲ್ವಾ. ನಮಗೇನಾದರೂ ನೋವಾದರೆ ಮೊದಲು ಅದರ ಅನುಭವವಾಗುವುದೇ ಹೊಟ್ಟೆಯಲ್ಲಿ. ಹಾಗೆ ನಾಲಿಗೆಗೆ ರುಚಿಯಾದ ಆಹಾರ

ಪದಾರ್ಥವನ್ನು ತಿಂದು ಹೊಟ್ಟೆಯನ್ನು ಹಾಳು ಮಾಡಿಕೊಳ್ಳುವುದು ಎಷ್ಟು ತಪ್ಪು ಎಂದು ನಾವು ಸರಿಯಾಗಿ ತಿಳಿದುಕೊಳ್ಳುಬೇಕು. ಹೊಟ್ಟೆಗೆ ಮೂಲವಾಗಿರತಕ್ಕಂತ ಒಂದು ಆಹಾರಗಳನ್ನ, ಸತ್ವಯುತವಾಗಿರುವಂತಹ ಆಹಾರಗಳನ್ನು ಕೊಡಬೇಕೆ ಹೊರತು ಇಂತಹ ಹಾಳು ಆಹಾರಗಳನ್ನು ತಿಂದು ನಮ್ಮ ಹಲ್ಲನ್ನು ಹಾಳು ಮಾಡಿಕೊಂಡು ಹೊಟ್ಟೆಯನ್ನು ಹಾಳು ಮಾಡ್ಕೊಬಾರದು. ಅದಕ್ಕೆ ಇಂತ ಜಂಕ್ ಫುಡ್ಗಳೇ ಹೊಟ್ಟೆ ಸಮಸ್ಯೆಗೆ ಮತ್ತು ಮುಖ್ಯವಾಗಿ ಹಲ್ಲಿನ ಸಮಸ್ಯೆಗೆ ಕಾರಣ.

ಹೊಟ್ಟೆ ಕೆಡ್ತು ಅಂತದ್ರೆ ಹಲ್ಲು ಕೆಡುತ್ತದೆ. ಹಾಗಾಗಿ ಅಜೀರ್ಣ ಮಲಬದ್ಧತೆಯಿಂದಲೂ ಕೂಡ ಹಲ್ಲಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಹಲ್ಲಿಗೆ ಸಮಸ್ಯೆ ಬರಲಿಕ್ಕೆ ಮೂಲ ಕಾರಣಗಳು ದೊಡ್ಡವರಾದ ಮೇಲೆ ಗುಟ್ಕಾ, ತಂಬಾಕು, ಬೀಡಿ, ಸಿಗರೇಟ್, ಮಾಂಸಾಹಾರ. ಆ ಮಾಂಸವನ್ನು ಅಗ್ದು ಅಗ್ದು ಹಲ್ಲು ಮುರ್ಕೊಂಡು ಬಂದಿರುತ್ತಾರೆ ಕೆಲವು ಜನ. ಅದಕ್ಕಾಗಿ ಇಂತ ಕೆಟ್ಟ ಆಹಾರ ಪದ್ಧತಿ, ದುಶ್ಚಟಗಳಿಂದ ಹಲ್ಲಿನ ಸಮಸ್ಯೆಗಳು ಬರ್ತವೆ.

ಇನ್ನು ಬಹಳ ಜನ ಹಲ್ಲು ನೋವು ಹೋಗುತ್ತೆ ಅಂದ್ಬಿಟ್ಟು ನಾನು ತಂಬಾಕು ಹಾಕ್ಕೊಳ್ಳಿಕ್ಕೆ ಕಲ್ತೆ, ತಂಬಾಕು ಹಾಕಿ ಹಲ್ಲು ನೋವು ಕಡಿಮೆ ಆಯ್ತು ಅಂತ ಹೇಳುತ್ತಾರೆ. ಹಲ್ಲು ನೋವು ಕಮ್ಮಿ ಆಗಿರುವುದಿಲ್ಲ, ಹಲ್ಲು ನೋವು ಹಾಗೆ ಇರುತ್ತದೆ, ಅದು ಮರಗೆಟ್ಟಿರುತ್ತದೆ. ನಮಗೆ ಅರಿವಿಗೆ ಬರದಂಗೆ ಆಗಿರುತ್ತದೆ. ಆ ನೋವು ಒಳಗಡೆ ಇದ್ದು ಇದ್ದು ಇದ್ದು ಈ ತಂಬಾಕು ಆ ನೋವು ಎರಡು ಸೇರಿ ಏನಾಗ್ತದೆ ಅಂದ್ರೆ ಒಂದೊಂದ್ಸಲ ಕ್ಯಾನ್ಸರ್ ಆಗ್ತದೆ.

ಅದಕ್ಕೆ ಹಲ್ಲು ನೋವು ಹೋಗುತ್ತೆ ಅಂದ್ಬಿಟ್ಟು ತಂಬಾಕು ಹಾಕೋದಲ್ಲ, ಹಲ್ಲು ನೋವು ಹೋಗ್ಬೇಕು ಅಂತ ಹೇಳಿದ್ರೆ ಸರಿಯಾದ ಚಿಕಿತ್ಸೆಗಳನ್ನ ತೆಗೆದುಕೊಳ್ಳಬೇಕು, ಮನೆಮದ್ದುಗಳನ್ನ ಮಾಡ್ಕೋಬೇಕು. ಅಂದ್ರೆ ಹಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಈಗ ನಾವು ಬಳಸತಕ್ಕಂತಹ ಪೇಸ್ಟ್ಗಳು ಕೂಡ ಹಲ್ಲು ನೋವಿಗೆ ಕಾರಣ. ಪೇಸ್ಟು ಅಂತ ಹೇಳಿದ್ರೆ ಅದ್ರಲ್ಲಿ 1000 ಪಿಪಿಎಂ ಅಧಿಕವಾಗಿರತಕ್ಕಂಥ ಕ್ಲೋರೈಡ್ ಅಂಶ ಇದೆ.

ಅದನ್ನ ಹಚ್ಚಿದ್ರೆ ಅದರಲ್ಲಿ ವಿಷಕಾರಿಯಾಗಿರತಕ್ಕಂತ ಪ್ರಿಸರ್ವೇಟಿವ್ ಗಳಿದ್ದಾವೆ. ಸಕ್ಕರೆ ವಿಶೇಷವಾಗಿ ಅದ್ರಲ್ಲಿ ಇರ್ತಕ್ಕಂತ ಸುಕ್ರೋಸ್ ಇದೆಯಲ್ಲ ಅದು ಶುಗರ್ ಜಾಸ್ತಿ ಆಗಲಿಕ್ಕೆ ಕಾರಣ ಆಗ್ತದೆ. ನಮ್ಮ ಬ್ಲಡ್ ಸೆಲ್ ಗಳ ಒಂದು ಕೆಮಿಸ್ಟ್ರಿಯನ್ನ ಅದು ಹಾಳುಮಾಡುತ್ತದೆ. ಅದಕ್ಕಾಗಿ ದಯವಿಟ್ಟು ಪೇಸ್ಟನ್ನು ಬಳಸದೆ ತಾವು ಹಲ್ಲು ಪುಡಿಯನ್ನು ಮನೆಯಲ್ಲೇ ತಯಾರಿಸಿಕೊಂಡು ಬಳಸಿದರೂ ನೂರು ವರ್ಷದವರೆಗೆ ಆರೋಗ್ಯವಾಗಿ ನಿಮ್ಮ ಹಲ್ಲುಗಳು ಇರುತ್ತವೆ. ನನಗೆ ನೆನಪಿದೆ

ನಮ್ಮ ತಾತ ನೂರು ವರ್ಷದವರೆಗೂ ಕಬ್ಬು ತಿನ್ನುತ್ತಾ ಇದ್ದರು. ಅಷ್ಟು ಅವರ ಹಲ್ಲುಗಳು ಗಟ್ಟಿ. ಕಡಲೆ ತಿಂತಾ ಇದ್ರು, ಒಣ ದಾನ್ಯಗಳನ್ನು ತಿಂತಾ ಇದ್ರು, ಅಗ್ದು ಅಗ್ದು ಪುಡಿ ಮಾಡ್ತಾ ಇದ್ರು. ಅಷ್ಟು ಗಟ್ಟಿಯಾಗಿರ್ತಿತ್ತು ಅವರ ಹಲ್ಲುಗಳು. ಅದಕ್ಕೆ ಕಾರಣ ಅವರು ಕೊನೆವರೆಗೂ ಇದ್ದಿಲು ಮತ್ತೆ ಹುರುಳಿನ ಆ ಹಸುವಿನ ಬೆರಣಿಯ ಬೂದಿ, ಉಪ್ಪು, ಅರಿಶಿಣ ಪುಡಿ ಇದರಿಂದ ಹಲ್ಲು ಉಜ್ಜುತ್ತಾ ಇದ್ದರು. ಅದನ್ನ ನೀವು ಮಾಡ್ಕೊಳ್ಳಿ. ವೇಸ್ಟ್ ಅಂತ ಬಿಸಾಕೋದು ಬೂದಿ

ಅದು ನಮ್ಮ ಹಲ್ಲಿಗೆ ಆಧಾರವಾಗುತ್ತದೆ. ದಂತಶಕ್ತಿ ಅನ್ನೋ ಚೂರ್ಣ ಹಲ್ಲಿನ ಆರೋಗ್ಯಕ್ಕೆ ಬಹಳ ಅದ್ಭುತವಾಗಿರತಕ್ಕಂಥ ಶಕ್ತಿ ತುಂಬುತ್ತದೆ. ಈಗ ಸುಮ್ಮನೆ ಒಂದು ತಪ್ಪು ತಪ್ಪು ಪ್ರಚಾರವನ್ನು ಮಾಡಿ ನಿಮಗೆ ಆ ಪೇಸ್ಟ್ ಉಜ್ಜಿ, ಈ ಪೇಸ್ಟ್ ಉಜ್ಜಿ ಅಂತ ಹೇಳಿ ನಿಮ್ಮ ಆರೋಗ್ಯವನ್ನು ಹಾಳು ಮಾಡ್ತಾ ಇರತಕ್ಕಂತ ಈ ಒಂದು ಸಂಧಿಗ್ಧ ಪರಿಸ್ಥಿತಿಯಲ್ಲಿ ನಾವು ಇಂತಹ ವಸ್ತುಗಳನ್ನು ನಿಮಗೆ ಹೇಳಲೇಬೇಕಾಗಿದೆ. ಒಳ್ಳೆಯ ವಿಚಾರಗಳನ್ನು ನಿಮಗೆ ಪ್ರಚಾರ ಮಾಡಲೇಬೇಕಾಗಿದೆ.

ಇಲ್ಲ ಅಂದ್ರೆ ಏನಾಗುತ್ತೆ ಅಂದ್ರೆ, ಸುಳ್ಳನ್ನೇ ಸತ್ಯ ಅಂತ ಹೇಳಿ ನಮ್ಮ ಜೀವನವನ್ನೇ ಹಾಳು ಮಾಡ್ಕೋತ್ತೇವೆ. ಹಾಗಾಗಿ ನಾವು ಈ ದಂತಶಕ್ತಿ ಚೂರ್ಣದ ಬಗ್ಗೆ ನಿಮಗೆ ಹೇಳ್ತಾ ಇದ್ದೇವೆ. ಮನೇಲೆ ಇದನ್ನ ನೀವು ಮಾಡ್ಕೋಬಹುದು. ಈ ಚೂರ್ಣವನ್ನು ಮಾಡಲಿಕ್ಕೆ ಬಹಳ ಏನು ಪದಾರ್ಥಗಳು ಬೇಕಾಗಿಲ್ಲ. ಏನ್ ಮಾಡಬೇಕು ಅಂತ ಹೇಳಿದ್ರೆ ತ್ರಿಫಲ ಚೂರ್ಣ ಅಂತ ಆಯುರ್ವೇದಿಕ್ ಅಂಗಡಿಗಳಲ್ಲಿ ಸಿಗುತ್ತದೆ. ಬಹಳ ಕಡಿಮೆ ರೇಟಿನಲ್ಲಿ ಸಿಗ್ತದೆ ಅದು. ಒಂದು ನೂರು ರೂಪಾಯಿ ಎರಡು ನೂರು ರೂಪಾಯಿ ಕೊಟ್ಟರೆ ಒಂದು ಕೆಜಿನೆ ಸಿಕ್ಕಿಬಿಡುತ್ತದೆ.

ಅರಳೆಕಾಯಿ, ತಾರೆಕಾಯಿ ಮತ್ತು ನೆಲ್ಲಿಕಾಯಿ ಈ ಮೂರು ಸೇರಿಸಿ ತ್ರಿಫಲ ಚೂರ್ಣ ಆಗ್ತದೆ. ಈ ಮೂರನ್ನು ಸೇರಿಸಿ ನೀವು ಮನೆಯಲ್ಲಿ ಚೂರ್ಣ ಮಾಡ್ಬಹುದು ಅಥವಾ ರೆಡಿ ಸಿಗುತ್ತದೆ ಅದನ್ನೇ ತಗೋಬಹುದು. ತಗೋ ಬಂದು ಅದರಲ್ಲಿ ಜಾಲಿ ಮರದ ಚಕ್ಕೆಯನ್ನ ಪುಡಿ ಮಾಡಿ ಹಾಕಿ. 1 ಕೆಜಿ ಚೂರ್ಣ ಇತ್ತು ಅಂತ ಹೇಳಿದ್ರೆ ಕಾಲ್ ಕೆಜಿ ಜಾಲಿಮರದ ಚಕ್ಕೆಯನ್ನ ಚೂರ್ಣ ಮಾಡಿ ಹಾಕಿ.

ಇನ್ನು ಕಾಲು ಕೆಜಿ ಬೇವಿನ ಮರದ ಚಕ್ಕೆಯನ್ನು ಚೂರ್ಣ ಮಾಡಿ ಹಾಕಿ. ಕಾಲ್ ಕೆಜಿ ಉಪ್ಪನ್ನು ಹಾಕಿ. ಇನ್ನ ಕಾಲ್ ಕೆಜಿ ಅರಿಶಿಣ ಪುಡಿಯನ್ನು ಹಾಕಿ. ಇವೆಲ್ಲವನ್ನೂ ಹಾಕಿ ಮಿಶ್ರಣ ಮಾಡಿ ಇಟ್ಟುಕೊಳ್ಳಬೇಕು. ಅದ್ರಲ್ಲಿ ಬೇಕಾದ್ರೆ ಒಂದು ಕೆಜಿ ಹಸುವಿನ ಹುರುಳನ್ನು ಸುಟ್ಟಿರತಕ್ಕಂತಹ ಬೆರಣಿಯ ಆ ಬೂದಿಯನ್ನ ಹಾಕಿ. ಅದೆಲ್ಲವನ್ನು ಹಾಕಿದಾಗ ಅದು ನಿಮಗೆ ವರ್ಷಗಟ್ಟಲೆ ಸಾಕಾಗುತ್ತೆ.

ಇದು ಹಾಳಾಗುವುದಿಲ್ಲ. ಇದಕ್ಕೆ ಯಾವುದೇ ರೀತಿಯ ಪ್ರಿಸರ್ವೇಟಿವ್ಸ್ ಹಾಕಬೇಕಾಗಿಲ್ಲ. ಯಾಕಂದ್ರೆ ಉಪ್ಪು ಇರ್ತದಲ್ವಾ ಅದರಲ್ಲಿ ಯಾವತ್ತಾದ್ರೂ ಹುಳ ಆಗಿರೋದನ್ನ ನೋಡಿದ್ದೀರಾ, ನೀವು ಇಲ್ಲ ಅಲ್ವಾ ಉಪ್ಪು ಕೆಡೋದೇ ಇಲ್ಲ. ಉಪ್ಪು, ಅರಿಶಿನ ದಿ ಬೆಸ್ಟ್ ಪ್ರಿಸರ್ವೇಟಿವ್ಸ್. ಇದನ್ನ ಹಾಕಿ ರೆಡಿ ಮಾಡಿಕೊಂಡು ನೀವು ಹಲ್ಲನ್ನು ಉಜ್ಜಬೇಕು. ಆದ್ರೆ ಬ್ರಷ್ ಇಂದ ಉಜ್ಜಬಾರದು.

ಅನಿವಾರ್ಯತೆ ನೀವು ಬ್ರಷ್ ನಲ್ಲೇ ಉಜ್ಜಬೇಕು ಅನ್ನೋದಾದ್ರೆ ಮೃದುವಾದ ಬ್ರಶನ್ನು ತೆಗೆದುಕೊಳ್ಳಿ. ಈ ಪುಡಿಯನ್ನು ತೆಗೆದುಕೊಂಡು ಕೈಯಿಂದ ಹಲ್ಲು ಉಜ್ಜಿದರೆ ಪಳಪಳ ಎಂದು ಹಲ್ಲು ಹೊಳೆಯುತ್ತದೆ. ಅದ್ಭುತವಾಗಿ 100 ವರ್ಷದವರೆಗೂ ದಂತ ರೋಗಗಳ ಬರುವುದಿಲ್ಲ. ಹಲ್ಲು ನೋವೇ ಬರೋದಿಲ್ಲ. ಇನ್ನು ಇದು ಬರದೇ ಇರೋದಕ್ಕೆ ಮನೆ ಮದ್ದು.

ಇನ್ನು ಬಂದ ಮೇಲೆ ಏನು ಮಾಡಬೇಕು ಅಂದ್ರೆ, ಲವಂಗದ ಎಣ್ಣೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ಒಂದು ಎಂಟು ಹನಿ ಲವಂಗದ ಎಣ್ಣೆಯನ್ನು ತೆಗೆದುಕೊಂಡರೆ ಒಂದು ಚಿಟಿಕೆ ಅರಿಶಿಣ ಪುಡಿಯನ್ನು ಹಾಕಿ ಕಲಸಿಕೊಂಡು ಅದನ್ನ ಹಲ್ಲಿಗೆ ಲೇಪನ ಮಾಡಿ ಒಂದರ್ಧ ಗಂಟೆ, ಒಂದು ಗಂಟೆ ಹಾಗೆ ಬಿಟ್ಟು ನಂತರ ನೀರಿನಿಂದ ಮುಕ್ಕಳಿಸಿ.

ಈ ತರ ಮಾಡಿದ್ರೆ ಅದು ಹೊಟ್ಟೆ ಒಳಗಡೆ ಹೋದ್ರು ಏನು ತೊಂದರೆ ಆಗೋದಿಲ್ಲ. ಈ ರೀತಿ ಮಾಡಿದರೆ ನಿಮ್ಮ ಹಲ್ಲು ನೋವಿನ ಸಮಸ್ಯೆ ಕಡಿಮೆ ಆಗ್ತದೆ. ಹೆಚ್ಚು ಬಿಸಿಯಾಗಿರೋದು, ಹೆಚ್ಚು ತಂಪಗಿರೋದು ತಿನ್ನಬಾರದು. ಕೋಲ್ಡ್ ವಾಟರ್ ಕುಡಿಯೋದು, ಚಿಲ್ಡ್ ವಾಟರ್ ಕುಡಿಯೋದು, ಫ್ರಿಜ್ ನಲ್ಲಿರುವ ಆಹಾರ ತಂಪು ತಂಪಾಗಿ ತಿನ್ನೋದು, ಹೆಚ್ಚು ಬಿಸಿ ಆಹಾರವನ್ನು ತಿನ್ನೋದು,

ಈ ತಂಪು, ಬಿಸಿಯಿಂದಾಗಿ ವಸಡುಗಳ ಶಕ್ತಿ ಹಾಳಾಗುತ್ತದೆ. ಅದಕ್ಕೆ ನಮ್ಮ ಚರ್ಮದ ಬಿಸಿ ಎಷ್ಟಿರುತ್ತದೆ ಅಷ್ಟು ತಾಪಮಾನದ ಆಹಾರವನ್ನು ತಿನ್ನಬೇಕು. ಬಿಸಿ ಬೇಡ, ತಂಗಳು ಬೇಡ. ಕೆಲವರಿಗೆ ಬಿಸಿ ತಿನ್ನೋದು ಹ್ಯಾಬಿಟ್ ಇರ್ತದೆ. ಇನ್ನು ಕೆಲವರಿಗೆ ತಂಪು ತಿನ್ನುವ ಅಭ್ಯಾಸ ಇರುತ್ತದೆ. ಅದೆಲ್ಲವನ್ನು ಬಿಡಬೇಕು. ಅದಕ್ಕೆ ಹೆಚ್ಚು ಬಿಸಿ ತಿನ್ನೋದು, ತಂಪು ತಿನ್ನೋದು, ಕೋಲ್ಡ್ ವಾಟರ್, ಚಿಲ್ಡ್ ವಾಟರ್, ಫ್ರಿಡ್ಜ್ ನಲ್ಲಿರುವ ಆಹಾರವನ್ನು ತಿನ್ನುವಂತದ್ದು ಅಪಾಯಕಾರಿ.

ಇದನ್ನು ರೂಢಿಯಲ್ಲಿ ಇಟ್ಟುಕೊಳ್ಳಿ. ಈ ಒಂದು ಮನೆಮದ್ದನ್ನು ಮಾಡ್ಕೊಂಡ್ರೆ ಹಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಇದಕ್ಕೂ ಮಿಗಿಲಾಗಿ ಹಲ್ಲು ನೋವು ಬಂದಿದೆ, ಹಲ್ಲಿನಲ್ಲಿ ರಕ್ತಸ್ರಾವ ಆಗ್ತಿದೆ ಅಂತ ಅಂದ್ರೆ, ಹಲ್ಲು ಅಲುಗಾಡ್ತಾ ಇದೆ, ವಸಡು ತುಂಬಾ ಸವಿತಾ ಇದೆ ಅಂತ ಹೇಳಿದ್ರೆ, ತುಂಬಾ ನೋವು ಬರ್ತಾ ಇದೆ ಅಂತ ಹೇಳಿದ್ರೆ, ದಂತರೋಗ

ನಿವಾರಕ ಲೇಪ ಅಂತ ಒಂದಿದೆ. ಅದನ್ನ ಹಚ್ಚಿದ್ರೆ ಒಂದೇ ವಾರಕ್ಕೆ ಎಷ್ಟೇ ಹಲ್ಲು ನೋವಿದ್ದರೂ ಕೂಡ ಕಡಿಮೆಯಾಗುತ್ತದೆ. ಅದನ್ನು ಬಳಸಬಹುದು. ಆ್ಯಂಟಿ ಬಯೋಟೆಕ್ ಇಂಜೆಕ್ಷನ್, ಫೈನ್ ಕಿಲ್ಲರ್ ಇಂಜೆಕ್ಷನ್ ಅನ್ನ ತೆಗೆದುಕೊಂಡು ಕಿಡ್ನಿಗೆ, ಲಿವರಿಗೆ ತೊಂದರೆ ಮಾಡಿಕೊಳ್ಳುವುದಕ್ಕಿಂತ ಈ ವಿಧಾನಗಳಿಂದ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

Leave A Reply

Your email address will not be published.