ಅಂದುಕೊಂಡ ಕೆಲಸ ಆಗಲೆಬೇಕು ಅಂತೀರಾ ಈ ಸಮಯದಲ್ಲಿ ಈ 1 ಮಾತು ಹೇಳಿ ಬದಲಾವಣೆ ನೋಡಿ || ತಥಾಸ್ತು ದೇವತೆಗಳ ಶಕ್ತಿ ನೋಡಿ

0

ತಥಾಸ್ತು ದೇವತೆಗಳು ಸಂಚರಿಸುವ ಈ ಒಂದು ಸಮಯದಲ್ಲಿ ನೀವು ಯಾವ ಮಾತನ್ನು ಅಂದುಕೊಳ್ಳುತ್ತೀರಾ ಅಂತಹ ಮಾತುಗಳು ನಡದೇ ನಡೆಯುತ್ತದೆ. ಈ ತಥಾಸ್ತು ದೇವತೆಗಳು ಸಂಚರಿಸುವ ಸಮಯ ನಿಮ್ಮ ಜೀವನವನ್ನೇ ಬದಲಾಯಿಸಬಹುದು. ನಮ್ಮ ಹಿಂದೂ ಪುರಾಣಗಳಲ್ಲಿ ಇದರ ಬಗ್ಗೆ ವಿಶೇಷವಾದ ಉಲ್ಲೇಖವಿದೆ. ನಿಜವಾಗಲೂ ತಥಾಸ್ತು ದೇವತೆಗಳು ಇದ್ದಾರಾ?

ಇವರು ಸಂಚರಿಸುವ ವೇಳೆಯಲ್ಲಿ ನಾವು ಏನಾದರೂ ಅಂದುಕೊಂಡಿದ್ದು ನೆರವೇರುತ್ತಾ? ತಥಾಸ್ತು ಎಂದರೆ ಒಳ್ಳೆಯದಾಗುತ್ತಾ? ಯಾವ ಸಮಯದಲ್ಲಿ ದೇವತೆಗಳ ಸಂಚಾರವಿರುತ್ತದೆ? ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ನಾವು ಕೆಟ್ಟದ್ದಾಗಿ ಮಾತನಾಡಿದರೇ ನಮ್ಮ ಹಿರಿಯರು ಬಾಯಿ ಮುಚ್ಚು ಇದು ಮುಸ್ಸಂಜೆ ವೇಳೆ ಎಂದು ಕೇಳಿರುತ್ತೀವಿ.

ಅದೇ ರೀತಿಯಾಗಿ ಮನುಷ್ಯನ ಜೀವನದಲ್ಲಿ ಧರ್ಮದ ವಿರುದ್ಧ ಏನಾದರೂ ಮಾತನಾಡಿದರೇ ತಕ್ಷಣ ತಥಾಸ್ತು ದೇವತೆಗಳು ತಥಾಸ್ತು ಎನ್ನುತ್ತಾರೆ. ಪುರಾಣಗಳ ಪ್ರಕಾರ ತಥಾಸ್ತು ದೇವತೆಗಳು ಯಾರು ಎಂದರೆ ಸೂರ್ಯನ ಪತ್ನಿಯಾದ ಸಂಧ್ಯಾದೇವಿ ಸೂರ್ಯನ ಅತೀ ಪ್ರಕಾಶಮಾನವನ್ನು ತಾಳಲಾರದೇ ಅಶ್ವದ ರೂಪವನ್ನು ತಾಳುತ್ತಾರೆ. ಅಶ್ವ ಎಂದರೆ ಕುದುರೆ.

ನಂತರ ಕುರುದೇಶಕ್ಕೆ ಹೋಗುತ್ತಾರೆ. ಕುರುದೇಶದಲ್ಲಿದ್ದ ಸೂರ್ಯನು ತನ್ನ ಪತ್ನಿಯಾದ ಸಂಧ್ಯಾದೇವಿ ಕುದುರೆಯ ರೂಪದಲ್ಲಿದ್ದದ್ದನ್ನು ಕಂಡು ತಾನು ಕೂಡ ಕುದುರೆಯ ರೂಪವಾಗುತ್ತಾನೆ. ಆ ಸಮಯದಲ್ಲಿ ಹುಟ್ಟಿರುವಂತಹ ದೇವತೆಗಳೇ ತಥಾಸ್ತು ದೇವತೆಗಳು. ಅವರೇ ಅಶ್ವಿನಿ ಕುಮಾರರು, ಇವರನ್ನು ದೇವತಾ ವೈದ್ಯರು ಎಂದು ಕರೆಯಲಾಗುತ್ತದೆ.

ಇವರು ಸಂಚರಿಸುವಾಗ ತಥಾಸ್ತು ಎಂದು ಹೇಳುತ್ತಿರುತ್ತಾರೆ. ಇವರು ಯಜ್ಞಹೋಮಗಳನ್ನು ಮಾಡುವಂತಹ ಜಾಗದಲ್ಲಿ ಹೆಚ್ಚಾಗಿ ಸಂಚಾರ ಮಾಡುತ್ತಾರೆ. ಯಾರು ತಮ್ಮ ಮನೆಯಲ್ಲಿ ಪ್ರತಿನಿತ್ಯ ಪೂಜೆಯನ್ನು ಮಾಡುತ್ತಾರೋ, ಪ್ರತಿನಿತ್ಯ ದೀಪಗಳನ್ನು ಬೆಳಗಿ ಪೂಜಾ ಆರಾಧನೆಯನ್ನು ಮಾಡುತ್ತಾರೋ, ಯಾರು ನಿತ್ಯ ಸ್ತೋತ್ರ ಪಠನೆಗಳನ್ನು ಮಾಡುತ್ತಾರೋ ಅಂತಹವರಿಗೆ

ಈ ತಥಾಸ್ತು ದೇವತೆಗಳ ಅನುಗ್ರಹ ಬೇಗನೆ ದೊರೆಯುತ್ತದೆ. ಯಾವಾಗಲೂ ಒಳ್ಳೆಯದನ್ನು ಕಲ್ಪಿಸಿಕೊಳ್ಳಬೇಕೆಂದು ಶಾಸ್ತ್ರ ಹೇಳುತ್ತದೆ. ನಾವು ಮುಸ್ಸಂಜೆ ಸಮಯದಲ್ಲಿ ಒಳ್ಳೆಯದ್ದನ್ನೇ ಅಂದುಕೊಳ್ಳಬೇಕು. ನಮ್ಮ ಬಳಿ ಎಷ್ಟೇ ಇದ್ದರೂ ಇಲ್ಲ ಇಲ್ಲ ಎಂದರೂ ಅದು ಇಲ್ಲದಂತಾಗುತ್ತದೆ. ಆದ್ದರಿಂದ ಮುಸ್ಸಂಜೆ ವೇಳೆಯಲ್ಲಿ ಸಾಧ್ಯವಾದಷ್ಟು ಮತ್ತೊಬ್ಬರಿಗೆ ಒಳ್ಳೆಯದನ್ನೇ ಬಯಸಬೇಕು.

ನಮಗೆ ಮತ್ತು ನಮ್ಮ ಕುಟುಂಬಕ್ಕೆ ಒಳ್ಳೆಯದಾಗಬೇಕು ಎಂದುಕೊಳ್ಳಬೇಕು ಆಗ ತಥಾಸ್ತು ದೇವತೆಗಳು ತಥಾಸ್ತು ಎಂದಾಗ ಅದು ನಡದೇ ನಡೆಯುತ್ತದೆ. ಇಂತಹ ಅದೆಷ್ಟೋ ವಿಚಾರಗಳು ಎಷ್ಟೋ ಜನರ ಬದುಕಿನಲ್ಲಿ ನಡೆದಿದೆ. ತಥಾಸ್ತು ದೇವತೆಗಳು ಸಂಚರಿಸುವ ಸಮಯ ಯಾವುದು ಎಂದರೆ ಅದು ಮುಸ್ಸಂಜೆ ವೇಳೆ. ಮುಸ್ಸಂಜೆ ವೇಳೆಯಲ್ಲಿ ನಿಮಗೆ ಇರುವಂತಹ ಕಷ್ಟಗಳು ಕಳಿಯಬೇಕೆಂದು

ನೀವು ಮನಸ್ಸಿನಲ್ಲಿ ಅಂದುಕೊಳ್ಳಬೇಕು. ಆಗ ಮಾತ್ರ ನಿಮ್ಮ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತದೆ. ಸದಾ ಕಾಲ ಮತ್ತೊಬ್ಬರ ಬಗ್ಗೆ ಕೆಟ್ಟದ್ದನ್ನ ಆಲೋಚನೆ ಮಾಡದೇ ನೀವು ಯಾವಾಗಲೂ ಒಳ್ಳೆಯದ್ದನ್ನೇ ಬಯಸುತ್ತಾ ಬಂದರೇ ತಥಾಸ್ತು ದೇವತೆಗಳ ಅನುಗ್ರಹದಿಂದ, ಅಶ್ವಿನಿ ಕುಮಾರರ ಅನುಗ್ರಹದಿಂದ ನಿಮ್ಮ ಜೀವನದಲ್ಲಿ ಏಳಿಗೆ ಕಾಣಲು ಸಾಧ್ಯ. ಪ್ರತಿನಿತ್ಯ ಮನೆಯಲ್ಲಿ ದೀಪಾರಾಧನೆ ಮಾಡುತ್ತಾ,

ಸ್ತೋತ್ರ ಮಂತ್ರಗಳ ಪಠನೆಗಳನ್ನ ಮಾಡುತ್ತಾ, ದೇವರ ಆರಾಧನೆಯನ್ನು ಮಾಡುತ್ತಾ ಬರಬೇಕು. ಮನೆಯಲ್ಲಿ ಯಾರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು, ಅವಾಚ್ಯ ಶಬ್ಧಗಳನ್ನ ಮನೆಯಲ್ಲಿ ನಿಂದಿಸಬಾರದು ಮತ್ತು ಗಂಡ ಹೆಂಡತಿ ಚೆನ್ನಾಗಿ ಇರಬೇಕೆಂದರೆ ಹೆಂಡತಿ ಗಂಡನ ಬಗ್ಗೆ, ಗಂಡ ಹೆಂಡತಿಯ ಬಗ್ಗೆ ಒಳ್ಳೆಯದ್ದನ್ನೇ ಮಾತನಾಡಬೇಕು.

Leave A Reply

Your email address will not be published.