ಬಂಗಾರದ ಮಾತು

ತುಂಬಿದ ಜೇಬು ನೂರು ಆಟ ಆಡಿಸಿದರೆ .ಖಾಲಿ ಜೇಬು ನೂರು ಪಾಠ ಕಲಿಸುತ್ತದೆ. ತುಳಿಯುವವರು ನೂರು ಜನರು ಇದ್ದರೆ ಏನು? ಕಾಪಾಡುವುದಕ್ಕೆ ಒಬ್ಬನಿರುತ್ತಾನೆ.ಅಂದುಕೊಳ್ಳುವನವಲ್ಲ ಹೊಂದಿಕೊಂಡು ಹೋಗುವುದು ಜೀವನ. ಕಷ್ಟ ಮತ್ತು ಸಮಸ್ಯೆಗಳಿಗೆ ಎರಡು ಔಷಧಿ ಒಂದು ಕಾಲು ಔಷಧಿ ಒಂದು ದುಡಿಮೆ ಆದರೆ ಇನ್ನೊಂದು ತಾಳ್ಮೆ. ತೊಂದರೆಗಳಿಗೆ ಎರಡು ಕಾರಣಗಳಿವೆ.

ಒಂದು ಕೆಟ್ಟವರ ಮೇಲೆ ನಂಬಿಕೆ ಇಡುವುದು ಇನ್ನೊಂದು ಒಳ್ಳೆಯವರ ಮೇಲೆ ಸಂಶಯ ಪಡುವುದು. ನೀವು ಆಸೆ ಪಟ್ಟಿದ್ದು ಸಿಗಲಿಲ್ಲ ಎಂದು ಬೇಸರವಾಗದಿರಿ ಯಾಕೆಂದರೆ ಆ ದೇವರು ನೀವು ಆಸೆ ಪಟ್ಟಿರುವುದಕ್ಕಿಂತ ಹೆಚ್ಚಿನದಾಗಿ ಸುಂದರವಾದ ಜೀವನವನ್ನು ಕೊಡಲು ಸದಾ ಯೋಚಿಸುತ್ತ ಇರುತ್ತಾನೆ. ಏನಾಗುತ್ತೋ ಏನೋ ಎಂದು ಯೋಚಿಸುತ್ತಾ ಕುಳಿತಲ್ಲೇ ಕುಳಿತುಕೊಂಡರೆ

ಏನು ಆಗುವುದಿಲ್ಲ ಅತಿಯಾಗಿ ಯೋಚಿಸುವುದನ್ನು ಬಿಟ್ಟು ಬಿಡಬೇಕು ಜೀವನದಲ್ಲಿ ಏನಾಗುತ್ತೋ ಆಗಲಿ ಇಂದು ಬಂದದ್ದನ್ನು ಎದುರಿಸಲು ಸಿದ್ದರಾಗಿರಬೇಕು. ನಿಮ್ಮ ಮನಸ್ಸು ನೋವಿನಿಂದ ಕೂಡಿದ್ದಾಗ ನಿಮ್ಮ ಮುಖದಲ್ಲಿ ಸದಾ ನಗುವನ್ನು ಬಯಸುವ ವ್ಯಕ್ತಿಗಳೊಡನೆ ಸಮಯ ಕಳೆಯಿರಿ ಏಕೆಂದರೆ ಅವರು ಎಂದಿಗೂ ಉರಿಯುವ ಬೆಂಕಿಗೆ ತುಪ್ಪವನ್ನು ಸುರಿಯುವುದಿಲ್ಲ.

ಬದುಕು ಕರೆದುಕೊಂಡ ಹೋದ ಕಡೆ ನೀವು ಹೋಗದಿರಿ ನೀವು ಹೋಗುವ ಕಡೆ ಬದುಕನ್ನು ಕರೆದುಕೊಂಡು ಹೋಗುವುದು ಜಾಣತನ. ನಡೆದಷ್ಟು ದಾರಿ ಇದೆ ಹಾಗೆ ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡಿರುವ ಸಂದೇಶವಾಗಿದೆ. ನೋವು ಕೊಟ್ಟವರೇ ನನಗೆ ಮಾರ್ಗದರ್ಶಕರು ನಂಬಿಸಿ ಮೋಸ ಮಾಡಿದವರು ನನಗೆ ಗುರುಗಳು.

ಕಷ್ಟವನ್ನು ಕೊಟ್ಟವರೇ ನನಗೆ ಹಿತೈಷಿಗಳಾಗಿರುತ್ತಾರೆ. ಅವಮಾನ ಮಾಡಿದವರು ನನಗೆ ಸ್ಪೂರ್ತಿದಾತರಾಗಿರುತ್ತಾರೆ. ಕಾಲೆಳೆದವರೇ ನನಗೆ ಶಕ್ತಿ ದಾತರು. ತಿರಸ್ಕಾರ ಮಾಡಿದವರೇ ನನಗೆ ಪುರಸ್ಕೃತರು. ಹಂಗಿಸಿದವರಿ ನನಗೆ ಅನ್ನದಾತ ರಾಗಿರುತ್ತಾರೆ. ದೂರ ತಳ್ಳಿದವರೇ ನನಗೆ ಬಂಧುಗಳಾಗಿರುತ್ತಾರೆ. ಎಲ್ಲವುದಕ್ಕೂ ಮಿಗಿಲಾಗಿ ನನಗೆ ಪ್ರೀತಿ ಕೊಟ್ಟವರೇ ನನ್ನ ದೇವರಾಗಿರುತ್ತಾರೆ. ಹಾಗಾಗಿ ಈ ಜಗತ್ತಿನಲ್ಲಿ ನನಗೆ ಯಾರು ಶತ್ರುಗಳಿರುವುದಿಲ್ಲ.

Leave a Comment