ನಾವು ಈ ಲೇಖನದಲ್ಲಿ ಹತ್ತಿ ಹಣ್ಣಿಗೆ ಬಡವನು ಹೇಗೆ ಶ್ರೀಮಂತನಾಗುವ ಯೋಗವಿದೆ ಎಂದು ತಿಳಿಯೋಣ .
ಅತ್ತಿ ಮರದ ಹಣ್ಣಿಗೆ ಬಡವನು ಶ್ರೀಮಂತನಾಗುವ ಶಕ್ತಿ ಇದೆ ….! ಸಾಮಾನ್ಯವಾಗಿ ನಾವು ದೇವತಾ ವೃಕ್ಷಗಳು ಎಂದು ಹಲವಾರು ಗಿಡಗಳನ್ನು ನೋಡುತ್ತೇವೆ , ಅವುಗಳನ್ನು ಪೂಜಿಸುತ್ತೇವೆ , ಮತ್ತು ಆರಾಧಿಸುತ್ತೇವೆ . ಕಷ್ಟಗಳು ನಿವಾರಣೆ ಆಗಲಿ ಎಂದು , ಶ್ರದ್ಧೆ ಭಕ್ತಿಯಿಂದ ಬೇಡಿ ಕೊಳ್ಳುತ್ತೇವೆ . ಹಲವಾರು ರೀತಿಯ ಹರಕೆಯನ್ನು ಕಟ್ಟಿ ಕೊಳ್ಳುತ್ತೇವೆ .
ದೇವತಾ ಮರ ಎಂದು ಆಲದ ಮರ , ಅರಳಿಯ ಮರ , ಅಶ್ವತ್ಥ ಮರ , ಬೇವಿನ ಮರ , ಬನ್ನಿ ಮರವನ್ನು ಅಷ್ಟೇ ಅಲ್ಲದೆ , ಹತ್ತಿ ಮರವನ್ನು ಕೂಡ ಕರೆಯಲಾಗುತ್ತದೆ . ಹತ್ತಿ ಮರ ಕೂಡ ಸಾಕಷ್ಟು ಅದ್ಭುತವಾದ ಶಕ್ತಿಯನ್ನು ಹೊಂದಿದ್ದು , ನಮ್ಮೆಲ್ಲ ಕಷ್ಟಗಳನ್ನು ಪರಿಹರಿಸುವ ಅದ್ಭುತವಾದ ಶಕ್ತಿಯನ್ನು ಹೊಂದಿದೆ . ಹತ್ತಿ ಮರಕ್ಕೆ ಭಗವಂತ ನರಸಿಂಹನ ಆಶೀರ್ವಾದ ಇದೆ .
ಈ ಮರದ ಪ್ರತಿಯೊಂದು ಕೊಂಬೆಯಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಇದೆ . ಹಾಗಾಗಿ ಅಮಾವಾಸ್ಯೆಯ ದಿನ ಹತ್ತಿ ಮರದ ಒಂದು ಹಣ್ಣಿಗೆ ಬಡವನನ್ನೂ ಕೂಡ ಶ್ರೀಮಂತನಾಗಿಸುವ ಶಕ್ತಿ ಇರುತ್ತದೆ . ಹಾಗೂ ನಿಮ್ಮ ಸಂಕಷ್ಟಗಳು ನಿವಾರಣೆಯಾಗಿ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ . ಹಾಗಾಗಿ ಹತ್ತಿ ಹಣ್ಣನ್ನು ಉಪಯೋಗಿಸಿಕೊಂಡು ಯಾವ ರೀತಿಯಾಗಿ ನಮ್ಮ ಬಡತನದಿಂದ ಮುಕ್ತಿ ಹೊಂದಿ ಶ್ರೀಮಂತರಾಗಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ .
ಹತ್ತಿ ಮರದ ಹಣ್ಣು ಅಷ್ಟೇ ಅಲ್ಲದೆ , ಹತ್ತಿ ಮರದ ಹೂವು ನೋಡಿದರು ಕೂಡ ಅದೃಷ್ಟವೇ ಬದಲಾಯಿಸುತ್ತದೆ . ಆ ದಿನ ನೀವು ಕೈಗೊಳ್ಳುವ ಕೆಲಸ ಕಾರ್ಯದಲ್ಲಿ ದಿಗ್ವಿಜಯ ಸಾಧಿಸಬಹುದು . ಶ್ರೀಮನ್ ವಿಷ್ಣು ಭಗವಂತ ನರಸಿಂಹನ ಅವತಾರವನ್ನು ತಾಳಿ ಹಿರಣ್ಯ ಕಶ್ಯಪರನ್ನು ಸಂಹಾರ ಮಾಡುತ್ತಾರೆ . ಪ್ರಹಲ್ಲಾದ ನ ರಕ್ಷಣೆಗಾಗಿ ಅವರ ಒದೆ ಮಾಡುವುದು ಅನಿವಾರ್ಯ ಆಗಿತ್ತು . ತನ್ನ ಕೈ ಬೆರಳಿನ ಉಗುರಿನಿಂದ ಹಿರಣ್ಯ ಕಶ್ಯಪನನ್ನ
ಸಂಹರಿಸುತ್ತಾರೆ .
ಇದರಿಂದಾಗಿ ನರಸಿಂಹ ಸ್ವಾಮಿಯ ಉಗುರುಗಳಲ್ಲಿ ಕಡಿತ ಉಂಟಾಗಲು ಪ್ರಾರಂಭಿಸುತ್ತದೆ . ಇದರಿಂದ ಮುಕ್ತಿ ಪಡೆಯಲು , ಪರಿಹಾರ ಹುಡುಕಲು , ಪ್ರಾರಂಭಿಸುತ್ತಾರೆ . ಆಗ ನರಸಿಂಹ ದೇವರಿಗೆ ಒಂದು ಹತ್ತಿಮರ ಕಾಣಿಸುತ್ತದೆ.
ಆ ಮರದಲ್ಲಿ ಅವರು ತಮ್ಮ ಕೈಗಳನ್ನು ಸೇರಿಸುತ್ತಾರೆ . ಆಗ ಇವರ ಬೆರಳಿನಲ್ಲಿ ಇರುವ ಕಡಿತ ನಿಲ್ಲುತ್ತದೆ . ಆದರೆ , ಹತ್ತಿ ಮರ ತನ್ನ ರೋಧನೆಯನ್ನು ನರಸಿಂಹ ಸ್ವಾಮಿಗೆ ಹೇಳುತ್ತದೆ . ಹತ್ತಿ ಮರವು ನರಸಿಂಹ ಸ್ವಾಮಿಯ ಬಳಿ ರಾಕ್ಷಸನ ರಕ್ತದ ಕಾರಣದಿಂದ ಅಪವಿತ್ರವಾಗಿದ್ದೇವೆ .
ದಯವಿಟ್ಟು ನಮಗೆ ಈ ನೋವಿನಿಂದ ಮುಕ್ತಿಯನ್ನು ನೀಡಿ ಎಂದು , ನರಸಿಂಹ ಸ್ವಾಮಿಗೆ ಕೇಳುತ್ತಾರೆ . ಆಗ ನರಸಿಂಹ ಸ್ವಾಮಿ ಮುಂದೆ ನೀವು ಜನರ ದುಃಖ ನೋವುಗಳನ್ನು ದೂರ ಮಾಡುವಂತಹ ಶಕ್ತಿಯನ್ನು ಹೊಂದಬಹುದು. ನಾನು ಲಕ್ಷ್ಮೀ ನರಸಿಂಹ ಸ್ವಾಮಿ ರೂಪದಲ್ಲಿ ನಿನ್ನಲ್ಲಿ ನೆಲೆಸುತ್ತೇನೆ . ಎಂದು ಹೇಳುತ್ತಾರೆ . ಹಾಗೂ ಹತ್ತಿ ಮರದ ಕೆಳಗೆ ಶವ ಯಾತ್ರೆಯನ್ನು ಮಾಡಿಕೊಂಡು ಹೋದರೆ , ಅವರೆಲ್ಲಾ ಪುಣ್ಯಗಳು ವೃಕ್ಷಕ್ಕೆ ದೊರೆಯುತ್ತದೆ ಎಂದು ಹೇಳುತ್ತಾರೆ .
ಅಂದಿನಿಂದ ಹತ್ತಿ ಮರ ಸಾಕಷ್ಟು ಮಹತ್ವವನ್ನು ಹೊಂದಿದ್ದು, ಸಾಕಷ್ಟು ಪಾವಡಗಳನ್ನು ನಡೆಸಿದೆ . ಹಾಗಾಗಿ ಹತ್ತಿ ಮರದ ಎಲೆಯನ್ನು ಉಪಯೋಗಿಸಿಕೊಂಡು , ಪರಿಹಾರ ಮಾಡಿಕೊಳ್ಳುವುದರಿಂದ , ಶ್ರೀಮಂತರಾಗುವ ಯೋಗ ಪ್ರಾಪ್ತಿಯಾಗುತ್ತದೆ. ಒಂದು ಕೆಂಪು ಹಾಳೆಯ ಮೇಲೆ ಹತ್ತಿ ಮರದ ಹಾಳೆಯಿಂದ ಸ್ವಸ್ತಿಕ್ ರಚಿಸಿ , ಮನೆಯಲ್ಲಿ ಇಟ್ಟು ಕೊಳ್ಳುವುದರಿಂದ ಹಣ ಸಂಪತ್ತು ವೃದ್ಧಿಯಾಗುತ್ತದೆ . ಇನ್ನು ಅಮಾವಾಸ್ಯೆ ದಿನ ಸಾಯಂಕಾಲ ಸಮಯದಲ್ಲಿ ಸೂರ್ಯಾಸ್ತದ ಅರ್ಧ ಗಂಟೆಯ ಮೊದಲು ,
ಹತ್ತಿ ಹಣ್ಣನ್ನು ಮನೆಗೆ ತೆಗೆದುಕೊಂಡು ಬಂದು , ದೇವರ ಕೋಣೆಯಲ್ಲಿ ಅಥವಾ ಹಣಕಾಸಿನ ಖಜಾನೆಯಲ್ಲಿ ಇಡಬೇಕು . ಅಥವಾ ಅಕ್ಕಿ , ಬೇಳೆ ಕಾಳಿನಲ್ಲಿ ಇಡಬೇಕು . ಇದರಿಂದಾಗಿ ನಿಮಗೆ ಇರುವ ಆರ್ಥಿಕ ಸಮಸ್ಯೆ ಕ್ರಮೇಣವಾಗಿ , ದೂರವಾಗುತ್ತದೆ . ಸಂಕಷ್ಟಗಳು ನಿವಾರಣೆಯಾಗಿ , ಆದಾಯದ ಮೂಲಗಳು ಹೆಚ್ಚುತ್ತದೆ . ವ್ಯಾಪಾರ ವ್ಯವಹಾರ ಸ್ಥಳಗಳಲ್ಲಿ ಇಡುವುದರಿಂದ , ಉನ್ನತ ಪ್ರಗತಿ ಕಾಣಬಹುದು .
ಗ್ರಾಹಕರ ಸಂಖ್ಯೆ ಕೂಡ ಹೆಚ್ಚಾಗುತ್ತದೆ . ಹಾಗೂ ಹತ್ತಿ ಹಣ್ಣು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ , ದಾರಿದ್ರ್ಯ, ನಕಾರಾತ್ಮಕತೆ ದೂರವಾಗುತ್ತದೆ . ಅಮಾವಾಸ್ಯೆಯ ದಿನ ಹಣ್ಣನ್ನು ತೆಗೆದುಕೊಂಡು ಬಂದು , ಮನೆಯಲ್ಲಿ ಇಟ್ಟು ಕೊಳ್ಳುವುದರಿಂದ , ನಿಮಗೆ ಅದೃಷ್ಟ ಎಂಬುದು ಬರುತ್ತದೆ . ಸುಖ , ಶಾಂತಿ , ಸಿರಿ , ಸಂಪತ್ತು ,ಹೆಚ್ಚುತ್ತದೆ . ಹೀಗೆ ಮಾಡುವುದರಿಂದ ಬಡವನು ಕೂಡ ಶ್ರೀಮಂತನಾಗಬಹುದು ಎಂದು ಹೇಳಲಾಗಿದೆ .