ಕಟಕ ರಾಶಿ ಜನವರಿ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕಟಕ ರಾಶಿಯ ಜನವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ . ಒಂದಷ್ಟು ವಿಶೇಷವಾದ ಬೆಳವಣಿಗೆಗಳು ಮೊದಲೇ ಶುರು ಆಗಿರುತ್ತದೆ . ಇದು ನಿಮ್ಮ ಗಮನಕ್ಕೂ ಕೂಡ ಬಂದಿರುತ್ತದೆ. ಕುಜ ಮತ್ತು ರವಿ ಗ್ರಹಗಳು ನಿಮ್ಮ ಷಷ್ಟ ಭಾಗದಲ್ಲಿ ಇರುವುದರಿಂದ ಶತ್ರುಗಳು ನಿಮಗೆ ಇರುವುದಿಲ್ಲ .ಕಟಕ ರಾಶಿ ಚಂದ್ರನ ರಾಶಿ ಆಗಿರುವುದರಿಂದ , ಸಾಮಾನ್ಯವಾಗಿ ಸೌಮ್ಯ ಸ್ವಭಾವ ಇರುತ್ತದೆ . ಅಂದರೆ ಯಾರ ಹತ್ತಿರ ಕೂಡ ಜಗಳ ಮಾಡುವ ಗುಣ ಇರುವುದಿಲ್ಲ .

ವಿವಾದ ಮಾಡುವ ಅಭ್ಯಾಸಗಳು ಕೂಡ ಈ ರಾಶಿಯವರಿಗೆ ಇರುವುದಿಲ್ಲ . ನೀವು ಮಾಡುವ ಕೆಲಸದಲ್ಲಿ ಸ್ಪರ್ಧೆ ಎನ್ನುವುದು ಇರುತ್ತದೆ . ಶತ್ರುಗಳು ಆಗಬೇಕು ಎಂಬುದು ಇರುವುದಿಲ್ಲ . ಸ್ಪರ್ಧೆ ಅಂತ ಇದ್ದೆ ಇರುತ್ತದೆ . ಒಂದಲ್ಲ ಒಂದು ಕಾರಣಕ್ಕಾಗಿ ಬೇರೆಯವರ ಜೊತೆ ಸ್ಪರ್ಧೆ ಮಾಡಬೇಕಾಗುತ್ತದೆ . ಜೀವನ ಅನ್ನೋದು ಒಂದು ಓಟ ಆಗಿರುತ್ತದೆ . ಎಲ್ಲರೂ ಕೂಡ ಅವರ ಗುರಿಯನ್ನು ತಲುಪಬೇಕು ಎಂಬ ಗುರಿ ಇದ್ದೇ ಇರುತ್ತದೆ. ಸ್ವಲ್ಪ ಮಟ್ಟಿನಲ್ಲಿ ನಾವೇ ಮುಂದೆ ಇರಬೇಕು ಎಂಬ ಭಾವನೆ ಸರ್ವೇ ಸಾಮಾನ್ಯವಾಗಿರುತ್ತದೆ .

ನೀವು ಕೂಡ ಜೀವನದಲ್ಲಿ ಮುಂದೆ ಇರುತ್ತೀರಿ .ಅಂತಹ ಪರಿವರ್ತನೆಗಳು ಈ ಗ್ರಹಗಳಿಂದ ನಿಮಗೆ ಜನವರಿ ತಿಂಗಳಲ್ಲಿ ಸಿಗಲಿದೆ .ಹೊಸ ವರ್ಷದ ಮಟ್ಟಿಗೆ ನಿಮಗೆ ವಿಶೇಷವಾದ ಸುದ್ದಿ ಎಂದು ಹೇಳಬಹುದು . ಸ್ವಂತ ಉದ್ಯೋಗ ಮಾಡುವವರಿಗೆ ಉತ್ಕೃಷ್ಟ ಮಟ್ಟದಲ್ಲಿ ಸೇವೆ ಸಲ್ಲಿಸಬೇಕು ಅನ್ನುವುದು ಸಾಧ್ಯವಾಗುತ್ತದೆ . ಎದುರಾಳಿಗಳ ಕಾಟದಿಂದ ನೀವು ಗೆಲುವನ್ನು ಪಡೆಯಬಹುದು . ಯಶಸ್ವಿ ಜೀವನಕ್ಕೆ ಒಂದು ಮುನ್ನುಡಿಯನ್ನು ಬರೆಯುವ ಸಾಧ್ಯತೆ ನಿಮ್ಮ ಜೀವನದಲ್ಲಿ ಇದೆ .

ಸರ್ಕಾರಿ ಕೆಲಸ ಮಾಡುವವರಿಗೆ ಯಶಸ್ಸು ತುಂಬಾ ಸಿಗಲಿದೆ . ನಿಮ್ಮ ಜೀವನದಲ್ಲಿ ವಿರಾಮ ಅನ್ನುವುದು ನಿಮ್ಮ ಜೀವನದ ದಿಕ್ಕನ್ನೇ ಬದಾಲಾಯಿಸುವ ಸಾಧ್ಯತೆ ಇದೆ. ವಿಶೇಷವಾಗಿ ನಿಮ್ಮ ಗಮನ ನಿಮ್ಮ ಕೆಲಸದ ಮೇಲೆ ಇರುತ್ತದೆ . ಯಾಕೆಂದರೆ ಗುರು ಗ್ರಹ ಹತ್ತನೇ ಮನೆಯಲ್ಲಿ ಇರುವುದರಿಂದ , ನೀವು ತುಂಬಾ ಪ್ರಯತ್ನವನ್ನು ಮತ್ತು ಕಠಿಣ ಕೆಲಸ ಮಾಡಲಾಗುತ್ತದೆ ..ನಿಮ್ಮಿಂದ ಕೊರತೆ ಆಗದ ರೀತಿ ಗುರು ಒಂದು ಎಚ್ಚರಿಕೆಯನ್ನು ಕೊಡುತ್ತಾನೆ .ಆದರೆ ಕಷ್ಟಗಳು ಬರುತ್ತಿರುತ್ತವೆ .

ನಿಮ್ಮ ಜೀವನದಲ್ಲಿ ಸವಾಲು ಕೂಡ ಎದುರಿಸಬೇಕಾಗುತ್ತದೆ . ಕೆಲಸಗಳು ಹೆಚ್ಚಾಗುವುದರಿಂದ ನಿಮಗೆ ಉದ್ವೇಗ ಕೂಡ ಹೆಚ್ಚಾಗುತ್ತದೆ . ಅಷ್ಟಮ ಶನಿ ಬೇರೆ ಇರುವುದರಿಂದ ಸ್ವಲ್ಪ ಚಿಂತೆಗಳನ್ನು ಮಾಡಲು ಶುರುವಾಗುತ್ತದೆ .ಈ ಕೆಲಸದ ಕಾರಣದಿಂದ ಆರೋಗ್ಯದಲ್ಲಿ ಏರುಪೇರು ಸಮಸ್ಯೆ ಉಂಟಾಗುತ್ತದೆ . ಇದರ ಬಗ್ಗೆ ವಿಶೇಷವಾದ ಎಚ್ಚರಿಕೆ ವಹಿಸಬೇಕು .

ಸ್ಪರ್ಧೆ ಎನ್ನುವುದು ದೂರ ಹೋಗುತ್ತದೆ .ತೃತೀಯದಲ್ಲಿ ಇರುವ ಕೇತು ಗ್ರಹ ಬೇರೆ ಕೆಲಸದ ಮೇಲೆ ಗಮನ ಹೋಗುವ ಹಾಗೆ ಮಾಡುತ್ತದೆ.. ವಿಶೇಷವಾಗಿ ಧೈರ್ಯವನ್ನು ಕೊಡುತ್ತದೆ . ಸಾಹಸ ಮಾಡುವ ಶಕ್ತಿ ಕೂಡ ಬರುತ್ತದೆ . ವಿಕ್ರಮ ಸ್ಥಾನ ಮೂರನೇ ಮನೆಯಲ್ಲಿ ಇರುವುದರಿಂದ ಹೊಸ ಚಿಂತನೆಗಳನ್ನು ಕೇತು ನೀಡುತ್ತಾನೆ . ಆ ಚಿಂತನೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವ ಸಾಮರ್ಥ್ಯ ಎಷ್ಟೋ ಸಲ ಇರುವುದಿಲ್ಲ . ಧೈರ್ಯ ಇರುವುದಿಲ್ಲ . ಪ್ರಶ್ನೆಗಳು ಸಂಭವಿಸುತ್ತದೆ .

ಸಂಶಯಗಳು ಮೂಡುತ್ತದೆ .ನಮ್ಮ ಮೇಲೆ ನಮಗೆ ನಂಬಿಕೆ ಇಲ್ಲದೆ ಮಾಡುವ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವ ಸಾಧ್ಯತೆ ಇರುತ್ತದೆ . ನಮ್ಮ ಬಗ್ಗೆ ನಮಗೆ ಅನುಮಾನ ಇರಬಾರದು . ಚಿಂತೆ ಅಥವಾ ಗೊಂದಲಗಳು ಬರುವ ಹಾಗೆ ಮಾಡುತ್ತಾರೆ .ಇಂತಹ ಅನುಮಾನಗಳು ದೂರವಾಗಿ ಸ್ಪಷ್ಟತೆ ಸಿಗುವ ಸಾಧ್ಯತೆ ಇರುತ್ತದೆ . ನೀವು ಹೂಡಿಕೆಯನ್ನು ಮಾಡಲು ಪ್ರಯತ್ನ ಮಾಡುವುದಾದರೆ ಸ್ವಲ್ಪ ಸಾವಧಾನದಿಂದ ಮಾಡಬೇಕಾಗುತ್ತದೆ . ಅಷ್ಟಮದಲ್ಲಿ ಇರುವ ಶನಿ ಅಷ್ಟು ಸುಲಭವಾಗಿ ಇದಕ್ಕೆ ಬಿಡದೆ ಇರಬಹುದು .

ನಿಮ್ಮ ಅನಾರೋಗ್ಯ , ನಿರ್ಲಕ್ಷ್ಯ , ಬೇಜವಾಬ್ದಾರಿತನ , ಇಂತಹ ಸಮಸ್ಯೆಗಳು ಬರುವ ಸಾಧ್ಯತೆಗಳು ಇದೆ . ನೀವು ಯಾವುದೇ ಒಂದು ಕೆಲಸಕ್ಕೆ ಎಷ್ಟು ಸಮಯವನ್ನು ಕೊಡಬಹುದು ಎಂದು ತಿಳಿದುಕೊಂಡು ಆನಂತರ ಆ ಕೆಲಸಕ್ಕೆ ಕೈ ಹಾಕುವುದು ಉತ್ತಮ .ಯೋಚನೆ ಮಾಡಿ ಪರಾಮರ್ಶೆ ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು . ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬಹಳ ಯಶಸ್ಸು ಸಿಗುತ್ತಾ ಹೋಗುತ್ತದೆ ಎಂದು ಹೇಳಬಹುದು . ಹಾಗೇನೇ ಒಂದು ಮಹತ್ವದ ವಿಚಾರ ನಡೆಯಲಿದೆ ಅದು ರವಿಯ ಪರಿವರ್ತನೆ .

ಷಷ್ಟ ಸ್ಥಾನದಿಂದ ರವಿ ಸಪ್ತಮ ಸ್ಥಾನಕ್ಕೆ ಹೋದಾಗ ಇದು ನಡೆಯುವುದು ಜನವರಿ 15 ಸಂಕ್ರಾಂತಿಯ ನಂತರ ..ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಮಗೆ ಅಷ್ಟೊಂದು ಯಶಸ್ಸು ಸಿಗುವುದಿಲ್ಲ ..ಸಪ್ತಮದಲ್ಲಿ ರವಿಯ ಅಸ್ತಿತ್ವ ಇರುವುದರಿಂದ ವೈವಾಹಿಕ ಜೀವನದಲ್ಲಿ ಖುಷಿಯನ್ನು ನಿರೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ . ಸ್ವಲ್ಪ ಹೊಂದಾಣಿಕೆ ಕಡಿಮೆ ಇರುತ್ತದೆ .ನಿಮ್ಮ ಜೀವನದಲ್ಲಿ ಅಲ್ಲೋಲ – ಕಲ್ಲೋಲ ಆಗುವ ಸಾಧ್ಯತೆಗಳು ಇದೆ . ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ತೊಂದರೆ ಇಡುವ ಸಾಧ್ಯತೆ ಇದೆ .

ನೀವು ಎಚ್ಚರಿಕೆಯಿಂದ ಇರಬೇಕು .ಶುಕ್ರ ಪಂಚಮದಲ್ಲಿ ಇರುವುದರಿಂದ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭ . ಮತ್ತು ಸ್ತ್ರೀಯರಿಗೆ ವಿಶೇಷವಾದ ವಾತಾವರಣ . ಮಕ್ಕಳಿಂದ ಸಮಾಧಾನ , ಅವರ ಸಾಧನೆ ನಿಮ್ಮ ಮನಸ್ಸಿಗೆ ಉಲ್ಲಾಸವನ್ನು ತಂದುಕೊಡುತ್ತದೆ .ಮಕ್ಕಳ ಪ್ರಗತಿಯನ್ನು ನೋಡಿ ನೀವು ಖುಷಿ ಪಡಬಹುದು . ಕಲಾವಿದರಿಗೆ ಇದು ಸೂಕ್ತವಾದ ಮಾಸ ಎಂದು ಹೇಳಲಾಗುತ್ತದೆ . ಒಂದು ಕಡೆಯಿಂದ ರವಿಯಿಂದ ಯಶಸ್ಸು ಸಿಕ್ಕರೆ , ಇನ್ನೊಂದು ಕಡೆಯಿಂದ ಶುಕ್ರನಿಂದ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗುತ್ತದೆ .

ಆರೋಗ್ಯದಲ್ಲಿ ಜನವರಿ 15ರವರೆಗೆ ದುಸ್ಥಿತಿಯಲ್ಲಿ ಇರುತ್ತದೆ ..ನಂತರ ಎಚ್ಚರಿಕೆಯಿಂದ ಇರಬೇಕು . ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡುವವರಿಗೆ ಅದ್ಭುತವಾದ ತಿಂಗಳು ಯಾಕೆಂದರೆ ರವಿ ಮತ್ತು ಕುಜ ಸೇರಿಕೊಂಡು ನಿಮಗೆ ಯಶಸ್ಸನ್ನು ತಂದು ಕೊಡುತ್ತಾರೆ. ಮತ್ತು ಕೇತುವಿನಿಂದ ಕೂಡ ಚಾಲನೆ ಮತ್ತು ಪ್ರೇರಣೆ ಸಿಗಲಿದೆ .ಈ ಬೆಳವಣಿಗೆಗಳು ನಿಮ್ಮ ಜೀವನದಲ್ಲಿ ಖುಷಿ ಮತ್ತು ಸಮಾಧಾನವನ್ನು ತರಲಿ ಎಂದು ಹೇಳಲಾಗುತ್ತದೆ .

Leave a Comment