ನಿಮ್ಮ ಅಂಗೈಯಲ್ಲಿ ಇರುವ ಸೂರ್ಯ ರೇಖೆಯ ನಿಜವಾದ ಸತ್ಯ ತಿಳಿಯಿರಿ

0

ನಾವು ಈ ಲೇಖನದಲ್ಲಿ ನಿಮ್ಮ ಅಂಗೈಯಲ್ಲಿ ಇರುವ ಸೂರ್ಯ ರೇಖೆಯ ನಿಜವಾದ ಸತ್ಯ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ .ಸೂರ್ಯ ರೇಖೆಯ ಬಗ್ಗೆ ಕೆಲವು ಜನರಿಗೆ ತಿಳಿದೇ ಇರುತ್ತದೆ . ಈ ರೇಖೆಯಲ್ಲಿ ಯಾವ ರೀತಿಯ ಸತ್ಯ ಅಡಗಿದೆ ಎಂದರೆ , ಇದರ ಬಗ್ಗೆ ತುಂಬಾ ಕಡಿಮೆ ಜನರಿಗೆ ಗೊತ್ತಿರುತ್ತದೆ . ಈ ರಹಸ್ಯ ಮತ್ತು ಇಲ್ಲಿರುವ ಸತ್ಯ ನಿಮ್ಮ ಜೀವನದ ಮೇಲೆ ತುಂಬಾ ಪ್ರಭಾವ ಬೀರುತ್ತದೆ . ಪ್ರಭಾವ ಹೇಗೆ ಮತ್ತು ಯಾವಾಗ ಬೀರುತ್ತದೆ . ಇದರ ಬಗ್ಗೆ ವಿಸ್ತಾರವಾಗಿ ನೋಡೋಣ .

ಒಂದು ವೇಳೆ ನೀವು ಹುಡುಗಿಯರು ಆಗಿದ್ದರೆ , ಎಡಗೈಯನ್ನು ನೋಡಿಕೊಳ್ಳಬೇಕು . ಹುಡುಗರು ಆಗಿದ್ದರೆ , ಬಲಗೈಯನ್ನು ನೋಡಿಕೊಳ್ಳಬೇಕು . ಇಲ್ಲಿ ಅನಾಮಿಕ ಬೆರಳಿನ ಕೆಳಗಡೆ ಇರುವ ರೇಖೆ ಸೂರ್ಯ ರೇಖೆ ಆಗಿರುತ್ತದೆ . ಇಲ್ಲಿ ನಿಮಗೆ ಗೊತ್ತಾಗುತ್ತದೆ . ಇದು ಕೆಲವರ ಅಂಗೈಯಲ್ಲಿ ಚಿಕ್ಕದಾದ ಸೂರ್ಯ ರೇಖೆ ಆಗಿರುತ್ತದೆ . ಇದು ಹೃದಯ ರೇಖೆಯನ್ನು ಕ್ರಾಸ್ ಮಾಡುವುದಿಲ್ಲ . ಇಲ್ಲಿ ಉದ್ದವಾದ ಸೂರ್ಯ ರೇಖೆಗಳು ಸಹ ಇರುತ್ತದೆ . ಇಲ್ಲಿ ಯಾರ ಅಂಗೈಯಲ್ಲಿ ಚಿಕ್ಕದಾದ ಸೂರ್ಯ ರೇಖೆ ಇರುತ್ತದೆ .

ಅವರ ಬಗ್ಗೆ ಹೇಳುವುದಾದರೆ , ನೀವು ವೃತ್ತಿಯನ್ನು ಪ್ರಾರಂಭಿಸುತ್ತಿದ್ದರೆ , ಇದಕ್ಕೂ ಮುನ್ನ ನಿಮ್ಮ ಜೀವನದಲ್ಲಿ ಏನೇ ನಡೆದರೂ , ಅದು ಸಂಘರ್ಷದಿಂದ ತುಂಬಿರುತ್ತದೆ . ಅಂದರೆ ನಿಮ್ಮ ಜೀವನದಲ್ಲಿ ಹೋರಾಟ , ಸಮಸ್ಯೆಗಳು , ಏರುಪೇರುಗಳು , ಬಂದಿರುತ್ತವೆ ಎಂದು ಹೇಳಬಹುದು . ಹಣದ ಸಮಸ್ಯೆ ಅಂತೂ ತುಂಬಾನೇ ಕಾಡಿರುತ್ತದೆ . ಅದರಲ್ಲಿ ಹಣ ಬಂದರೂ ಕೂಡ ನಿಲ್ಲುವುದಿಲ್ಲ .ಆಗ ನೀವು ನಿಮ್ಮ ವೃತ್ತಿಯನ್ನು ಶುರು ಮಾಡಿದಾಗ , ಒಳ್ಳೆಯ ಅವಕಾಶಗಳು ಸಿಗುತ್ತಾ ಹೋಗುತ್ತದೆ .

ನೀವು ಆ ಅವಕಾಶಗಳನ್ನು ಬಿಡುವುದೇ ಇಲ್ಲ . ಅದರಲ್ಲೂ ಚಿಕ್ಕ ಸೂರ್ಯ ರೇಖೆ ಇರುವ ವ್ಯಕ್ತಿಗಳು ಅವಕಾಶಗಳನ್ನು ಬಿಟ್ಟುಬಿಡದೆ , ಅವುಗಳನ್ನು ಪಡೆದು ಅವುಗಳಿಂದ ಪೂರ್ಣವಾದ ಲಾಭವನ್ನು ಪಡೆದುಕೊಳ್ಳುತ್ತಾರೆ . ಮುಂದೆ ಅವರು ತಮ್ಮ ಗುರಿಯನ್ನು ಕೂಡ ತಲುಪುತ್ತಾರೆ . ಈ ಎಲ್ಲಾ ಸಮಸ್ಯೆಗಳು ಚಿಕ್ಕ ಸೂರ್ಯ ರೇಖೆ ಇರುವ ವ್ಯಕ್ತಿಗಳದು ಆಗಿರುತ್ತದೆ . ಇನ್ನು ಉದ್ದವಾದ ಸೂರ್ಯ ರೇಖೆ ಇರುವ ವ್ಯಕ್ತಿಗಳ ಬಗ್ಗೆ ತಿಳಿಯೋಣ .

ಒಂದು ವೇಳೆ ಈ ರೇಖೆಯು ಹೃದಯ ರೇಖೆಯನ್ನು ದಾಟಿ ಮಸ್ತಿಷ್ಕ ರೇಖೆಯನ್ನು ತಲುಪಿದರೆ , ಈ ರೇಖೆಯು ನಿಮ್ಮ ಜೀವನದಲ್ಲಿ ಯಾವ ರೀತಿಯ ತೊಂದರೆ ನೀಡುತ್ತದೆ ಎಂದರೆ , ನೀವು ನೌಕರಿಯಾಗಲಿ , ವ್ಯಾಪಾರವಾಗಲಿ ಯಾವ ಸ್ಥಾನವನ್ನು ಪಡೆದುಕೊಳ್ಳಲು ಇಷ್ಟ ಪಡುತ್ತೀರೋ , ಈ ತರಹದ ಯಶಸ್ಸು ಸಿಗಲು ಹೆಚ್ಚಾಗುತ್ತದೆ .ಇದಕ್ಕೆ ನೀವು ತುಂಬಾ ಶ್ರಮವನ್ನು ಪಡಬೇಕು . ಇದರಿಂದ ನಿಮ್ಮ ಪ್ರಗತಿ ಹೆಚ್ಚಾಗುತ್ತದೆ . ನೌಕರಿ ಉದ್ಯೋಗ ಇರುವ ಜನರಿಗೆ ಹೆಚ್ಚಿನ ಲಾಭವನ್ನು ಕೊಡುತ್ತದೆ .

ನಿಮ್ಮ ಸೂರ್ಯ ಪರ್ವತದ ಮೇಲೆ ಎರಡು ನೇರವಾದ ಪ್ಯಾರಲಲ್ ರೇಖೆಗಳು ಕಾಣುತ್ತಿದ್ದರೆ , ಆ ವ್ಯಕ್ತಿಗಳು ತಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನ ಎದುರಿಸುತ್ತಿರುತ್ತಾರೋ , ಅಂಥವರಿಗೆ ಈ ರೇಖೆಗಳು ಹೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಬಹುದು . ಇವರು ಹೇಗೆ ಸುಧಾರಣೆಯನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿಯೋಣ . ಒಂದು ವೇಳೆ ಈ ಪ್ರಕಾರವಾದ ಪ್ಯಾರಲಲ್ ಎರಡು ರೇಖೆಗಳು ಇದ್ದರೆ , ಏನಾದರೂ ಸೂರ್ಯ ಪರ್ವತದ ಮೇಲೆ ಇದ್ದರೆ ,

ಇಂತಹ ಜನರು ಎರಡು ಮೂರು ರೀತಿಯ ಆದಾಯದ ಮೂಲಗಳನ್ನು ಹೊಂದಿರುತ್ತಾರೆ .ಇವರು ಒಂದು ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ . ಒಂದಕ್ಕಿಂತ ಹೆಚ್ಚಿನ ಕೆಲಸ ಮಾಡಿ , ಅವುಗಳಿಂದ ಹೆಚ್ಚಿನ ಆದಾಯ ಪಡೆದುಕೊಳ್ಳುತ್ತಾರೆ . ಕೆಲವರಿಗೆ ಕಷ್ಟಪಟ್ಟರೆ ಒಂದೇ ಕೆಲಸ ಆಗುತ್ತದೆ . ಆದರೆ ಇಂಥವರ ಜೀವನದಲ್ಲಿ ಭಿನ್ನವಾದ ಕಾರ್ಯಗಳು ಇರಬಹುದು . ಒಂದೇ ಬಾರಿ ಇವರ ಹಲವಾರು ರೀತಿಯ ವ್ಯಾಪಾರ ವ್ಯವಹಾರಗಳನ್ನು ಮಾಡಬಹುದು .

ಈ ಮಾತಿನ ಅರ್ಥ ಇವರ ಜೀವನದಲ್ಲಿ ಆದಾಯದ ಮೂಲಗಳು ಹೆಚ್ಚಾಗಿ ಇರುತ್ತವೆ . ಹಾಗಾಗಿ ಇದನ್ನ ಒಳ್ಳೆಯ ಸಂಕೇತ ಎಂದು ತಿಳಿಯಲಾಗಿದೆ .ನಿಮ್ಮ ಶನಿ ಪರ್ವತದ ಮೇಲೆ , ಈ ರೀತಿಯಾಗಿ ನೇರವಾದ ರೇಖೆ ಕೆಳಗಡೆ ಬಂದರೆ , ಇದನ್ನ ಭಾಗ್ಯ ರೇಖೆ ಎಂದು ಕೂಡ ಕರೆಯುತ್ತಾರೆ . ಈ ರೇಖೆಯ ಜೊತೆಗೆ ನಿಮ್ಮ ಸೂರ್ಯ ರೇಖೆ ಬಂದು ಸೇರಿದರೆ , ನಿಮ್ಮ ಆದಾಯದ ಮೂಲಗಳು ಕೂಡ ಹೆಚ್ಚಾಗುತ್ತದೆ .ಇಂತಹ ಅವಕಾಶಗಳು ತುಂಬಾ ಕಡಿಮೆ ಜನರಲ್ಲಿ ಸಿಗುತ್ತದೆ .ಈ ರೀತಿಯ ರೇಖೆ ಇದ್ದಾಗ , ಯಾವುದೇ ಕಾರಣಕ್ಕೂ ಆದಾಯದ ಸ್ಥಿತಿ ನಿಲ್ಲುವುದಿಲ್ಲ .ಮುಂದುವರಿಯುತ್ತಾ ಹೋಗುತ್ತದೆ .

ಈಗ ಸೂರ್ಯ ಪರ್ವತದ ಮೇಲಿರುವ ಸೂರ್ಯ ರೇಖೆಯ ನಿಜವಾದ ಸತ್ಯ ಏನೆಂದು ತಿಳಿಯುವುದಾದರೆ , ಇದು ನಿಮ್ಮ ಜೀವನದ ಯಾವ ರಹಸ್ಯವನ್ನು ಅಡಗಿಸಿಕೊಂಡಿರುತ್ತದೆ ಎಂಬುದನ್ನು ತಿಳಿಯೋಣ . ಒಂದು ಸೂರ್ಯ ರೇಖೆಯ ಮೇಲೆ ವಕ್ರವಾಗಿ ಇರುವ ರೇಖೆ ಬಂದರೆ , ಏನಾದರೂ ಈ ರೇಖೆ ಕೆಳಗಡೆ ಬರುತ್ತಿದ್ದರೆ , ಇದರ ಮುಖ ಕೆಳ ಭಾಗದತ್ತ ಇರುತ್ತದೆ . ಆ ರೇಖೆ ಹೃದಯ ರೇಖೆ ಹತ್ತಿರ ಹೋಗುತ್ತಿದ್ದರೆ , ಇಂತಹ ಜನರು ಜೀವನದಲ್ಲಿ ತುಂಬಾ ಮೋಸ ಹೋಗುತ್ತಾರೆ .

ನಿಮ್ಮ ಅಕ್ಕ ಪಕ್ಕದಲ್ಲಿರುವ ಜನರೇ ನಿಮಗೆ ನಂಬಿಕೆ ದ್ರೋಹ ಮಾಡಿರುತ್ತಾರೆ. ಇದು ನಿಮ್ಮ ಅನುಭವಕ್ಕೂ ಕೂಡ ಬರುತ್ತದೆ . ಈ ತರಹದ ಘಟನೆ ನಡೆಯುವುದಿಲ್ಲ ಎಂದು ನೀವು ಮುಂದೆ ಸಾಗುತ್ತಿರುತ್ತೀರಿ . ಈ ರೇಖೆ ನಿಮ್ಮ ಮೇಲೆ ಪ್ರಭಾವ ತೋರಿಸುತ್ತದೆ . ಈ ರೇಖೆ ಹಣದ ವಿಷಯ , ಪ್ರೀತಿಯ ವಿಷಯ , ಸ್ನೇಹಿತರ ಬಗ್ಗೆ ಕೂಡ ಇರಬಹುದು . ಅವಶ್ಯಕತೆ ಇದ್ದಾಗ , ನಿಮ್ಮ ಜೊತೆ ಯಾರು ಇರಲು ಬರುವುದಿಲ್ಲ . ಈ ಮಾತಿನ ಅರ್ಥ ಏನೆಂದರೆ ಈ ರೇಖೆಯು ನಕಾರಾತ್ಮಕ ಪ್ರಭಾವವನ್ನು ತೋರುತ್ತದೆ. ಇಲ್ಲಿ ನಮ್ಮ ಸಲಹೆ ಏನೆಂದರೆ , ಯಾವಾಗ ನೀವು ಒಬ್ಬರ ಸ್ನೇಹ ಬಯಸಿ ಹೋಗುತ್ತೀರೋ ಮತ್ತು ನಂಬಿಕೆ ಬಯಸಿ ಹೋಗುತ್ತೀರೋ ಸ್ವಲ್ಪ ಯೋಚನೆ ಮಾಡಿ ,

ಮುಂದುವರೆಯುವುದು ಒಳ್ಳೆಯದು . ಇದು ಕೆಳ ಭಾಗದತ್ತ ಹೋಗಿರುವ ರೇಖೆಯ ವಿಷಯವಾಗಿದೆ .ಇನ್ನು ಸೂರ್ಯ ರೇಖೆಯ ಪಕ್ಕದಲ್ಲಿ ವಕ್ರವಾಗಿ ಮೇಲಕ್ಕೆ ರೇಖೆ ಹೋಗಿದ್ದರೆ , ಇದರಲ್ಲೂ ಒಂದು ರಹಸ್ಯ ಇದೆ . ಯಾವುದಾದರೂ ಒಂದು ಕಾರ್ಯ ಪ್ರಾರಂಭ ಮಾಡಲು ಹೋದರೆ , ಅವರ ಮನಸ್ಸು ಎರಡು ಭಾಗವಾಗುತ್ತದೆ . ಏನು ಮಾಡಬೇಕೆಂದು , ಇವರಿಗೆ ಗೊತ್ತಾಗುವುದಿಲ್ಲ . ಇವರು ಯಾವುದೇ ವೃತ್ತಿಯನ್ನು ಮಾಡುತ್ತಿದ್ದರು , ಇವರ ಮನಸ್ಸು ಬದಲಾವಣೆ ಆಗುತ್ತಿರುತ್ತದೆ .

ಯಾವುದೇ ಕಾರ್ಯಗಳನ್ನು ಇವರಿಗೆ ಮಾಡಲು ಮನಸ್ಸು ಆಗುವುದಿಲ್ಲ . ಇವರು ತಮ್ಮ ಮನಸ್ಸನ್ನು ಬದಲಾವಣೆ ಅಥವಾ ಪರಿವರ್ತನೆ ಮಾಡುತ್ತಲೇ ಇರುತ್ತಾರೆ .ಇವರು ಮುಂದೆ ಸಾಗಿದರೂ ಕೆಲಸವನ್ನು ಮೊದಲಿನಿಂದ ಮಾಡುವ ಗುಣ ಇರುತ್ತದೆ . ಈ ಒಂದು ಕಾರಣದಿಂದ ಯಶಸ್ಸನ್ನು ಪಡೆಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಹಣದ ಸಮಸ್ಯೆ ಇವರ ಜೀವನದಲ್ಲಿ ಇದ್ದೇ ಇರುತ್ತದೆ . ಇವರು ಸಾಲ ಮಾಡಿದಷ್ಟು ಹಣವನ್ನು ಗಳಿಸಲು ಸಾಧ್ಯವಾಗುವುದಿಲ್ಲ . ಅದು ಹೆಚ್ಚಾಗುತ್ತಾ ಹೋಗುತ್ತದೆ . ಅಂದರೆ ಆರ್ಥಿಕ ಸ್ಥಿತಿಯಲ್ಲಿ ಸಮಸ್ಯೆಗಳು ಅಥವಾ ಏರುಪೇರುಗಳು ಇರುತ್ತವೆ .
ಇನ್ನು ಸೂರ್ಯ ರೇಖೆಯ ಮೇಲೆ ಹೆಚ್ಚಿನ ವಕ್ರ ರೇಖೆಗಳು ಇದ್ದರೆ , ಇದು ನಿಮ್ಮ ಮನಸ್ಸಿನಲ್ಲಿ ಅಥವಾ ಜೀವನದಲ್ಲಾಗಲಿ ಹೆಚ್ಚಿನ ಏರುಪೇರುಗಳನ್ನು ತರುತ್ತಾ ಇರುತ್ತದೆ .ಒಂದು ವೇಳೆ ನಿಮ್ಮ ಕೆಲಸ ಮುಗಿಯಿತು , ಅನ್ನುವಷ್ಟರಲ್ಲಿ ಸ್ವಲ್ಪ ಸಮಯವನ್ನು ಕೊಡಬೇಕಾಗುತ್ತದೆ .ಆಗುತ್ತಿರುವ ಕಾರ್ಯಗಳು ನಿಂತು ಹೋಗುತ್ತದೆ .ಯಾವುದೇ ಕೆಲಸವನ್ನು ಮಾಡಲು ಹೊರಟರು ಅದರಲ್ಲಿ ನಿಮಗೆ ದ್ವಂದ್ವಗಳು ಇರುತ್ತವೆ . ನಾವು ಹೇಳುವ ಸಲಹೆ ಏನೆಂದರೆ , ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡು , ಕೆಲಸವನ್ನು ಮುಂದುವರಿಸಬೇಕು . ನೀವು ಸ್ವಲ್ಪ ನಿಧಾನ ಮಾಡಿದಾಗ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ . ನೀವು ಒಂದು ಮಾತನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು . ಅಸ್ತ ಮುದ್ರಿತ ರೇಖೆಯ ಭವಿಷ್ಯ ಯಾವತ್ತಿಗೂ ತಪ್ಪಾಗುವುದಿಲ್ಲ ಎಂದು ಹೇಳಲಾಗಿದೆ.

Leave A Reply

Your email address will not be published.