ಕನ್ಯಾರಾಶಿಯ ಗುಣ ಲಕ್ಷಣಗಳ

0

ಇಂದಿನ ಲೇಖನದಲ್ಲಿ ಕನ್ಯಾರಾಶಿಯ ಗುಣ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ. ಈ ರಾಶಿಯವರು ತಮ್ಮ ಜೀವನದಲ್ಲಿ ಪ್ರಾಕ್ಟಿಕಲ್ ಆಗಿ ಇರಲು ಇಷ್ಟಪಡುತ್ತಾರೆ. ಯಾವುದೇ ವಿಷಯವನ್ನು ಎಮೋಷನ್ ಆಗಿ ತೆಗೆದುಕೊಳ್ಳುವುದಿಲ್ಲ ಪ್ರತಿಯೊಂದನ್ನು ಪ್ರಾಕ್ಟಿಕಲ್ ಆಗಿ ತೆಗೆದುಕೊಳ್ಳುತ್ತಾರೆ ಮತ್ತು ಸರಿಯಾದ ಸಲ್ಯೂಷನ್ ಅನ್ನು ತೆಗೆದುಕೊಳ್ಳುವಂತಹವರು.

ಯಾವುದೇ ಕೆಲಸವನ್ನು ನಾಳೆಗೆ ಮುಂದೂಡುವುದಿಲ್ಲ. ಆದಿನದ ಕೆಲಸವನ್ನು ಆ ದಿನವೇ ಮುಗಿಸಲು ಪ್ರಯತ್ನಪಡುವಂತಹವರು. ಇವರು ಬುದ್ದಿವಂತರು ಹಾಗಾಗಿ ಯಾವುದೇ ವಿಷಯದಲ್ಲೂ ತಪ್ಪನ್ನು ತುಂಬಾನೇ ಹುಡುಕುತ್ತಾರೆ. ತಪ್ಪನ್ನು ಹುಡುಕಲು ಹೋದಾಗ ನೀವೇ ಆ ತಪ್ಪಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಕನ್ಯಾರಾಶಿಯವರ ಬಗ್ಗೆ ಮತ್ತುಅವರ ಕೆಲಸದಲ್ಲಿ ಆಗಿರುವ ತಪ್ಪನ್ನು ಯಾರಾದರೂ ಹೇಳಿದರೇ ತುಂಬಾ ಬೇಗ ಕಸಿವಿಸಿಯಾಗುತ್ತದೆ.

ಆ ತಪ್ಪನ್ನ ಅವರು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಅವರ ಮೇಲೆ ಮತ್ತು ಅವರ ಕೆಲಸದ ಮೇಲೆ ಅವರಿಗೆ ಅಪಾರ ವಿಶ್ವಾಸವಿರುತ್ತದೆ. ಆದ್ದರಿಂದ ನಾನು ಮಾಡಿದ್ದೇ ಸರಿಯಾದ್ದದ್ದು ಎಂಬ ಮನೋಭಾವನೆ ಅವರಿಗೆ ಇರುತ್ತದೆ. ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾರೆ. ಸಂದರ್ಭ ಕಷ್ಟವಿದ್ದರೆ ಅಥವಾ ಕಷ್ಟವಿಲ್ಲದಿದ್ದರೇ ಹೇಗೆ ಇರಬೇಕೋ ಹಾಗೇ ಇರುತ್ತಾರೆ. ಇವರ ರಾಶ್ಯಾಧಿಪತಿ ಬುಧ ಗ್ರಹವಾಗಿರುತ್ತದೆ. ಹಾಗಾಗಿ ಮಿಥುನರಾಶಿಯ ರಾಶ್ಯಾಧಿಪತಿಯು ಬುಧ ಗ್ರಹವಾಗಿದೆ.

ಮಿಥುನ ರಾಶಿಯವರು ಪ್ರಯಾಣ ಮಾಡಲು, ಹೊಸ ಜನರನ್ನು ಭೇಟಿ ಮಾಡಲು, ಹೊಸ ಅನುಭವವನ್ನು ಪಡೆಯಲು ಇಷ್ಟಪಡುತ್ತಾರೆ. ಅದರೇ ಕನ್ಯಾರಾಶಿಯವರಲ್ಲಿ ಬುಧಗ್ರಹವು ಒಂದು ವಿಷಯವನ್ನು ಯಾವ ರೀತಿ ಅನಲೈಸ್ ಮಾಡಿ ಅದಕ್ಕೆ ಯಾವ ರೀತಿ ಸಲ್ಯೂಷನ್ ಹುಡುಕಿಕೊಳ್ಳಬೇಕು ಎಂದು ಹೇಳಿಕೊಡುತ್ತದೆ. ಹಾಗಾಗಿ ಕನ್ಯಾರಾಶಿಯವರು ಬುದ್ಧಿವಂತರು, ಕ್ಲಿಯರ್ ಥಿಂಕಿಂಗ್, ಅನಾಲೈಸ್ ಮಾಡುವ ಗುಣ ಇವರಲ್ಲಿ ಹೆಚ್ಚಾಗಿ ಇರುತ್ತದೆ. ಇವರ ಕೆಲಸದಲ್ಲಿ ಬರುವ ಔಟ್ ಪುಟ್ ಯಾವಾಗಲೂ ಬೇರೆಯವರಿಗೆ ಸಹಾಯವಾಗಿರಬೇಕು ಎಂಬ ಭಾವನೆ ಇರುತ್ತದೆ.

ಇವರು ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಮುಂದೆ ಬರಲಿ, ಇಲ್ಲದಿರಲಿ ಆದರೇ ಇವರ ಕೆಲಸದಲ್ಲಿ ಬೇರೆಯವರಿಗೆ ಸಹಾಯವಾಗಲಿ ಎಂಬ ಭಾವನೆ ಇರುತ್ತದೆ. ಕನ್ಯಾರಾಶಿ ಆರನೇ ಮನೆಯನ್ನು ಸೂಚಿಸುತ್ತದೆ. ಇದು ರೋಗಶತೃಗಳನ್ನು ಸೂಚಿಸುತ್ತದೆ. ಆಹಾರ ಕ್ರಮದ ಬಗ್ಗೆ ಒಳ್ಳೆಯ ನಾಲ್ಜೆಡ್ ಇರುತ್ತದೆ. ಕನ್ಯಾರಾಶಿಯವರು ಲವ್ ವಿಷಯದಲ್ಲಿ ತುಂಬಾ ಸ್ಟ್ರಾಂಗ್, ರೆಸ್ಪಾನ್ಸಿಬಲ್ , ರಾಯಲ್ ಮತ್ತು ಡೆಡಿಕೇಟೆಡ್ ಆಗಿ ಇರುತ್ತಾರೆ. ಹಾಗಾಗಿ ಇವರ ಸಂಗಾತಿಯಲ್ಲಿ ಇವರ ಮೇಲೆ ನಂಬಿಕೆ ಇರುತ್ತದೆ.

ಅಂದರೆ ನನಗೇನಾದರೂ ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆಂಬುದಾಗಿದೆ. ಇವರು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವುದರಿಂದ ಇವರಲ್ಲಿ ಎಮೋಷನ್ ತುಂಬಾ ಕಡಿಮೆ ಇರುತ್ತದೆ ಹಾಗಾಗಿ ಇವರಿಗೆ ಏನು ಅನಿಸುತ್ತದೆಯೋ ಅದನ್ನು ನೇರವಾಗಿ ಹೇಳಿಬಿಡುತ್ತಾರೆ. ಇವರ ಈ ಗುಣದಿಂದ ಇವರ ರಿಲೇಷನ್ ಶಿಪ್ ನಲ್ಲಿ ಸ್ವಲ್ಪ ಸಮಸ್ಯೆಯನ್ನು ತರುತ್ತದೆ. ಇವರಲ್ಲೀ ಫೀಲಿಂಗ್ ಕಡಿಮೆ ಇರುತ್ತದೆ ಆದರೇ ಇವರ ಬಾಂಡಿಂಗ್ ಚೆನ್ನಾಗಿರುತ್ತದೆ. ಕನ್ಯಾರಾಶಿ ಕರುಳನ್ನು ಸೂಚಿಸುತ್ತದೆ.

ಒತ್ತಡದಿಂದ ತಲೆನೋವಿನ ಸಮಸ್ಯೆ ಇರುತ್ತದೆ. ವಾತಾ, ಉಸಿರಾಟದ ಸಮಸ್ಯೆ ಕಂಡುಬರುತ್ತದೆ. ಹಾಗಾಗಿ ರಿಲ್ಯಾಕ್ಸ್ ಆಗಿ ಇರಿ. ಸರಿಯಾದ ಸಮಯಕ್ಕೆ ನಿದ್ದೆ ಮಾಡಿ. ಕೆರಿಯರ್ ವಿಷಯಕ್ಕೆ ಬಂದರೆ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತೀರಿ, ಮೈಂಡ್ ತುಂಬಾ ಶಾರ್ಪ್ ಆಗಿ ಇರುತ್ತೀರಿ. ಅಗ್ರಿಕಲ್ಚರ್, ಲಾ, ಬ್ಯುಜಿನೆಸ್ ಈ ಕ್ಷೇತ್ರ ಆಗಿಬರುತ್ತದೆ. ಬ್ಯಾಂಕಿಂಗ್, ಚಾರ್ಟೆಡ್ ಅಕೌಂಟ್, ಈ ರೀತಿಯ ಹಣ ವರ್ಗಾವಣೆಯಾಗುವ ಬ್ಯುಜಿನೆಸ್ ಚೆನ್ನಾಗಿಯೇ ಆಗಿಬರುತ್ತದೆ.

ಹಣಕಾಸಿನ ವಿಷಯದಲ್ಲಿ ತುಂಬಾನೇ ಸ್ಟ್ರಾಂಗ್ ಆಗಿ ಇರುತ್ತೀರಿ. ಹಣವನ್ನು ಹೇಗೆ ಬಳಸಬೇಕು ಎಂದು ಗೊತ್ತಿರುತ್ತದೆ, ವ್ಯರ್ಥ ಖರ್ಚು ಮಾಡುವುದಿಲ್ಲ. ಕಷ್ಟಪಟ್ಟು ಹಣ ಸಂಪಾದನೆ ಮಾಡಲು ಇಷ್ಟಪಡುತ್ತೀರಿ ಆದರೇ ಹಣ ಉಳಿತಾಯ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಹಣ ಕೈಯಲ್ಲಿ ನಿಲ್ಲುವುದಿಲ್ಲ ಬೇಗನೇ ಖರ್ಚಾಗಿಬಿಡುತ್ತದೆ. ಹಾಗಾಗಿ ಸ್ವಲ್ಪ ಉಳಿತಾಯದ ಕಡೆ ಗಮನ ಕೊಡಿ. ನಿಮ್ಮಲ್ಲಿ ತಪ್ಪನ್ನು ಕಂಡುಹಿಡಿಯುವ ಗುಣ ಇದೆ. ನೀವು ಹಾರ್ಡ್ ವರ್ಕಿಂಗ್ ಮಾಡುತ್ತೀರಿ. ಬೇರೆಯವರ ಸಲಹೆಯನ್ನು ಕೇಳುತ್ತೀರಿ ಆದರೇ ನಿಮಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನು ಮಾಡುತ್ತೀರಿ. ಹಾಗಾಗಿ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಒಂದೊಂದು ಸಲ ನಿಧಾನಗತಿಯಲ್ಲಿರುತ್ತದೆ.

Leave A Reply

Your email address will not be published.