ಕಳಶ ಇಟ್ಟು ಪೂಜೆ ಮಾಡುವವರು ತಿಳಿಯಲೇ ಬೇಕಾದ ವಿಷಯ

ನಾವು ಈ ಲೇಖನದಲ್ಲಿ ಕಳಶ ಇಟ್ಟು ಪೂಜೆ ಮಾಡುವವರು ತಿಳಿಯಲೇ ಬೇಕಾದ ವಿಷಯದ ಬಗ್ಗೆ ಇಲ್ಲಿ ಹೇಳಲಾಗಿದೆ . ಕಳಶ ಎಂದರೆ ಅದು ಲಕ್ಷ್ಮಿ ಸ್ವರೂಪ ಅಂತ ಕಳಶವನ್ನು ಇಡುವಾಗ ತುಂಬಾ ಎಚ್ಚರವಾಗಿರಬೇಕು 1 . ಕಳಶಕ್ಕೆ ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಕೋಟಿಂಗ್ ಕಳಶದ ಚೊಂಬನ್ನು ಬಳಸಲೇಬಾರದು ಎಚ್ಚರ .2 . ಕಲಶಕ್ಕೆ ಬೆಳ್ಳಿ , ಹಿತ್ತಾಳೆ , ತಾಮ್ರದ ಚೊಂಬುಗಳು ಬಹಳ ಶ್ರೇಷ್ಠ . ನಿಮ್ಮ ಶಕ್ತಿಗನಸಾರವಾಗಿ ಇಟ್ಟು ಪೂಜಿಸಬೇಕು .

3 . ನಿಮ್ಮ ಪೂರ್ವಜರು ಯಾವ ರೀತಿ ಕಲಶ ಸ್ಥಾಪನೆ ಮಾಡಿ ಪೂಜಿಸುತ್ತಿದ್ದರು , ಅದೇ ರೀತಿ ನೀವು ಪಾಲಿಸುವುದು ಉತ್ತಮ .

4 . ಕೆಲವರು ಲಕ್ಷ್ಮಿ ಕಳಶ ಇಡುತ್ತಾರೆ . ಇನ್ನು ಕೆಲವರು ಮನೆದೇವರ ಕಳಶ ಇಡುತ್ತಾರೆ .

5 . ಕೆಲವರು ಕಾಯಿ ಕಳಶ ಇಡುತ್ತಾರೆ . ಇನ್ನು ಕೆಲವರು ಎಲೆ ಕಲಶ ಇಡುತ್ತಾರೆ .ಯಾವುದೇ ಆದರೂ ನಿಯಮ ಪಾಲಿಸುವುದು ಉತ್ತಮ .

6 . ಒಂದು ವೇಳೆ ನೀವು ಲಕ್ಷ್ಮಿ ಕಲಶ ಇಡುವುದಾದರೆ , ಕಳಶಕ್ಕೆ ಮಾಂಗಲ್ಯ ಹಾಕಲೇಬೇಕು . ಮಾಂಗಲ್ಯ ಇಲ್ಲದಿದ್ದರೆ , ಅರಿಶಿಣದ ಕೊಂಬನ್ನು ಕಟ್ಟಬೇಕು ನೆನಪಿರಲಿ .

7 . ಕಳಶವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು . ಒಂದು ತಟ್ಟೆಗೆ ಮೂರು ಅಳತೆ ಅಥವಾ ಐದು ಅಳತೆ ಹಿಡಿ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿಣ ಕುಂಕುಮ ಹಾಕಿ ಉಂಗುರದ ಬೆರಳಿನಿಂದ ಅಷ್ಟದಳದ ಕಮಲವನ್ನು ಬಿಡಿಸಿ ಅದರ ಮೇಲೆ ಇಡಬೇಕು .

8 . ಕಳಶಕ್ಕೆ ಶುದ್ಧವಾದ ಚೊಂಬನ್ನು ತೆಗೆದುಕೊಳ್ಳಿ , ನಂತರ ಅದಕ್ಕೆ ಅರಿಶಿಣ , ಕುಂಕುಮ, ಗಂಧ ಹಚ್ಚಿ ಶುದ್ಧವಾದ ನೀರು ಹಾಕಿ . ನಂತರ ಅದಕ್ಕೆ ಒಂದು ಚಿಟಿಕೆ ಅರಿಶಿಣ ಕುಂಕುಮ ಹಾಕಿ ಸ್ವಲ್ಪ ಮಂತ್ರಾಕ್ಷತೆ ಹಾಕಿ . ನಂತರ ಒಂದು ಹೂವೂ ಹಾಗೂ ಒಂದು ನಾಣ್ಯ ಯಾವುದಾದರೂ ಸರಿ ಹಿತ್ತಾಳೆ , ಬೆಳ್ಳಿ ಅಥವಾ ನಾರ್ಮಲ್ ನಾಣ್ಯ ಯಾವುದಾದರೂ ಸರಿ ಮರೆಯದೆ ಹಾಕಿ . ಇದು ಪ್ರಾಣದ ಪ್ರತೀಕ .

9 . ಕಳಸಕ್ಕೆ ಹಾಕುವ ನೀರು ತೆಂಗಿನಕಾಯಿಗೆ ತಾಕುವಂತೆ ಇರಬೇಕು . ಆದರೆ ಚೊಂಬಿನಿಂದ ಚೆಲ್ಲುವಂತೆ ಇರಬಾರದು .

10 . ಇನ್ನು ಕೆಲವರು ಕವಡೆ , ಗೋಮತಿ ಚಕ್ರ , ಕಮಲದ ಬೀಜವನ್ನು ಹಾಕಬಹುದು . ಆದರೆ ಇದು ಹೊರತುಪಡಿಸಿ ಹಬ್ಬ ಹರಿದಿನದಲ್ಲಿ ಹಾಕಿದರೆ ಸಾಕು .

11 . ತೆಂಗಿನಕಾಯಿ ವಿಷಯಕ್ಕೆ ಬಂದರೆ ಹಾಳಾಗದ ಅಥವಾ ಒಳ್ಳೆಯ ತೆಂಗಿನಕಾಯಿ ಆರಿಸಿ ಜೊತೆಗೆ ಜುಟ್ಟು ಇರುವ ತೆಂಗಿನಕಾಯಿ ಇಡಬೇಕು . ಕಣ್ಣು ಕಾಣಿಸದ ತೆಂಗಿನಕಾಯಿ ಇಡಬೇಕು. ಇದು ಬಹಳ ಮುಖ್ಯ .

12 . ಕಳಶಕ್ಕೆ ವಿಳ್ಳೇದೆಲೆ ಅಥವಾ ಮಾವಿನ ಎಲೆ ಯಾವುದಾದರೂ ಸರಿ ಇಡಬಹುದು . ಆದರೆ ಎಲೆ ಹರಿದಿರಬಾರದು , ಹಾಗೂ ಎಲೆಗಳು ಒಂದೇ ಅಳತೆಯಲ್ಲಿ ಇರಬೇಕು . ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು .

13 . ಯಾವುದೇ ಕಾರಣಕ್ಕೂ ಮಂಗಳವಾರ , ಶುಕ್ರವಾರ , ಅಮಾವಾಸ್ಯೆ , ಹುಣ್ಣಿಮೆ ದಿನ ಕಳಸ ಕದಲಿಸಬಾರದು . ನಾಳೆ ಇದೆ ಅನ್ನುವಾಗಲೇ ತೆಗೆದು ಸ್ವಚ್ಛ ಮಾಡಿ ನಂತರ ಪ್ರತಿಷ್ಠಾಪನೆ ಈ ದಿನದಲ್ಲಿ ಮಾಡಬೇಕು .

14 . ಕಳಶ ಕದಲಿಸುವಾಗ ಮೂರು ಸಲ ಬಲಕ್ಕೆ ಸರಿಸಿ ನಂತರ ತೆಗೆಯಬೇಕು .

15 . ಇನ್ನು ತುಂಬಾ ಮುಖ್ಯವಾದ ವಿಷಯವೆಂದರೆ , ಕಳಶ ಪ್ರತಿಷ್ಠಾಪನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಪದೇಪದೇ ಮುಟ್ಟುವುದು ಸರಿಪಡಿಸುವುದು ಮಾಡಬಾರದು ಎಚ್ಚರ …

ಕಳಸ ಕದಲಿಸಿದ ನಂತರ ನೀರನ್ನು ತುಳಿಸಿ ಗಿಡ ಅಥವಾ ತೆಂಗಿನ ಮರಕ್ಕೆ ಹಾಕಿ. ಯಾರೂ ತುಳಿಯಬಾರದು ನೆನಪಿರಲಿ .

Leave a Comment