ಈ ಮಹಿಳೆಯರು ಎಷ್ಟು ಬುದ್ಧಿ ಇಲ್ಲದವರು ಲಕ್ಷ್ಮಿ ಬೆಳಿಗ್ಗೆ 5 ಗಂಟೆಗೆ ಎದ್ದು ಮನೆ ಕ್ಲೀನ್ ಮಾಡಿ ಬಾಗಿಲು ತೊಳೆದು ರಂಗೋಲಿ ಬಿಟ್ಟು ಸ್ನಾನ ಮಾಡಿಕೊಂಡು ಬಂದು ದೇವರ ದೀಪ ಹಚ್ಚಿದ ನಂತರ ತಕ್ಷಣ ಅಡುಗೆ ಕೋಣೆಗೆ ಹೋಗುತ್ತಾಳೆ. ಚಹಾ ಮಾಡೋದಕ್ಕೆ ಒಲೆ ಮೇಲೆ ಹಾಲು ಕಾಯಿಸುವುದಕ್ಕೆ ಇಟ್ಟು ಮಕ್ಕಳನ್ನ ಶಾಲೆಗೆ ರೆಡಿ ಮಾಡುವುದಕ್ಕೆ ಎಬ್ಬಿಸುತ್ತಾಳೆ.
ಟೀ ರೆಡಿ ಆದ ಮೇಲೆ ಗಂಡನಿಗೆ ಅತ್ತೆ ಮತ್ತು ಮಾವನಿಗೆ ಕೊಟ್ಟು ಬಂದು ದೋಸೆ ಮಾಡುವುದಕ್ಕೆ ಶುರು ಮಾಡುತ್ತಾಳೆ. ಮಕ್ಕಳು ರೆಡಿಯಾಗಿ ಟಿಫಿನ್ ಮಾಡಿದ ನಂತರ ಸ್ಕೂಲ್ ಬಸ್ ಬರುತ್ತದೆ. ಮಕ್ಕಳನ್ನ ಬಸ್ಸು ಹತ್ತಿಸಿ ಬಂದ ನಂತರ ಟೇಬಲ್ ಮೇಲೆ ಇದ್ದ ಪ್ಲೇಟ್ಸ್ ಗಳನ್ನು ಸಿಂಕಿನ ಒಳಗಡೆ ತೆಗೆದು ಇಡುತ್ತಾಳೆ. ಅಷ್ಟರಲ್ಲಿ ಗಂಡನಿಗೆ ಆಫೀಸಿಗೆ ಹೋಗಲು ಲೇಟ್ ಆಗುತ್ತದೆ
ಅಂತ ಅವರಿಗೆ ಬೇಕಾದ ಸಾಮಾನುಗಳನ್ನೆಲ್ಲ ಕೊಟ್ಟು ಮತ್ತೆ ಅಡುಗೆ ಕೋಣೆಗೆ ಓಡಿ ಬರುತ್ತಾಳೆ. ಗಂಡನಿಗೆ ದೋಸೆ ಮಾಡೋದಕ್ಕೆ ಶುರು ಮಾಡುವಷ್ಟರಲ್ಲಿ ನಾದಿನಿ ಬಂದು ನನಗೆ ಕಾಲೇಜಿಗೆ ಹೋಗೋದಿಕ್ಕೆ ಲೇಟ್ ಆಗ್ತಾ ಇದೆ ನನಗೆ ಮೊದಲು ದೋಸೆ ಮಾಡಿಕೊಡಿ ಅಂತ ಪ್ಲೇಟ್ ತಕ್ಕೊಂಡು ಬರುತ್ತಾಳೆ. ಗಂಡನಿಗೆ ಮತ್ತು ನಾದಿನಿಗೆ ದೋಸೆ ಮಾಡಿ ಕೊಟ್ಟು 9 ಗಂಟೆಯಾಗುವಷ್ಟರಲ್ಲಿ ಎಲ್ಲರೂ ಅವರವರ ಕೆಲಸಕ್ಕೆ ಹೋಗುತ್ತಾರೆ.
ಅವರು ಹೋದ ಮೇಲೆ ಮತ್ತೆ ಅತ್ತೆ ಮಾವನಿಗೆ ಕೂಡ ದೋಸೆ ಮಾಡಿಕೊಡುತ್ತಾಳೆ. ಅವರು ತಿನ್ನುವ ಸಮಯದಲ್ಲಿ ಪಾತ್ರೆಗಳನ್ನು ತೊಳೆಯಲು ಶುರುಮಾಡುತ್ತಾಳೆ. ಅಷ್ಟರಲ್ಲಿ 10 ಗಂಟೆ ಕಳೆದು ಹೋಗಿರುತ್ತದೆ. ವಾಷಿಂಗ್ ಮೆಷಿನ್ ಗೆ ಬಟ್ಟೆ ಹಾಕಿ ಅವಳಿಗೆ ದೋಸೆ ಮಾಡಿಕೊಳ್ಳುವುದಕ್ಕೆ ಅಡುಗೆ ಮನೆಗೆ ಹೋಗುತ್ತಿರಬೇಕಾದರೇ ಅಷ್ಟರಲ್ಲಿ ಡೋರ್ ಬೆಲ್ ಹೊಡೆಯುವ ಶಬ್ಧ ಕೇಳುತ್ತದೆ.
ಬಾಗಿಲು ತೆಗೆದು ನೋಡುವಾಗ ಅವಳ ಅತ್ತಿಗೆ ಮತ್ತು ಅತ್ತಿಗೆಯ ಮಕ್ಕಳೆಲ್ಲರೂ ಬಂದರು. ಅವರಿಗೆ ತಿಂಡಿ ಕಾಫಿ ಮಾಡಿಕೊಟ್ಟು ಆಗುವಷ್ಟರಲ್ಲಿ 11:30 ಆಗುತ್ತದೆ. ಇನ್ನು ಮಧ್ಯಾಹ್ನ ಮಕ್ಕಳಿಗೆ ಅಡುಗೆ ಮಾಡುವುದು ಅಂತ ಅಡುಗೆ ಕೋಣೆಗೆ ಹೋಗುತ್ತಾಳೆ. ಅಷ್ಟರಲ್ಲಿ ಅತ್ತೆ ಹೇಳುತ್ತಾಳೆ ನಿನ್ನ ಅತ್ತಿಗೆಗೆ ಒಳ್ಳೆ ರುಚಿರುಚಿಯಾದ ಬಗೆಬಗೆಯಾದ ಅಡುಗೆಗಳನ್ನು ಮಾಡು ಅಂತ ಅತ್ತಿಗೆಗೋಸ್ಕರ ಸ್ಪೆಷಲ್ ಆದ ಅಡುಗೆ ಮಾಡುವಂತ
ಅತ್ತೆ ಹೇಳಿರುವುದರಿಂದ ಲಕ್ಷ್ಮಿ ಹಾಗೆ ಮಾಡುತ್ತಾಳೆ, ಅಷ್ಟರಲ್ಲಿ ಗಂಟೆ ಒಂದುವರೆ ಆಗುತ್ತದೆ. ಮಕ್ಕಳು ಕೂಡ ಬರುತ್ತಾರೆ. ಕೈಕಾಲು ತೊಳೆದು ಮಕ್ಕಳು ಊಟಕ್ಕೆ ಆ ಕಡೆಯಿಂದ ನಾದಿನಿ ಕೂಡ ಬರುತ್ತಾಳೆ ಬಂದು ಎಲ್ಲರ ಊಟ ಆದ ನಂತರ ಅವಳಿಗೆ ತುಂಬಾ ಹಸಿವು ಆಗೋದಕ್ಕೆ ಶುರುವಾಗುತ್ತದೆ ಊಟ ಮಾಡಲು ಕುತ್ಕೊಂಡಾಗ ಎಲ್ಲ ಪಾತ್ರೆಯ ಮುಚ್ಚಲು ತೆಗೆದು ನೋಡುತ್ತಾಳೆ ಎಲ್ಲ ಮುಗಿದಿರುತ್ತದೆ.
ಅಷ್ಟರಲ್ಲಿ ಗಂಡ ಬರುತ್ತಾನೆ ಬಂದು ತುಂಬಾ ಹಸಿವು ಆಗ್ತಾ ಇದೆ ಊಟಕ್ಕೆ ಬಡಿಸು ಅಂತಾ ಹೇಳುತ್ತಾನೆ. ಬೇಗ ಬೇಗ ಅಡುಗೆ ಮನೆಗೆ ಹೋಗಿ ಗಂಡನಿಗೆ ಒಂದು ಒಲೆಯಲ್ಲಿ ಚಪಾತಿ ಇನ್ನೊಂದು ಒಲೆಯಲ್ಲಿ ಪಲ್ಯ ಮಾಡೋದಕ್ಕೆ ಶುರು ಮಾಡುತ್ತಾಳೆ ಲಕ್ಷ್ಮಿ ಎಲ್ಲ ಮಾಡಿ ಆಗೋ ಅಷ್ಟರಲ್ಲಿಲ ಸಂಜೆ 4:30 ಆಗುತ್ತದೆ. ಗಂಡ ಊಟ ಮಾಡೋದಕ್ಕೆ ಕೂರುತ್ತಾನೆ.
ಆವಾಗ ಗಂಡ ಬಾ, ಊಟ ಮಾಡೋದಕ್ಕೆ ಕೂರು ತುಂಬಾ ಲೇಟಾಯ್ತು ಅಂತ ಕರೀತಾನೆ. ತಕ್ಷಣ ಲಕ್ಷ್ಮಿಯ ಕಣ್ಣಲ್ಲಿ ನೀರು ಬರುತ್ತದೆ. ಅವಳ ಕಣ್ಣಲ್ಲಿ ನೀರು ಬಂದದ್ದು ಯಾಕೆ ಎಂಬುದು ಗಂಡನಿಗೆ ಗೊತ್ತಿಲ್ಲ ಸುಮ್ಮನೆ ಏನು ನಿನಗೆ ಹುಚ್ಚ ಅಳೋದಕ್ಕೆ ಅಂತ ಕೇಳುತ್ತಾನೆ. ಆಗ ಹೆಂಡತಿ ಹೇಳುತ್ತಾಳೆ ಹೌದು ಹೆಣ್ಣುಮಕ್ಕಳಿಗೆ ಹುಚ್ಚೆ ಬೇರೆ ಕೆಲಸ ಏನು ಇಲ್ವಲ್ಲ ಅದಕ್ಕೆ ಅಳ್ತಾ ಈ ಲೋಕದಲ್ಲಿ ಸಂಬಳ ಇಲ್ಲದೆ ಕೆಲಸ ಮಾಡುವವಳು ಒಬ್ಬಳೇ ಒಬ್ಬಳು ಅದು ಹೆಣ್ಣು ಅಂತ ಗಂಡನ ಹತ್ತಿರ ಹೇಳುತ್ತಾಳೆ.
ತಾಯಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ ಇನ್ನು ಹಲವಾರು ಪಾತ್ರಗಳನ್ನ ನಿಭಾಯಿಸುತ್ತಾ ಎಲ್ಲ ಜವಾಬ್ದಾರಿಗಳನ್ನು ಒಂದೇ ಒಟ್ಟಿಗೆ ನಿಭಾಯಿಸಲು ಒಂದು ಹೆಣ್ಣಿಗೆ ಮಾತ್ರ ಸಾಧ್ಯ. ಆ ಹೆಣ್ಣಿಗೆ ಸಂಬಳ ಬೇಕಿಲ್ಲ ಸನ್ಮಾನವು ಮಾಡಬೇಕಾಗಿಲ್ಲ ಆದರೇ ಪ್ರೀತಿಯಿಂದ ಮಾತಾಡಿ ಪ್ರೀತಿಯಿಂದ ಇರಿ ಅವಳನ್ನು ಯಾವತ್ತೂ ನೋಯಿಸಬೇಡಿ, ಅವಳನ್ನ ಸ್ವಲ್ಪ ಪ್ರೀತಿ ತೋರಿಸುವ ಜನ ಇದ್ದಾರೆ ಎಂದು ತಿಳಿದರೆ ಸಾಕು ಅವಳು ಎಂದೆಂದಿಗೂ ಸಂತೋಷವಾಗಿರುತ್ತಾಳೆ. ಚೆನ್ನಾಗಿ ಪ್ರೀತಿಸುವ ಗಂಡನನ್ನು ಬಯಸುತ್ತಾಳೆ ಒಂದು ಹೆಣ್ಣು.