ಗೃಹಿಣಿಯರೇ ಎಚ್ಚರ ಇನ್ನೂ ಮುಂದೆ ಆದರೂ ಎಚ್ಚೆತ್ತುಕೊಳ್ಳಿ. ನಿಮ್ಮ ಹೊಟ್ಟೆ ಜೋತು ಬಿದ್ದು ನೀವು ದಿನೇ ದಿನೇ ದಪ್ಪವಾಗುತ್ತಿರುವುದಕ್ಕೆ ನೈಟಿ ಕೂಡ ಒಂದು ದೊಡ್ಡ ಕಾರಣವಾಗಿದೆ…. ಹೇಗೆಂದು ಯೋಚಿಸುತ್ತಿದ್ದೀರಾ…. ನೈಟಿ ಎನ್ನುವುದು ಆರಾಮವಾಗಿ ರಾತ್ರಿ ಮಲಗಲು ಮಾತ್ರ ಬಳಸುವ ಉಡುಪಾಗಿತ್ತು. ಆದರೆ ಈಗ ಅದು ಗೃಹಿಣಿಯರ ಬಹು ಪ್ರಿಯ ಉಡುಪಾಗಿದೆ….
ಕಾರಣ ಇಷ್ಟೇ ಸ್ತ್ರೀಯರ ದಿನದ ಬಹುಪಾಲು ಸಮಯ ಕೆಲಸವೇ ಆಗಿದೆ. ಹೀಗಿರುವಾಗ ನೈಟಿ ಬಹಳ ಕಂಫರ್ಟ್ ಇರುತ್ತೆ ಜಾಸ್ತಿ ಬೆವರುವುದಿಲ್ಲ, ಸೆರಗು ಇರುವುದಿಲ್ಲ, ಒಟ್ಟಾರೆ ಏಕವಸ್ತ್ರ ಮತ್ತು ಮನೆಯಲ್ಲಿ ಆರಾಮಾಗಿ ಕೆಲಸ ಮಾಡಲು ಅನುಕೂಲವಾಗಿದೆ. ಆದರೆ ಇದರಿಂದ ನೈಟಿ ಎಷ್ಟು ಅಗಲವಾಗಿ ಇರುತ್ತೋ ಅಷ್ಟೇ ನಿಮ್ಮ ದೇಹದ ಆಕೃತಿ ಕೂಡ ಅಗಲವಾಗುವುದು ತಿಳಿಯುವುದೇ ಇಲ್ಲ.
ಕೆಲವೊಮ್ಮೆ ಸರಿಯಾಗಿ ಊಟ ತಿಂಡಿ ಮಾಡದೇ ತೆಳುವಾದರೂ ಆಗಬಹುದು ಅದು ಕೂಡ ತಿಳಿಯುವುದಿಲ್ಲ ಕಾರಣ ನೈಟಿ ಗಾಳಿಪಟದ ಹಾಗೆ ಇರುವುದರಿಂದ ನಮ್ಮ ಸಂಸ್ಕೃತಿಯ ಸೀರೆಯಿಂದ ಲಾಭವೇನಂದರೆ ನಿಮ್ಮ ಆಕೃತಿ ಚೆನ್ನಾಗಿರುತ್ತದೆ ಹೇಗೆಂದರೆ ಸೀರೆ ಇಟ್ಟಾಗ ಬೆವರುದು ಜಾಸ್ತಿ, ಜೊತೆಗೆ ಸೀರೆ ಉಡಲು ಸೊಂಟಕ್ಕೆ ಗಟ್ಟಿಯಾಗಿ ಕಟ್ಟುವ ಲಂಗಬಿಗಿಯಾದ ಬ್ಲೌಸ್
ಎಳೆದು ಹಾಕುವ ಸೆರಗು ಇದೆಲ್ಲ ಬೊಜ್ಜು ಬರುವ ಸೂಕ್ಷ್ಮ ಜಾಗವೇ ನಲ್ಲ ಬಂದಿಸುತ್ತೆ ….ದೇಹವನ್ನು ಕರಗಿಸಲು ಅಥವಾ ಫಿಟ್ನೆಸ್ ಮೆಂಟೇನ್ ಮಾಡಲು ಬಯಸುವವರ ಮೊದಲ ಆದ್ಯತೆ ಬೆವರುವುದು ಅದಕ್ಕಾಗಿ ಬೆವರು ಸುರಿಸಿ ವ್ಯಾಯಾಮ ಮಾಡುತ್ತಾರೆ. ಇದೆಲ್ಲಾ ಸೀರೆಯಲ್ಲೆಇದೆ ಇದನ್ನು ಬಿಟ್ಟು ಬೇರೆ ಹುಡುಕುವ ನಮ್ಮ ಬುದ್ಧಿಗೆ ಏನಾಗಿದೆ ಒಮ್ಮೆ ಯೋಚಿಸಿ…
ಇನ್ನು ಪೂಜೆ ಮಾಡುವಾಗ ಅಥವಾ ಯಾವುದೇ ಶುಭ ಕಾರ್ಯ ಮಾಡುವ ನೈಟಿ ಧರಿಸಿ ಪೂಜೆ ಮಾಡೋದು ಶುಭವಲ್ಲ ಇದನ್ನು ಶಾಸ್ತ್ರ ಒಪ್ಪುವುದಿಲ್ಲ…ಗೃಹಲಕ್ಷ್ಮಿ ಯಾದವಳು ಕಳೆಕಳೆಯಾಗಿ ಇರಬೇಕು ಆಕಳೆ ನೈಟಿಯಲ್ಲಿಖಂಡಿತವಾಗಿ ಇರುವುದಿಲ್ಲ…. ನಾನು ಎಲ್ಲೂ ಹೊರಗಡೆ ಹೋಗಲ್ಲ ಮನೆಯಲ್ಲಿ ಇರುವುದರಿಂದ ನೈಟಿ ಬೆಸ್ಟ್ ಅಂತ ತಿಳಿಯಬೇಡಿ. ನಿಮ್ಮ ಮಕ್ಕಳ ಮುಂದೆ ಧರಿಸುವುದು ಕೂಡ ಗೌರವ ಮರೆಯದಿರಿ….
ಇನ್ನೂ ನೈಟಿ ಧರಿಸಿ ಹೊರಗಡೆ ಹೋಗುವುದು ಗೌರವವಲ್ಲ… ದೇವಸ್ಥಾನಕ್ಕೆ ಧರಿಸಿ ಹೋಗುವುದು ಸಂಸ್ಕೃತಿಯಲ್ಲ ಮರೆಯದಿರಿ…. ನೈಟಿಯನ್ನು ರಾತ್ರಿ ಮಲಗುವಾಗ ಹಾಗೂ ಮುಟ್ಟಿನ ಸಮಯದಲ್ಲಿ ಧರಿಸಿ. ಬೇರೆ ಸಮಯದಲ್ಲಿ ಸಾಧ್ಯವಾದಷ್ಟು ಸೀರೆ ಧರಿಸಲು ಪ್ರಯತ್ನಿಸಿ ಇದರಿಂದ ನೀವು ನಿಮ್ಮ ಗಂಡನನ್ನು ಕೂಡ ಆಕರ್ಷಿಸುತ್ತೀರಾ ಜೊತೆಗೆ ಲಕ್ಷ್ಮಿ ಕಳೆ ಬರುತ್ತದೆ ಮತ್ತು ಮುಖ್ಯವೆಂದರೆ ನಿಮ್ಮ ದೇಹದ ಆಕೃತಿ ಸುಂದರವಾಗಿರುತ್ತದೆ.