ನಾವು ಈ ಲೇಖನದಲ್ಲಿ ಹೆಬ್ಬೆರಳ ಮೇಲೆ ಅರ್ಧ ಚಂದ್ರಾಕೃತಿ ಮೂಡಿದರೆ ಶುಭದ ಸಂಕೇತವೋ, ಅಥವಾ ಅಶುಭದ ಸಂಕೇತವೋ ಎಂಬುದನ್ನು ತಿಳಿದುಕೊಳ್ಳೋಣ. ಹೆಬ್ಬೆರಳಿನ ಮೂಲಕ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವವನ್ನು ಹೇಗೆ ಇರಬಹುದು ಎಂಬುದನ್ನು ತಿಳಿದುಕೊಳ್ಳೋಣ. ಮತ್ತು ಹೆಬ್ಬೆರಳ ಮೇಲೆ ಅರ್ಧ ಚಂದ್ರಾಕೃತಿ ಕಾಣಿಸಿದರೆ ಅದರ ಅರ್ಥವೇನು ಇದರಿಂದ ನಿಮಗೆ ಲಾಭವೋ ಅಥವಾ ನಷ್ಟವೋ ಅಥವಾ ಮುಂದಿನ ದಿನಗಳಲ್ಲಿ ಇದು ಅಂದರೆ ಅರ್ಧಚಂದ್ರಾಕೃತಿ ಶಾಪವಾಗಿ ಕಾಡುತ್ತದೆಯೇ ಎಂಬುದನ್ನು ಸವಿಸ್ತಾರವಾಗಿ ತಿಳಿದುಕೊಳ್ಳೋಣ.
ಕೈಬೆರಳುಗಳಲ್ಲಿ ಹೆಬ್ಬೆರಳಿನ ಪಾತ್ರವು ಅತಿ ಮುಖ್ಯವಾಗಿದೆ. ಇದಕ್ಕೆ ಬೆರಳುಗಳ ರಾಜ ಕರೆಯಲಾಗುತ್ತದೆ . ಕೈಯಲ್ಲಿ ಹೆಬ್ಬೆರಳಿನ ಪಾತ್ರ ದೇಹದ ಬೆನ್ನೂರಿಯಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬೇರೆ ಬೆರಳುಗಳಿಗೆ ಗಾಯವಾದರೆ ಅದನ್ನು ತಡೆದುಕೊಳ್ಳಬಹುದು. ಆದರೆ ಹೆಬ್ಬೆರಳಿಗೆ ಗಾಯವಾದರೆ ಕೆಲಸ ಮಾಡಲು ಅಸಾಧ್ಯವಾಗುತ್ತದೆ. ನಾವು ನಮ್ಮ ಹೆಬ್ಬೆರಳವನ್ನು ಸೂಕ್ಷ್ಮವಾಗಿ ಗಮನಿಸಿದರೆ ,ಇದು ಮನುಷ್ಯನ ವರ್ತನೆ ಶಕ್ತಿ ಆಸೆ ಸ್ನೇಹಿತ ರಹಸ್ಯ, ರೋಗ ,
ರಹಸ್ಯ ರೋಗ ವಯಸ್ಸು ಸ್ವಶಕ್ತಿ ಧೈರ್ಯ ಭಾವನೆ ಇತ್ಯಾದಿಗಳ ತೆರೆದ ಪುಸ್ತಕವಾಗಿದೆ. ಇದರೊಂದಿಗೆ ವ್ಯಕ್ತಿಯ ದೌರ್ಬಲ್ಯ ಗುಣ ಇತ್ಯಾದಿಗಳು ಇದೇ ಬೆರಳಿನಲ್ಲಿ ಅಡಕವಾಗಿದೆ. ಇದರಿಂದಲೇ ಹಸ್ತಸಾಮುದ್ರಿಕವನ್ನು ಅರಿತವರು ಮೊದಲು ನೋಡುವುದೇ ಹೆಬೆರಳನ್ನು ಅದನ್ನು ನೋಡಿದ ತಕ್ಷಣವೇ ಅವರಿಗೆ ನಿಮ್ಮ ಸಮಸ್ಯೆ ಏನು ಎಂಬುದರ ಅರಿವಾಗುತ್ತದೆ. ಹೆಬ್ಬೆರಳನ್ನು ನೋಡಿ ಭವಿಷ್ಯವನ್ನು ಹೇಳಲಾಗುತ್ತದೆ . ಆದರೆ ಅದರ ಹಿಂದಿನ ಭಾಗದಲ್ಲಿರುವ ಉಗುರು ಉಗುರಿನಲ್ಲಿರುವ ಅರ್ಧಚಂದ್ರಾಕೃತಿ ನಿಮ್ಮ ರಹಸ್ಯದ ಸುಳಿವನ್ನು ಕೊಡುತ್ತದೆ.
ಅದೇ ಅರ್ಧಚಂದ್ರಾಕೃತಿ ನಿಮ್ಮ ಜೀವನದಲ್ಲಿ ನಡೆಯುವ ಅನಾಹುತದ ಸೂಚನೆಯನ್ನು ಕೊಡುತ್ತದೆ. ಹಸ್ತಸಾಮುದ್ರಿಕದ ಪ್ರಕಾರ ತೆಳುವಾದ ಉದ್ದನೆಯ ಉಗುರನ್ನು ತುಂಬಾ ಧೈರ್ಯಶಾಲಿಗಳು ಮತ್ತು ನಿರ್ಭಿತರು ಮತ್ತು ವ್ಯವಹಾರಗಳಲ್ಲಿ ಯಶಸ್ಸನ್ನು ಪಡೆಯಲು ತೊಂದರೆಗಳನ್ನು ಎದುರಿಸಲು ಸಿದ್ದರಾಗಿರುತ್ತಾರೆ. ಈ ಜನಗಳು ಹಣದ ಬಗ್ಗೆ ತುಂಬಾ ಆಸಕ್ತಿ ಉಳ್ಳವರಾಗಿದ್ದು ಐಷಾರಾಮಿ ಜೀವನದ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ಇವರ ಖರ್ಚು ಮತ್ತು ಹವ್ಯಾಸಗಳು ದುಬಾರಿಯಾಗಿರುತ್ತದೆ .
ಆದ್ದರಿಂದ ಇವರ ಅನಗತ್ಯ ಖರ್ಚುಗಳು ಹೆಚ್ಚಾಗಿರುತ್ತದೆ. ಇನ್ನು ಸಣ್ಣ ಹೆಬ್ಬೆರಳಿನ ಜನರು ಸಾತ್ವಿಕ ಸ್ವಭಾವದವರಾಗಿರುತ್ತಾರೆ. ಇವರು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಉಳ್ಳವರಾಗಿರುತ್ತಾರೆ. ಬೇರೆಯವರ ಕಷ್ಟದಲ್ಲಿ ಸ್ಪಂದಿಸುವ ಹೃದಯ ಇವರದಾಗಿರುತ್ತದೆ. ಇವರ ಬಗ್ಗೆ ಜನರು ಅಪಾರ್ಥ ಮಾಡಿಕೊಳ್ಳುವುದು ಹೆಚ್ಚಾಗಿರುತ್ತದೆ. ಇದರಿಂದಾಗಿ ಇವರು ಅನಗತ್ಯವಾಗಿ ಚಿಂತೆ ಮಾಡುತ್ತಾರೆ. ಎದುರಿಗೆ ಇರುವ ವ್ಯಕ್ತಿತ್ವದ ಒಳ್ಳೆಯತನವನ್ನು ತಕ್ಷಣವೇ ಸ್ವೀಕರಿಸುವುದು ಇವರ ವಿಶೇಷವಾಗಿರುತ್ತದೆ.
ಎಲ್ಲ ದಿಕ್ಕಿನಲ್ಲಿಯೂ ಸಲೀಸಾಗಿ ಹೊರಡುವ ಹೆಬ್ಬೆರಳು ಇರುವವರನ್ನು ಎಂದು ಹಸ್ತ ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ. ಇವರ ಮಾತು ಸ್ಪಷ್ಟವಾಗಿರುತ್ತದೆ. ಇವರು ವ್ಯಕ್ತಿಗಳ ಬೆನ್ನ ಹಿಂದೆ ಎಂದಿಗೂ ಮಾತನಾಡಿಸುವುದಿಲ್ಲ. ಏನು ಹೇಳುವುದಾದರೂ ಕಡ್ಡಿ ಮುರಿದ ರೀತಿಯಲ್ಲಿ ಮಾತನಾಡುತ್ತಾರೆ. ಸಂಭಾಷಣೆಯಲ್ಲಿ ಇವರು ನಿಸ್ಸಿ ಮರು ಈ ಸ್ವಭಾವದಿಂದಲೇ ಇವರು ಜನರ ಮನಸ್ಸನ್ನು ಗೆಲ್ಲುತ್ತಾರೆ. ಹಾಗೆಯೇ ಯಾರ ಹೆಬ್ಬೆರಳು ದಪ್ಪ ಮತ್ತು ಅಗಲವಾಗಿರುತ್ತದೆಯೋ, ಬೇಗ ಕೋಪಗೊಳ್ಳುತ್ತಾರೆ .
ಇವರನ್ನು ಶಾಂತಗೊಳಿಸಲು ತುಂಬಾ ಕಷ್ಟವಾಗಿರುತ್ತದೆ . ಅನೇಕ ಬಾರಿ ಇವರು ಕೋಪದಲ್ಲಿ ತುಂಬಾ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಕೊನೆಗೆ ಇವರು ಪಶ್ಚಾತಾಪವನ್ನು ಸಹ ಪಡುತ್ತಾರೆ .ಇವರು ಕಠಿಣ ಮತ್ತು ಕಲ್ಲಿನ ತರಹ ಇದ್ದರೂ , ಇವರ ಮನಸ್ಸು ಮಾತ್ರ ಮಗುವಿನಂತೆ ಮುಗ್ಧವಾಗಿರುತ್ತದೆ. ಹೆಬ್ಬೆರಳಿನ ಮೇಲೆ ಅರ್ಧಚಂದ್ರಾಕೃತಿ ಕಾಣಿಸಿದರೆ ವೈದ್ಯಕೀಯ ಭಾಷೆಯಲ್ಲಿ ಲುನುಲಾ ಎಂದು ಕರೆಯಲಾಗುತ್ತದೆ. ಇದು ದೇಹದ ಆರೋಗ್ಯವನ್ನು ಬಿಂಬಿಸುವ ಒಂದು ಮಾಧ್ಯಮವಾಗಿದೆ.
ಆದರೆ ಹಸ್ತ ಶಾಸ್ತ್ರದಲ್ಲಿ ಇದೇ ಅರ್ಧಚಂದ್ರಾಕೃತಿ ಇರುವ ಬೆರಳನ್ನು ರಹಸ್ಯದ ರೂಪದಲ್ಲಿ ನೋಡಲಾಗಿದೆ. ಬೆರಳಿನಲ್ಲಿರುವ ಅರ್ಧಚಂದ್ರಾಕೃತಿಯ ರೂಪಗಳನ್ನು ನಾವು ಮೂರು ರೀತಿಯಲ್ಲಿ ನೋಡಬಹುದಾಗಿದೆ. ಮೊದಲನೆಯದಾಗಿ ಹೆಬ್ಬೆರಳಿನ ಉಗುರಿನ ಮೇಲೆ ಅರ್ಧ ಭಾಗವನ್ನೇ ಆವರಿಸಿಕೊಂಡಿರುವಂತಹ ಅರ್ಧ ಚಂದ್ರಾಕೃತಿ ,ಎರಡನೆಯದಾಗಿ ಉಗುರಿನ ಮೇಲ್ಭಾಗದಲ್ಲಿ ಸ್ವಲ್ಪವೇ ಅರ್ಧಚಂದ್ರಾಕೃತಿ ಇರುತ್ತದೆ. ಇನ್ನು ಮೂರನೆಯದಾಗಿ ಅಂದರೆ ಕೊನೆಯದಾಗಿ ಅರ್ಧಚಂದ್ರಾಕೃತಿಯೇ ಇರುವುದಿಲ್ಲ.
ಅರ್ಧಚಂದ್ರಾಕೃತಿಯಿಂದ ಕೆಲವರಿಗೆ ಕಾಡುವ ಪ್ರಶ್ನೆ ಎಂದರೆ ಇದು ಒಳ್ಳೆಯದು ಅಥವಾ ಕೆಟ್ಟದ್ದೋ ಎಂದು ಇದನ್ನು ತಿಳಿದುಕೊಳ್ಳೋಣ. ಹೆಬ್ಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಅವರು ಅದೃಷ್ಟವಂತರು. ಕಾರಣ ಅವರು ದೈವಗುಣವಾದವರಾಗಿರುತ್ತಾರೆ. ಅ ಲೌಕಿಕ ಶಕ್ತಿ ಅವರನ್ನು ಆವರಿಸಿಕೊಂಡಿರುತ್ತದೆ. ಇದು ಅವರಿಗೆ ಶ್ರೀರಕ್ಷೆಯಾಗಿರುತ್ತದೆ. ಇವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತಹ ವ್ಯಕ್ತಿತ್ವದವರಾಗಿರುತ್ತಾರೆ. ಇವರು ಏನನ್ನು ಸಾಧಿಸಲು ಹೊರಟರು ಅದನ್ನು ಬಿಡದೆ ಛಲದಿಂದ ನಿರ್ವಹಿಸುತ್ತಾರೆ.
ಈ ರೀತಿಯ ಜನಗಳು ಓದಿನಲ್ಲಿ ಯಾವಾಗಲೂ ಮುಂದಿರುತ್ತಾರೆ. ಇವರ ಮಾತಿನಲ್ಲಿ ಪ್ರಬುದ್ಧತೆ ಇರುತ್ತದೆ. ಆದ್ದರಿಂದಲೇ ಜನಗಳು ಇವರ ಮಾತನ್ನು ನಿರ್ಲಕ್ಷಿಸದೆ ಪಾಲಿಸುತ್ತಾರೆ. ಬುದ್ಧಿ ಶಕ್ತಿ ತೀಕ್ಷ್ಣ ವಾಗಿರುವುದರಿಂದ ಉನ್ನತ ಹುದ್ದೆಗಳು ಇವರನ್ನು ಹುಡುಕಿಕೊಂಡು ಬರುತ್ತದೆ. ಗೌರವಯುತವಾಗಿ ಕೆಲಸ ಮಾಡುವ ಯೋಗವಿರುತ್ತದೆ. ಹಗಲು ಕನಸು ಕಾಣುವುದರಲ್ಲಿ ಯಾವಾಗಲೂ ಮುಂದಿಡುತ್ತಾರೆ. ಆ ಕನಸುಗಳನ್ನು ಈಡೇರಿಸಿಕೊಳ್ಳುವಲ್ಲಿ ಇವರು ಲಾಭ ನಷ್ಟದ ಲೆಕ್ಕವನ್ನು ಹಾಕುವುದಿಲ್ಲ. ಆದರೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಾವು ಮುಂದೆ. ಇರಬೇಕು ಎಂಬುದು ಇವರ ಹೆಬ್ಬಯಕೆ ಆಗಿರುತ್ತದೆ.
ಇವರಿಗಿರುವ ದೊಡ್ಡ ಸಮಸ್ಯೆ ಎಂದರೆ ಯಾವ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಳ್ಳುವುದಿಲ್ಲ. ನೋಡಲು ತುಂಬಾ ಆಕರ್ಷಣೀಯವಾಗಿರುತ್ತಾರೆ. ಮತ್ತು ಮಾತಿನ ಮೇಲೆ ನಿಯಂತ್ರಣವಿರುತ್ತದೆ. ಬೇರೆಯವರ ಭವಿಷ್ಯವನ್ನು ಹೇಳುವ ಸಾಮರ್ಥ್ಯವಿರುತ್ತದೆ . ಎಲ್ಲದರ ಜೊತೆಗೆ ಇವರು ದೀರ್ಘಾಯುಷ್ಯಗಳಾಗಿರುತ್ತಾರೆ. ಇವರಿಗೆ ಯಾವ ರೋಗರುಜಿನಗಳು ಹೆಚ್ಚು ದಿನ ಕಾಡುವುದಿಲ್ಲ. ಇದೇ ರೀತಿ ಅರ್ಧಚಂದ್ರಾಕೃತಿ ಇರುವಂತಹ ವ್ಯಕ್ತಿಯ ಬಾಳ ಸಂಗಾತಿಯ ಉಗುರಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಆತ ಬಾಳಿನಲ್ಲಿ ಪರಮ ಸುಖಿಯಾಗಿರುತ್ತಾನೆ. ಇಂಥವರ ಪ್ರೇಮ ಪ್ರಕರಣಗಳು ವಿಫಲವಾಗುವುದಿಲ್ಲ . ಇವರ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ.