ನಾವು ಈ ಲೇಖನದಲ್ಲಿ ಯಾರ ಸಲುವಾಗಿ ತುಂಬಾ ಕೆಳಗೆ ಬೀಳಬೇಡಿ ಎಂದು ತಿಳಿಸಲಾಗಿದೆ.
ಜೀವನದಲ್ಲಿ ಎರಡು ರೀತಿಗಳು ತುಂಬಾ ನೋವು ಕೊಡುತ್ತದೆ .ಒಂದು ಅವರ ಮೇಲೆ ಪ್ರೀತಿ ಇರುವುದಿಲ್ಲ . ಆದರೂ ಅವರ ಜೊತೆ ಜೀವನ ನಡೆಸಬೇಕು . ಇನ್ನೊಂದು ಒಬ್ಬರ ಮೇಲೆ ಅತಿ ಹೆಚ್ಚು ಪ್ರೀತಿ ಇದ್ದರು ಅವರಿಲ್ಲದೆ ಜೀವಿಸಬೇಕು .
ಯಾರ ಸಂತೋಷವೂ ಬೇರೊಬ್ಬರ ನಿರ್ಧಾರದ ಮೇಲೆ ಅವಲಂಬಿತವಾಗಿದೆಯೋ, ಅವರಷ್ಟು ಬಡವರು ಬೇರೊಬ್ಬರಿಲ್ಲ. ಯಾರು ಸಲುವಾಗಿ ತುಂಬಾ ಕೆಳಗೆ ಬೀಳಬೇಡಿ .ಯಾವ ವ್ಯಕ್ತಿಯ ಸಲುವಾಗಿ ನೀವು ಕೆಳಗೆ ಬೀಳುತ್ತಿರೋ ಅವರು ನಿಮ್ಮನ್ನು ಮೇಲೆತ್ತಲು ನಿರಾಕರಿಸಲು ಬಿಡಬಹುದು . ಕೆಲವು ಜನ ಹೊರಗಿನಿಂದ ತುಂಬಾ ಸುಂದರವಾಗಿ ಕಾಣುತ್ತಾರೆ .ಆದರೆ ಒಳಗಿನಿಂದ ವಿಷಕಾರಿಯಾಗಿರುತ್ತಾರೆ .
ಬಡವರಾಗಿದ್ದರೆ ಎಲ್ಲರೂ ನಿಮ್ಮನ್ನು ನಿರ್ಲಕ್ಷಿಸುತ್ತಾರೆ . ಪರಿಶ್ರಮ ಪಟ್ಟರೆ ಎಲ್ಲರೂ ನಿಮ್ಮನ್ನು ನೋಡಿ ನಗುತ್ತಾರೆ .ಯಾವಾಗ ಯಶಸ್ವಿ ಆಗುತ್ತೀರಾ ಆಗ ಎಲ್ಲರೂ ನಿಮ್ಮನ್ನು ನೋಡಿ ಹೊಟ್ಟೆ ಕಿಚ್ಚು ಪಡುತ್ತಾರೆ .
ತಪ್ಪು ಮಾಡಿ ಬಿಟ್ಟು ನಿಮ್ಮನ್ನು ನೀವು ಸರಿ ಎಂದು ಸಾಬೀತು ಪಡಿಸುವುದು ಅಷ್ಟು ಕಷ್ಟವೇನಲ್ಲ . ಆದರೆ ಸರಿಯಾಗಿದ್ದು ಅದನ್ನು ಸಾಬೀತು ಪಡಿಸುವುದು ತುಂಬಾ ಕಷ್ಟ .
ದುಃಖ ಮತ್ತು ಕಷ್ಟವನ್ನು ಅವಶ್ಯಕವಾಗಿ ಮರೆತು ಬಿಡಬಹುದು. ಆದರೆ ನಮ್ಮ ಜೊತೆಯಾದ ಮೋಸ ಮಾತ್ರ ಯಾವತ್ತು ಮರೆಯಲು ಸಾಧ್ಯವಿಲ್ಲ . ಒಬ್ಬರ ಅಭ್ಯಾಸವಾಗಿ ಬಿಡುವುದು ಪ್ರೀತಿ ಮಾಡುವುದಕ್ಕಿಂತ ತುಂಬಾ ಪಾಯಕಾರಿ .ಸುಳ್ಳು ಪ್ರೀತಿಯ ಈ ಐದು ಗುರುತುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ .ನಿಮ್ಮ ಅಮೂಲ್ಯವಾದ ಜೀವನವನ್ನು ಉಳಿಸಿಕೊಳ್ಳಿ . ಸುಳ್ಳು ಪ್ರೀತಿಸುವವರ ಮೊದಲ ಗುರುತು ಎಂದರೆ , ಸಂಬಂಧದ ಬಗ್ಗೆ ನೀವು ಮಾತನಾಡಿದಾಗಲೆಲ್ಲ , ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ .
ಆದರೆ ಮದುವೆಯಾಗಲಾರೆ . ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ .ಆದರೆ ಮನೆಯವರು ಒಪ್ಪುವುದಿಲ್ಲ . ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ .ಆದರೆ ನಮ್ಮದು ಬೇರೆ ಜಾತಿ . ಹೀಗೆ ಕಾರಣಗಳನ್ನು ಕೊಡುತ್ತಾರೆ .ಸುಳ್ಳು ಪ್ರೀತಿಯ ಇನ್ನೊಂದು ಗುರುತು ಎಂದರೆ , ನಿಮ್ಮನ್ನು ನಿಜವಾಗಿ ಪ್ರೀತಿಸುವ ವ್ಯಕ್ತಿ ನಿಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾರೆ . ನಿಮ್ಮ ಭವಿಷ್ಯದ ಬಗ್ಗೆ ಕುರಿತು ಮಾತನಾಡುತ್ತಾರೆ .
ಆದರೆ ಒಬ್ಬ ಸುಳ್ಳು ಪ್ರೇಮಿ ಮತ್ತು ಸುಳ್ಳು ಪ್ರೀತಿ ಎಂದಿಗೂ ಈ ಮಾತಿನ ಬಗ್ಗೆ ಧ್ಯಾನವೇ ಕೊಡುವುದಿಲ್ಲ .
ಅವರು ಕೇವಲ ನಿಮ್ಮಿಂದ ಒಂದೇ ಒಂದು ಬಯಸುತ್ತಾರೆ .ನಿಮ್ಮಿಂದ ಅವರ ಅಗತ್ಯಗಳನ್ನು ಪೂರ್ತಿ ಮಾಡಿಕೊಳ್ಳುವುದು . ಸುಳ್ಳು ಪ್ರೇಮಿಯ ಮೂರನೇ ಗುರುತು , ಸುಳ್ಳು ಪ್ರೇಮಿ ನಡುವೆ ಎಂದಿಗೂ ಅರ್ಥ ಮಾಡಿಕೊಳ್ಳುವ ಗುಣ ಇರುವುದಿಲ್ಲ . ಅವರು ದಿನದ ಹೆಚ್ಚಿನ ಸಮಯವನ್ನು ಪರಸ್ಪರರ ತಪ್ಪುಗಳನ್ನು ತೋರಿಸಲು ಮತ್ತು ಹುಡುಕಲು ಪ್ರಯತ್ನಿಸುತ್ತಾರೆ .
ನಿಮ್ಮ ಸಮಸ್ಯೆಗಳು ಮತ್ತು ನಿಮ್ಮ ಒದ್ದಾಟ ಅವರಿಗೆ ಮುಖ್ಯವಲ್ಲ .ಅವರಿಗೆ ನಿಮ್ಮ ನ್ಯೂನ್ಯತೆಗಳನ್ನು ಹುಡುಕುವುದೇ ದೊಡ್ಡ ಕೆಲಸ . ಸುಳ್ಳು ಪ್ರೀತಿಯ ನಾಲ್ಕನೇ ಗುರುತು , ಸುಳ್ಳು ಪ್ರೀತಿಯಲ್ಲಿ ಯಾವಾಗಲೂ ಒಂದು ಷರತ್ತು ಇರುತ್ತದೆ . ನಿಮ್ಮ ಹೆತ್ತವರನ್ನು ಹೊರತುಪಡಿಸಿ ಯಾರು ನಿಮ್ಮನ್ನು ಬೇಷರತ್ತಾಗಿ
ಪ್ರೀತಿಸಲು ಸಾಧ್ಯವಿಲ್ಲ .
ಎಲ್ಲ ಸಂಬಂಧಗಳಲ್ಲೂ ಒಂದಲ್ಲ ಒಂದು ಷರತ್ತು ಇರುತ್ತದೆ .ಆದರೆ ಈ ಷರತ್ತುಗಳು ಅಗತ್ಯಕ್ಕಿಂತ ಜಾಸ್ತಿ ಇರಬಾರದು . ಏಕೆಂದರೆ ಅಲ್ಲಿ ಹೋಗಬಾರದು, ಇಲ್ಲಿ ಹೋಗಬಾರದು, ಅದನ್ನು ಮಾಡಬಾರದು, ಇದನ್ನು ಮಾಡಬಾರದು, ಈ ರೀತಿ ಸುಳ್ಳು ಪ್ರೀತಿಯ 5 ನೇ ಗುರುತು , ಒಬ್ಬ ಸುಳ್ಳು ಪ್ರೇಮಿ ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸುತ್ತಾನೆ . ನಿಮ್ಮನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಬಹುದು .
ನೀವು ಅವನು ಬಯಸಿದಂತೆ ನಡೆದುಕೊಳ್ಳಲಿ , ಎಂದು ಅವನು ಬಯಸುತ್ತಾನೆ .ಯಾವಾಗ ಒಬ್ಬ ವ್ಯಕ್ತಿ ನಿಮ್ಮಲ್ಲಿರುವ ಕೆಟ್ಟ ಅಭ್ಯಾಸಗಳನ್ನು ತಿಳಿಸಿ ಅದನ್ನು ಬದಲಾಯಿಸಲು ಪ್ರಯತ್ನಿಸಿದರೆ ಅದು ಒಳ್ಳೆಯ ಮಾತು .ಆದರೆ ಯಾವಾಗ ಒಬ್ಬ ವ್ಯಕ್ತಿ ನಿಮ್ಮೊಳಗೆ ಇಲ್ಲದೆ ಇರುವ ತಪ್ಪನ್ನು ತಿಳಿಸುತ್ತಾನೋ , ಆಗ ಅವನು ನಿಮ್ಮನ್ನು ಪೂರ್ತಿಯಾಗಿ ಹಿಡಿದು ಇಟ್ಟುಕೊಳ್ಳಲು ಬಯಸುತ್ತಾನೆ, ಅದು ತಪ್ಪು .