ಸಿಂಹ ರಾಶಿಗಿದ್ಯಾ ಒಂದು ವಿಶೇಷ ಶಕ್ತಿ

0

ನಾವು‌ ಈ ಲೇಖನದಲ್ಲಿ ಸಿಂಹ ರಾಶಿಯ ಏಪ್ರಿಲ್ ತಿಂಗಳಿನ ಮಾಸ ಭವಿಷ್ಯ ತಿಳಿದುಕೊಳ್ಳೋಣ. ಕೆಲಸಗಳನ್ನು ಮಾಡುವುದರಲ್ಲಿ ಮತ್ತು ಅದು ಕಾರ್ಯರೂಪಕ್ಕೆ ತರುವುದರಲ್ಲಿ ನಿಮ್ಮ ಪರಿಸ್ಥಿತಿಯು ಢೋಲಾಯಮಾನವಾಗಿರುತ್ತದೆ. ವಿಶೇಷವಾಗಿ ರವಿ ಗ್ರಹ ಶನಿ ಗ್ರಹದ ಜೊತೆ ಕೂಡಿರುತ್ತದೆ. ಸಿಂಹ ರಾಶಿಯ ಮಟ್ಟಿಗೆ ಇದು ತುಂಬಾ ಒಳ್ಳೆಯ ಬೆಳವಣಿಗೆ ಯಾಗಿರುವುದಿಲ್ಲ . ರಾಶ್ಯಾಧಿಪತಿ ರವಿಯು ಬುಧ ಗ್ರಹದ ಜೊತೆ ಮೊದಲ ವಾರದಲ್ಲಿ ಇರುತ್ತದೆ.

ಏಳನೇ ತಾರೀಕಿನ ನಂತರ ಬುಧ ಗ್ರಹವು ದೂರವಾಗುತ್ತದೆ. ರವಿ ಮತ್ತು ಶನಿ ಗ್ರಹದ ನಡುವಿನ ತಾಕಲಾಟಗಳು ಶನಿಯು ಸಪ್ತಮ ಭಾಗದಲ್ಲಿರುವಾಗ ವೀಪರಿತ ಆಲಸ್ಯ ಚಂಚಲ ಮನಸ್ಥಿತಿ ಉಂಟಾಗುವುದು. ಮಾಡಬೇಕಾದಂತಹ ಕೆಲಸದ ಬಗ್ಗೆ ಗಮನ ಇಲ್ಲದೆ ಇರುವುದು. ಈ ರೀತಿಯ ಪರಿಸ್ಥಿತಿಯು ಜೀವನದಲ್ಲಿ ತುಂಬಾ ನಡೆಯುತ್ತದೆ. ಅಪಾರ ನಷ್ಟ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ನಿಮ್ಮ ಶ್ರದ್ದೆ ಬೇರೆಡೆ ಹೋದಾಗ ಮಾಡುವ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ .ಯಾವ ಕೆಲಸದಲ್ಲಿಯೂ ಸಹ ನಿರೋತ್ಸಾಹ ಚೈತನ್ಯ ಕಡಿಮೆಯಾಗುವುದು . ಮತ್ತು ದಿನ ದಿನಕ್ಕೆ ಪರಿಸ್ಥಿತಿಯು ಇನ್ನಷ್ಟು ಹದಗೆಡುತ್ತಾ ಹೋಗುತ್ತದೆ.

ಈ ರೀತಿಯ ಬೆಳವಣಿಗೆಗಳು ನಿಮಗೆ ಇರುತ್ತವೆ. ಇದೇ ದಾರಿಯಲ್ಲಿ ನಡೆದು ಗುರಿಯನ್ನು ಮುಟ್ಟುತ್ತೇವೆ ಎಂಬ ನಂಬಿಕೆ ನಿಮಗೆ ಇರುವುದಿಲ್ಲ. ಆದರೆ ಎಲ್ಲರ ಮಟ್ಟಿಗೆಯು ಇದೇ ರೀತಿ ಪರಿಸ್ಥಿತಿ ಇರುತ್ತದೆ . ಎಂದು ಹೇಳಲಾಗುವುದಿಲ್ಲ. ನೀವೇ ಜ್ಞಾಪಿಸಿಕೊಳ್ಳುವುದಾದರೆ ಕಳೆದ ಆರು ತಿಂಗಳಿನಿಂದಲೂ ನನ್ನ ಶ್ರಮವನ್ನು ನಾನು ಹಾಕುತ್ತಿಲ್ಲ ಎಂದು ತಿಳಿಯುತ್ತದೆ. ಅದೃಷ್ಟದ ಬಗ್ಗೆ ಹೇಳುವುದಾದರೆ ಒಂದಷ್ಟು ಒಳ್ಳೆಯ ಮಾಹಿತಿಗಳು ಇರುತ್ತದೆ. ನಿಮ್ಮನ್ನು ಸರಿದಾರಿಗೆ ತರುವಂತಹ ಅದೃಷ್ಟಕೊಟ್ಟು ಹಣವನ್ನು ತರುವಂತಹ ಒಂದು ದಾರಿಯು.

ನಿಮ್ಮ ಮುಂದೆ ಇದೆ. ನಿಮ್ಮ ಮತ್ತು ನಿಮ್ಮ ಬಾಳ ಸಂಗಾತಿಯ ಮಧ್ಯೆ ಮನಸ್ತಾಪಗಳು ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ನಿಮ್ಮ ದೈನಂದಿನ ಬದುಕಿನಲ್ಲಿ ಇದು ನಿಮಗೆ ತುಂಬಾ ಹೊಡೆತವನ್ನು ಕೊಡುತ್ತದೆ. ಈ ರೀತಿಯ ಸಮಸ್ಯೆಗಳು ನಿಮ್ಮನ್ನು ಸುತ್ತುವರಿಯುತ್ತದೆ . ಅದೇ ರೀತಿಯಲ್ಲಿ ವ್ಯವಹಾರದಲ್ಲಿ ಜೊತೆಗಾರರಿಂದ, ಇದೇ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತೀರಾ. ರಾಹು ಮತ್ತು ಬುಧ ಗ್ರಹ ಜೊತೆಯಾಗಿರುತ್ತದೆ. ಬುಧ ಗ್ರಹವು ಅಷ್ಟಮ ಭಾಗದಲ್ಲಿ ಜೊತೆಯಾಗುವುದರಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತದೆ.

ವಿಶೇಷವಾಗಿ ನೆಗಡಿ ,ಅಸಿಡಿಟಿ ,ತಲೆನೋವು ,ಈ ರೀತಿ ಅಂತಹ ಸಮಸ್ಯೆಗಳು ನಿಮ್ಮನ್ನು ಭಾವಿಸುತ್ತದೆ. ಶನಿಯು ನಿಮಗೆ ನಕಾರಾತ್ಮಕ ಬೆಳವಣಿಗೆಯನ್ನು ಬೀರುವುದರಿಂದ ನೋವುಗಳು ಸಹ ನಿಮ್ಮನ್ನು ಕಾಡುತ್ತದೆ. ವಿಶೇಷವಾಗಿ ಪಾದದ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ವಿಶೇಷ ಸ್ಥಾನದಲ್ಲಿ ಗುರುವು ಇರುವುದರಿಂದ ಭಾಗ್ಯ ಸ್ಥಾನದಲ್ಲಿರುವುದರಿಂದ‌ ಗುರು ಗ್ರಹವು ಯಥೇಚ್ಛವಾಗಿ ಅನುಗ್ರಹವನ್ನು ನೀಡುತ್ತದೆ. ಗುರು ಭಾಗ್ಯ ಇರುವುದರಿಂದ ನೀವು ಹೆಚ್ಚಿಗೆ ಒತ್ತಡವನ್ನು ತೆಗೆದುಕೊಳ್ಳಬೇಕಾಗಿಲ್ಲ.

ಬೇರೆ ಗ್ರಹಗಳ ನಕಾರಾತ್ಮಕ ಬೆಳವಣಿಗೆ ಇದ್ದರೂ ಸಹ ಗುರುಗ್ರಹವು ಭಾಗ್ಯ ಸ್ಥಾನದಲ್ಲಿ ಇರುವುದರಿಂದ ಸಮತೋಲನ ಕಾಯ್ದುಕೊಂಡು ಹೋಗಬಹುದು. ಹಣಕಾಸಿನ ವಿಚಾರದಲ್ಲಿ ನಿಮಗೆ ತುಂಬಾ ಪ್ರಗತಿ ಉಂಟಾಗುತ್ತದೆ. ಷಷ್ಠಭಾಗದಲ್ಲಿ 15ನೇ ತಾರೀಖಿನವರೆಗೆ ಕುಜ ಗ್ರಹ ಇರುತ್ತದೆ .ಆದ್ದರಿಂದ 15ನೇ ತಾರೀಖಿನವರೆಗೆ ನಿಮಗೆ ಹಣಕಾಸಿನ ಸಮಸ್ಯೆ ಬರುವುದಿಲ್ಲ. ಶತ್ರುಗಳ ನಾಶವಾಗುತ್ತದೆ. ಶತ್ರುಗಳ ನಾಶವನ್ನು ಕುಜ ಗ್ರಹವು ಮಾಡುತ್ತದೆ . ಹಾಗೆ ಹಣಕಾಸಿನ ಅಭಿವೃದ್ಧಿ ಪ್ರಗತಿಯಾಗುತ್ತದೆ.

ವ್ಯಾಪಾರ ಮತ್ತು ವ್ಯವಹಾರಸ್ತರಿಗೆ ತುಂಬಾ ಲಾಭದಾಯಕ ಪರಿಸ್ಥಿತಿ ಇರುತ್ತದೆ. ಸ್ಥಿರಸ್ತಿಯವರಿಗೆ , ಮನೆಯನ್ನು ಕೊಂಡುಕೊಳ್ಳುವವರಿಗೆ, ಕಟ್ಟುವವರಿಗೆ 15ನೆಯ ತಾರೀಖಿನ ಒಳಗಡೆ ಇವರಿಗೆ ಯಥೇಚ್ಛ ಲಾಭವು ಉಂಟಾಗುತ್ತದೆ. ಹೂಡಿಕೆಗಳು ನಿಮಗೆ ಲಾಭವನ್ನು ತಂದುಕೊಡುತ್ತದೆ. ಹಾಗೆಂದು ನಿಮಗೆ ಒತ್ತಡ ಕಡಿಮೆಯಾಗುವುದಿಲ್ಲ. ಶೇರು, ಹೂಡಿಕೆ , ಬಿಟ್ ಕಾಯಿನ್, ಇವುಗಳಲ್ಲಿ ಹೂಡಿಕೆ ಮಾಡುವವರಿಗೆ, ಯಶಸ್ಸು ಇರುತ್ತದೆ. ಮಾನಸಿಕವಾಗಿ ಸಾಕಷ್ಟು ಆತಂಕಗಳು ಬರಬಹುದು. ಆದರೆ ಧೈರ್ಯವಾಗಿ ದಿಟ್ಟತನದಿಂದ ಮುಂದಿನ ಹೆಜ್ಜೆಯನ್ನು ಇಡಬೇಕಾಗುತ್ತದೆ.

Leave A Reply

Your email address will not be published.