ನಾವು ಈ ಲೇಖನದಲ್ಲಿ ಶುಭ ದೀಪದ ಲಕ್ಷಣಗಳೇನು? ಯಾವ ಎಣ್ಣೆ ಬಳಸಬೇಕು? ದೀಪ ಸ್ವಚ್ಚವಾಗಿಲ್ಲ ಅಂದರೆ ಏನಾಗುತ್ತದೆ ಎಂದು ತಿಳಿಯೋಣ . ಶುಭ ದೀಪದ ಲಕ್ಷಣಗಳು : -1 . ದೀಪದ ಪಾತ್ರೆ ಶುಭ್ರವಾಗದ್ದಷ್ಟೂ ದೀಪ ಹಚ್ಚುವವರ ಮನಸ್ಸು ಶುದ್ಧವಾಗಿರುತ್ತದೆ .ದೀಪವನ್ನು ಹಚ್ಚುವ ಜಾಗದಲ್ಲಿ ಗಾಳಿಯು ಮಂದಸ್ಮಿತವಾಗಿದ್ದರೆ , ತಂಗಾಳಿಯು ಬೀಸುತ್ತಿದ್ದರೆ, ಅಂತಹ ಮನೆಯಲ್ಲಿ ಶಾಂತಿಯಾದ ವಾತಾವರಣ ಇದ್ದು, ನೆನೆದ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ಗಾಳಿಯು ಜೋರಾಗಿ ಬೀಸುತ್ತಿದ್ದರೆ ಆ ಮನೆಯಲ್ಲಿ ಬಂಧು ಬಳಗದವರಿಂದಲೇ ಸಮಸ್ಯೆ ಉಂಟಾಗುತ್ತದೆ. ಶತ್ರುಗಳು ಜಾಸ್ತಿ .
2 . ದೀಪದ ಸ್ತಂಭವು ಎರಡೂ ಒಂದೇ ಸಮನಾಗಿ ಇರಬೇಕು. ಒಂದು ಚಿಕ್ಕದು , ಒಂದು ದೊಡ್ಡದು ಇರಬಾರದು. ಹೀಗೆ ಇದ್ದರೆ, ಆ ಮನೆಯಲ್ಲಿ ಗಂಡ – ಹೆಂಡತಿ ಹೊಂದಾಣಿಕೆ ಇರುವುದಿಲ್ಲ. ಮಕ್ಕಳು ದಾರಿ ತಪ್ಪುವರು . ದೀಪದ ಸ್ತಂಭ ಭಿನ್ನವಾಗಿದ್ದರೆ ಆ ಮನೆಯಲ್ಲಿ ಇರುವವರಿಗೆ ಕೆಲಸ ಕಾರ್ಯಗಳಲ್ಲಿ ತೀವ್ರ ಅನಾನುಕೂಲವಾಗಿ ನಿತ್ಯ ರೋಗ ಭಾದೆ ಜಾಸ್ತಿಯಾಗಿ , ವೈದ್ಯರಿಂದಲೂ ವಾಸಿ ಮಾಡಲಿಕ್ಕೆ ಆಗದ ಖಾಯಿಲೆಯಿಂದ ನರಳುತ್ತಾರೆ. ಮನೆಯಲ್ಲಿ ಇರುವವರಿಗೆ ಶಾಂತಿ , ನೆಮ್ಮದಿ ಇರುವುದಿಲ್ಲ. ದೀಪದ ಸ್ತಂಭವು ಬೆಸುಗೆ ಮಾಡಿದ್ದರೆ , ಮನೆಯಲ್ಲಿ ಇರುವವರಿಗೆ ರಕ್ತ ಹೀನತೆ , ಬಿಪಿ ಖಾಯಿಲೆಯೂ , ಚರ್ಮ ವ್ಯಾಧಿಗಳು ಜಾಸ್ತಿಯಾಗುತ್ತದೆ.
3 . ದೀಪಕ್ಕೆ ಉಪಯೋಗಿಸುವ ಎಣ್ಣೆಯು ದಪ್ಪವಿದ್ದರೆ , ( ಹರಳೆಣ್ಣೆಯ ತರಹ ) ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳೂ ಬಹಳ ನಿಧಾನವಾಗಿ ನಡೆಯುತ್ತದೆ. ದೀಪಕ್ಕೆ ಉಪಯೋಗಿಸುವ ಎಣ್ಣೆಯು ತೆಳುವಾಗಿದ್ದರೆ , ( ಕೊಬ್ಬರಿ ಎಣ್ಣೆ ) ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ . ಕಷ್ಟಗಳು ನಿವಾರಣೆ ಆಗುತ್ತದೆ .
4 . ದೀಪಕ್ಕೆ ಉಪಯೋಗಿಸುವ ಎಣ್ಣೆಯೂ ಒಂದೇ ಎಣ್ಣೆ ಆಗಿದ್ದರೆ,ಕೆಲಸ ಕಾರ್ಯಗಳು ಸುಸೂತ್ರವಾಗಿ ಮತ್ತು ಸುಗಮವಾಗಿಯೂ ನಡೆಯುತ್ತವೆ . ದೀಪಕ್ಕೆ ಬಳಸುವ ಎಣ್ಣೆಯು ಮಿಶ್ರವಾಗಿದ್ದರೆ , ಎಲ್ಲಾ ತರಹದ ಎಣ್ಣೆ ಮಿಶ್ರ ಆಗಿದ್ದರೆ , ಆರಂಭದಲ್ಲಿ ಶುಭ ಸೂಚನೆ ಕಂಡರೂ ಮಧ್ಯದಲ್ಲಿ ನಿಂತು ಹೋಗಿ , ಕೊನೆಯಲ್ಲಿ ಆದರೂ ಆಗಬಹುದು. ಅಥವಾ ಆಗದೆಯೂ ಇರಬಹುದು. ಹೀಗೆ ಫಲ ಬರುವುದು .
5 . ದೀಪದ ಎಣ್ಣೆಯು ಮಲೀನವಾಗಿದ್ದರೆ, ಮನೆಯಲ್ಲಿ ಇರುವವರಿಗೆ ರೋಗ ಭಾದೆ ಬರುತ್ತದೆ. ದೀಪದ ಎಣ್ಣೆಯು ಕಪ್ಪಾಗಿದ್ದರೆ, ಮನೆಯಲ್ಲಿ ಇರುವವರಿಗೆ ತೇಜಸ್ಸು ಕಡಿಮೆಯಾಗುತ್ತದೆ. ದೀಪದ ಎಣ್ಣೆಯು ಪರಿಮಳದ ವಾಸನೆಯಿಂದ ಕೂಡಿದ್ದರೆ ಮನೆಯಲ್ಲಿ ಅಷ್ಟೈಶ್ವರ್ಯ ಹಾಗೂ ನವ ನಿಧಿಗಳು ಪ್ರಾಪ್ತಿಯಾಗುತ್ತದೆ . ದೀಪದ ಎಣ್ಣೆಯನ್ನು ಕಿಲುಬಿರುವ , ಬೆಸುಗೆ ಹಾಕಿಸಿರುವ ಭಿನ್ನವಾಗಿರುವ ದೀಪ ಸ್ತಂಭಕ್ಕೆ ಹಾಕಿದರೆ ಅನಾರೋಗ್ಯ ಸಮಸ್ಯೆ, ಬಿಪಿ ಸಮಸ್ಯೆ , ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ , ರಕ್ತದ ಕಾಯಿಲೆಗಳು ಜಾಸ್ತಿಯಾಗುತ್ತದೆ .
ಕೊಬ್ಬರಿ ಎಣ್ಣೆಯ ದೀಪದ ಮಹತ್ವಗಳು : -1 .ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ಮನೆಯಲ್ಲಿ ದೀಪ ಹಚ್ಚುತ್ತಾರೋ , ಆ ಮನೆಯಲ್ಲಿ ಶುಭ ಕಾರ್ಯಗಳು ಬೇಗ ಜರಗುತ್ತದೆ .ಯಾರು ಕೂಲ ದೇವತೆಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ನಂದಾ ದೀಪ ಹಚ್ಚುತ್ತಾರೋ , ಅವರ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ. ಮದುವೆಯಾಗದ ಗಂಡು ಹೆಣ್ಣು ಮಕ್ಕಳು ಕಾತ್ಯಾಯಿನಿ ಪೂಜೆ ಮಾಡುವಾಗ ದೇವರ ದೀಪಕ್ಕೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ, ಶೀಘ್ರದಲ್ಲಿ ವಿವಾಹ ನಿಶ್ಚಯವಾಗುತ್ತದೆ .
2 . ಮಂಗಳವಾರ ಶ್ರೀ ಸುಬ್ರಹ್ಮಣ್ಯ ಪೂಜೆ ಮಾಡುವಾಗ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ , ಮಕ್ಕಳು ಇಲ್ಲದವರಿಗೆ ಸಂತಾನ ಭಾಗ್ಯ ವಾಗುತ್ತದೆ . ಅಶ್ವಥ ಮರದ ಕೆಳಗೆ ಇರುವ ನಾಗರ ಕಲ್ಲಿಗೆ ತನಿ ಎರೆಯುವಾಗ ಶ್ರೀ ಅಶ್ವಥ ನಾರಾಯಣ ಸ್ವಾಮಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ , ದಾಂಪತ್ಯ ಕಲಹ ನಿವಾರಣೆಯಾಗುತ್ತದೆ . ( ಅಷ್ಟೋತ್ತರ ಸಂಕಲ್ಪ ಬೇರೆ ರೀತಿಯಾಗಿ ಇರುತ್ತದೆ . ) ಜಾತಕದಲ್ಲಿ ಕುಜ ದೋಷ ಜಾಸ್ತಿ ಇರುವವರು ಮಂಗಳವಾರದ ಶುಕ್ರವಾರ ದೇವಿ ಪೂಜೆ ಮಾಡಿ , ಒಬ್ಬಟ್ಟು ನೈವೇದ್ಯ ಮಾಡಿ , ಮೊರದ ಬಾಗಿಣ ದಾನ ಮಾಡಿದರೆ , ಕುಜ ದೋಷ ನಿವಾರಣೆ ಆಗುತ್ತದೆ . ( ಪ್ರಾಯಶ್ಚಿತ್ತ ಸಂಕಲ್ಪ ತಾಂಬೂಲದ ದಾನ ಮಾಡಬೇಕು. )