ನೈಟಿ ಧರಿಸುವ ಮಹಿಳೆಯರೇ ಎಚ್ಚರ!

ನಾವು ಈ ಲೇಖನದಲ್ಲಿ ನೈಟಿ ಧರಿಸುವ ಮಹಿಳೆಯರು ಎಚ್ಚರ ವಹಿಸಬೇಕಾದ ವಿಷಯ ಏನು ಎಂದು ತಿಳಿಯೋಣ .
ಮೊದಲಿನ ಕಾಲದಲ್ಲಿ ಅಂದರೆ ಮದುವೆಯಾದ ನಂತರ ಮಹಿಳೆಯರು ಕಡ್ಡಾಯವಾಗಿ ಸೀರೆಯನ್ನೇ ಧರಿಸಬೇಕಾಗಿತ್ತು, ಭಾರತೀಯ ಸಂಸ್ಕೃತಿಯಲ್ಲಿನ ಕೆಲವು ಆಚರಣೆಗಳು ಕೆಲವರಿಗೆ ಕಿರಿಕಿರಿ ಎನಿಸಿದರೂ ಆ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣ ಹಾಗೂ ಅನುಕೂಲ ಅಥವಾ ಶ್ರೇಯಸ್ಸು ಇರುತ್ತದೆ. ಅಂತಹ ಆಚರರಣೆಯಲ್ಲಿ ಸೀರೆ ಧರಿಸುವ ಆಚರಣೆಯು ಒಂದು .

ಈಗಿನ ಕಾಲದಲ್ಲಿ ಮಹಿಳೆಯರು ಸೀರೆಯನ್ನು ಕೇವಲ ನಿರ್ದಿಷ್ಟ ಸಮಯವನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ಧರಿಸುವುದಿಲ್ಲ . ಅದಕ್ಕಾಗಿ ಅಂದಿನ ಕಾಲದ ಮಹಿಳೆಯರಿಗಿಂತ ಈಗಿನ ಮಹಿಳೆಯರು ಬೊಜ್ಜಿನ ಸಮಸ್ಯೆಯನ್ನು ಸಾಮಾನ್ಯವಾಗಿ ಎದುರಿಸುತ್ತಾರೆ. ಅದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿರಬಹುದು .

ಸೀರೆಯನ್ನು ಧರಿಸುವುದರಿಂದ ಯಾವ ಪ್ರಯೋಜನವಿದೆ .ಈಗಿನ ಕಾಲದ ಉಡುಪನ್ನು ಧರಿಸುವುದರಿಂದ ಏನೆಲ್ಲಾ ಅಪ್ರಯೋಜನಗಳು ಇವೆ ಎಂದು ಈ ಲೇಖನದಲ್ಲಿ ನೋಡೋಣ .

ಬಹಳಷ್ಟು ಮಹಿಳೆಯರು ಮದುವೆಯ ನಂತರ ದಿನೇ ದಿನೇ ಕಳೆಯುತ್ತಿದ್ದಂತೆ ಅವರ ಹೊಟ್ಟೆ ಜ್ಯೋತಿ ಬಿದ್ದು ಅವರು ದಪ್ಪವಾಗುತ್ತಿರುತ್ತಾರೆ . ಇದಕ್ಕೆ ಕಾರಣವೇನೆಂದು ಚಿಂತೆ ಪಡುತ್ತಿರುತ್ತಾರೆ .ಈಗಿನ ಬಹುತೇಕ ಮಹಿಳೆಯರು ಮದುವೆಯ ನಂತರ ನೈಟಿಯನ್ನು ಧರಿಸುತ್ತಾರೆ . ಮೊದಲೆಲ್ಲ ಮಹಿಳೆಯರು ಮದುವೆಯ ನಂತರ ಸೀರೆಯನ್ನು ಧರಿಸಬೇಕಾಗಿತ್ತು .

ಮಹಿಳೆಯರು ಧರಿಸುವ ನೈಟಿಗೂ ಮತ್ತು ದಪ್ಪವಾಗುತ್ತಿರಲು ಸಂಬಂಧವೇನು ಎಂದು ಯೋಚಿಸುತ್ತಿದ್ದರೆ , ಸಂಬಂಧವಿದೆ ಹೌದು .ಅದೇನೆಂದರೆ ನೈಟಿ ಎನ್ನುವುದರ ನಿಜವಾದ ಅರ್ಥ , ರಾತ್ರಿ ಮಲಗಲು ಆರಾಮಾಗಿರುತ್ತದೆ ಎಂದು ರಾತ್ರಿ ಮಾತ್ರ ಧರಿಸುವ ಉಡುಪು ಆಗಿತ್ತು. ಆದರೆ ಈಗ ನೈಟಿಯನ್ನು ಪ್ರತಿದಿನ ಧರಿಸಲು ಪ್ರಾರಂಭಿಸಿದ್ದಾರೆ .

ಇದು ಗೃಹಿಣಯರ ನಿತ್ಯ ಬಳಸುವ ಬಹಳ ಪ್ರಿಯವಾದ ಉಡುಪಾಗಿದೆ . ಇದಕ್ಕೂ ಕಾರಣವಿದೆ. ದಿನದ ಬಹುಪಾಲು ಗೃಹಿಣಿಯರಿಗೆ ಮನೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಕೆಲಸ ಮಾಡಲು ನೈಟಿ ಬಹಳ ಅನುಕೂಲಕರವಾಗಿದೆ .ಸೀರೆಯನ್ನು ಧರಿಸಿ ಕೆಲಸ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ .

ಆದರೆ ಇದರಿಂದ ಆಕೃತಿಯೂ ಅಗಲವಾಗುತ್ತಾ ಹೋಗುತ್ತದೆ ಎನ್ನುವುದು ತಿಳಿಯುವುದೇ ಇಲ್ಲ .ಕೆಲವೊಮ್ಮೆ ಊಟ ತಿಂಡಿ ಸರಿಯಾಗಿ ಮಾಡದೆ ತೆಳುವಾಗಲೂ ಬಹುದು . ನೈಟಿ ಧರಿಸಿದರೆ ತೆಳುವಾದರೂ ತಿಳಿಯುವುದಿಲ್ಲ ಏಕೆಂದರೆ ನೈಟಿ ನಿರ್ದಿಷ್ಟ ಆಕಾರವನ್ನು ಹೊಂದದೆ ಗಾಳಿಪಟದಂತೆ ಇರುತ್ತದೆ .

ಭಾರತೀಯ ಸಂಸ್ಕೃತಿಯ ಉಡುಪಾದ ಸೀರೆಯನ್ನು ಧರಿಸುವುದರಿಂದ ಮಹಿಳೆಯರ ದೇಹದ ಆಕೃತಿ ಚೆನ್ನಾಗಿರುತ್ತದೆ .ಕಾರಣ ಸೀರೆಯನ್ನು ಧರಿಸುವಾಗ ಬೆವರುತ್ತಾರೆ .ಜೊತೆಗೆ ಸೀರೆಯನ್ನು ಧರಿಸಬೇಕಾದರೆ ಸೊಂಟಕ್ಕೆ ಲಂಗವನ್ನು ಗಟ್ಟಿಯಾಗಿ ಕಟ್ಟುತ್ತಾರೆ . ಬ್ಲೌಸ್ ಅನ್ನು ಧರಿಸಬೇಕು . ಹಾಗೂ ಎಳೆದು ಒಪ್ಪವಾಗಿ ಸೆರಗನ್ನು ಮಾಡಬೇಕಾಗುತ್ತದೆ . ಇದರಿಂದ ಮಹಿಳೆಯರ ದೇಹದ ಬೊಜ್ಜು ಬರುವ ಭಾಗಗಳನ್ನು ಸೀರೆಯಿಂದ ಬಂಧಿಸಲಾಗುತ್ತದೆ.

ಮಹಿಳೆಯರು ತಮ್ಮ ದೇಹವನ್ನು ಕರಗಿಸಬೇಕಾದರೆ ಫಿಟ್ನೆಸ್ ಮೆಂಟೇನ್ ಮಾಡಬೇಕಾದರೆ ಬೆವರು ವುದಕ್ಕೆ ಮೊದಲ ಆದ್ಯತೆ ಕೊಡುತ್ತಾರೆ. ಅದಕ್ಕಾಗಿ ವ್ಯಾಯಾಮ ಮಾಡಿ ಬೆವರು ಸುರಿಸುತ್ತಾರೆ. ಬೊಜ್ಜು ಕರಗಿಸಲು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಳ್ಳುತ್ತಾರೆ. ವ್ಯಾಯಾಮ ಶಾಲೆಯಲ್ಲಿ ಮಹಿಳೆಯರು ಮಾಡುವ ಕೆಲಸವನ್ನು ನಮ್ಮ ಸನಾತನ ಸಂಸ್ಕೃತಿಯ ಸೀರೆ ಸುಲಭವಾಗಿ ಮಾಡುತ್ತದೆ. ಅಂದಿನ ಕಾಲದಲ್ಲಿ ಮಹಿಳೆಯರು ಎಂಥದ್ದೇ ಕೆಲಸವಿದ್ದರೂ ಸೀರೆ ಉಟ್ಟು ಮಾಡುತ್ತಿದ್ದರು. ಆದರೆ ಈಗ ನಾವುಗಳು ನಮ್ಮಲ್ಲೇ ಇರುವ ಸೀರೆಯನ್ನೇ ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಅಚ್ಚರಿಯ ಸಂಗತಿ.

ಮನೆಯಲ್ಲಿ ಪೂಜೆ ಮಾಡುವಾಗ ದೇವಸ್ಥಾನಕ್ಕೆ ಹೋಗುವಾಗ ಅಥವಾ ಇನ್ನಾವುದೆ ಶುಭ ಕಾರ್ಯಗಳಿಗೆ ನೈಟಿ ಧರಿಸಿಕೊಂಡು ಪೂಜೆ ಮಾಡುವುದು ಅಥವಾ ಪೂಜೆಯಲ್ಲಿ ಭಾಗಿಯಾಗು ವುದು ಶುಭಕರವಲ್ಲ ಎಂಬುದನ್ನು ಶಾಸ್ತ್ರ ತಿಳಿಸುತ್ತದೆ.

ಗೃಹಲಕ್ಷ್ಮಿಯಾದವಳು ಕಳೆಕಳೆಯಾಗಿ ಇರಬೇಕು. ಮನೆಯಲ್ಲಿರುವ ಮಹಿಳೆಗೆ ಅವಳದೆ ಆದ ಸ್ಥಾನವಿದೆ. ಅವಳಿಂದ ಮನೆ ಉದ್ದಾರವಾಗಬೇಕು ಎಂದು ಹಿರಿಯರು ಬಯಸುತ್ತಾರೆ. ಮಹಿಳೆ ನೈಟಿ ಧರಿಸಿಕೊಂಡಾಗ ಗೃಹ ಲಕ್ಷ್ಮೀಯಾಗಿ ಮನೆಗೆ ಶೋಭಿಸುವುದಿಲ್ಲ. ನಾವು ಮನೆಯಲ್ಲಿ ಇರುತ್ತೇವೆ. ಹೊರಗಡೆ ಎಲ್ಲಿಯೂ ಹೋಗುವುದಿಲ್ಲ. ಹೀಗಾಗಿ ಮನೆಯಲ್ಲಿ ನೈಟಿ ಧರಿಸುವುದು ನಮಗೆ ಅನು ಕೂಲಕರ ಎನ್ನುವುದು ಹಲವು ಗೃಹಿಣಿಯರ ಅಭಿಪ್ರಾಯವಾಗಿದೆ. ಆದರೆ ಮನೆಯಲ್ಲಿರುವ ಹಿರಿಯರು ಹಾಗೂ ಮಕ್ಕಳ ಮುಂದೆ ನೈಟಿ ಧರಿಸುವುದು ನಮ್ಮ ಸನಾತನ ಸಂಸ್ಕೃತಿಯಲ್ಲಿ ಶೋಭೆಯಲ್ಲ .

ಸೀರೆಯಲ್ಲೂ ಕೂಡ ವಿವಿಧ ಬಗೆಯ ಬಟ್ಟೆ ಬಳಸುತ್ತಾರೆ. ರೇಷ್ಮೆ , ಕಾಟನ್ , ಪಾಲಿಸ್ಟರ್, ನೈಲಾನ್ , ಸಿಲ್ಕ್ , ನೀವು ಮನೆಯಲ್ಲಿ ಇದ್ದಾಗ ಲೈಟ್ ವೇಟ್ ಸೀರೆ ಧರಿಸಬಹುದು. ರೇಷ್ಮೆ ಅಥವಾ ಗ್ರಾಂಡ್ ಸೀರೇನೆ ಧರಿಸಬೇಕಂತೇನಿಲ್ಲ. ಅದೆಷ್ಟು ವರ್ಷಗಳಿಂದ ನಮ್ಮ ಭಾರತದಲ್ಲಿ ಮಹಿಳೆಯರು ಉಡುವ ಸೀರೆಗೆ ಪ್ರಥಮ ಸ್ಥಾನ ಇತ್ತು. ಆದರೆ ಈಗ ಅದೆಲ್ಲ ಮಾಯವಾಗಿದೆ.

ನೈಟಿಯನ್ನು ಧರಿಸಿಕೊಂಡು ಹೊರಗಡೆ ಹೋಗುವುದು ದೇವಸ್ಥಾನಕ್ಕೆ ಹೋಗುವುದು ಇನ್ನೊಬ್ಬರ ಮನೆಯ ಶುಭ ಕಾರ್ಯಗಳಲ್ಲಿ ಭಾಗಿಯಾಗಲು ಹೋಗುವುದು ಶುಭಕರವಲ್ಲ, ಆದ್ದರಿಂದ ಇನ್ನಾದರೂ ಮಹಿಳೆಯರೆ ರಾತ್ರಿ ಮಲಗುವಾಗ ಹಾಗೂ ಮುಟ್ಟಿನ ಸಮಯದಲ್ಲಿ ಮಾತ್ರ ನೈಟಿ ಧರಿಸಿ ಉಳಿದ ಸಮಯದಲ್ಲಿ ಸೀರೆ ಧರಿಸುವುದು ಒಳ್ಳೆಯದು . ಸೀರೆಯನ್ನು ಧರಿಸುವುದರಿಂದ ಮಹಿಳೆಯು ಮನೆಯಲ್ಲಿ ಹಿರಿಯರಿಂದ ಮಕ್ಕಳಿಂದ ಗೌರವಕ್ಕೆ ಒಳಗಾಗುತ್ತಾಳೆ. ಹಾಗೂ ಗೃಹ ಲಕ್ಷ್ಮಿ ಯಾಗಿ ಮನೆ ತುಂಬಾ ಸಂತಸದ ವಾತಾವರಣಕ್ಕೆ ಕಾರಣವಾಗುತ್ತಾಳೆ. ಗಂಡನಿಗೆ ಆಕರ್ಷಕಳಾಗಿ ಕಾಣುತ್ತಾಳೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸೀರೆ ಧರಿಸುವುದರಿಂದ ಮಹಿಳೆಯರ ದೇಹದ ಆಕೃತಿ ಸುಂದರವಾಗಿ ರುತ್ತದೆ. ಅವರು ಸುಸಂಸ್ಕೃತರಾಗಿ ಕಾಣುತ್ತಾರೆ.

ಬೊಜ್ಜಿನ ಸಮಸ್ಯೆ ಮಹಿಳೆಯ ಹತ್ತಿರ ಸುಳಿಯುವುದಿಲ್ಲ . ಸೀರೆ ಧರಿಸುವುದರಿಂದ ಮಹಿಳೆಯರಿಗೆ ಇಷ್ಟೊಂದು ಲಾಭವಿದೆ , ಎಂದು ಹಾಗಾದರೆ ನೈಟಿ ಧರಿಸುವ ಮಹಿಳೆಯರೆ ಇನ್ನಾದರೂ ಇದರ ಬಗ್ಗೆ ಯೋಚಿಸಿ ನೈಟಿಯನ್ನು ಕೇವಲ ರಾತ್ರಿ ಹಾಗೂ ಕೆಲವು ಅನಿವಾರ್ಯ ಸಂದರ್ಭವನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ಧರಿಸದೆ ಸೀರೆಯನ್ನು ನಿಮ್ಮ ಉಡುಪಾಗಿ ಆಯ್ಕೆ ಮಾಡಿಕೊಳ್ಳಿ . ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಎಂದು ಹೇಳಲಾಗಿದೆ.

Leave a Comment