ನಮಗೆ ಯಾರು ನೋವುಂಟು ಮಾಡುತ್ತಾರೋ ಅಂತವರಿಗೆ

0

ನಾವು ಈ ಲೇಖನದಲ್ಲಿ ನಮಗೆ ಯಾರು ನೋವುಂಟು ಮಾಡುತ್ತಾರೋ ಅಂತವರಿಗೆ ಜನರಿಂದ ಹೇಗೆ ಬೆಲೆ ಹೆಚ್ಚಿಸಿ ಕೊಳ್ಳುವುದು ಎಂಬುದನ್ನು ತಿಳಿಯೋಣ . ಯಾರ ವಿಷಯದಲ್ಲೂ ಯಾವ ವಿಷಯದಲ್ಲೂ ಅತಿಯಾದ ಆತ್ಮವಿಶ್ವಾಸ ನಂಬಿಕೆ ಪ್ರೀತಿ ಒಳ್ಳೆಯದಲ್ಲ. ಯಾಕೆಂದರೆ ಯಾರು ಯಾವಾಗ ಹೇಗೆ ಬದಲಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ .

ನೀನು ಎಲ್ಲೇ ಇರು, ಹೇಗೆ ಇರು , ಆದರೆ ನೀನು ನಿನ್ನ ಜೀವನದಲ್ಲಿ ಏನು ಮಾಡಿದ್ದಿಯೋ , ಅದನ್ನು ನಿನಗೆ ವಾಪಸ್ ನೀಡಲು ನಿನ್ನನ್ನು ಹುಡುಕಿಕೊಂಡು ಬಂದೇ ಬರುತ್ತೇನೆ ಎಂದು ಕರ್ಮ ಹೇಳುತ್ತದೆ . ನಮಗೆ ಯಾರು ನೋವುಂಟು ಮಾಡುತ್ತಾರೋ, ಅಂತವರಿಗೆ ಕಾಲವೇ ಉತ್ತರ ಕೊಡುತ್ತದೆ. ನೀವು ಸುಮ್ಮನೆ ಇದ್ದು ಬಿಡಿ .

ಶ್ರೇಷ್ಠ ಕರ್ಮಗಳಿಂದ ಮಾತ್ರ ಗುರು ದೆಸೆ ಮತ್ತು ಶುಕ್ರದೆಸೆ ಉಂಟಾಗುತ್ತದೆ. ಪಾಪಕರ್ಮಗಳಿಂದ ಶನಿ ದೆಸೆ ಉಂಟಾಗುತ್ತದೆ . ಆದ ಕಾರಣ ಶ್ರೇಷ್ಠ ಕರ್ಮಗಳನ್ನೇ ಮಾಡಬೇಕು .

ಯಾರಾದರೂ ಶಾಂತ ಸ್ವಭಾವದ ವ್ಯಕ್ತಿಗಳಾಗಿದ್ದರೆ, ಅವರನ್ನು ಮೂರ್ಖರು ಅಥವಾ ಹೇಡಿಗಳು ಎಂದು ಭಾವಿಸಬೇಡಿ . ನೆನಪಿರಲಿ ಅಂತವರಿಗೆ ರಾಮನಿಂದ ಪರಶುರಾಮನಾಗಲು ಕೆಲವು ಕ್ಷಣಗಳು ಸಾಕು .

ಎಲ್ಲಿ ನಮಗೆ ಗೌರವ ಕಡಿಮೆ ಯಾಗುತ್ತದೆಯೋ , ಅಲ್ಲಿಂದ ನಾವೇ ದೂರ ಸರಿದು ಬಿಡಬೇಕು. ಅದು ಒಬ್ಬರ ಮನೆಯಾದರೂ ಸರಿ ಮನಸಾದರೂ ಸರಿ . ಏನಾದರೂ ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡಿ ಏಕೆಂದರೆ ನಿಮ್ಮ ಮಾತುಗಳು ಕೆಲವರ ನಗುವನ್ನೇ ಕೊಲ್ಲಬಹುದು .

ಜೀವಿತ ಕಾಲದಲ್ಲಿ ಅತ್ಯಂತ ಪ್ರಮುಖವಾದ ದಿನಗಳು ಎರಡು ಒಂದು . ನಮ್ಮ ಹುಟ್ಟಿನ ದಿನ ಮತ್ತೊಂದು ಹುಟ್ಟಿಗೆ ಅರ್ಥ ಕಂಡು ಕೊಂಡ ದಿನ . ಅದೃಷ್ಟ ಇರುವವನು ಓಡೋಡಿ ಬರುತ್ತಾನೆ. ಅದೃಷ್ಟ ಇಲ್ಲದವರು ಬಂದು ಹೋಗುತ್ತಾರೆ. ಹಾಗಾಗಿ ಲೆಕ್ಕವಿಲ್ಲದಷ್ಟು ಆಸೆಗಳನ್ನು ಇಟ್ಟುಕೊಳ್ಳಬೇಡಿ, ಸಿಕ್ಕಿದ್ದನ್ನು ನಿಭಾಯಿಸಿ .

ಮನಸ್ಸಿಗೆ ಮದವೇರಿದಾಗ ಸ್ಮಶಾನವನ್ನು ಒಮ್ಮೆ ತಿರುಗಿ ಬರ ಬೇಕಂತೆ . ಅಲ್ಲಿ ನಾನು ನನ್ನದು ಎನ್ನುತ್ತಿದ್ದ ವರೆಲ್ಲಾ ಮಣ್ಣಾಗಿ ಹೋದದ್ದು ಕಾಣಿಸುತ್ತದೆ .

ಅರ್ಜುನ ಕೃಷ್ಣನನ್ನು ಕೇಳಿದ ಮಾಧವ ಜೀವನ ಎಂದರೇನು ? ಕೃಷ್ಣ ನಗುತ್ತಾ ಹೇಳಿದ ನಾಳೆ ಎಂಬುದು ಶತ್ರು. ಇವತ್ತು ಎಂಬುದು ಸಂಬಂಧಿಕರು, ಈಗ ಎಂಬುದೇ ಮಿತ್ರ ಈ ಕ್ಷಣ ಎಂಬುದೇ ಜೀವನ .

ಸತ್ಯದ ದಾರಿಯಲ್ಲಿ ಹೋಗು ನೀನು ನಡೆಯುವಾಗ, ಎಡವಿ ಪಾತಾಳಕ್ಕೆ ಬಿದ್ದರೂ , ನಿನ್ನನ್ನು ಮೇಲೆ ಎತ್ತಲು ನಾನು ಬಂದೇ ಬರುತ್ತೇನೆ .

ಸುಳ್ಳು ಎಂಬುವುದು ಕೆಂಡದ ಹಾಗೆ ಹೊಳೆಯುತ್ತದೆ . ಆದರೆ ಸುಡುತ್ತದೆ, ಕ್ರಮೇಣ ಬೂದಿ ಆಗುತ್ತದೆ. ಸತ್ಯ ಎಂಬುದು ಮಾಣಿಕ್ಯದ ಹಾಗೆ ಹೊಳೆಯುತ್ತದೆ. ಆದರೆ ಸುಡುವುದಿಲ್ಲ ಮಹತ್ತರವಾದ ಶಾಶ್ವತ ಬೆಲೆಯನ್ನು ಹೊಂದಿರುತ್ತದೆ .

ಬಾಗುವುದರಿಂದ ಸಂಬಂಧ ಉಳಿಯುವುದಾದರೆ, ಬಾಗಿ ಬಿಡಿ ಆದರೆ ಪ್ರತಿ ಬಾರಿಯೂ ನೀನೇ ಬಾಗುವುದಾದರೆ ಬಾಗುವುದನ್ನೆ ಬಿಟ್ಟುಬಿಡಿ .

ಚರಿತ್ರೆಯಲ್ಲಿ ಗೆದ್ದವನಿಗೆ ಗೆದ್ದವನು ಎನ್ನುವ ಜಾಗವಿದೆ . ಸೋತವನಿಗೂ ಕೂಡ ಇಂಥ ವನೊಂದಿಗೆ ಸೆಣಸಾಡಿ ಸೋತ ಎನ್ನುವ ಜಾಗವಿದೆ. ಆದರೆ ನಿಂತುಕೊಂಡು ನೋಡುವವರಿಗೆ ಆಡಿಕೊಂಡು ನಗುವವರಿಗೆ ಚರಿತ್ರೆಯಲ್ಲಿ ಎಲ್ಲೂ ಜಾಗವಿಲ್ಲ .

ದೇವರಿಗೆ ಹೇಳಬೇಡಿ ನನಗೆ ಸಮಸ್ಯೆಗಳಿವೆ. ಎಂದು ಸಮಸ್ಯೆಗಳಿಗೆ ಹೇಳಿ ನನ್ನ ಬಳಿ ದೇವರಿದ್ದಾನೆ ಎಂದು . ನಿಮ್ಮ ಕೆಲಸ ಮತ್ತು ದೇವರನ್ನು ಪ್ರೀತಿಸಿ. ಏಕೆಂದರೆ ಇವರಿಬ್ಬರು ಎಂದಿಗೂ ಮೋಸ ಮಾಡುವುದಿಲ್ಲ .

ಸ್ವರ್ಗದಲ್ಲಿ ಎಲ್ಲವೂ ಇದೆ, ಆದರೆ ಸಾವಿಲ್ಲ . ಭಗವದ್ಗೀತೆಯಲ್ಲಿ ಎಲ್ಲವೂ ಇದೆ, ಆದರೆ ಸುಳ್ಳಿಲ್ಲ. ಜಗತ್ತಿನಲ್ಲಿ ಎಲ್ಲವೂ ಇದೆ ನೆಮ್ಮದಿ ಇಲ್ಲ. ಇವತ್ತಿನ ಎಲ್ಲಾ ಮಾನವರಲ್ಲಿ ಎಲ್ಲವೂ ಇದೆ ಆದರೆ ಶಾಂತಿ ಇಲ್ಲ .

ಜನರಿಂದ ಗೌರವ ಸಿಗಬೇಕಾದರೆ 5 ಸ್ಥಳಗಳಲ್ಲಿ ಯಾವಾಗಲೂ ಮೌನವಾಗಿರಿ .

1 .ನಿಮ್ಮ ಶಬ್ದಗಳಿಗೆ ಬೆಲೆ ಇರುವುದಿಲ್ಲವೋ, 2 .ಅಲ್ಲಿ ಮಾತನಾಡಿದ ಮೇಲೆ ಪಶ್ಚಾತಾಪ ಪಡಬೇಕಾಗಿ ಬಂದರೆ, ನಿಮ್ಮ ಮಾತಿನಿಂದ ಯಾರ ಮನಸ್ಸಿಗಾದರೂ ನೋವು ಉಂಟಾಗುತ್ತದೆ ಎಂದರೆ , 4 .ನೀವು ಕೋಪದಲ್ಲಿದ್ದಾಗ , ನೀವು ಕೋಪದಲ್ಲಿದ್ದಾಗ ಏನು ಯೋಚಿಸದೆ ಏನು ಬೇಕಾದರೂ ಮಾತನಾಡಿಬಿಡಬಹುದು ,

5 . ಎಲ್ಲಿ ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲವೋ ಅಲ್ಲಿ , ನೀನು ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕೇವಲ ಒಂದು ಹೆಜ್ಜೆ ಎತ್ತಿಟ್ಟು ಕಾದು ನೋಡು . ನಿನ್ನನ್ನು ನೋವಿನಿಂದ ನರಳುವಂತೆ ಮಾಡಿದವರು ಕ್ರಮೇಣ ತಮ್ಮನ್ನು ತಾವೇ ನೋವಿನಿಂದ ನರಳಿಸಿಕೊಳ್ಳುವುದನ್ನು ನೀನು ನೋಡಬಹುದು .

Leave A Reply

Your email address will not be published.