ನಾವು ಈ ಲೇಖನದಲ್ಲಿ ನಮ್ಮ ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳು ಯಾವುದು ಎಂಬುದನ್ನು ತಿಳಿಯೋಣ . ಮಾಡುವ ಕೆಲಸ ಕಾರ್ಯಗಳು ಅಥವಾ ಆಚಾರ ವಿಚಾರ ನಡೆ ನುಡಿ ಇವುಗಳನ್ನು ಹಿರಿಯರು ಹೇಳುತ್ತಿದ್ದರು. ಕೆಲವೊಂದು ನೋಡಿ ತಿದ್ದಿ ಮಾಡಿಸುತ್ತಿದ್ದರು . ಬೆಳಗ್ಗೆ ಬಲ ಮಗ್ಗುಲಲ್ಲಿ ಹೇಳುವುದರಿಂದ ರಾತ್ರಿ ಮಲಗುವ ತನಕ ನಿತ್ಯ ಜೀವನದ ನಿಯಮಾವಳಿಗಳನ್ನು ಹೇಳುತ್ತಿದ್ದರು . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳಿಗೆ ಪ್ರತಿಯೊಂದುಕ್ಕೂ ಕಾರಣ ಇರುತ್ತಿತ್ತು .
ಅದನ್ನು ಪಾಲಿಸದೆ ಇದ್ದಾಗ ನಮಗೆ ಕೆಡುಕು ಆಗುತ್ತದೆ . ಇಂಥಹ ವಿಚಾರಗಳನ್ನು ಹೆಣ್ಣು ಮಕ್ಕಳಿಗೆ ಪದೇಪದೇ ಹೇಳುತ್ತಿದ್ದರು . ಏಕೆಂದರೆ ಅಡುಗೆ ಮನೆಗೆ ಮಹಾಲಕ್ಷ್ಮಿ ಹೆಣ್ಣು ಇಂತಹ ಹೆಣ್ಣು ಮನೆಯ ಕಣ್ಣು . ಆದ್ದರಿಂದ ಮನೆಯವರೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ತಿಳಿಸುವುದಾಗಿತ್ತು .ಕೆಲವೊಂದು ಶಾಸ್ತ್ರ ಸಂಪ್ರದಾಯಗಳನ್ನು ಈ ದಿನ ಕಾಲಕ್ಕೆ ತಕ್ಕಂತೆ ಪಾಲಿಸಲು ಸಾಧ್ಯವಿಲ್ಲವೆಂದರು ಅವುಗಳ ಬಗ್ಗೆ ತಿಳುವಳಿಕೆ ಇಟ್ಟುಕೊಳ್ಳುವುದು ಉತ್ತಮ .
1 .ದೇವರ ಪಾತ್ರೆ, ಮುಸುರೆ ಪಾತ್ರೆ , ಎಂಜಲು ತಟ್ಟೆ , ಎಂಜಲು ಲೋಟ , ಪ್ರತ್ಯೇಕವಾಗಿ ಇಡಬೇಕು. ಹಬ್ಬ ಹರಿದಿನ ಶುಕ್ರವಾರ ವಿಶೇಷ ದಿನಗಳಲ್ಲಿ ಹಾಗಲಕಾಯಿ ಬಾಳೆ ಗಿಡದ ಕಾಯಿ ದಿಂಡು ಮಾಡುವಂತಿಲ್ಲ .3.ಬೂದು ಗುಂಬಳಕಾಯಿ ಚೀನಿಕಾಯಿ ಇಡಿ ಕಾಯಿಗಳನ್ನು ಹೆಣ್ಣು ಮಕ್ಕಳು ಒಡೆಯುವಂತಿಲ್ಲ . ಗಂಡಸರು ಮನೆ ಹೊರಗೆ ಒಡೆದು ಕೊಟ್ಟ ಮೇಲೆ ಹೆಚ್ಚಬೇಕು .
ಒಡೆವ ಬಳೆಗಳನ್ನು ಕೈಗೆ ಹಾಕಿಕೊಳ್ಳಲೇ ಬಾರದು . ಹೋಗಿ ಬರುತ್ತೇವೆ ಎಂದು ಹೇಳುವವರ ಎದುರಿಗೆ ಮುಖಕ್ಕೆ ಎಣ್ಣೆ ಹಚ್ಚಿ ಕೊಂಡಿರುವುದು ಅಥವಾ ಮುಖ ತೊಳೆಯದೆ ಹಣೆಗೂ ಇಡದೆ ಹೊರಡುವವರ ಎದುರಿಗೆ ಬರಬಾರದು 6, ಹೊರಟ ಕೂಡಲೇ ಮುಖ ತೊಳೆದುಕೊಳ್ಳಲು ಹೋಗುವುದು ಸ್ನಾನಕ್ಕೆ ಹೋಗುವುದು ಮಾಡಬಾರದು . 7.ಊಟ ಮಾಡಿ ಹೊರಟವರು ಊಟ ಮಾಡುವವರಿಗೆ ನಾವು ಹೊರಡುತ್ತೇವೆ ಎಂದು ಹೇಳದೆ ಅವರ ಊಟ ಮುಗಿಯುವವರೆಗೂ ಅಲ್ಲಿಯೇ ಇರಬೇಕು .
8.ಶುಭ ಸಮಾರಂಭಗಳಿಗೆ ಊಟಕ್ಕೆ ಹೋದಾಗ ಹಿಂದಿರುಗಿ ಬರುವಾಗ ಮನೆಯವರಿಗೆ ಹೋಗಿ ಬರುತ್ತೇವೆ . ಚೆನ್ನಾಗಿತ್ತು ಎಂದು ಹೇಳಬೇಕು. ಹಾಗೆಯೇ ದುಃಖದ ಕಾರ್ಯ ಕ್ರಮ ಗಳಿಗೆ ಹೋದಾಗ ಹೋಗಿ ಬರುತ್ತೇವೆ ಎಂದು ಹೇಳುವಂತಿಲ್ಲ . ಹಾಗೂ ದುಃಖದ ಮನೆಗೆ ಬಂದವರು ಹೊರಡುತ್ತೇವೆ ಎಂದು ಹೊರಟು ನಿಂತವರಿಗೆ ಊಟ ಮಾಡಿ ಎಂದು ಹೇಳಬಾರದು .
9.ಊರಿಗೆ ಹೋರಟವರ ಬಟ್ಟೆ ಗಂಟು , ಟ್ರಂಕು ಇವುಗಳ ಮೇಲೆ ಕೂರಬಾರದು .ಪ್ರಯಾಣದಲ್ಲಿ ತೊಂದರೆಯಾಗುತ್ತದೆ. ಅಪಘಾತ ಕೂಡ ಆಗಬಹುದು . 10.ಹೊರಡುವಾಗ ಹಿರಿಯರ ಕಾಲಿಗೆ ನಮಸ್ಕಾರಿಸಬೇಕು . 11.ಮೂರು ಸಂಜೆ ಹೊತ್ತು ಮುಸುಕು ಹೊದ್ದು ಮಲಗಬಾರದು . 12 . ದೀಪ ಹಚ್ಚದೆ ಬಾಗಿಲು ಹಾಕಿ ಒಳಗೆ ಕೂರಬಾರದು . 13 . ಶುಕ್ರವಾರ ಮಂಗಳವಾರ ಹಬ್ಬದ ದಿನಗಳಲ್ಲಿ ಉಗುರು ಕತ್ತರಿಸುವುದು. ಹಾಗೂ ಉಗುರುಗಳನ್ನು ಮನೆ ಒಳಗೆ ಹಾಕುವುದು ಮಾಡಬಾರದು .
14 . ತಲೆ ಬಾಚಿಕೊಂಡು ಬಿದ್ದ ಕೂದಲನ್ನು ಹಾಗೆ ಬಿಡಬಾರದು. ಹೊತ್ತಿಲ್ಲದ ಹೊತ್ತಿನಲ್ಲಿ ಬೀದಿ ಬಾಗಿಲಲ್ಲಿ ಕುಳಿತು ತಲೆ ಬಾಚಿ ಕೊಳ್ಳಬಾರದು . ಬಟ್ಟೆಗಳನ್ನು ಮೈ ಮೇಲೆ ಧರಿಸಿದ ಮೇಲೆ ಮೈ ಮೇಲಿದ್ದಂತೆಯೇ ಕತ್ತರಿಸುವುದು, ಗುಂಡಿ ಹಾಕುವುದು , ಒಲಿಯುವುದು ಮಾಡಬಾರದು. ಇದರಿಂದ ಮನುಷ್ಯನ ಕಂಟಕ ಹೆಚ್ಚಾಗುತ್ತದೆ . ಅರ್ಧಂಬರ್ಧ ಮುಖ ತೊಳೆಯುವುದು ಕಾಲಿನ ಹಿಮ್ಮಡಿ ನೆನೆಯದಂತೆ ಮುಂದೆ ಮಾತ್ರ ಕಾಲಿಗೆ ನೀರು ಹಾಕಿಕೊಳ್ಳುವುದನ್ನು ಮಾಡಬಾರದು .ಶನಿ ಹಿಡಿಯುತ್ತದೆ ಎಂದು ಹೇಳುತ್ತಿದ್ದರು .
17 . ಕಬ್ಬಿಣದ ಸಾಮಾನುಗಳನ್ನು ಕೈಯಿಂದ ಮತ್ತೊಂದು ಕೈಗೆ ಕೊಡಬಾರದು . 18 . ಯಾರೋ ಕರ್ಚೀಫ್ ಕೊಟ್ಟರೆ ತೆಗೆದುಕೊಳ್ಳಬಾರದು . 19 . ಸಂಜೆಯ ಹೊತ್ತು ಮೊಸರು ,ಅರಿಶಿಣ, ಉಪ್ಪು , ಇವುಗಳನ್ನು ಹೊಸ್ತಿಲನ ಆಚೆಗೆ ಕೊಡಬಾರದು. ಅಕಸ್ಮಾತ್ ಹೆಪ್ಪಿಗೆ ನೆರೆಹೊರೆಯವರು ಮೊಸರು ಕೇಳಿದಾಗ ಒಣಮೆಣಸಿನಕಾಯನ್ನು ಚೂರು ಹಾಕಿ ಕೊಡಬಹುದು . 20 . ಕುಲ ದೇವರ ವಾರ ಅಥವಾ ಒಂದೇ ದಿನ ಮಂಗಳವಾರ ಶುಕ್ರವಾರ ತಂದೆ ಮಕ್ಕಳು , ಅಣ್ಣ ತಮ್ಮ, ಒಟ್ಟಿಗೆ ಕ್ಷೌರ ಮಾಡಿಸಿ ಕೊಳ್ಳುವಂತಿಲ್ಲಾ .
21 . ಮಾಡಿದ ಅಡುಗೆಗಳಿಗೆ ಒಗ್ಗರಣೆ ಹಾಕದೆ ಗಂಡಸರಿಗೆ ಬಡಿಸಬಾರದು . 22 . ಉಪನಯನ ಆದ ಮೇಲೆ ಗಂಡು ಮಕ್ಕಳು ತಂಗಳು ಪದಾರ್ಥ ತಿನ್ನಬಾರದು . 23 .ಊಟ ಮಾಡಲು ಕಾಯಬೇಕು . ಊಟವನ್ನು ಕಾಯಿಸಬಾರದು. ಅನ್ನ ತಟ್ಟೆಯ ಮೇಲೆ ಹಾಕಿ ಎಷ್ಟು ಹೊತ್ತಾದರೂ ಬರದೇ ಇರಬಾರದು .
24 .ಎಂಜಲು ಕೈಯನ್ನು ಒಣಗಿಸುವುದು , ಎಂಜಲು ತಟ್ಟೆಯನ್ನು ಒಣಗಿಸುವುದು, ಮಾಡಬಾರದು. ಇದರಿಂದ ಅಶುಭ ಮತ್ತು ಸಾಲ ಆಗುತ್ತದೆ . ಎಂಜಲು ಕೈಯಲ್ಲಿ ತಟ್ಟೆಯನ್ನು ಎತ್ತಿಕೊಂಡು ಹೋಗಿ ತೊಳೆಯಬಾರದು. ಮೊದಲು ಕೈ ತೊಳೆದುಕೊಂಡು ಬಂದು ನಂತರ ಎಂಜಲು ತಟ್ಟೆಯನ್ನು ಎತ್ತಬೇಕು .
25 .ಊಟದ ಮಧ್ಯೆ ಏಳಬಾರದು . 26 . ಚಪ್ಪಲಿ ಪೊರಕೆಗಳನ್ನು ತಲೆ ಕೆಳಗಾಗಿ ಇಡಬಾರದು . 27 . ಏಣಿಯನ್ನು ಉದ್ದಕ್ಕೆ ಮಲಗಿಸ ಬಾರದು . 28 . ಸಂಜೆ ಹೊತ್ತು ಮನೆ ಗುಡಿಸಬಾರದು . ದೀಪ ಹಚ್ಚುವ ಮೊದಲೇ ಗುಡಿಸಿ ಹಿಂಬಾಗಿಲು ಹಾಕಿ ,ಮುಂಭಾಗಿಲು ತೆರೆದು ದೀಪ ಹಚ್ಚಬೇಕು .
29 .ಮಧ್ಯಾಹ್ನ 12 ಗಂಟೆಯ ನಂತರ ತುಳಸಿ ಗಿಡದ ಎಲೆ ಕೀಳಬಾರದು . ತುಳಸಿ ಸಸ್ಯವನ್ನು ಕೊಡುವುದಾದರೂ ಬೆಳಗಿನ ಸಮಯದಲ್ಲಿ ಕೊಡಬೇಕು . 30 . ಅಪರಾಹ್ನದ ಹೊತ್ತಿನಲ್ಲಿ ಹೊಳೆ, ಬದಿ , ಮರದ ಕೆಳಗೆ ಹೋಗಬಾರದು . ಮನೆ ಮುಂದಿನ ಬಾಗಿಲ ಚಿಲಕವನ್ನು ಶಬ್ದ ಮಾಡಬಾರದು . ಜಗಳ ಆಗುತ್ತದೆ .
31 . ಶುಭ ವಿಚಾರವನ್ನು ಮಾತನಾಡುವ ಸಂದರ್ಭದಲ್ಲಿ ಒಂಟಿ ಸೀನು ಸೀನಬಾರದು . ಅಕಸ್ಮಾತ್ ಬಂದರೆ ಸೂಕ್ಷ್ಮ ಅರಿತು ಬೇಗ ಎದ್ದು ಹೋಗಬೇಕು . 32 . ಬಿಸಿ ಬಿಸಿ ಅನ್ನಕ್ಕೆ ಹಾಲು ಅಥವಾ ಮೊಸರು ಹಾಕಿ ತಿನ್ನಬಾರದು. ಸೋಮವಾರ ಎಣ್ಣೆ ಹಚ್ಚಿ ತಲೆಗೆ ನೀರು ಹಾಕಿ ಕೊಳ್ಳಬಾರದು .
34 . ಒಂಟಿ ಕಾಲಿನಲ್ಲಿ ನಿಂತು ಮಾತನಾಡಬಾರದು . 35 . ಹೊಸ್ತಿಲ ಮೇಲೆ ಕೂರಬಾರದು . ಮಲಗಿದಾಗ ಗೋಡೆಗೆ ಕಾಲಿನಿಂದ ಒದೆಯುತ್ತಾ ಗೋಡೆ ಮೇಲೆ ಕಾಲು ಹಾಕಿ ಮಲಗಬಾರದು .
37 . ಕಾಲು ಕೆಳಗೆ ತೊಟ್ಟಿಲು ಕಟ್ಟಿದ್ದರೆ ಕಾಲಿನಿಂದ ತೊಟ್ಟಿಲು ಒದೆಯಬಾರದು . ಆದರೆ ಕೆಲವೊಬ್ಬರು ನಿದ್ರೆಗಣ್ಣಿನಲ್ಲಿ ಕಾಲಿನಿಂದಲೇ ತೂಗುತ್ತಾರೆ . 38 . ಒದ್ದೆ ಬಟ್ಟೆಯನ್ನು ಮೈ ಮೇಲೆ ಧರಿಸಬಾರದು .ಸಂಜೆ ವೇಳೆ ಬಟ್ಟೆ ಒಗೆಯಬಾರದು .
39 . ರಾತ್ರಿ ಮುಸುರೆ ಪಾತ್ರೆಗಳಿಗೆ ನೀರು ಹಾಕದೆ ಬಿಡಬಾರದು, ಹರಡಬಾರದು. ಎಲ್ಲಾ ತೊಳೆದಿಟ್ಟು ಮಲಗುವುದಾದರೆ, ಒಂದು ಚೂರು ಅನ್ನ ಅಥವಾ ಅವಲಕ್ಕಿ ಬಟ್ಟಲಲ್ಲಿ ಹಾಕಿ ಮುಚ್ಚಿಡಬೇಕು. ಅಕಸ್ಮಾತ್ ಅನ್ನ ಉಳಿಯದಿದ್ದರೆ ಚೂರು ಅವಲಕ್ಕಿ ಬೆಲ್ಲ ಏನೋ ಒಂದು ಚೂರು ಪದಾರ್ಥಗಳನ್ನು ಹಾಕಿ ಮುಚ್ಚಿಡಬೇಕು .
ಮನೆಯಲ್ಲಿ ರಾತ್ರಿಯ ಸಮಯದಲ್ಲಿ ಊಟ ಮಾಡದೆ ಹಾಗೆ ಇರಬಾರದು. ಒಂದು ಹಣ್ಣನ್ನಾದರೂ ತಿನ್ನಬೇಕು .
40 . ಅಪರೂಪಕ್ಕೆ ನೆಂಟರ ಮನೆಗೆ ಬಾಣಂತಿ ಮನೆಗೆ ಮಗು ನೋಡಲು ಅಥವಾ ವಯಸ್ಸಾದವರನ್ನು ನೋಡಲು ಹೋಗುವಾಗ, ಬರಿ ಗೈಯಲ್ಲಿ ಹೋಗಬಾರದು. ಮತ್ತು ಹಾಗೆ ನೋಡಲು ಬಂದವರನ್ನು ಬರಿಗೈಯಲ್ಲಿ ಕಳುಹಿಸಬಾರದು. ಕಾಫಿ ಟೀ ಆಗದಿದ್ದರೂ ಚಮಚ ಸಕ್ಕರೆ ಕುಡಿಯಲು ನೀರನ್ನಾದರೂ ಕೊಟ್ಟು ಕಳುಹಿಸಬೇಕು.