ಸ್ಥೂಲಕಾಯ ಅಥವಾ ಬೊಜ್ಜನ್ನು ಕರಗಿಸಿಕೊಳ್ಳಲು ಇರುವ ಮನೆಮದ್ದ

0

ಸ್ಥೂಲಕಾಯ ಅಥವಾ ಬೊಜ್ಜನ್ನು ಕರಗಿಸಿಕೊಳ್ಳಲು ಇರುವ ಮನೆಮದ್ದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಬೊಜ್ಜಿಗೆ ಕಾರಣವೇನು? ಬೊಜ್ಜಿಗೆ ಕಾರಣವನ್ನು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಸ್ಥೂಲಕಾಯಕ್ಕೆ ಕಾರಣ ಆಯುರ್ವೇದದಲ್ಲಿ ಹೇಳುವುದಾದರೇ ತ್ರಿಕಾಲಿಕ ಸತ್ಯ ಅಂದರೆ ಭೂತಕಾಲದಲ್ಲಿ, ವರ್ತಮಾನಕಾಲದಲ್ಲಿ, ಭವಿಷ್ಯತ್ ಕಾಲದಲ್ಲಿ ಕೂಡ ಸತ್ಯ. ಮುಖ್ಯ ಕಾರಣ ಅಗ್ನಿಮಾಂದ್ಯ. ಅಗ್ನಿಮಾಂದ್ಯ ಎಂದರೆ ಏನು? ನಾವು ತಿಂದಿರುವಂತಹ ಆಹಾರ ಹೊಟ್ಟೆಯಲ್ಲಿ ಜೀರ್ಣವಾಗುತ್ತದೆ.

ಜೀರ್ಣವಾದಾಗ ಸಾರ ಭಾಗ ಮತ್ತು ಕೆಟ್ಟ ಭಾಗ ಆಗುತ್ತೆ. ಜೀರ್ಣವಾಗೋದಿಕ್ಕೆ ಉಪಯೋಗ ಮಾಡುವಂತಹ ಒಂದು ಅಗ್ನಿ ಫೈರ್, ಅದು ಡೈಜೆಸ್ಟೀವ್ ಎನ್ಜೈಮ್ ಅದೇ ಅಗ್ನಿ. ಆ ಅಗ್ನಿಯಲ್ಲಿ ಕೊರತೆ, ಆ ಅಗ್ನಿಯಲ್ಲಿ ಮಾಂದ್ಯತೆ, ಆ ಅಗ್ನಿಯಲ್ಲಿ ತೀಕ್ಷ್ಣತೆಯುಂಟಾಗುವುದೇ ಮುಖ್ಯ ಕಾರಣ ಸ್ಥೂಲಕಾಯಕ್ಕೆ. ನಾವು ಸೇವಿಸುವ ಆಹಾರ 3 ಗಂಟೆಗಳಲ್ಲಿ ಜೀರ್ಣವಾಗುತ್ತದೆ. ಅವುಗಳಲ್ಲಿ 2 ಭಾಗಗಳಾಗಿ ವಿಂಗಡನೆಗೊಳ್ಳುತ್ತದೆ. ಸಾರ ಭಾಗ ಮತ್ತು ಕೆಟ್ಟ ಭಾಗ. ಸಾರಭಾಗ ರಕ್ತಕ್ಕೆ ಸೇರುತ್ತದೆ. ಕೆಟ್ಟ ಭಾಗ ಮಲದ ರೂಪದಲ್ಲಿ ತ್ಯಾಜ್ಯ ರೂಪದಲ್ಲಿ ಹೊರಗೆ ಹೋಗುತ್ತದೆ. ಒಂದು ವೇಳೆ ಅಗ್ನಿಮಾಂದ್ಯವಾಗಿದೆಯೆಂದರೆ ನಾವು ತಿಂದಿರುವ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

ಇದರಿಂದ ಆಮ ಸಂಗ್ರಹಣೆಯಾಗುತ್ತದೆ, ಎಂದರೆ ಅರೆ-ಬೆಂದಿರುವಂಥಹ ಆಹಾರ ಅದು ಆಮ ಎಂದು ಕರೆಯುತ್ತೇವೆ. ಈ ʼಆಮʼ ಸ್ಥೂಲ ಕಾರಣಕ್ಕೆ ಮುಖ್ಯ ಕಾರಣ. ಈ ಅರೆಬೆಂದ ಆಹಾರ ರಕ್ತಕ್ಕೂ ಸೇರುವುದಿಲ್ಲ ಮತ್ತು ತ್ಯಾಜರೂಪದಲ್ಲಿಯೂ ಹೋಗುವುದಿಲ್ಲ ಅದು ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಈ ಸಂಗ್ರಹಣೆ ಹೆಚ್ಚಾದಹಾಗೆಯೇ ಸ್ಥೂಲಕಾಯವುಂಟಾಗಲು ಕಾರಣವಾಗುತ್ತದೆ. ಅಗ್ನಿಮಾಂದ್ಯಕ್ಕೆ ಮುಖ್ಯ ಕಾರಣ ನಮ್ಮ ಊಟ ಮಾಡುವ ಶೈಲಿ ಸರಿಯಿಲ್ಲದಿರುವುದು.

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಊಟಕ್ಕೂ ಮುಂಚೆ ಒಂದು ಚೂರು ನೀರನ್ನು ಕೈಯಲ್ಲಿ ಹಿಡಿದು ಆಪೋಷಣೆ ಅಂದರೆ ತೀರ್ಥರೂಪದಲ್ಲಿ ಕುಡಿದು ನಂತರ ಊಟವನ್ನ ಪ್ರಾರಂಭಸುತ್ತಿದ್ದರು. ಹೀಗೆ ಮಾಡುವುದರಿಂದ ಜಠರಾಗ್ನಿಗೆ ಸ್ವಲ್ಪ ಜಲ ಹಾಗೂ ಆಮ್ಲಜನಕವು ಸೇರಿಸಿದಾಗ ಅಗ್ನಿಯು ಹೆಚ್ಚು ಉರಿಯಲ್ಪಡುತ್ತದೆ. ಇದರಿಂದ ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಊಟ ಮುಗಿದ ನಂತರ 2 ಅಥವಾ 2 ½ ತಾಸಿನ ನಂತರ ನೀರನ್ನು ಕುಡಿದಾಗ ಅದು ಸರಿಯಾದ ಕ್ರಮವಾಗುತ್ತದೆ. ಊಟದ ಮುಂಚೆ ಅಥವಾ ಮಧ್ಯ ಅಥವಾ ಊಟವಾದ ಮೇಲೆ ನೀರು ಕುಡಿವುದು ಅಗ್ನಿಮಾಂದ್ಯಕ್ಕೆ ಮುಖ್ಯ ಕಾರಣವಾಗುತ್ತದೆ.

ಇನ್ನು ಮನೆಮದ್ದು ಎಂದು ಹೇಳುವುದಾದರೆ 2 ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಬೆರಸಿ, ಆ ನೀರು ಒಂದು ಲೋಟವಾಗುವವರೆಗೆ ಕುದಿಸಿ ಶೋಧಿಸಿ ಪ್ರತಿದಿನ ತಿಂಡಿ/ಊಟ ಮುಗಿದ ಮೇಲೆ 15 ಎಂ.ಎಲ್. ಅನ್ನು ಸೇವಿಸಿದರೆ ಅಗ್ನಿಮಾಂದ್ಯ ಶಮನವಾಗುತ್ತದೆ. ಹಾಗೂ ಜೇನುತುಪ್ಪವೂ ಕೂಡ ಅಗ್ನಿಮಾಂದ್ಯ ಸಮಸ್ಯೆಗೆ ಔಷಧಿಯಾಗಬಲ್ಲದು. ಸರಿಯಾದ ಊಟದ ಕ್ರಮ, ಜೀರಿಗೆ ಕಷಾಯ ಹಾಗೂ ಜೇನುತುಪ್ಪ ಸೇವೆನೆಯಿಂದ ಅಗ್ನಿಮಾಂದ್ಯದಿಂದಾಗಿ ಉಂಟಾದ ಸ್ಥೂಲಕಾಯ ಸಮಸ್ಯೆಯಿಂದ ಪಾರಾಗಬಹುದು. ಇದ್ಯಾವುದೂ ಉಪಯೋಗವಾಗದೇ ಇರುವ ಸಂದರ್ಭದಲ್ಲಿ ಆಯುರ್ವೇದ ವೈದ್ಯರನ್ನು ಕಾಣಬೇಕಾಗುತ್ತದೆ.

Leave A Reply

Your email address will not be published.