ಮಕರ ರಾಶಿಯವರ ಬಗ್ಗೆ ತಿಳಿದರೇ ನಿಮಗೆ ಆಶ್ಚರ್ಯವಾಗುವುದು ಖಚಿತವಾಗಿದೆ. ಮಕರ ರಾಶಿಯವರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. 12ನೇ ರಾಶಿ ಚಕ್ರದಲ್ಲಿ 10 ನೇ ರಾಶಿ ಮಕರರಾಶಿಯಾಗಿದೆ. ಮಕರ ರಾಶಿಯ ಅಂಶ ಭೂಮಿ, ಆಳುವ ಗ್ರಹ ಶನಿ, ಬಣ್ಣ ಬ್ರೋನ್ ಕಪ್ಪು, ಗುಣ ಪ್ರಧಾನ. ದಿನ ಶನಿವಾರ, ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿಗಳು ಯಾವುವು ಎಂದರೆ ವೃಷಭ, ಕರ್ಕ, ಅದೃಷ್ಟ ಸಂಖ್ಯೆ 4,8,13,22, ಮಕರ ರಾಶಿಯನ್ನು ಆಳುವ ಗ್ರಹ ಶನಿಗ್ರಹ.
ಶನಿದೇವನಂತೆ ಈ ರಾಶಿಯವರು ಕೂಡ ನ್ಯಾಯವನ್ನು ಪ್ರೀತಿಸುವವರು ಆಗಿರುತ್ತಾರೆ. ಈ ರಾಶಿಯ ಚಕ್ರದ ಅಂಶವು ಭೂಮಿಯಾಗಿರುವ ಕಾರಣ ಈ ಜನರು ತುಂಬಾ ಶ್ರಮಶೀಲರು. ಈ ರಾಶಿಯವರಿಗೆ 39 ವರ್ಷದಿಂದ 50 ವರ್ಷದ ಒಳಗಿನ ಸಮಯ ಅತ್ಯುತ್ತಮವಾಗಿದೆ. ಮಕರ ರಾಶಿಯವರು ಅನೇಕ ಗುಣ ಮತ್ತು ದೋಷಗಳನ್ನು ಹೊಂದಿರುತ್ತಾರೆ. ಮಕರರಾಶಿಯವರು ಶುದ್ಧ ಹೃದಯದವರು ಮತ್ತು ಪ್ರತಿಯೊಂದು ರಾಶಿಯವರನ್ನು ಅತ್ಯಂತ ಪ್ರಾಮಾಣಿಕವಾಗಿ ಪರಿಗಣಿಸುತ್ತಾರೆ.
ಮಕರ ರಾಶಿಯವರು ಹೆಚ್ಚು ಮಹತ್ವಾಕಾಂಕ್ಷಿಯುಳ್ಳವರು. ಜೀವನದ ಪ್ರತಿಯೊಂದ ಕ್ಷೇತ್ರದಲ್ಲೂ ಯಶಸ್ವಿಯಾಗಲೂ ಪ್ರಯತ್ನಿಸುತ್ತಾರೆ. ಇವರ ದೃಢ ಮನಸ್ಸಿಗೆ ಸರಿಸಾಟಿಯಾಗುವವರು ಯಾರು ಇಲ್ಲ ಹಾಗೂ ಇವರು ಪ್ರತಿಯೊಂದು ವಿಷಯಗಳಲ್ಲೂ ಗಮನ ಹರಿಸುತ್ತಾರೆ. ಮಕರ ರಾಶಿ ಕಠಿಣ ಪರಿಶ್ರಮದ ಸಂಕೇತವಾಗಿದೆ. ತಮಗೆ ಬೇಕಾದ್ದನ್ನು ಸಾಧಿಸಲು ಎಲ್ಲವನ್ನು ಮಾಡುತ್ತಾರೆ. ಸಾಧನೆಯ ದಾರಿಯಿಂದ ಹೊರಗಡೆ ಹೋಗಲು ಎಂದೂ ಬಯಸುವುದಿಲ್ಲ.
ಅವರಿಗೆ ಗುರಿಯನ್ನು ಹೇಗೆ ಸಾಧನೆ ಮಾಡಬೇಕೆನ್ನುವುದು ತಿಳಿದಿರುತ್ತದೆ. ಶನಿಯ ಒಡೆತನದ ಮಕರರಾಶಿಯವರು ಉತ್ತಮ ಗುರುಗಳನ್ನು ಪಡೆಯುತ್ತಾರೆ. ಕೃಷಿಗೆ ಸಂಬಂಧಿಸಿದ ಕೆಲಸಗಳಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯುತ್ತಾರೆ. ಮಕರ ರಾಶಿಯವರ ನಿಷ್ಠೆಯನ್ನು ಸರಿದೂಗಿಸಲು ಯಾರಿಂದಲೂ ಸಾಧ್ಯವಿಲ್ಲ. ಮಕರ ರಾಶಿಯರವರು ಯಾರಾಗಾದರೂ ಮಾತು ಕೊಟ್ಟರೇ ಆ ಭರವಸೆಯನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಇವರ ಲಾಭವನ್ನು ಪಡೆಯಲು ಬಯಸಿದರೇ ಅವರ ಜೊತೆ ನಿಷ್ಠೆಯಿಂದ ಇರುವುದಿಲ್ಲ.
ನೀವು ಅವರಿಗೆ ನಿಷ್ಠೆಯಾಗಿದ್ದರೂ ಅವರು ಕೂಡ ನಿಷ್ಠೆಯಾಗಿರುತ್ತಾರೆ. ಮಕರ ರಾಶಿಯವರು ಸೂಕ್ಷ್ಮ ವ್ಯಕ್ತಿಗಳು, ಇವರ ವಿರುದ್ಧ ವರ್ತನೆ ಮಾಡಿದರೇ ಅವರು ಕಡಿಮೆ ಸಹಿಷ್ಣತೆಯನ್ನ ಹೊಂದಿರುತ್ತಾರೆ ಮತ್ತು ಇವರಿಗೆ ತೊಂದರೆ ಮಾಡಿದರೇ ಅವರು ಅದನ್ನು ತೀರಿಸಿಕೊಳ್ಳಲೇ ಬಿಡುವುದಿಲ್ಲ. ಮಕರ ರಾಶಿಯವರು ವಾಸ್ತವವಾದಿಗಳು ಮತ್ತು ನೇರನುಡಿಯವರು. ಮಕರ ರಾಶಿಯವರ ನೋಟ ಸ್ಪಷ್ಟವಾಗಿರುತ್ತದೆ.
ಇವರು ಸ್ಪಷ್ಟವಾಗಿ ತಿಳಿದಿರುವಂತಹವರು ಬೇರೆಯವರ ಮಾತನ್ನು ನಂಬುವುದಿಲ್ಲ. ನೀವು ಮಕರ ರಾಶಿಯವರ ಸ್ನೇಹವನ್ನು ಬಯಸುವುದಾದರೇ ಅವರ ಜೊತೆ ನಿಜವಾದ ರೂಪವನ್ನು ತೋರಿಸಬೇಕು ಇಲ್ಲದಿದ್ದರೇ ನೀವು ತೊಂದರೆಗೆ ಸಿಲುಕುತ್ತೀರಿ. ಮಕರ ರಾಶಿಯವರು ತುಂಬಾ ಚುರುಕಿನ ಸ್ವಭಾವ ಅವರ ಜೊತೆ ವ್ಯವಹಾರ ಮಾಡುವಾಗ ಜಾಗರೂಕರಾಗಿರಿ. ಏಕೆಂದರೆ ಅವರು ನಿಮ್ಮ ಮನಸ್ಸಿನಲ್ಲಿ ಏನು ಇದೆ ಎಂದು ಮೊದಲೇ ತಿಳಿದುಕೊಂಡಿರುತ್ತಾರೆ.
ತುಂಬಾ ಲೆಕ್ಕಾಚಾರದವರು ತಮ್ಮ ತಪ್ಪುಗಳನ್ನು ತೋರಿಸಲು ಬಿಡುವುದಿಲ್ಲ. ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇವರಿಗೆ ಶಿಸ್ತು ಮತ್ತು ಪ್ರತಿಷ್ಠೆ ಬಹಳ ಮುಖ್ಯ. ಮಕರ ರಾಶಿಯವರು ಹೆಚ್ಚು ಜವಾಬ್ದಾರಿಯುಳ್ಳವರು. ಇವರು ನಿಯಮಗಳ ಅನುಸಾರವಾಗಿ ಮೋಜು ಮಸ್ತಿಯನ್ನು ಮಾಡುತ್ತಾರೆ. ಆದ್ದರಿಂದ ಇವರ ಸ್ನೇಹದಲ್ಲಿ ನಿಜವಾದ ಅರ್ಥವನ್ನು ತಿಳಿದುಕೊಳ್ಳಬಹುದು. ಮಕರ ರಾಶಿ ಮತ್ತು ಇತರ ರಾಶಿಯವರಿಗೆ ಇರುವ ವ್ಯತ್ಯಾಸ ಏನೆಂದರೆ ಇವರು ನಿರಂತರವಾಗಿ ಕಲಿಯುವವರಾಗಿದ್ದು,
ಯಶಸ್ಸನ್ನು ಸಾಧಿಸಲು ನಿಲ್ಲಿಸುವುದಿಲ್ಲ. ವಾಸ್ತವಾಗಿ ಇವರು ಇನ್ನಷ್ಟು ಕಲಿಯಲು ಇಷ್ಟಪಡುತ್ತಾರೆ. ಮಕರ ರಾಶಿಯವರೊಂದಿಗೆ ಉತ್ತಮವಾಗಿ ಹೊಂದಾಣಿಕೆಯಾಗುವ ರಾಶಿಗಳು ಯಾವುವು ಎಂದರೆ ವೃಷಭರಾಶಿ. ಭೂಮಿಯ ಅಂಶದ ಈ ಎರಡು ರಾಶಿಗಳು ಆರ್ಥಿಕ ಸ್ಥಿತಿ ಮತ್ತು ಜೀವನದಲ್ಲಿನ ಹಲವಾರು ಅಂಶಗಳಿಂದ ಉತ್ತಮವಾದ ಸಾಮರಸ್ಯದ ಬದುಕನ್ನು ನಡೆಸುತ್ತಾರೆ.
ಎರಡನೇಯದು ಮೀನಾರಾಶಿ. ಇವೆರೆಡು ರಾಶಿಗಳ ಮನಸ್ಥಿತಿಗಳು ಪ್ರಯಾಣ ಜೀವನಕ್ಕೆ ಸಹಾಯ ಮಾಡುತ್ತದೆ ಏಕೆಂದರೆ ಮೀನಾರಾಶಿಯವರು ಮಕರ ರಾಶಿಯವರಿಗೆ ಜೀವನವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳದಂತೆ ಪ್ರೋತ್ಸಾಹಿಸುತ್ತದೆ. ಮಕರ ರಾಶಿಯವರು ಸಂಬಂಧಕ್ಕೆ ಭದ್ರತೆಯನ್ನು ನೀಡುತ್ತಾರೆ. ಮೂರನೇಯದು ಕನ್ಯಾರಾಶಿ. ಇವೆರೆಡು ಬುದ್ಧಿವಂತ ಹಾಗೂ ಕಠಿಣ ಪರಿಶ್ರಮ ರಾಶಿಗಳು. ಇದು ದೀರ್ಘಕಾಲದ ಯಶಸ್ವಿ ಸಂಬಂಧವನ್ನು ಸೂಚಿಸುತ್ತದೆ.
ಮಕರ ರಾಶಿಯವರೊಂದಿಗೆ ಹೊಂದಾಣಿಕೆಯಾಗದೇ ರಾಶಿಚಕ್ರಗಳು ಯಾವುವು ಎಂದರೆ ಮೊದಲನೇಯದಾಗಿ ಮೇಷರಾಶಿ. ಮೇಷರಾಶಿ ಮಕರರಾಶಿಯೊಂದಿಗೆ ಘರ್ಷಣೆಗೊಳ್ಳುತ್ತದೆ. ಸವಾಲುಗಳನ್ನು ಸ್ವೀಕರಿಸುವ ಗುಣ ಸಂವೇದನಾಶೀಲ ಮೇಷರಾಶಿಯವರಿಗೆ ಹಿಂಸೆ ಮತ್ತು ನಿರಾಶೆ ಎನಿಸುತ್ತದೆ. ಈ ಎರಡು ರಾಶಿಯವರು ಸಂಬಂಧದಲ್ಲಿ ಅಧಿಕಾರಕ್ಕಾಗಿ ಸ್ಪರ್ಧಿಸುತ್ತಾರೆ.
ಎರಡನೆಯದು ಧನುರ್ರಾಶಿ, ಈ ರಾಶಿಯು ಭಾವೋದ್ರಿಕ್ತವಾಗಿರುತ್ತದೆ. ಇದು ಸಂವೇದನಾಶೀಲ ಮಕರರಾಶಿಗೆ ಸಂಪೂರ್ಣವಾಗಿ ಸೂಕ್ತವಾಗಿರುವುದಿಲ್ಲ. ಮೂರನೇಯದಾಗಿ ಸಿಂಹರಾಶಿ. ಸಂಪ್ರದಾಯವಾದಿ ಮಕರರಾಶಿಯವರು ಅತೀರಂಜಿತ ಸಿಂಹರಾಶಿಯವರನ್ನು ಕಣ್ಣು ಇಟ್ಟು ಕಣ್ಣು ನೋಡುವುದು ಸಾಧ್ಯವೇ ಇಲ್ಲ ಎಂದು ಹೇಳಬಹುದು. ಇದು ಇಬ್ಬರ ನಡುವಿನ ಹೊಂದಾಣಿಕೆಯನ್ನ ಕಷ್ಟಕರವಾಗಿಸುತ್ತದೆ.