ಪೂಜೆಯ ಕಳಸಕ್ಕೆ ಇಡುವ ತೆಂಗಿನಕಾಯಿಯ ಬಗ್ಗೆ ತಿಳಿಯಲೇಬೇಕಾದ ಮಾಹಿತಿಗಳು ಕಳಸಕ್ಕೆ ಇಡುವ ತೆಂಗಿನಕಾಯಿ ಬಹಳ ಒಣಗಿದ್ದರೆ ಹಣಕ್ಕೆ ತೊಂದರೆ.
ಚೆನ್ನಾಗಿರುವ ತೆಂಗಿನಕಾಯಿ ಕಳಸವನ್ನು ಪೂಜಿಸುವಾಗ ಬಿರುಕು ಬಿಟ್ಟರೆ ಮನೆಯಲ್ಲಿ ಇರುವವರಿಗೆ ಅಪಘಾತ ಭಯ. ತೆಂಗಿನಕಾಯಿಯಲ್ಲಿ ಬರೀ ನಾರು ಇದ್ದರೆ ಮನೆಯಲ್ಲಿ ಚಿಂತೆ ಜಾಸ್ತಿ.
ತೆಂಗಿನ ಕಾಯಿ ಉರುಳಾಡಿದರೆ ಬರಬೇಕಾದ ಹಣ ಬಂದು ಹೊರಟು ಹೋಗುತ್ತದೆ. ಕಳಸಕ್ಕೆ ಇಡುವ ತೆಂಗಿನಕಾಯಿಯಲ್ಲಿ ನೀರು ಇಲ್ಲದೆ ಇದ್ದರೆ ಸಂತಾನಕ್ಕೆ ಕೊರತೆ ಅಥವಾ ಮಕ್ಕಳು ದಾರಿ ತಪ್ಪುವರು ಹಣದ ಕೊರತೆ ಹೆಚ್ಚಾಗುವುದು.
ಶುಕ್ರವಾರದಂದು ಚಿಪ್ಪನ್ನು ಒಲೆಗೆ ಹಾಕಿದರೆ, ತೆಂಗಿನಕಾಯಿ ಒಡೆದರೆ ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ. ಹಣದ ತೊಂದರೆ ಅನುಭವಿಸುವಿರಿ.ಶುಭ ಸಮಾರಂಭಗಳಲ್ಲಿ ಕೊಟ್ಟ ತೆಂಗಿನಕಾಯಿಯನ್ನು ಬೇಡವೆಂದರೆ ನಿಮ್ಮ ಮನೆಯ ಲಕ್ಷ್ಮಿ ಹೊರಟು ಹೋಗುವಳು.
ತಾಂಬೂಲದೊಡನೆ ಕೊಟ್ಟ ತೆಂಗಿನಕಾಯಿ ಮನೆಗೆ ತರದೆ ಬೇರೆ ಮನೆಗೆ ಕೊಟ್ಟರೆ ಅಥವಾ ಎಲ್ಲಿಯಾದರೂ ಮರೆತು ಬಂದರೆ, ನಿಮ್ಮ ಮನೆಯ ಲಕ್ಷ್ಮಿ ಆ ಮನೆಯನ್ನು ಸೇರಿ ನಿಮಗೆ ತುಂಬಾ ಸಮಸ್ಯೆಗಳು ಉಂಟಾಗುತ್ತದೆ.
ಸಾಲಬಾಧೆ, ಮರೆವಿನ ಸಮಸ್ಯೆ, ರೋಗ ಭಾದೆ ಕಾಡಿಸುತ್ತವೆ ಎಚ್ಚರ