ಸಾಹಸಕ್ಕೆ ಹೊರಡೋರಿಗೆ ಇದೊಂದು ಎಚ್ಚರಿಕೆ

0

ಕಟಕ ರಾಶಿಯ ಮಾರ್ಚ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಅಷ್ಟಮ ಶನಿ ನಡೆಯುತ್ತಿದೆ. ಅಷ್ಟಮ ಎಂದರೆ ಎಂಟು. ಈ ನಂಬರ್ ಬಹಳ ವಿಶೇಷವಾಗಿದೆ. ಎಂಟು ಎಂದರೆ ಅಷ್ಟಮ ಭಾವದಲ್ಲಿ ಬಹಳಷ್ಟು ಪವಿತ್ರ ಎಂದು ಪರಿಗಣಿಸಬೇಕಾಗುತ್ತದೆ. ದೈಹಿಕ ಅನಾರೋಗ್ಯಗಳು ಅಷ್ಟಾಗಿ ಕಾಡದೇ ಇರಬಹುದು. ಮಾನಸಿಕ ಒತ್ತಡ ಹೆಚ್ಚಾಗಿ ಇರುತ್ತದೆ.

ಶನಿಯು ಕೊಡುವುದು ವರ ಎಂದು ಹೇಳಬಹುದು ಮತ್ತು ತಾಪತ್ರೆಯ ಎಂದು ಹೇಳಬಹುದು. ಅದು ಸ್ವಲ್ಪ ತೀಕ್ಷ್ಣತೆಯನ್ನು ಪಡೆದುಕೊಳ್ಳುತ್ತದೆ ಏಕೆಂದರೆ ರವಿ ಕೂಡ ಲಗ್ಗೆ ಇಟ್ಟಿದ್ದಾನೆ. ರವಿ ಅಷ್ಟಮದಲ್ಲಿರುವಾಗ ಮುಖ್ಯವಾಗಿ ಭಯ ಆತಂಕಗಳು ಇರುತ್ತದೆ. ಅಂದರೆ ಭಯ ಎಂದರೆ ಭೂತ, ಪ್ರೇತದ ಭಯವಲ್ಲ, ಸಾಲ, ದುಡ್ಡು ಬರದೇ ಇದ್ದಾಗ ಬಹಳಷ್ಟು ಯೋಚನೆ, ಭಯ ಉಂಟಾಗುತ್ತದೆ. ಈ ರೀತಿಯ ಮಾನಸಿಕ ಒತ್ತಡಗಳು ನಿಮ್ಮನ್ನು ಕಾಯಿಲೆಗಳಿಗೆ ದೂಡುತ್ತದೆ. ಆಗೆಯೇ ರೋಗಗಳು ಕೂಡ ಭಯವನ್ನುಂಟುಮಾಡುತ್ತದೆ.

ಯಾವುದೋ ಸಣ್ಣ ಕಾಯಿಲೆ ಇದ್ದರೂ ಯಾವುದೇ ಔಷಧಿಗೂ ಗುಣ ಆಗದೇ ಇರುವುದು, ಕೆಲಸದಲ್ಲಿ ಸರಿಯಾಗಿ ಇನ್ ವಾಲ್ ಆಗದೇ ಇರುವುದು, ಬಾಸ್ ಸಿಟ್ಟುಮಾಡಿಕೊಂಡು ಕೆಲಸಕ್ಕೆ ತೊಂದರೆಯಾಗಬಹುದೆಂಬ ಭಯವಿರಬಹುದು. ಆಗೆಯೇ ಸೂರ್ಯ ಅಷ್ಟಮ ಭಾವಕ್ಕೆ ಬಂದಾಗ ದೇಹದ ಉಷ್ಣತೆ ಹೆಚ್ಚು ಆಗುತ್ತದೆ. ಮಾನಸಿಕ ಒತ್ತಡ ಉಂಟಾಗುತ್ತದೆ. ಒಂದು ಕಡೆ ಶನಿಗ್ರಹದ ಬಿಸಿಯನ್ನು ಉಂಟುಮಾಡಿದರೇ ಅದರ ಜೊತೆಗೆ ಸೂರ್ಯನು ಕೂಡ ಸ್ವಲ್ಪ ಬಿಸಿ ಸೇರಿಸಿ ಒತ್ತಡವನ್ನು ಹೆಚ್ಚು ಮಾಡಿ ನಿಮ್ಮನ್ನು ಒಳಗೊಳಗೆ ಸುಡುವಂತೆ ಮಾಡುತ್ತಾನೆ.

ಟೆನ್ಷನ್ ಮಾಡಿಕೊಳ್ಳಬೇಡಿ 14ನೇ ತಾರೀಖು ರವಿ ಬದಲಾವಣೆಯಾಗಿ ಮೀನರಾಶಿಗೆ ಹೋಗುತ್ತಾನೆ ಈ ಟೆನ್ಷನ್ ಯಿಂದ ಮುಕ್ತಿ ಸಿಗುತ್ತದೆ. ಏಫ್ರಿಲ್ ತಿಂಗಳ ವರೆಗೆ ಕಾಯಬೇಕಾಗುತ್ತದೆ ಭಯ ಅದರ ವ್ಯಾಪ್ತಿಯನ್ನು ಬದಲಾಯಿಸಿಕೊಳ್ಳುತ್ತದೆ. ಮಾನಸಿಕ ಒತ್ತಡ ಕಡಿಮೆಯಾದರೂ ಅವಮಾನದ ಭಯವಿರುತ್ತದೆ. ಮಾನವನ್ನು ಕಳೆದುಕೊಳ್ಳುವ ಭಯ ಅಂದರೇ ಯಾರಾದರೂ ಏನಾದರೂ ಅಂದುಬಿಡುತ್ತಾರೋ ಎಂಬ ಭಯವಿರುತ್ತದೆ. ಯಾವುದೇ ರೀತಿಯ ತಪ್ಪು ಆಗದಂತೆ ಎಚ್ಚರಿಕೆವಹಿಸಬೇಕಾಗುತ್ತದೆ.

ಎಚ್ಚರಿಕೆಯ ವಿಷಯವೇನೆಂದರೆ ತಾಳ್ಮೆಯಿಂದ ಸಮಾಧಾನದಿಂದ ಒಂದೊಂದೇ ಕೆಲಸವನ್ನು ಮಾಡಬೇಕಾಗುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಒಟ್ಟೊಟ್ಟಿಗೆ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲವಿರುವುದರಿಂದ ಸಾವಧಾನವಾಗಿ ಕೆಲಸ ಮಾಡಬೇಕಾಗುತ್ತದೆ. ಪಾಸಿಟಿವ್ ವಿಚಾರವೇನೆಂದರೆ ಕೇಂದ್ರದಲ್ಲಿರುವ ಗುರು ಗ್ರಹ ಬಹಳ ಚೆನ್ನಾಗಿ ತೆಗೆದುಕೊಂಡು ಹೋಗುತ್ತದೆ. ಕೆಲಸ ಮಾಡಲು ಶ್ರದ್ದೇಯಿಂದ ಕೆಲಸ ಮಾಡುತ್ತೀರಿ. ನೀವು ಮಾಡುವ ಕೆಲಸಕ್ಕೆ ಉತ್ಸಾಹ ತುಂಬಲು ಗುರುಗ್ರಹವಿದೆ. ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಗುರುಗಳ ಆಶೀರ್ವಾದ ಬಹಳ ಅದ್ಭುತವಾಗಿ ಸಿಗುತ್ತದೆ.

ಬುಧ ಗ್ರಹದ ಪರಿವರ್ತನೆಯಿಂದ ಇದೇ ತಿಂಗಳ 25ಕ್ಕೆ ದಶಮಭಾವಕ್ಕೆ ಅಂದರೆ ಮೇಷರಾಶಿಗೆ ಬಂದಾಗ ಸಂತೋಷ ಮತ್ತು ಅನಾರೋಗ್ಯವಿದ್ದರೇ ಅದರಲ್ಲಿ ಸುಧಾರಣೆಯಾಗುವಂತೆ ಬುಧ ಗ್ರಹ ಮಾಡುತ್ತದೆ. ತಿಂಗಳ ಕೊನೆಯಲ್ಲಿ ಮನಶಾಂತಿ ಸಿಗುತ್ತದೆ. ಆಗೆಯೇ ದುಡ್ಡು, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಓದಿನಲ್ಲಿ ಪ್ರಗತಿಯುಂಟಾಗುವುದು, ಚೆನ್ನಾಗಿ ಪರೀಕ್ಷೆ ಬರೆಯುವುದು ಈ ರೀತಿಯ ಪರಿವರ್ತನೆಗಳನ್ನು ಬುಧಗ್ರಹ ಮಾರ್ಚ್ 25ನೇ ತಾರೀಖು ಕೊಡಲಿದೆ. ಎರಡು ಗ್ರಹಗಳ ಸಪೋರ್ಟ್ ನಿಮಗೆ ಚೆನ್ನಾಗಿದೆ.

ದಶಮದಲ್ಲಿರುವ ರಾಹು ಚಾಲಕಶಕ್ತಿಯಾಗಿದ್ದಾನೆ, ಕೆಲಸ ಕಾರ್ಯಗಳಿಗೆ ತೀಕ್ಷ್ಣತೆ, ತೀವ್ರತೆ ಆಗೆಯೇ ನಿರೀಕ್ಷಿತವಾಗಿ ಧನಾಗಮನವಾಗುತ್ತಿರುತ್ತದೆ. ಈ ರಾಹು ಬುಧನನ್ನು ಕೂಡಿಕೊಂಡು ಮಾರ್ಚ್ 25ಕ್ಕೆ ಬೆಳೆಯುವ ಯೋಗವನ್ನು ಹೊಂದಿರುವುದರಿಂದ ಇದು ಪರಾಕ್ರಮಯೋಗವನ್ನು ವಿಶೇಷವಾಗಿ ಕೊಡುತ್ತದೆ. ಈಗಾಗಲೇ ಕೇತು ಗ್ರಹ ತೃತೀಯದಲ್ಲಿರುವುದರಿಂದ ವಿಕ್ರಮವನ್ನು ಕೊಡುತ್ತಿದೆ. ಸಾಹಸ ಮಾಡಲು ಯಾವುದೇ ಭಯವಿಲ್ಲ. ಅನಾರೋಗ್ಯವಿದೆ,

ತೊಂದರೆಗಳಿವೆ, ಮಾನಸಿಕ ಒತ್ತಡವಿದೆ, ಕುಟುಂಬದಲ್ಲಿ ನೆಮ್ಮದಿ ಕಡಿಮೆಯಾಗಿದೆ, ಅದು ಏನೇ ಇದ್ದರೂ ಕೇತುಗ್ರಹ ಧೈರ್ಯವನ್ನು ತುಂಬುತ್ತಾ ಸಾಹಸಕ್ಕೆ ಪ್ರೇರೇಪಣೆಯನ್ನು ಕೊಡುತ್ತಿದೆ. ರಾಹು ಕೇತು ಬಹಳಷ್ಟು ವಿಚಾರಗಳನ್ನು ಪಾಸಿಟಿವ್ ಆಗಿ ಬದಲಾವಣೆ ಮಾಡಿಕೊಳ್ಳಲು ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸಲು ಬೇಕಾದಂತಹ ವಾತಾವರಣ ಕ್ರಿಯೇಟ್ ಮಾಡುವಲ್ಲಿ ಮತ್ತು ಉತ್ಸಾಹ, ಸಂತೋಷವನ್ನು ತುಂಬಲು ಮುಂದೆ ಇರುತ್ತವೆ. ಆಗಾಗಿ ಧೈರ್ಯವಾಗಿ ಮುನ್ನುಗ್ಗಿರಿ.

Leave A Reply

Your email address will not be published.