ಮಹಾಶಿವರಾತ್ರಿಯ ದಿನ ಈ 1 ವಸ್ತು ಮನೆಗೆ ತನ್ನಿರಿ ಎಷ್ಟು ಹಣ ಬರುತ್ತೆ ಅಂದ್ರೆ ಎನಿಸಲು ಆಗುವುದಿಲ್ಲಾ

0

ನಮ್ಮ ಹಿಂದೂಧರ್ಮದಲ್ಲಿ ಮಹಾಶಿವರಾತ್ರಿಯ ಹಬ್ಬಕ್ಕೆ ಬಹಳ ವಿಶೇಷವಾದ ಮಹತ್ತ್ವವಿದೆ. ಈ ಹಬ್ಬವನ್ನು ಪಾಲ್ಗುಣ ಮಾಸ ಕೃಷ್ಣಪಕ್ಷದ ಚತುರ್ದರ್ಶಿಯ ದಿನ ಆಚರಿಸಲಾಗುತ್ತದೆ. ಈ ದಿನದಂದೇ ಭಗವಂತನಾದ ಶಿವನು ಪ್ರಕಾಶ ರೂಪದಲ್ಲಿ ಪ್ರಕಟಗೊಂಡಿದ್ದನು. ಇದೇ ದಿನ ಪಾರ್ವತಿದೇವಿಯನ್ನು ವಿವಾಹವಾಗಿದ್ದು, ವರ್ಷವಿಡೀ ಜನರು ಹಲವಾರು ಉಪಾಯಗಳನ್ನು ಮಾಡುತ್ತಿರುತ್ತಾರೆ. ಜನರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾವ ರೀತಿಯ ತಪ್ಪುಗಳನ್ನು ಮಾಡುತ್ತಾರೆಂದರೆ

ಪೂಜೆ ಮಾಡಿ ಪುಣ್ಯವನ್ನು ಗಳಿಸುವ ಬದಲು ಪಾಪವನ್ನು ಗಳಿಸುತ್ತಾರೆ. ಶಿವನನ್ನು ಪೂಜೆ ಮಾಡುವಾಗ ಯಾವ ರೀತಿಯ ತಪ್ಪು ಕಾರ್ಯಗಳನ್ನು ಮಾಡಬಾರದು, ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ಶಿವನ ದೇವಾಲಯಕ್ಕೆ ಹೋದಾಗ ಅಲ್ಲಿರುವ ಶಿವಲಿಂಗಕ್ಕೆ ಜಲವನ್ನು ಅರ್ಪಿಸಿರಿ. ಎಲ್ಲಿ ವೇಗವಾಗಿ ನೀರು ಹರಿಯುತ್ತಿರುತ್ತದೆಯೋ ಅಲ್ಲಿ ನೀರನ್ನು ದಾಟಬಾರದು. ಇದನ್ನು ದಾಟಿದರೇ ದೋಷಗಳು ಅಂಟಬಹುದು ಮತ್ತು ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ.

ಈ ದಿನ ಶಿವನಿಗೆ ಪೂರ್ತಿಯಾಗಿ ಪರಿಕ್ರಮಣವನ್ನು ಮಾಡುವುದಿಲ್ಲ ಆದ್ದರಿಂದ ಅರ್ಧ ಪರಿಕ್ರಮಣವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ತುಳಸಿ ದಳವನ್ನು ಶಿವನಿಗೆ ಅರ್ಪಿಸಬಾರದು. ಕೆಲವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಶಿವನಿಗೆ ಕುಂಕುಮ ಅರಿಶಿಣವನ್ನು ಅರ್ಪಿಸುತ್ತಾರೆ. ಅರಿಶಿಣ ಕುಂಕುಮಗಳು ಸ್ತ್ರೀ ಶೋಭೆಯ ವಸ್ತುಗಳಾಗಿರುತ್ತವೆ. ಶಿವನು ವೈರಾಗ್ಯನಾಗಿರುತ್ತಾನೆ. ಹಾಗಾಗಿ ಇವುಗಳನ್ನು ಶಿವನಿಗೆ ಅರ್ಪಿಸಬಾರದು. ಪೂಜೆಯನ್ನು ಮಾಡುವಾಗ ನಮ್ಮಿಂದ ಕೆಲವೊಂದು ತಪ್ಪುಗಳು ನಡೆಯಬಹುದು. ಶಿವನ ಪೂಜೆಯನ್ನು ಮಾಡುವಾಗ ಬಿಳಿಯ ಬಣ್ಣದ ಅಥವಾ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿಕೊಂಡು ಮಾಡಬೇಕು.

ಶಿವನಿಗೆ ಜಲವನ್ನು ಅರ್ಪಿಸುತ್ತೀರೊ ಸಾಧ್ಯವಾದರೇ ನೀರಿನ ಜೊತೆಗೆ ಹಾಲು, ತುಪ್ಪ, ಮೊಸರು ಮತ್ತು ಸಕ್ಕರೆಯನ್ನು ಅರ್ಪಿಸಬಹುದು. ಆದರೇ ಶಿವಲಿಂಗದ ಮೇಲೆ ಪ್ರಸಾದವನ್ನು ಅರ್ಪಿಸಬಾರದು. ಶಿವಲಿಂಗಕ್ಕೆ ಪ್ರಸಾದವನ್ನು ಅರ್ಪಿಸಬೇಕೆಂದರೆ ಮೊದಲು ತಟ್ಟೆಗೆ ಹಾಕಿಕೊಂಡು ಶಿವನಿಗೆ ನೈವೇದ್ಯವನ್ನು ತೋರಿಸಬೇಕು. ಏಕೆಂದರೆ ಶಿವಲಿಂಗದ ಮೇಲೆ ಅರ್ಪಿಸಿದ ಪ್ರಸಾದವನ್ನು ಯಾರಿಗೂ ಕೂಡ ಸೇವಿಸಲು ಸಾಧ್ಯವಾಗುವುದಿಲ್ಲ. ಶಿವಲಿಂಗದ ಮೇಲೆ ಇರುವ ಚರಾಮೃತವನ್ನು ಸೇವಿಸಬಹುದಾಗಿದೆ.

ಶಿವರಾತ್ರಿಯ ದಿನ ಪೂಜೆಯನ್ನು ಮಾಡಬೇಕಾದರೇ ಪ್ರದೋಷ ಕಾಲದಲ್ಲಿ ಮಾಡಿದರೇ ಹೆಚ್ಚಿನ ಫಲಗಳು ಸಿಗುತ್ತವೆ. ಶಿವರಾತ್ರಿಯ ದಿನ ಶಿವನ ಜೊತೆ ಪಾರ್ವತಿಯ ಪೂಜೆಯನ್ನು ಸಹ ಮಾಡಬೇಕು. ಆಗ ಮಾತ್ರ ಇಬ್ಬರ ಆಶೀರ್ವಾದ ಸಮಾನ ರೂಪದಲ್ಲಿ ಸಿಗುತ್ತದೆ. ಮಹಾಶಿವರಾತ್ರಿಯ ದಿನ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಲಿಲ್ಲವೆಂದಾದರೇ ನಿಮ್ಮ ಪೂಜೆ ಅಪೂರ್ಣವಾಗಬಹುದು. ನಿಮ್ಮ ಬಳಿ ಶ್ರೀಗಂಧದ ಪೌಡರ್ ಅಥವಾ ಗಂಧದ ಕೊರಳಿನ ಸಹಾಯದಿಂದ ಅದನ್ನು ಪೇಸ್ಟ್ ರೀತಿ ಮಾಡಿ ಅದರಿಂದ ಬಿಲ್ವಪತ್ರೆಯ ಎಲೆಗಳ ಮೇಲೆ ಓಂ ಎಂದು ಬರೆದು ರಾಮ ಎಂದು ಬರೆದು ಶಿವನಿಗೆ ಅರ್ಪಿಸಿರಿ.

ಓಂ ನಮಃ ಶಿವಾಯ ಮಂತ್ರವನ್ನು ಜಪ ಮಾಡುತ್ತಾ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಶಿವಲಿಂಗದ ಪೂಜೆಯಲ್ಲಿ ತಪ್ಪದೇ ಅಕ್ಷತೆಗಳನ್ನು ಅರ್ಪಿಸಿರಿ. ಆದರೇ ಅಕ್ಷತೆಗಳು ತುಂಡಾಗಿರಬಾರದು. ಅಕ್ಷತೆಗಳನ್ನ ಶಿವನಿಗೆ ಅರ್ಪಿಸಿದರೆ ಜೀವನದಲ್ಲಿ ಸಿರಿಸಂಪತ್ತಿಗೆ ಕೊರತೆಯಾಗುವುದಿಲ್ಲ. ಮಹಾಶಿವರಾತ್ರಿಯ ದಿನ ಯಾವ ಕೆಲಸಗಳನ್ನು ಮಾಡಬೇಕು? ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ನೋಡೋಣ. ಮಹಾಶಿವರಾತ್ರಿಯ ದಿನ ಸೂರ್ಯೋದಯ ಆಗುವ ಮುಂಚೆ ಎದ್ದೇಳುವುದು ಒಳ್ಳೆಯದು. ಈ ದಿನ ಕಟ್ಟಿಗೆ ಬಣ್ಣದ ಅಥವಾ ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಬಾರದು.

ಈ ದಿನ ಶಿವಲಿಂಗದ ಮೇಲೆ ನೀವು ತಿನ್ನುವಂತಹ ವಸ್ತುಗಳನ್ನು ಇಡಬಾರದು. ಒಂದು ವೇಳೆ ಮರೆತು ಅರ್ಪಿಸಿದರೆ ಅವುಗಳನ್ನು ನೀವು ತಿನ್ನಬೇಡಿ. ಶಿವಲಿಂಗದ ಮೇಲೆ ಲೋಟದ ಸಹಾಯದಿಂದ ನೀರನ್ನು ಅರ್ಪಿಸಬೇಕು. ಯಾವುದೇ ಕಾರಣಕ್ಕೂ ಶಂಖದಿಂದ ಶಿವಲಿಂಗಕ್ಕೆ ಜಲವನ್ನು ಅರ್ಪಿಸಬಾರದು. ಶಿವನ ಪೂಜೆಯಲ್ಲಿ ಯಾವುದೇ ಕಾರಣಕ್ಕೂ ತುಳಸಿ ದಳಗಳನ್ನು ಬಳಸಬೇಡಿ. ಸಂಪಿಗೆ ಮತ್ತು ಕೇದಿಗೆ ಹೂವುಗಳನ್ನು ಅರ್ಪಿಸಬಾರದು. ಶಿವನ ಪೂಜೆಯಲ್ಲಿ ಅರಿಶಿಣ ಕುಂಕುಮದ ಬಳಕೆಯನ್ನು ಮಾಡಬಾರದು.

ಈ ದಿನ ಬೇರೆಯವರಿಗೆ ಕೆಟ್ಟ ಪದಗಳಿಂದ ಬೈಯುವುದಾಗಲೀ, ಮನೆಯಲ್ಲಿ ಜಗಳವಾಡುವುದು ಮಾಡಬಾರದು. ಮನೆಯಲ್ಲಿ ಸಾತ್ವಿಕ ಆಹಾರದ ಬಳಕೆ ಮಾಡಿ. ಸಾರಾಯಿ, ಮದ್ಯ ಈ ಹಬ್ಬದಲ್ಲಿ ನಿಷೇಧಿಸಿದೆ. ಸಾಧ್ಯವಾದಷ್ಟು ಈರುಳ್ಳಿ, ಬೆಳ್ಳುಳ್ಳಿಯ ಬಳಕೆಯನ್ನು ಮಾಡಿರಿ. ಈ ದಿನ ನೀವು ಎಷ್ಟು ಓಂ ನಮಃ ಶಿವಾಯ ಮಂತ್ರವನ್ನು ಜಪ ಮಾಡುತ್ತೀರೋ ಅಷ್ಟು ಶಿವನಿಗೆ ಹತ್ತಿರವಾಗಿರುತ್ತೀರಿ ಮತ್ತು ಶಿವನ ಆಶೀರ್ವಾದಕ್ಕೆ ಪಾತ್ರರಾಗುತ್ತೀರಿ.
ಶಿವನ ಪೂಜೆಯಾದ ನಂತರ ದಕ್ಷಿಣೆಯನ್ನು ಇಡಬೇಕು ಮತ್ತು ವೀಳ್ಯದೆಲೆಯನ್ನು ಅರ್ಪಿಸಿರಿ.

ಈ ರೀತಿ ಮಾಡಿದರೇ ಶಿವನು ಒಲಿಯುತ್ತಾನೆ. ಈ ದಿನ ಯಾವುದೇ ಕಾರಣಕ್ಕೂ ಗಂಡ ಹೆಂಡತಿಯರು ಶಾರೀರಿಕ ಸಂಬಂಧವನ್ನು ಮಾಡಬಾರದು. ಈ ದಿನ ತೆಂಗಿನಕಾಯಿಯ ನೀರನ್ನು ಶಿವನಿಗೆ ಅರ್ಪಿಸಬಾರದು. ಶಿವನಿಗೆ ಹಾಲಿನ ಅಭಿಷೇಕ ಮಾಡಬೇಕಾದರೇ ಶುದ್ಧವಾದ ಹಸುವಿನ ಹಾಲನ್ನು ಅರ್ಪಿಸಿರಿ. ಬೇಯಿಸಿದ ಹಾಗೂ ಪ್ಯಾಕೆಟ್ ಹಾಲನ್ನು ಶಿವಲಿಂಗಕ್ಕೆ ಅರ್ಪಿಸಬಾರದು.

Leave A Reply

Your email address will not be published.