ಕೆಟ್ಟ ಗಂಡಸರ ಲಕ್ಷಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಗಂಡಸರಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ. ಒಬ್ಬ ಒಳ್ಳೆಯ ಲಕ್ಷಣವಿರುವ ಗಂಡಸು ತನ್ನ ಕುಟುಂಬಕ್ಕಾಗಿ ತನ್ನ ಎಲ್ಲಾ ಕನಸುಗಳನ್ನು ಬಲಿಕೊಟ್ಟು ಬದುಕುತ್ತಾನೆ ತನ್ನ ಆಸೆ ಕನಸುಗಳ ಸಮಾಧಿ ಕಟ್ಟುತ್ತಾನೆ ಕಲ್ಲು ಹೃದಯದವನು ಎಂದವರಿಗೆ ಭಾರ ಹೃದಯದ ಪ್ರೀತಿ ಕಾಣುವುದೇ ಇಲ್ಲ.

ಹೌದು ಜೀವನದ ನಾಟಕ ರಂಗಭೂಮಿಯಲ್ಲಿ ತಂದೆ ತಾಯಿಗೆ ಮಗನಾಗಿ ಅಕ್ಕ-ತಂಗಿಗೆ ಅಣ್ಣ ತಮ್ಮನಾಗಿ ಹೆಂಡತಿಗೆ ಗಂಡನಾಗಿ ಮಗಳಿಗೆ ತಂದೆಯಾಗಿ ಗೆಳೆಯನಿಗೆ ಅದೆಷ್ಟೋ ಪಾತ್ರಗಳಲ್ಲಿ ಭಾಗಿಯಾಗುತ್ತಾನೆ.
ಹೌದು ಅದೆಷ್ಟೋ ಜವಾಬ್ದಾರಿಯ ಪಾತ್ರ ನೆರವೇರಿಸಿದರು ಗಂಡನ ಪಾತ್ರ ಯಾರಿಗೂ ಕಾಣುವುದೇ ಇಲ್ಲ ಇಲ್ಲ ಈ ಜಗವೇ ಹಾಗೆ ಒಳ್ಳೆಯತನ ಯಾರಿಗೂ ಕಾಣುವುದೇ ಇಲ್ಲ.

ಇಲ್ಲಿ ನಾವು ತಿಳಿಯಬೇಕಾದ ವಿಷಯ ಏನೆಂದರೆ ಎಲ್ಲಾ ಗಂಡಸರು ಕೆಟ್ಟವರಲ್ಲ ಆದರೆ ಕೆಲವು ಗಂಡಸರಲ್ಲಿ ಈ ಸಂಚಿಕೆಯಲ್ಲಿ ಹೇಳಿರುವಂತಹ ಲಕ್ಷಣಗಳು ಕಂಡು ಬಂದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ ಹಾಗಾದರೆ ಸ್ನೇಹಿತರೆ ಇಂದಿನ ಈ ಸಂಚಿಕೆಯಲ್ಲಿ ಕೆಟ್ಟ ಗಂಡಸರ ಲಕ್ಷಣಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ.
1) ಗಂಡಸರಲ್ಲಿ ಸ್ವಾಭಿಮಾನ ಮತ್ತು ಸ್ವಂತ ಬುದ್ಧಿ ಇರಬೇಕು. 2) ಗಂಡಸರಿಗೆ ಉದ್ಯೋಗ ಇರಲೇಬೇಕು ಯಾವ ಗಂಡಸರು ತಮ್ಮ ಜವಾಬ್ದಾರಿಗಳಿಂದ ಹಿಂಜರಿಯುತ್ತಾರೋ ಅಂತವರಿಗೆ ಬದುಕಿನ ಅರಿವು ಇರುವುದಿಲ್ಲ ಮತ್ತು ಬೇಜಾಬ್ದಾರಿ ವರ್ತನೆ ಖಂಡಿತವಾಗಿಯೂ ಒಳ್ಳೆಯ ಗಂಡಸರ ಲಕ್ಷಣವಲ್ಲ.

3) ಕೆಟ್ಟ ಲಕ್ಷಣಗಳಿರುವ ಗಂಡಸರು ಪ್ರತಿ ಮಾತಿನಲ್ಲು ಕೆಟ್ಟ ಕೆಟ್ಟ ಬೈಗುಳ ಉಪಯೋಗಿಸುತ್ತಾರೆ ತಂದೆ ತಾಯಿ ಅಥವಾ ಹೆಂಡತಿಯನ್ನು ಗೌರವಿಸುವುದಿಲ್ಲ ಅವರಿಗೆ ಪದೇ ಪದೇ ಬೈಯುತ್ತಿರುತ್ತಾರೆ. 4) ಕೆಟ್ಟ ಗಂಡಸರು ಸಾರಾಯಿ ಕುಡಿದು ಹೆಂಡತಿ ಮಕ್ಕಳಿಗೆ ಕಾಟ ಕೊಡುತ್ತಾರೆ ಇದು ಕೂಡ ಒಂದು ಕೆಟ್ಟ ಲಕ್ಷಣವಾಗಿದೆ. 5) ಕಟ್ಟಿಕೊಂಡ ಹೆಂಡತಿಗೆ ಗೌರವವನ್ನು ಕೊಡದೆ ಅವಳಿಗೆ ಬೇಕಾದ ಹಾಗೆ ಬದುಕಲು ಬಿಡದೆ ಪ್ರತಿಯೊಂದರಲ್ಲೂ ನಾನು ಹೇಳಿದಂತೆ ನಡೆಯಬೇಕು ಎಂಬ ಅಹಂಕಾರ ಹೊಂದಿರುವುದು ಕೂಡ ಒಂದು ರೀತಿಯಲ್ಲಿ ಕೆಟ್ಟ ಗಂಡಸರ ಲಕ್ಷಣವಾಗಿದೆ.

6) ಕೆಲವು ಗಂಡಸರು ಮೋಜು ಮಸ್ತಿ ಮಾಡಿಕೊಂಡು ಊರಲ್ಲ ಸುತ್ತಾಡುತ್ತಿರುತ್ತಾರೆ. ಜೀವನವೆಂದರೆ ಎಷ್ಟೇ ಎಂಬುದು ಅವರ ಕಲ್ಪನೆ ಆಗಿರುತ್ತದೆ. ಹೌದು ಇಂತಹವರಿಗೆ ನಮ್ಮ ಜವಾಬ್ದಾರಿ ಅರಿವು ಇರುವುದಿಲ್ಲ ತಂದೆಯ ಸಂಪಾದನೆಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ ಅಕಸ್ಮಾತ್ ಯಾರಾದರೂ ಕೆಲಸ ಯಾಕಪ್ಪ ಮಾಡುತ್ತಿಲ್ಲ ಎಂದು ಕೇಳಿದರೆ ಕೆಲಸಕ್ಕೆ ಹೋಗಲು ನನಗೆ ಏನು ಕಮ್ಮಿಯಾಗಿದೆ ಎಂಬುದು ಅವರ ಉತ್ತರವಾಗಿರುತ್ತದೆ. 7) ಇಂಥವರು ಆರ್ಥಿಕವಾಗಿ ಸ್ವತಂತ್ರವಾಗಿರುವುದಿಲ್ಲ ದೈನಂದಿನ ಖರ್ಚಿಯಾಗಿ ಬೇರೆಯವರ ಮೇಲೆ ಅವಲಂಬಿತವಾಗಿರುತ್ತಾರೆ, ಸಾಲ ಮಾಡುತ್ತಾರೆ ಬೇರೆಯವರ ಹತ್ತಿರ ಹಣಕಾಸಿನ ಭಿಕ್ಷೆ ಬೇಡುತ್ತಿರುತ್ತಾರೆ ಸಾಲ ಮಾಡಿಯೂ ಹಣ ವಾಪಸ್ ಕೊಡುವುದಿಲ್ಲ ಇಂತಹ ಕೆಟ್ಟ ಗಂಡಸರು ಜೀವನದಲ್ಲಿ ಎಂದಿಗೂ ಉದ್ಧಾರವಾಗುವುದಿಲ್ಲ.

8) ಬೆಳಗ್ಗೆ ತಡವಾಗಿ ಎದ್ದೇಳುವುದು ತಡವಾಗಿ ಮಲಗುವುದು ತಡವಾಗಿ ಊಟ ಮಾಡುವುದು ಸಿಗರೇಟ್ ಸೇದುವುದು ಸಾರಾಯಿ ಕುಡಿಯುವುದು ಹೀಗೆ ಇನ್ನೂ ಅನೇಕ ಕೆಟ್ಟ ಘಟನೆ ಹೊಂದಿರುತ್ತಾರೆ. ಇಂಥವರಿಗೆ ತಮ್ಮ ಆರೋಗ್ಯದ ಕಡೆಗೆ ಗಮನವಿರುವುದಿಲ್ಲ. 9) ಇಂಥವರು ದಿನವಿಡೀ ಏನು ಮಾಡದೆ ಮನೆಯಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಕಾಲ ಕಳೆಯುವುದು ಗೇಮ್ ಆಡುವುದು ಹೀಗೆ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾ ಇರುವುದು ಅವರಿಗೆ ಅರಿವೇ ಇರುವುದಿಲ್ಲ ಅವರು ತಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದರ್ಥ.

10) ಇಂಥವರು ಪ್ರತಿ ದಿನ ಹಸ್ತ ಮೈಥುನ ಮಾಡುತ್ತಾ ಇರುತ್ತಾರೆ ಹಸ್ತ ಮೈದುನದ ಚಟವನ್ನು ಹೊಂದಿರುತ್ತಾರೆ ಯಾವುದೇ ಮಹಿಳೆ ಅಥವಾ ಹುಡುಗಿಯಾಗಿರಲಿ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ.
ಸ್ನೇಹಿತರೆ ದಯವಿಟ್ಟು ಗಮನಿಸಿ ಈ ಸಂಚಿಕೆ ಕೇವಲ ಒಂದು ಕೆಟ್ಟ ಲಕ್ಷಣಗಳನ್ನು ಹೊಂದಿರುವ ಗಂಡಸರಿಗೆ ಮಾತ್ರ ಎಲ್ಲಾ ಪುರುಷರಿಗೆ ಇದು ಅನ್ವಯಿಸುವುದಿಲ್ಲ 100ರಲ್ಲಿ 10% ಇಂತಹ ಸ್ವಭಾವವನ್ನು ಹೊಂದಿರುವ ಪುರುಷರು ಇದ್ದೇ ಇರುತ್ತಾರೆ ಎಂಬ ಅಭಿಪ್ರಾಯವಷ್ಟೇ ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ ಇದೇ ರೀತಿಯ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಸಿಗೋಣ ಸಂಚಿಕೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಮೆಂಟ್ ಮಾಡಿ ಧನ್ಯವಾದಗಳು

Leave a Comment