ನಾವು ಈ ಲೇಖನದಲ್ಲಿ ಕುಂಭ ರಾಶಿಯವರ ಯುಗಾದಿಯ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ. ಇದು ನಿಮ್ಮ ಸಾಮರ್ಥ್ಯದ ಪರೀಕ್ಷೆಯ ಸಮಯವಾಗಿದೆ. ಕುಂಭ ರಾಶಿಯವರಿಗೆ , ಈ ವರ್ಷದಲ್ಲಿ ಗುರು ನಾಲ್ಕನೇ ಮನೆಯಲ್ಲಿ ಇರುತ್ತಾನೆ. ಅಷ್ಟಾಗಿ ನಿಮಗೆ ಗುರು ಬಲವಿರುವುದಿಲ್ಲ. ಕೆಲವೊಂದು ಎಚ್ಚರಿಕೆಗಳನ್ನು ನೀವು ಅನುಸರಿಸ ಬೇಕಾಗುತ್ತದೆ . ಈ ಎಚ್ಚರಿಕೆಗಳನ್ನು ಪಾಲಿಸಿದರೆ ಅದ್ಭುತವಾದಂತಹ ಫಲ ಸಿಗುತ್ತದೆ. ಪ್ರಾಪಂಚಿಕ ವಿಷಯಗಳಲ್ಲಿ ಅಂದರೆ ಬಂಧು ಬಾಂಧವರಲ್ಲಿ , ಮನೆಯಲ್ಲಿ ಪತಿ-ಪತ್ನಿಯರಲ್ಲಿ ,ಮಕ್ಕಳಲ್ಲಿಯೂ, ಬೇಸರ ಇರುತ್ತದೆ .
ಅಥವಾ ಹೊಂದಾಣಿಕೆಯ ಕೊರತೆ ಇರುತ್ತದೆ. ಇದೆಲ್ಲವನ್ನು ಜವಾಬ್ದಾರಿ ಯುತವಾಗಿ ನೀವು ಎದುರಿಸಬೇಕು . ನಿಮ್ಮ ಕುಟುಂಬದವರಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಏನೇ ಸಮಸ್ಯೆ ಇದ್ದರೂ ಅದನ್ನು ಅಲ್ಲೇ ಪರಿಹರಿಸಿಕೊಂಡು ಮುಂದಕ್ಕೆ ಹೋಗುವ ಮನೋಭಾವ ಇರಬೇಕು . ಆಗ ಮನೆಯಲ್ಲಿ ಶಾಂತಿ ನೆಮ್ಮದಿ ವಾತಾವರಣ ಉಂಟಾಗುತ್ತದೆ. ಮತ್ತು ನಿಮ್ಮ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ಬಂಧು ಮಿತ್ರರಲ್ಲಿ ವ್ಯವಹರಿಸುವಾಗ, ಸ್ನೇಹಿತರೊಡನೆ ವ್ಯವಹರಿಸುವಾಗ,
ಲೇವಾದೇವಿಯನ್ನು ಮಾಡುವಾಗ ಸ್ವಲ್ಪ ಎಚ್ಚರಿಕೆಯನ್ನು ನೀವು ಅನುಸರಿಸಬೇಕಾಗುತ್ತದೆ. ವ್ಯವಹಾರದಲ್ಲಿ ಭದ್ರತೆಯನ್ನು ಅನುಸರಿಸಬೇಕಾಗುತ್ತದೆ. ಗೊಂದಲ ಉಂಟಾದಾಗ ನೀವು ಯಾವುದೇ ಕಾರಣಕ್ಕೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ, ನಿಮಗೆ ಖಂಡಿತ ಒಳ್ಳೆಯ ಪ್ರತಿಫಲ ಸಿಗುತ್ತದೆ. ಕುಂಭ ರಾಶಿಯವರ ವ್ಯಕ್ತಿತ್ವದ ಗುಣವೆಂದರೆ ಯಾವುದೇ ಕೆಲಸವನ್ನು ಪೂರ್ಣಗೊಳಿಸದೆ ಬಿಡುವಂತವರಲ್ಲ .
ಆದ್ದರಿಂದ ಮುನ್ನುಗ್ಗಬೇಕು. ನಿಮ್ಮ ಚಂಚಲ ಸ್ವಭಾವವನ್ನು, ಬಿಟ್ಟು ಮನಸ್ಸಿಗೆ ಕಡಿವಾಣವನ್ನು ಹಾಕಿಕೊಳ್ಳಬೇಕು. ದೃಢವಾದ ನಿರ್ಧಾರವನ್ನು ಕೈಗೊಳ್ಳಬೇಕು. ಶುಭ ಕಾರ್ಯಗಳನ್ನು ಮಾಡಬೇಕೆಂದರೆ, ನೂರಾರು ಅಡ್ಡಿ ಆತಂಕಗಳು ಬರುತ್ತದೆ. ಅಡ್ಡಿ ಆತಂಕಗಳನ್ನು ನಿಗ್ರಹಿಸಿ ಒಳ್ಳೆಯ ಯೋಜನೆಗಳನ್ನು ,ಹಾಕಿಕೊಂಡು ಮುಂದುವರೆಯುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ನಿಮ್ಮ ದಿನಚರಿಯ ಮೇಲೆ ಅಂದರೆ ಯೋಗ , ವ್ಯಾಯಾಮ , ನಿದ್ದೆ , ಆಹಾರದ ಮೇಲೆ ಗಮನವಹಿಸಿ.
ನಿಮ್ಮ ಎಲ್ಲಾ ಅನಾರೋಗ್ಯಗಳು ದೂರವಾಗುತ್ತದೆ. ಹೆಂಡತಿ ಮಕ್ಕಳೊಡನೆ ಇರುವ ಗೊಂದಲಗಳು ದೂರವಾಗುತ್ತದೆ. ಶಾಂತಿ ನೆಲೆಸುತ್ತದೆ. ಬೇರೆಯವರ ಮಧ್ಯೆ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ ಇದರಿಂದ ದೂರವಿರಿ. ನೀವು ನಿಮ್ಮ ಕೆಲಸದ ಮೇಲೆ ಮತ್ತು ಜೀವನದ ಮೇಲೆ ಹೆಚ್ಚಿನ ಆದ್ಯತೆ ಕೊಡಿ. ಖರ್ಚಿಗೆ ಹೆಚ್ಚಿನ ಕಡಿವಾಣವನ್ನು ಹಾಕಬೇಕು. ವಿಪರೀತ ಖರ್ಚಾಗುವ ಸಾಧ್ಯತೆ ಇರುತ್ತದೆ . ನಿಮಗೆ ಅವಶ್ಯಕತೆ ಇದ್ದಷ್ಟೇ ಖರ್ಚು ಮಾಡಿ. ಭೋಗದ ವಸ್ತುಗಳನ್ನು ಖರೀದಿಸಲು ಹೋಗಬೇಡಿ.
ಇರುವ ದುಡ್ಡನ್ನು ವ್ಯರ್ಥ ಮಾಡಲು ಹೋಗಬೇಡಿ. ಮತ್ತು ವರ್ಷ ಆರಂಭದಿಂದ ವರ್ಷದ ಅಂತ್ಯದವರೆಗೂ , ಶನಿ ಪರಮಾತ್ಮನು ಒಂದನೇ ಮನೆಯಲ್ಲಿ ಇರುತ್ತಾನೆ. ಕಷ್ಟ ನಷ್ಟದ ನಡುವೆಯೂ ಒಂದಷ್ಟು ಒಳ್ಳೆಯ ಪರಿಹಾರಗಳನ್ನು ಕರುಣಿಸುತ್ತಾನೆ. ವ್ಯಾಪಾರದಲ್ಲಿ ತಕ್ಕಮಟ್ಟಿಗೆ ಲಾಭಗಳು ಕಂಡುಬರುತ್ತದೆ. ಮಿಶ್ರಫಲವಿರುವುದರಿಂದ , ವಾದ ವಿವಾದಗಳಿಂದ ದೂರ ಇದ್ದರೆ ಒಳಿತು. ಕೋರ್ಟು ಕಚೇರಿಯ ವಿಷಯಗಳಲ್ಲಿ ಎಚ್ಚರಿಕೆಯನ್ನು ಅನುಸರಿಸಬೇಕಾಗುತ್ತದೆ.
ನಿಮ್ಮ ಮನಸ್ಸಿನಲ್ಲಿರುವ ಗುಪ್ತ ವಿಚಾರಗಳ ಬಗ್ಗೆ ಗುಪ್ತ ಚಿಂತನೆಗಳ ಬಗ್ಗೆ ಬೇರೆಯವರ ಹತ್ತಿರ ಹೇಳಬೇಡಿ. ನಿಮ್ಮಲ್ಲಿಯೇ ನೀವು ಸರಿ ಮಾಡಿಕೊಳ್ಳುವುದು ಉತ್ತಮ. ಬೇರೆಯವರಿಂದ ಸಮಸ್ಯೆಗಳು ಉಲ್ಬಣವಾಗುವುದರಿಂದ ದೂರ ಇರುವುದೇ ಒಳ್ಳೆಯದು. ಆದ್ದರಿಂದ ಧೈರ್ಯವಾಗಿ ಮುನ್ನುಗ್ಗಿದರೆ ನಿಮಗೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ಗುರು ಹಾಗೂ ಶನಿಯ ಈ ಸಂವತ್ಸರದಲ್ಲಿ ಕೆಲವೊಂದು ಸವಾಲುಗಳು ಬರುವುದರಿಂದ ನೀವು ಮಾನಸಿಕವಾಗಿ ಸಿದ್ದರಾಗಿರಬೇಕು. ಆದರೆ ಈ ಎಚ್ಚರಿಕೆಗಳನ್ನು ನೀವು ಪಾಲಿಸಿದರೆ ನಿಮಗೆ ಒಳ್ಳೆಯದಾಗುತ್ತದೆ. ನೌಕರಿಯಲ್ಲಿ ಮೇಲಾಧಿಕಾರಿಗಳು ಪ್ರೀತಿ,
ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಕೆಲಸದ ಮೇಲೆ ಆಸಕ್ತಿ ಇಟ್ಟು ನಂಬಿಕೆಯಿಂದ ನಡೆದುಕೊಳ್ಳಿ. ಬಡ್ತಿಯ ವಿಚಾರಕ್ಕೆ ಬಂದರೆ ಕೆಲಸದಲ್ಲಿ ಚ್ಯುತಿ ಬರದಂತೆ ನಡೆದುಕೊಂಡರೆ , ನಿಮಗೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ಚಿಕ್ಕ ಪುಟ್ಟ ವ್ಯಾಪಾರದಿಂದ ಹಿಡಿದು ಬೃಹತ್ ಉದ್ಯಮದವರೆಗೂ ಒಳ್ಳೆಯ ಧನ ಲಾಭವಿರುತ್ತದೆ. ನಿಮ್ಮ ಯೋಜನೆಯ ರೀತಿಯಲ್ಲೇ ಕೆಲಸಗಳು ಪೂರ್ಣಗೊಳ್ಳುತ್ತದೆ. ಅಧಿಕ ಖರ್ಚಿಗೆ ಕಡಿವಾಣ ಹಾಕಿ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನು ಕೈಗೊಳ್ಳುವುದರಿಂದ ನಿಮಗೆ ಒಳ್ಳೆಯ ಪ್ರತಿಫಲ ದೊರಕುತ್ತದೆ. ಯಾವುದೇ ಆಧಾರವಿಲ್ಲದೆ, ಹಣಕಾಸಿನ ವ್ಯವಹಾರವನ್ನು ಬೇರೆಯವರ ಹತ್ತಿರ ಮಾಡಬೇಡಿ .
ಮತ್ತು ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿಗೆ ಆಸಕ್ತಿಯನ್ನು ತೆಗೆದುಕೊಂಡರೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯಬಹುದು. ಕುಂಭ ರಾಶಿಯವರಿಗೆ , ಚೈತ್ರ ಮಾಸ ಮೂರು, ಎಂಟು, ಹದಿಮೂರನೆಯ ತಿಥಿಗಳು ಗುರುವಾರ , ಆರಿದ್ರ ನಕ್ಷತ್ರಗಳು, ಘಾತವಾಗಿರುತ್ತದೆ. ಎಚ್ಚರಿಕೆಗಳನ್ನು ಪಾಲಿಸಿದರೆ ಈ ವರ್ಷದಲ್ಲಿ ಅದ್ಭುತ ಫಲಗಳನ್ನು ಕಾಣುತ್ತೀರಾ. ಪವಿತ್ರ ಕ್ಷೇತ್ರಗಳಲ್ಲಿ ನಾಗ ಹೋಮವನ್ನು ಮಾಡಿಕೊಳ್ಳಿ. ಮಹಾರುದ್ರನ ಪಠಣೆಯನ್ನು ಮಾಡಿಕೊಳ್ಳಿ. ದೇವಸ್ಥಾನದಲ್ಲಿ, ನಡೆಯುವ ನಾಗ ಹೋಮಕ್ಕೆ ಕೈಲಾದ ಸೇವೆಯನ್ನು ಸಲ್ಲಿಸಿ. ವಿಶೇಷವಾಗಿ ಕಾಗೆಗಳಿಗೆ ಅಂದರೆ ಹಕ್ಕಿ ಪಕ್ಷಿಗಳಿಗೆ ಆಹಾರವನ್ನು ನೀಡಿ. ಜೊತೆಗೆ ಕೇಸರಿಯ ತಿಲಕಧಾರಣೆಯನ್ನು ಹಾಕಿಕೊಳ್ಳಿ. ಕುಂಭ ರಾಶಿಯವರಿಗೆ, ಬಹಳ ಒಳ್ಳೆಯ ಫಲಗಳು ಸಿಗುತ್ತದೆ.