ತಥಾಸ್ತು ದೇವತೆಯರು ಸಂಚರಿಸುವ ಸಮಯವಿದು ನಿಮ್ಮ ಎಲ್ಲ ಕೋರಿಕೆಗಳು ಈಡೇರುತ್ತವೆ

0

ನಾವು ಈ ಲೇಖನದಲ್ಲಿ ತಥಾಸ್ತು ದೇವತೆಯರು ಸಂಚಾರ ಮಾಡುವ ಈ ಸಮಯದಲ್ಲಿ ನಿಮ್ಮ ಎಲ್ಲಾ ಕೋರಿಕೆಗಳು ಹೇಗೆ ನೆರವೇರುತ್ತವೆ ಎಂಬುದನ್ನು ತಿಳಿಯೋಣ. ಪುರಾಣದಲ್ಲಿ ವಿಶೇಷವಾದ ದೇವತೆಗಳ ಬಗ್ಗೆ ಹೇಳುತ್ತಾರೆ . ಅವರೇ ಅಶ್ವಿನಿ ದೇವತೆಗಳು .ಈ ಅಶ್ವಿನಿ ದೇವತೆಯರು ಸಂಚಾರ ಮಾಡುವ 20 ನಿಮಿಷದ ಸಮಯದಲ್ಲಿ ಯಾವ ಚಿಕ್ಕ ಕೆಲಸ ಮಾಡಿದರು ಕೂಡ , ಏನೇ ಬೇಡಿಕೊಂಡರೂ ಕೂಡ ನಿಮ್ಮ ಕೋರಿಕೆಗಳು ನೆರವೇರುತ್ತದೆ . ನಿತ್ಯ ಜೀವನದಲ್ಲಿ ಎಲ್ಲರೂ ಬಹಳಷ್ಟು ಕೋರಿಕೆಗಳನ್ನು ಕೇಳಿಕೊಳ್ಳುತ್ತಿರುತ್ತಾರೆ .

ಸಮಸ್ಯೆಗಳು ಇಲ್ಲದ ಜನರಿಲ್ಲ, ತೊಂದರೆ ಇಲ್ಲದ ಜೀವನ ಇಲ್ಲ . ಜೀವನದಲ್ಲಿ ಎಲ್ಲಾ ಸಮಸ್ಯೆಗಳು ನಾಶವಾಗಿ ಜೀವನ ಮಾಡಬೇಕು ಎಂಬುದು ಪ್ರತಿಯೊಬ್ಬರ ಹಂಬಲ ಮತ್ತು ಆಶಯವಾಗಿ ಇರುತ್ತದೆ . ಹಾಗಾದರೆ ಈ ಸಮಸ್ಯೆಗಳು ಹೋಗಬೇಕಾದರೆ ಯಾವ ಸಮಯದಲ್ಲಿ ಬೇಡಿಕೊಳ್ಳಬೇಕು ಮತ್ತು ಆ ಸಮಯದ ವಿಶೇಷತೆ ಏನು , ಹಾಗೂ ಈ ಅಶ್ವಿನಿ ದೇವತೆಗಳು ಯಾರು ಎಂದು ಇಲ್ಲಿ ತಿಳಿಯೋಣ . ನಮ್ಮ ಪುರಾಣಗಳ ಪ್ರಕಾರ ತಥಾಸ್ತು ದೇವತೆಗಳು ಎಂದರೆ ಯಾರು , ಮತ್ತು ಯಾವ ಸಮಯದಲ್ಲಿ ಸಂಚಾರ ಮಾಡುತ್ತಿರುತ್ತಾರೆ ಎಂದರೆ , ಅಶ್ವಿನಿ ದೇವತೆಗಳನ್ನು ತಥಾಸ್ತು ದೇವತೆಗಳು ಎಂದು ಕರೆಯುತ್ತಾರೆ .

ಅಶ್ವಿನಿ ದೇವತೆಗಳು ಸೂರ್ಯ ಭಗವಾನನ ಪುತ್ರರು . ಸೂರ್ಯ ದೇವನ ಮಕ್ಕಳಲ್ಲಿ ಅಶ್ವಿನಿ ದೇವತೆಗಳು ಎಂಬ ಇಬ್ಬರು ಸಹೋದರರನ್ನು ಯಾವಾಗಲೂ ನಾವು ಜೊತೆಯಾಗಿ ಹೇಳುತ್ತೇವೆ . ಇವರು ದೇವ ವೈದ್ಯರು . ಸನಾತನ ಧರ್ಮದ ಪ್ರಕಾರ ವಿಶ್ವಕರ್ಮನ ಪುತ್ರಿಯಾದ ಸಂಧ್ಯಾಳನ್ನು ಸೂರ್ಯ ದೇವನಿಗೆ ಕೊಟ್ಟು ವಿವಾಹ ಮಾಡುತ್ತಾರೆ. ಆದರೆ ಸಂಧ್ಯಾ ಸೂರ್ಯ ದೇವನ ತೇಜಸ್ಸನ್ನು ತಡೆಯಲಾರದೆ, ಬಹಳ ಸಂಕಷ್ಟಕ್ಕೆ ಒಳಗಾಗುತ್ತಾಳೆ. ಸಂಧ್ಯಾ ಮತ್ತು ಸೂರ್ಯೋದಯವನ ಸಂತಾನವೇ ಯಮ ಮತ್ತು ಯಮುನಾ .

ಮಕ್ಕಳಾದ ಮೇಲೂ ಕೂಡ ಸಂಧ್ಯಾ ಸೂರ್ಯನ ತೇಜಸ್ಸನ್ನು ಭರಿಸಲಾಗದ ಸ್ಥಿತಿಯಲ್ಲಿ ಇರುತ್ತಾಳೆ.
ಆಗ ಸಂಧ್ಯಾ ಸೂರ್ಯನ ತೇಜಸ್ಸನ್ನು ಕಡಿಮೆ ಮಾಡಲು ಯಾವುದಾದರೂ ಉಪಾಯಕ್ಕೋಸ್ಕರ ತಪಸ್ಸು ಮಾಡಲು ನಿರ್ಧರಿಸುತ್ತಾಳೆ. ಆದರೆ ಈಕೆಯ ಈ ತಪಸ್ಸಿನ ವಿಷಯ ಸೂರ್ಯನಿಗೆ ತಿಳಿಸಬಾರದು ಎಂದು ಕೊಳ್ಳುತ್ತಾಳೆ . ಆದ್ದರಿಂದ ಸಂಧ್ಯಾ ತನ್ನ ನೆರಳನ್ನು ಅಂದರೆ ಛಾಯೆಯನ್ನು ತನ್ನ ರೂಪದಲ್ಲಿಯೇ ಅಂತಃಪುರದಲ್ಲಿ ಬಿಟ್ಟು , ತಪಸ್ಸಿಗೆ ಹೋಗುತ್ತಾಳೆ. ಸೂರ್ಯನಿಗೆ ಈ ಸಂಗತಿಯು ತನ್ನ ದಿವ್ಯ ದೃಷ್ಟಿಯಿಂದ ತಿಳಿಯುತ್ತದೆ. ತನ್ನ ಹೆಂಡತಿಯಾದ ಸಂಧ್ಯಾ ಕುದುರೆಯ ರೂಪವನ್ನು ಧರಿಸಿ ,

ತಪಸ್ಸು ಮಾಡುತ್ತಿರುವುದು ಸೂರ್ಯನಿಗೆ ಗೋಚರಿಸುತ್ತದೆ. ಆಕೆಯ ತಪಸ್ಸಿಗೆ ಕಾರಣವೇನೆಂದು ಕೂಡ ಸೂರ್ಯನಿಗೆ ತಿಳಿದಿರುತ್ತದೆ. ಆಗ ತನ್ನ ಮಾವನಾದ ವಿಶ್ವ ಕರ್ಮನನ್ನು ಭೇಟಿಯಾಗಿ , ತನ್ನ ತೇಜಸ್ಸನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುತ್ತಾನೆ. ತಾನು ಸಹ ಕುಮರೆಯ ರೂಪವನ್ನು ಧರಿಸಿ, ಸಂಧ್ಯಾಳನ್ನು ಭೇಟಿಯಾಗುತ್ತಾನೆ. ಈ ರೂಪದಲ್ಲಿಯೇ ಇಬ್ಬರೂ ಹೊಂದಾಗುತ್ತಾರೆ. ಇದರ ಫಲಿತಾಂಶವೇ ಮೂರು ಜನ ಮಕ್ಕಳಾಗುತ್ತಾರೆ. ಅಶ್ವಿನಿ ದೇವತೆಗಳು ದೇವ ವೈದ್ಯರಾದರು.

ಅಶ್ವಿನಿ ದೇವತೆಗಳು ಬ್ರಾಹ್ಮಿ ಮುಹೂರ್ತದಲ್ಲಿ ಹಾಗೂ ಸಾಯಂಕಾಲದ ಸಮಯದಲ್ಲಿ ರಥವನ್ನು ಏರಿ ಗಗನ ಮಾರ್ಗದಲ್ಲಿ ಸಂಚಾರ ಮಾಡುತ್ತಿರುತ್ತಾರೆ . ಋಗ್ವೇದದಲ್ಲಿ ಇದರ ಕುರಿತು ಅನೇಕ ರಚನೆಗಳು ಇವೆ . ಬಹಳ ಸಂದರ್ಭಗಳಲ್ಲಿ ಇವರ ಪ್ರಸ್ತಾವನೆಗಳು ಇದೆ . ಅಶ್ವಿನಿ ದೇವತೆಗಳು ಹುಡುಗಿಯರಿಗೆ ಒಳ್ಳೆಯ ಗಂಡಂದಿರನ್ನು , ಹಾಗೂ ವೃದ್ಧರಿಗೆ ಮತ್ತು ಯೌವನವನ್ನು ಮತ್ತು ಕಣ್ಣು ಇಲ್ಲದವರಿಗೆ ಕಣ್ಣನ್ನು ಕೊಡುತ್ತಾರೆ ಎಂದು ನಮ್ಮ ಗ್ರಂಥಗಳಲ್ಲಿ ಬರೆಯಲಾಗಿದೆ .

ಇವರನ್ನು ತಥಾಸ್ತು ದೇವತೆಯರು ಎಂದು ಕರೆಯುತ್ತಾರೆ . ತಾಥಾ ಎಂದರೆ ಅದೇ ಪ್ರಕಾರವಾಗಿ , ಅಸ್ತು ಎಂದರೆ ನಡೆಯಲೇಬೇಕು ಎಂದರ್ಥ . ಮನುಷ್ಯರು ಯಾವುದಾದರೂ ಕೋರಿಕೆಯನ್ನು ಪದೇ ಪದೇ ಕೋರುತ್ತಿದ್ದರೆ , ಆ ಸಮಯದಲ್ಲಿ ತಥಾಸ್ತು ದೇವತೆಯರು ಸಂಚರಿಸುತ್ತಿದ್ದಾರೆ , ಆ ಕ್ಷಣವೇ ತಥಾಸ್ತು ಎಂದು ಹೇಳುತ್ತಾರೆ . ಆದ್ದರಿಂದ ಅವರನ್ನು ತಥಾಸ್ತು ದೇವತೆಯರು ಎಂದು ಹೇಳುತ್ತಾರೆ . ಇವರು ಬಂಗಾರದ ರಥದ ಮೇಲೆ ಪ್ರಯಾಣ ಮಾಡುತ್ತಾರೆ . ಇವರು ಪ್ರಯಾಣಿಸುವ ದಾರಿಯಲ್ಲಿ ವೇದ ಮಂತ್ರಗಳನ್ನು ಹೇಳುತ್ತಾ , ತಥಾಸ್ತು ತಥಾಸ್ತು ಎಂದು ಹೇಳುತ್ತಿರುತ್ತಾರೆ . ಯಜ್ಞಗಳು ಯಾಗಗಳು ನಡೆಯುವ ಕಡೆ ಇವರು ಹೆಚ್ಚಾಗಿ ,

ಸಂಚಾರ ಮಾಡುತ್ತಾರೆ .ಆ ಸಮಯದಲ್ಲಿ ಅಲ್ಲಿಗೆ ಬಂದು ಯಜ್ಞ ಯಾಗಾದಿಗಳಲ್ಲಿ ಇರುವ ಪೂಜಾ ದ್ರವ್ಯಗಳನ್ನು ಪರಿಕರಗಳನ್ನು ಮತ್ತು ಯಜ್ಞ ಮಾಡುವವರನ್ನು ಕೂಡ ಅವರು ಬೆತ್ತದಿಂದ ಸ್ಪರ್ಶಿಸಿ ತಥಾಸ್ತು ಎಂದು ಹೋಗುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಯಜ್ಞಗಳನ್ನು ಮಾಡಿದವರಿಗೆ ವಿಶೇಷವಾಗಿ ಸಕಲ ಶುಭಗಳು ಫಲಿಸುತ್ತವೆ. ಈ ಅಶ್ವಿನಿ ಕುಮಾರರು ಒಂದು ಕೈಯಲ್ಲಿ ಆಯುರ್ವೇದ ಗ್ರಂಥವನ್ನು ಮತ್ತು ಇನ್ನೊಂದು ಕೈಯಲ್ಲಿ ಅಭಯ ಹಸ್ತವನ್ನು ತೋರಿಸುತ್ತಾ ಸಂಚರಿಸುತ್ತಾರೆ. ಇವರನ್ನು ದೇವ ವೈದ್ಯರೆನ್ನುತ್ತಾರೆ. ನಮ್ಮ ಬಗ್ಗೆ ನಾವು ಏನಾದರೂ ಬೇಡಿಕೊಂಡರೆ

ತಥಾಸ್ತು ದೇವತೆಗಳು ತಥಾಸ್ತು ಎಂದು ಅವರು ಹೆಚ್ಚಾಗಿ ಸಂದ್ಯಾ ಸಮಯದಲ್ಲಿ ಅಂದರೆ ಸಾಯಂಕಾಲದಲ್ಲಿ ಸಂಚರಿಸುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆದ್ದರಿಂದ ಅನಾರೋಗ್ಯ ಸಮಸ್ಯೆಗಳು ಬಂದರೆ , ಅವರ ಮಂತ್ರವನ್ಮು ಜಪಿಸಿದರೆ , ಸಾಕು ಆ ಸಮಸ್ಯೆಗಳಿಂದ ಮುಕ್ತಿ ಹೊಂದ ಬಹುದು ಎಂದು ಹೇಳುತ್ತಾರೆ. ಅಶ್ವಿನಿ ದೇವತೆಗಳು ಪ್ರತಿದಿನ ಭೂಲೋಕಕ್ಕೆ ಬಂದು ಎಲ್ಲಾ ಕಡೆಯೂ ಸಂಚರಿಸುತ್ತಾರೆ . ಮತ್ತು ಅವರು ಬರುವ ವಿಶೇಷವಾದ ಸಮಯದಲ್ಲಿ ಯಾರೇ ಏನನ್ನು ಕೋರಿದರು ಅದು ನೆರವೇರುತ್ತದೆ ಎಂದು ಹೇಳುತ್ತಾರೆ.

ವಿಶೇಷವಾದ ಸಮಯ ಎಂದರೆ ಸಂಧ್ಯಾ ಸಮಯ ಅಥವಾ ಪ್ರದೋಷ ಸಮಯ . ಪಂಚಾಂಗದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಮಗಳು ಇರುತ್ತವೆ . ಸೂರ್ಯಾಸ್ತಮ ಆಗುವ ಮೊದಲು 20 ನಿಮಿಷಗಳ ಕಾಲವನ್ನು ಸಂಧ್ಯಾ ಕಾಲ ಎನ್ನುತ್ತಾರೆ. ಇದನ್ನು ಪ್ರದೋಷ ಕಾಲವೆಂದು ಸಹ ಹೇಳುತ್ತಾರೆ . ಬಹಳ ಮಂದಿ ಈ ಸಮಯದಲ್ಲಿ ದೀಪ ಬೆಳಗುತ್ತಾರೆ . ಆ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ಬಲವಾದ ಕೋರಿಕೆಯನ್ನು ಪೂರ್ತಿಯಾಗಿ ಬೇಡಿಕೊಂಡರು ಅದು ಅಶ್ವಿನಿ ದೇವತೆಯರಿಗೆ ಕೇಳಿಸುತ್ತದೆ .

ಆಗ ಅವರು ತಥಾಸ್ತು ಎಂದು ಹೇಳುತ್ತಾರೆ . ನಿಮಗೆ ಆ ಸಮಸ್ಯೆ ತೀರಬೇಕು ಮತ್ತು ಕೋರಿಕೆ ನೆರವೇರಬೇಕು ಎಂದರೆ , ನೀವು ಮನಸ್ಸು ಪೂರ್ತಿಯಾಗಿ ಅಶ್ವಿನಿ ದೇವತೆಯ ರ ಮಂತ್ರವಾದ ” ಓಂ ಶ್ರೀ ಅಶ್ವಿನಿಯೈ ನಮಃ” ಎಂದು ಈ ಸಂಧ್ಯಾ ಕಾಲದಲ್ಲಿ ಬೇಡಿಕೊಂಡರೆ , ಅದು ಖಂಡಿತ ನೆರವೇರುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಕೂಡ ಸೂರ್ಯಾಸ್ತಮ ಆಗುವುದಕ್ಕಿಂತಲೂ ಮೊದಲು ಈ 20 ನಿಮಿಷಗಳ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳಿ . ನಿಮ್ಮ ಕೋರಿಕೆಯನ್ನು ಹೇಳಿಕೊಳ್ಳಿ.

ನೀವು ಮಂತ್ರ ಜಪಿಸದಿದ್ದರೂ ತೊಂದರೆ ಇಲ್ಲ. ಮುಖ್ಯವಾಗಿ ಆ ಸಮಯದಲ್ಲಿ ಯಾರಿಗೂ ಸಹ ಅಥವಾ ನಿಮಗೆ ಆಗಲಿ ಕೆಟ್ಟ ಶಬ್ಧವನ್ನು ಬಳಸಬಾರದು . ಒಂದು ವೇಳೆ ಕೆಟ್ಟ ಆಲೋಚನೆಗಳು ಇದ್ದರೆ ಅವುಗಳು ಈಡೇರುವ ಸಾಧ್ಯತೆ ಇರುತ್ತದೆ . ಆದ್ದರಿಂದ ಕೆಟ್ಟದ್ದನ್ನು ಯೋಚಿಸಬಾರದು. ಆರೋಗ್ಯ ಪರವಾಗಲಿ ಅಥವಾ ಧನ ಪರವಾಗಲಿ ಮತ್ತು ಇತರರ ಪರವಾಗಲಿ ಒಳ್ಳೆಯದನ್ನೇ ಬಯಸಿ ಒಳ್ಳೆಯದನ್ನು ಬೇಡಿಕೊಳ್ಳಿ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳುವುದರ ಬಗ್ಗೆ ಬೇಡಿಕೊಳ್ಳಿ ಆಗ ತಥಾಸ್ತು ದೇವತೆಗಳ ಆಶೀರ್ವಾದದಿಂದ ಎಲ್ಲವೂ ಶುಭವಾಗುತ್ತದೆ.

Leave A Reply

Your email address will not be published.