ಹಣ ಬರುವ ಶುಭ ಸೂಚನೆಗಳು

0

ನಾವು ಈ ಲೇಖನದಲ್ಲಿ ಹಣ ಬರುವ ಶುಭ ಸೂಚನೆಗಳು ಯಾವುದು ಎಂಬುದನ್ನು ತಿಳಿಯೋಣ . ನಾವು ತಾಯಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತೇವೆ . ಜೊತೆಯಲ್ಲಿ ಮಹಾ ವಿಷ್ಣುವನ್ನು ಪೂಜಿಸುವುದರಿಂದ ತಾಯಿಯು ಸಂತೃಪ್ತಳು ಆಗುತ್ತಾಳೆ. ವಿಷ್ಣು ದೇವರನ್ನು ಎಲ್ಲಿ ಪೂಜಿಸುತ್ತಾರೋ ಅಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ.ನಮಗೆ ಮುಂದೆ ದಾನವಂತರಾಗುವ ಶುಭ ಸೂಚನೆಯನ್ನು ತಾಯಿ ಲಕ್ಷ್ಮಿ ದೇವಿಯು ಈ ರೀತಿಯಾಗಿ ತಿಳಿಸುತ್ತಾಳೆ.

1.ನೀವು ಮನೆಯಿಂದ ಹೊರಟಾಗ ಕಬ್ಬು ಎದುರಿಗೆ ಬಂದಲ್ಲಿ ಅದು ಕೂಡ ದಾನ ಬರುವ ಸಂಕೇತವಾಗಿರುತ್ತದೆ.

2.ನಿಮ್ಮ ಮನೆಯಲ್ಲಿ ಯಾವುದಾದರೂ ಪಕ್ಷಿಗಳು ಗೂಡು ಕಟ್ಟಿದರೆ ಇದು ಸಹ ತಾಯಿ ಲಕ್ಷ್ಮಿ ದೇವಿಯು ಬರುವಿಕೆಯ ಸೂಚನೆಯಾಗಿದೆ.

3.ಹಸ್ತ ಸಮುದ್ರಿಕ ಶಾಸ್ತ್ರದ ಪ್ರಕಾರ ಗಂಡಸರಿಗೆ ಬಲಗೈ ಹೆಂಗಸರಿಗೆ ಎಡಗೈಯಲ್ಲಿ ಕೆರೆತ ಉಂಟಾದರೆ ಧನ ಪ್ರಪ್ತಿಯಾಗುವ ಸಂಕೇತವಾಗಿದೆ.

ನಾವು ಮನೆಯಿಂದ ಹೊರಗೆ ಹೊರಡುವಾಗ ಯಾವುದಾದರೂ ನಾಯಿಗೆ ಆಹಾರವನ್ನು ನೀವು ನೀಡಿದ್ದಲ್ಲಿ ಅಂದಿನ ದಿನ ನಿಮಗೆ ಧನ ಲಾಭವಾಗುತ್ತದೆ.

5.ಕನಸಿನಲ್ಲಿ ಪೊರಕೆ, ಗೂಬೆ,ಕೊಳಲು, ಆನೆ, ಮುಂಗುಸಿ, ಶಂಕ, ಹಲ್ಲಿ, ನಕ್ಷತ್ರ, ಹಾವು ಇವುಗಳನ್ನು ಕಂಡರೆ ನಿಮಗೆ ಧನಪ್ರಾಪ್ತಿ ಆಗುತ್ತದೆ.

ನೀವು ಮುಂಜಾನೆ ಹೊರ ಹೊರಾಟಾಗ ಕಸ ಗುಡಿಸುವವರು ಕಸ ಗುಡಿಸುತ್ತಿರುವುದನ್ನು ನೀವು ಸದಾ ನೊಡುತ್ತಿದ್ದರೆ ಅದು ಸಹ ಲಕ್ಷ್ಮಿ ದೇವಿಯ ಆಗಮದ ಸಂಕೇತವಾಗುತ್ತದೆ.

ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನ ಎನ್ನುತ್ತಾರೆ .ಅದು ಎದುರಿಗೆ ಬಂದರೆ ಕೆಲವರು ಅಪಶಕುನ ಎಂದು ಪರಿಗಣಿಸುತ್ತಾರೆ. ನೀವೇನಾದರೂ
ತೀರ್ಥಯಾತ್ರೆಗೆ ಹೊರಟಾಗ ಅಲ್ಲಿ ಗೂಬೆಯನ್ನು ಕಂಡರೆ ಲಕ್ಷ್ಮಿ ದೇವಿಯ ಆಗಮನದ ಸೂಚನೆಯಾಗಿದೆ.

ನಿಮ್ಮ ಮನೆಯಲ್ಲಿ ಏನಾದರೂ ಕಪ್ಪು ಇರುವೆಗಳು ಸಾಲು ಸಾಲಾಗಿ ಬರುತ್ತಿದ್ದರೆ ಅದು ನಿಮಗೆ ಹಣ ಬರುವ ಶುಭ ಸೂಚನೆಯಾಗಿರುತ್ತದೆ.ನೀವು ಅವುಗಳಿಗೆ ತಿನ್ನಲು ಸಕ್ಕರೆಯನ್ನು ಹಾಕಿದ್ದಲ್ಲಿ ತಾಯಿ ಲಕ್ಷ್ಮೀ ದೇವಿಯು ಸಂತೃಪ್ತಳಾಗುತ್ತಾಳೆ ಹಾಗೂ ಲಕ್ಷ್ಮಿ ದೇವಿಯು ಒಲಿದು ಬರುತ್ತಾಳೆ.

9 . ಹಲ್ಲಿಯು ದೇವರ ಮನೆಯ ಮೇಲೆ ಇದ್ದರೆ ಸೌಭಾಗ್ಯ ವೃದ್ಧಿಸುತ್ತದೆ. ಮೂರು ಹಲ್ಲಿಗಳು ಒಟ್ಟಿಗೆ ಇರುವುದನ್ನು ನೋಡಿದ್ದರೆ ಹಾಗೂ ಒಂದು ಹಲ್ಲಿಯೂ ಇನ್ನೊಂದು ಹಲ್ಲಿಯನ್ನು ಹಟ್ಟಿಸಿಕೊಂಡು ಹೋಗುತ್ತಿದ್ದರೆ, ಶ್ರೀಫ್ರದಲ್ಲಿಯೇ ನಿಮಗೆ ಶುಭ ಫಲ ದೊರೆಯುತ್ತದೆ. ದೀಪಾವಳಿಯ ದಿನದಂದು ತುಳಸಿ ಕಟ್ಟೆಗೆ ದೀಪವನ್ನು ಇಡುವಾಗ ಅಲ್ಲಿ ಹಲ್ಲಿ ಇದ್ದರೆ ನಿಮಗೆ ತುಂಬಾ ಹಣ ಬರುವುದಾಗಿ ಸೂಚನೆಯಾಗಿದೆ.

Leave A Reply

Your email address will not be published.